Advertisements

ಕಾರಿನಿಂದ ಇಳಿದು ಬಂದ ಶಾರುಖ್ ಖಾನ್ ಮಗಳ ಎಂಟ್ರಿ ಹೇಗಿತ್ತು ನೋಡಿ…ವಿಡಿಯೋ

Kannada News

ಬಾಲಿವುಡ್ ಚಿತ್ರರಂಗದಲ್ಲಿ ಖಾನ್ ಗಳ ಹಾವಳಿಗಳು ಬಹಳ ಹೆಚ್ಚಿದೆ ಎಂಬುದು ಚಿತ್ರ ರಸಿಕರಿಗೆ ತಿಳಿದಿರುವ ವಿಚಾರವಾಗಿದೆ. ಹೌದು ಈಗಾಗಲೇ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ರವರು ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಹಾಗೂ ಖ್ಯಾತಿಯನ್ನು ಪಡೆದಿದ್ದು ಇದೇ ಸಾಲಿನಲ್ಲಿ ಸೇರುವ ಮತ್ತೊಂದು ಹೆಸರು ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ರವರು. ಇವರನ್ನು ಕಿಂಗ್ ಖಾನ್ ಎಂದು ಕೂಡ ಕರೆಯಲಾಗುತ್ತಿದ್ದು ದಶಕಗಳಿಂದ ಬಾಲಿವುಡ್ ಚಿತ್ರರಂಗದಲ್ಲಿ ರೋಮ್ಯಾಂಟಿಕ್ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಈ ಕಿಂಗ್ ಖಾನ್ ರವರು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸಿ ವಿಶ್ವಾದ್ಯಂತ ಸಿನಿ ಪ್ರೇಮಿಗಳ ಮನಸ್ಸುಗಳನ್ನು ಗೆದ್ದಿದ್ದಾರೆ.

ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ ಕಲ್ ಹೋ ನ ಹೋ ಕುಚ್ ಕುಚ್ ಹೋತಾ ಹೇ ಮೊಹೋಬ್ಬತೆ ಹೀಗೆ ಅನೇಕ ಸಿನಿಮಾಗಳು ಈಗಲೂ ಕೂಡ ಸರ್ವಶ್ರೇಷ್ಠ ದಾಖಲೆ ಬರೆದು ಬಿಟ್ಟಿದ್ದು ಹಿಂದಿ ಚಿತ್ರರಂಗದ ಬಾದ್ ಶ ಎಂದು ಕರೆಸಿಕೊಳ್ಲುವ ಶಾರುಖ್ ರವರಿಗೆ ಗೌರಿ ಎಂಬ ಹಿಂದೂ ಸಂಪ್ರದಾಯದವರನ್ನು ವಿವಾಹವಾಗಿದ್ದಾರೆ. ಈ ಜೋಡಿಗೆ ಸುಹಾನ ಎಂಬ ಮುದ್ದಾದ ಮಗಳಿದ್ದು ಸುಹಾನಾ ಯಾವಾಗಲೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಈಕೆ ಯಾವಾಗಲು ಟ್ರಿಪ್ ಹೊಡೆಯುತ್ತಾ ಅಭಿಮಾನಿಗಳ ಕೈಗೆ ಸಿಕ್ಕಿ ಬಿದ್ದು ವೈರಲ್ ಆಗುತ್ತಿರುತ್ತಾರೆ.

ಯಾವುದೇ ಚಿತ್ರರಂಗದಲ್ಲೂ ಕೂಡ ಸ್ಟಾರಗಳ ಮಕ್ಕಳು ಬೆಳೆದರೆ ಸಾಕು ಯಾವುದಾದರೂ ಒಂದು ವಿಚಾರಕ್ಕೆ ಬಹಳ ಸುದ್ದಿಯಾಗುತ್ತಿರುತ್ತಾರೆ. ಸ್ಟಾರ್ ಮಕ್ಕಳು ಏನೇ ಮಾಡಿದರೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಗುವಯದು ಸಾಮಾನ್ಯವಾದ ಸಂಗತಿ. ಹೌದು ಅಂತೆಯೇ ಶಾರುಖ್ ಖಾನ್ ರವರ ಮಗಳು ಕೂಡ ಈ ಸಾಲಿನಲ್ಲಿ ಸೇರಿದ್ದು ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾ. ಈ ಹಿಂದೆ ಸಂದರ್ಶನವೊಂದರಲ್ಲಿ ಶಾಹಿದ್ ಕಪೂರ್ ಎಂದರೆ ಬಹಳ ಇಷ್ಟ ಅಷ್ಟೇ ಅಲ್ಲದೆ ಶಾಹಿದ್ ಕಪೂರ್ ಜೊತೆ ಡೇಟ್ ಹೋಗುವಾಸೆ ಎಂಬುದನ್ನು ಸಹ ಹೇಳಿಕೊಂಡದ್ದರು.

ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅರೆಬರೆ ಬಟ್ಟೆಗಳನ್ನು ಧರಿರಿಸಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸದಾ ಸುದ್ದಿಯಲ್ಲಿದ್ದರು. ಇನ್ನು ಸುಹಾನಾ ಖಾನ್ ಇತ್ತೀಚೆಗಷ್ಟೇ 21ನೇ ವಂಸತಕ್ಕೆ ಕಾಲಿಟ್ಟಿದ್ದು ತಮ್ಮ ಜನ್ಮದಿನವನ್ನು ಅದ್ಧೂರಿಯಾಗಿ ಇದೀಗ ಆಚರಣೆ ಮಾಡಿಕೊಂಡಿದ್ದರು.ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೇ ಹಿಂಬಾಲಕರನ್ನು ಹೊಂದಿರುವ ಇವರಿಗೆ ಶುಭಾಶಯಗಳ ಮಳೆಯೇ ಸುರಿದಿದ್ದು ಈ ವಿಶೇಷ ದಿನದಂದು ಅವರು ತಮ್ಮ ಗರ್ಲ್ಸ್​ ಗ್ಯಾಂಗ್​ ಜತೆ ಸೇರಿಕೊಂಡು ಪಾರ್ಟಿ ಮಾಡಿದ್ದು ಅಷ್ಟೇ ಅಲ್ಲದೇ ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ವಿಡಿಯೋದಲ್ಲಿ ಸುಹಾನಾ ರವರು ಕಪ್ಪು ಬಣ್ಣದ ಉಡುಗೆ ತೊಟ್ಟು ಹಾಟ್​ ಆಗಿ ಕಾಣಿಸಿಕೊಂಡಿದ್ದು ಆಂಗ್ಲ ಭಾಷೆ ಹಾಡಿಗೆ ಸ್ನೇಹಿತರ ಜೊತೆ ಸೇರಿ ಡಾನ್ಸ್​ ಮಾಡಿದ್ದರು. ಅವರ ಬ್ಯೂಟಿ ನೋಡಿದ ಅಭಿಮಾನಿಗಳು ಸಖತ್​ ಖುಷಿಯಾಗಿದ್ದರು. ಇನ್ನು ಸುಹಾನಾ ಖಾನ್​ ರವರು ಕಳೆದ ವರ್ಷ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಪಬ್ಲಿಕ್​ ಮಾಡಿದ್ದು ಶಾರುಖ್​ ಪುತ್ರಿ ಎಂಬ ಕಾರಣಕ್ಕಾಗಿ ಅವರ ಫ್ಯಾನ್ಸ್​ ಬಳಗ ತುಂಬಾನೇ ದೊಡ್ಡದಿದೆ.

ಹೀಗಾಗಿ ಅವರಿಗೆ ಸಾಕಷ್ಟು ಫಾಲೋವರ್​​ಗಳಿದ್ದು ಫ್ಯಾನ್​ ಪೇಜ್​ ಕೂಡ ಸಾಕಷ್ಟಿದೆ. ಅವರು ಬರ್ತ್​ಡೇ ಆಚರಿಸಿಕೊಂಡಿರುವ ವಿಡಿಯೋಗಳು ಈಗಲೂ ಕೂಡ ಸಾಕಷ್ಟು ವೈರಲ್​ ಆಗುತ್ತಿವೆ.
ಇದರ ಬೆನ್ನಲ್ಲೇ ಇದೀಗ ಅವರ ಸಾಮಾಜಿಕ ಜಾಲತಾಣದಲ್ಲಿ ಈ ಹಾಟ್ ಬೆಡಗಿಯ ಮತ್ತೊಂದು ವೀಡಿಯೋ ಹರಿದಾಡಿದ್ದು ಟ್ರಿಪ್ ಹೊಡೆಯವ ಸಮಯದಲ್ಲಿ ಅಭಿಮಾನಿಗಳ ಕೈಗೆ ಹೇಗೆ ಸಿಕ್ಕಿದ್ದಾರೆ ನೀವೆ ನೋಡಿ.