Advertisements

ನಡುರಸ್ತೆಯಲ್ಲಿ ಮಗ ಜೀವ ಕಳೆದುಕೊಂಡ.. ಆದರೆ ಕೊನೆ ಕ್ಷಣದಲ್ಲಿ ಆತನ ಅಪ್ಪ ಅಮ್ಮ ಮಾಡಿದ ಕೆಲಸಕ್ಕೆ ಸಾಲಾಗಿ ನಿಂತು ಸಲ್ಯೂಟ್ ಮಾಡಿದ ವೈದ್ಯರು..

Kannada News

ಪ್ರತಿ ತಂದೆ ತಾಯಿಗಳ ಪಾಲಿಗೆ ಅವರ ಮಕ್ಕಳೆ ಸರ್ವಸ್ವ. ಅವರ ಭವಿಷ್ಯದ ಕುರಿತಾಗಿ ಸದಾ ಕಾಲ‌ ಚಿಂತಿಸುತ್ತಾರೆ. ವಯಸ್ಸಿಗೆ ಬಂದ ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಂಡು ಸಮಾಜದಲ್ಲಿ ಉತ್ತಮ‌ ಜೀವನ ನಡೆಸುಂತೆ ಕನಸ್ಸು ಕಂಡಿರುತ್ತಾರೆ. ಆದರೆ ಜೀವನದಲ್ಲಿ ಎಲ್ಲವು ನಾವು ಅಂದುಕೊಂಡಂತೆ ಆಗುವುದು ಸುಳ್ಳು ಎಲ್ಲವು ವಿಧಿ ಲಿಖಿತ. ದಿನವು ಇಂತಹ ದುರದೃಷ್ಟವಶಾತ್ ಗೆ ಅನೇಕ ಜನರು ಬಲಿಯಾಗುತ್ತಾರೆ. ಅಂತಹದ್ದೆ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಹೌದು ವಯಸ್ಸಿಗೆ ಬಂದ ಮಗ, ಚನ್ನಾಗಿ ಬದುಕಬೇಕಾದ ವಂಶದ ಕುಡಿ ನಡು ರಸ್ತೆಯಲ್ಲಿ ಅಪಘಾತಕ್ಕೆ ಸಿಲುಕಿದಾಗ ಹೆತ್ತ ತಂದೆ ತಾಯಿಗಳಿಗೆ ಬರ ಸಿಡಿಲು ಬಡದಂತಾಗುತ್ತದೆ.

Advertisements
Advertisements

ಮಗ ಇನ್ನು ಬದುಕುಳಿಯುವುದಿಲ್ಲ ಎಂದು ತಿಳಿದ ಕ್ಷಣ ತಂದೆ ತಾಯಿ ತೆಗೆದುಕೊಂಡ ನಿರ್ಧಾರಕ್ಕೆ ಈಡೀ ಆಸ್ಪತ್ರೆಯ ವೈದ್ಯರ ತಂಡವೆ ಅವರಿಗೆ ತಲೆ ಬಾಗಿದೆ. ಮಗನ ಸಾವಿನ ಸಂದರ್ಭದಲ್ಲೂ ಅವರು ತೆಗೆದುಕೊಂಡ ತೀರ್ಮಾನ ನಿಜಕ್ಕೂ ಹಲವರಿಗೆ ಮಾದರಿ. ಮೈಸೂರಿನಲ್ಲಿ ನಡೆದ ಘಟನೆ ಇದು. ಹುಡುಗನ ಹೆಸರು ಶರತ್ ಆತನ‌ ವಯಸ್ಸು ಕೇವಲ 19 ವರ್ಷ. ಇತ ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯ ನಿವಾಸಿ.. ಬದುಕಿ ಬಾಳಬೇಕಾದ ಹುಡುಗ, ಹೆತ್ತವರಿಗೆ ಈತನೇ ಬದುಕಾಗಿದ್ದ.. ಆದರೆ ಆ ದಿನ ನಡೆದ ಆ ಒಂದು ಘಟನೆಯಿಂದ ಎಲ್ಲವೂ ಬದಲಾಗಿ ಹೋಯ್ತು ಅವರ ಕುಟುಂಬದ ದಿಕ್ಕೆ ಬದಲಾಗಿ ಹೋಗಿದೆ.

ಹೌದು ಅದು ಡಿಸೆಂಬರ್ ‌ತಿಂಗಳು. ಆ ತಿಂಗಳಿನಲ್ಲಿ‌ ಶರತ ಬದುಕಿನಲ್ಲಿ‌ ಮಡೆಯಬಾರದ್ದು ನಡೆದು ಹೋಗಿತ್ತು. ಡಿಸೆಂಬರ್ ೨೪ ರಂದು ಶರತ್ ರಸ್ತೆ ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡಿದ್ದ. ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದ ಕಾರಣ ಆತನನ್ನು ಮಳವಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಣ ಎಷ್ಟು ಖರ್ಚಾದರು ಪರವಾಗಿಲ್ಲ ಮಗ ಮಾತ್ರ ಬದುಕುಳಿದರೆ ಸಾಕು ಎಂಬುದವುದು ಪಾಲಕರ ಪ್ರಾರ್ಥನೆಯಾಗಿತ್ತು. ಆದ್ಯಾಕೊ ಗೊತ್ತಿಲ್ಲ‌ ಶರತ್ ವಿಷಯದಲ್ಲಿ ಆ ಭಗವಂತ ಮೌನವಾಗಿಯೇ ಇದ್ದನು.

ಆದರೆ ಖಾಸಗಿ ಆಸ್ಪತ್ರೆಯಲ್ಲಿ ಸಹ ಚಿಕಿತ್ಸೆ ಫಲಿಸದೆ ಅದೇ ದಿನ ಮಧ್ಯ ರಾತ್ರಿ ಮೈಸೂರಿನ ಅಪೋಲೋ ಆಸ್ಪತ್ರೆಗೆ ಕಳುಹಿಸಲಾಯಿತು.. ಡಿಸೆಂಬರ್ ಇಪ್ಪತ್ತನಾಲ್ಕರ ಮಧ್ಯರಾತ್ರಿ ಒಂದು ಗಂಟೆಗೆ ಸಮಯದಲ್ಲಿ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಶರತ್ ಗೆ ಸತತವಾಗಿ ಚಿಕಿತ್ಸೆ ನೀಡುತ್ತಿದ್ದರು.. ಬಹಳ ಗಂಭೀರ ಸ್ಥಿತಿಯಲ್ಲಿದ್ದ ಶರತ್ ನನ್ನು ಐಸಿಯುವಿನಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಿದರು.. ಮಗನ ಈ ಸ್ಥಿತಿ ಕಂಡಯ ಇತ್ತ ಆತನ ತಂದೆ ತಾಯಿ ಕಣ್ಣೀರಿಡುತ್ತಲೇ ಇದ್ದರು. ಮಗನನ್ನು ಹೃಗಾದರು ಮಾಡಿ ಉಳಿಸಿ ಎಂದು ವೈದ್ಯರ ಕಾಲಿಗೆ ಬೀಳುತ್ತಿದ್ದದ್ದು ಅವರ ಅಸಾಹಯಕ‌ ಪರಿಸ್ಥಿತಿಯಾಗಿತ್ತು. ಹೇಗಾದರೂ ಮಾಡಿ ಹುಡುಗನನ್ನು ಉಳಿಸಬೇಕೆಂದು ಹಗಲು ರಾತ್ರಿ ವೈದ್ಯರು ಶ್ರಮಿಸಿದರು..

ಆದರೆ ಅದಾಗಲೇ ಕಾಲದ ನಿರ್ಣಯವೇ ಬೇರೆಯಾಗಿತ್ತು.. ಎರಡು ದಿನಗಳ‌ ಕಾಲ ಶರತ್ ನಮ್ಮು ಲೈಫ್ ಸಪೋರ್ಟ್ ನಲ್ಲಿಯೇ ಇರಿಸಿ ಚಿಕಿತ್ಸೆ ನೀಡಲಾಗುತಿತ್ತು.. ಸತತವಾಗಿ ಎರೆಡು ದಿನಗಳ‌ ನಂತರ ವೈದ್ಯರಿಗೆ ತಳಿದ ಸಂಗತಿ‌ ಎಂದರೆ ಅಪಘಾತದಲ್ಲಿ ಅದಾಗಲೇ ಶರತನ ಮೆದುಳು ಸಂಪೂರ್ಣವಾಗಿ ಅಸ್ತಿತ್ವ ಕಳೆದುಕೊಂಡಿರುವ ಮಾಹಿತಿ‌ ದೊರೆಯಿತು. ಕೊಡಲೇ ವೈದ್ಯರು ಅವರ ಕುಟುಂಬಕ್ಕೆ ಮಗ ಬದುಕುವುದು ಅಸಾದ್ಯ ಎಂದು ತಿಳಿಸಿದರು. ಆಗ ಅವರ ಕುಟುಂಬದ ಭರವಸೆ ಮಣ್ಣು ಪಾಲಾಯಿತು ಅವರ ಆಕ್ರಂದನ ಮುಗಿಲು ಮುಟ್ಟಿತ್ತು.