Advertisements

ಒಂದೇ ಒಲಂಪಿಕ್ಸ್ ನಲ್ಲಿ ಏಳು ಪದಕ ಗೆದ್ದು ಇತಿಹಾಸ ನಿರ್ಮಿಸಿದ ಈ ಮಹಿಳೆ

Sports

ನಮಸ್ತೆ ಸ್ನೇಹಿತರೆ, ಸಾಕಷ್ಟು ವಿವಾದಗಳ ಮಧ್ಯೆ ಟೋಕಿಯಾದ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಹಲವಾರು ದೇಶಗಳಲ್ಲಿ ಪಾಲ್ಗೊಂಡಿವೆ ಅದರಲ್ಲಿ ಭಾರತ ಒಂದು ಸ್ಪರ್ಧಿಗಳು ಪದಕಗಳನ್ನು ಗೆಲ್ಲುವ ಮೂಲಕ ಅವರವರ ದೇಶಗಳಿಗೆ ಕೀರ್ತಿಗಳನ್ನು ತರುತ್ತಿದ್ದಾರೆ ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಒಂದಾದರೂ ಚಿನ್ನ ಗೆಲ್ಲಲಿ ಎಂದು ಬಹಳಷ್ಟು ಮಂದಿ ಹಂಬಲಿಸುತ್ತಿದ್ದಾರೆ ಹಾಗೂ ದೇಶವು ಕಾತುರದಿಂದ ಕಾಯುತ್ತಿದೆ. ಇದರ ಮಧ್ಯೆ ಆಸ್ಟ್ರೇಲಿಯಾದ ಈಜುಗಾರ್ಜಿ ಎಮ್ಮ ಮಕೀನ್ ಟೋಕಿಯೋ ಒಲಂಪಿಕ್ಸ್‌ ಒಂದರಲ್ಲೇ ಬರೋಬ್ಬರಿ 4 ಚಿನ್ನ ಮತ್ತು 3 ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾಳೆ.

Advertisements
Advertisements

ಒಂದೇ ಒಲಂಪಿಕ್ಸ್‌ನಲ್ಲಿ 7 ಪದಕ ಗೆದ್ದ ಮೊದಲ ಮಹಿಳೆ ಎನಿಸಿಕೊಂಡ ಎಮ್ಮ ಮಕೀನ್ “ಮಹಿಳೆಯರ 50 ಮೀಟರ್ ಮತ್ತು 100 ಮೀಟರ್ ಫ್ರೀ ಸ್ಟೈಲ್ ಸ್ಪರ್ಧೆಯಲ್ಲಿ ಹಾಗೂ ಮಹಿಳೆಯರ 4×100 ಫ್ರೀಸ್ಟೈಲ್ ರಿಲೇ ಮತ್ತು ಮೆಡ್ಲೆ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಅದೇ ರೀತಿಯಲ್ಲಿ ಮಹಿಳೆಯರ 100 ಮೀಟರ್ ಬಟರ್‌ಫ್ಲೈ, ಭಮಹಿಳೆಯರ 4×100 ಮೀಟರ್ ಮೆಡ್ಲೆ ರಿಲೇ, ಮಹಿಳೆಯರ 4×200 ಫ್ರೀಸ್ಟೈಲ್ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಆಸ್ಟ್ರೇಲಿಯಾದ ಎಮ್ಮ ಸೇರಿದಂತೆ ಒಟ್ಟು 12 ಹೆಚ್ಚು ಪದಕ ಇದ್ದಂತಾಗಿದೆ ಇವರಲ್ಲಿ ಇಬ್ಬರು ಒಲಂಪಿಕ್ ನಲ್ಲಿ ಮಾತ್ರ
ಈಸ್ಟ್ ಜರ್ಮನ್‌ನ ಕ್ರಿಸ್ಟಿನ್ ಒಟ್ಟೊ ಅವರು 1952 ರ ಒಲಂಪಿಕ್ಸ್‌ನಲ್ಲಿ ಆರು ಪದಕಗಳನ್ನು ಗೆದ್ದಿದ್ದರು. ಇದನ್ನು 2008 ರಲ್ಲಿ ಅಮೇರಿಕನ್ ನಟಾಲಿ ಕಗ್ಲಿನ್ ಸರಿಗಟ್ಟಿದ್ದರು. ಆದರೆ ಈ ಭಾರಿ ಆಸ್ಟ್ರೇಲಿಯಾದ ಈಜುಗಾರ್ಜಿ ಎಮ್ಮ ಮಕೀನ್ ಅವರಿಬ್ಬರ ದಾಖಲೆಯನ್ನು ಮುರಿದಿದ್ದಾರೆ.
ಪುರುಷರ ವಿಭಾಗದಲ್ಲಿ ಅಮೆರಿಕದ ಈಜುಗಾರ ಮೆಕಲ್ ಫೆಲ್ಪ್ಸ್ ಒಂದೇ ಒಲಂಪಿಕ್ಸ್‌ನಲ್ಲಿ 8 ಪದಕ ಗೆಲ್ಲುವ ಮೂಲಕ ಎರಡು ಭಾರಿ ದಾಖಲೆ ನಿರ್ಮಿಸಿದ್ದಾರೆ. 2004ರ ಒಲಂಪಿಕ್ಸ್‌ನಲ್ಲಿ ಅವರು ಆರು ಚಿನ್ನ ಮತ್ತು ಎರಡು ಕಂಚಿನ ಪದಕ ಗೆದ್ದಿದ್ದರೆ, 2008 ರಲ್ಲಿ ಬರೋಬ್ಬರಿ 8 ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಪುರುಷರ ವಿಭಾಗದಲ್ಲಿ ಅಮೆರಿಕದವರೆ ಆದ ಮಾರ್ಕ್ ಸ್ಪಿಟ್ಜ್, ವಿಲ್ಲೀಸ್ ಎ. ಲೀ ಮತ್ತು ಮ್ಯಾಥ್ಯು ಬಿಯಾಂಡಿ ಒಂದೆ ಒಲಂಪಿಕ್ಸ್‌ನಲ್ಲಿ ತಲಾ 7 ಪದಕಗಳನ್ನು ಗೆದ್ದು ನಂತರದ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಒಲಂಪಿಕ್ಸ್‌ ಆಟಗಳಲ್ಲಿ ಅತಿ ಹೆಚ್ಚು ಪದಕ ಗೆದ್ದ ದಾಖಲೆ ಕೂಡ ಮೆಕಲ್ ಫೆಲ್ಪ್ಸ್ ಹೆಸರಿನಲ್ಲಿದೆ. ಅವರು ಒಟ್ಟು ನಾಲ್ಕು ಒಲಂಪಿಕ್ಸ್‌ನಲ್ಲಿ ಭಾಗವಹಿಸಿ 28 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 23 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕಗಳು ಅದರಲ್ಲಿ ಸೇರಿವೆ. ಒಲಂಪಿಕ್ಸ್ ನಲ್ಲಿ ಮಹಿಳೆಯರು ಇನ್ನೂ ಅನೇಕ ಸಾಧನೆ ಮಾಡಲಿ ಎಂಬುದು ಎಲ್ಲರ ಆಶಯ ನೀವ್ ಏನಂತಿರ ಫ್ರೆಂಡ್ಸ್