Advertisements

ಶಿಕ್ಷಕನನ್ನೇ ಮದುವೆಯಾಗೋದು ಎಂದು ಹಠ ಹಿಡಿದ 20 ವರ್ಷದ ವಿದ್ಯಾರ್ಥಿನಿ! ಅಬ್ಬಬ್ಬಾ ನೋಡಿ!!

Kannada News

ಪ್ರೀಯ ಓದುಗರೇ ಈ ಮೊದಲು ಶಾಲೆಗಳು ಇರಲಿಲ್ಲ. ಗುರುಕುಲಗಳು ಇದ್ದವು. ಅಲ್ಲಿ ಗುರು ಶಿಷ್ಯರ ನಡುವೆ ಅವಿನಾಭವ ಸಂಬಂಧ ಇರತ ಇತ್ತು. ಅದು ಅಷ್ಟೇ ಪವಿತ್ರವು ಆಗಿತ್ತು. ಗುರುವನ್ನು ದೇವರಂತೆ ಪೂಜಿಸುವ ಕಾಲವದು. ಆದ್ರೆ ಇತ್ತೀಚಿನ 21 ಯಂತ್ರಗಳ ಯುಗದಲ್ಲಿ ಈ ಸಂಬಂಧ ಸಂಪೂರ್ಣ ಹಾಳಾಗಿದೆ. ಅವರಿಬ್ಬರ ನಡುವೆ ಇರಬೇಕಾದ ಪವಿತ್ರಾ ಗುರು ಶಿಷ್ಯರ ಸಂಬಂಧ ಈಗ ದಾಂಪತ್ಯದಲ್ಲಿ ಒಂದಾಗುತ್ತಿವೆ. ಇದಕ್ಕೆ ಎರಡು ರೀತಿಯ ಅಭಿಪ್ರಾಯಗಳು ವ್ಯೆಕ್ತಿವಾಗುತ್ತಿವೆ. ಅದೇನು ಅಂತಾ ಹೇಳತೀವಿ ಈ ಸ್ಟೋರಿ ನಾ ಕೊನೆವರೆಗೂ ಓದಿ.


ಈ ಘಟನೆ ನಡೆದದ್ದು ಪಾಕಿಸ್ತಾನ ದೇಶದಲ್ಲಿ. ಭಾರತದಲ್ಲಿಯೂ ಇಂತಹ ಘಟನೆ ನಡೆದಿದೆ. ಈಕೆಯ ಹೆಸರು ಜೋಹ ನೂರ್ ಇವಳಿಗೆ ಕೇವಲ 20 ವರ್ಷ. ಆದ್ರೆ ಇವಳು ತನ್ನ ಶಿಕ್ಷಕನನ್ನೇ ರೀತಿಸಿದ್ದಾಳೆ. ಅದು 52 ವರ್ಷ ಅಂಕಲ್ ಅನ್ನ. ಯಾಕೆ ಹೀಗ ಮಾಡಿದ್ದಾಳೆ ಅಂದ್ರೇ ಇವರಿಬ್ಬರದು ಪವಿತ್ರ ಪ್ರೀತಿ ಅಂತೇ.

ಹೌದು ಓದುಗರೇ ಪ್ರೀತಿ ಯಾವಾಗ್ಲೂ ಮಳೆಯ ಹನಿಯಂತೆ ಅಪ್ಪಟ ಶುಭ್ರ, ಸ್ವಚ್ಛ, ಶುದ್ಧವಾಗಿಯೇ ಇರುತ್ತದೆ. ಅದು ಯಾವಾಗ ಭೂಮಿಯ ಸ್ಪರ್ಶ ಮಾಡುತ್ತದೆಯೋ ಆಗ ಅಲ್ಲಿಯ ಆಕಾರ, ಬಣ್ಣ, ಲವಣಗಳ ಮಿಶ್ರಣದಿಂದ ಸೇರಿ ಅದು ರಾಡಿ ನಿರಾಗಿ ಹರಿಯುತ್ತದೆ. ಮಧ್ಯ ಮತ್ತೆ ಶುದ್ಧವಾಗಿ ನದಿಯಾಗಿ ಸಾಗರ ಸೇರುತ್ತದೆ.

ಅದೇ ರೀತಿ ಪ್ರೀತಿ ಇಬ್ಬರ ನಡುವೆ ಹುಟ್ಟಿ ಆಕಾರ, ಸಂಬಂಧ, ರೀತಿ- ನೀತಿ, ಆಚಾರ – ವಿಚಾರ, ಜಾತಿ, ಬಣ್ಣದಿಂದ ಕಲುಷಿತವಾಗುತದೆ. ಮತ್ತೆ ದಂಪತ್ಯದ ಮೂಲಕ ಬಿರುಕು ಮುಚ್ಚಿ ಹೊಸ ಸಂಬಂಧವಾಗಿ ಬೆಳೆದು ಹೊಸ ಜೀವವನ್ನು ಸೃಷ್ಟಿಸುತ್ತದೆ. ಅದೇ ನಿಜವಾದ ಪ್ರೀತಿ . ಹಾಗಾದ್ರೆ ಈ ಗುರು ಶಿಷ್ಯ ಪ್ರೀತಿಯು ಪವಿತ್ರವೆ…?
ಇಲ್ಲಿ ಜೋಹ ನೂರ್ ಗೆ ಕೇವಲ 20 ವರ್ಷ ಆದ್ರೆ ಆಕೆ ಪ್ರೀತಿಸಿದ ಶಿಕ್ಷಕನಿಗೆ 52 ವರ್ಷ. ಆತನ ಹೆಸರು ಸಾಜಿದ್ ಅಲ. ಇವರಿಬ್ಬರ ನಡುವೆ ಸುಮಾರು 32 ವರ್ಷಗಳ ಅಂತರವಿದೆ.

ಆದರೆ ಪ್ರೀತಿಗೆ ಇವೆಲ್ಲ ಯಾವ ಲೆಕ್ಕ ಬಿಡಿ. ಹಾಗಾಗಿ ಒಬ್ಬರನ್ನೊಬ್ಬರು ಇಷ್ಟಪಟ್ಟ ಮೇಲೆ ಇದೆಲ್ಲವನ್ನು ತಳ್ಳಿಹಾಕಿ ಮನೆಯವರ ವಿರೋಧ ಕಟ್ಟಿಕೊಂಡು ವಿವಾಹವಾಗಿದ್ದರೆ.ಸಾಜಿದ್ ಬಳಿ ತನ್ನ ಪ್ರೀತಿ ನಿವೇದನೆ ಮಾಡಿಕೊಂಡ ಜೋಹಾ ನೀವು ನನ್ನನ್ನ ಪ್ರೀತಿಸುತ್ತಿದ್ದರೆ ಮದುವೆಯಾಗಲೇಬೇಕು ನನಗೆ ನೀವಂದ್ರೆ ತುಂಬಾ ಇಷ್ಟ ನಿಮ್ಮನ್ನ ಮದುವೆಯಾಗಬೇಕು ಅಂತ ಅಂದುಕೊಂಡಿದ್ದೇನೆ. ನಿಮಗೆ ಒಂದು ವಾರ ಸಮಯ ನೀಡುತ್ತೇನೆ. ಅಷ್ಟರಲ್ಲಿ ನನ್ನ ಮೇಲೆ ಪ್ರೀತಿ ಆದ್ರೆ ನಿಮ್ಮನ್ನು ವಿವಾಹ ಆಗುತ್ತೇನೆ ಅಂದಿದ್ದಳು ನೂರಾ.

ಈ ಒಂದು ವಾರದ ಗ್ಯಾಪ್ ನಲ್ಲಿ ಜೋಹಳನ ಪ್ರೀತಿಸುವುದಕ್ಕೆ ಶುರು ಮಾಡುತ್ತಾರೆ ಸಾಜಿದ್. ಆದರೆ ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕಾರಣಕ್ಕಾಗಿ ಸಾಜಿದ್ ಹಾಗೂ ಜೋಹಾ ಅವರ ಸಂಬಂಧಿಕರು ಮನೆಯವರು ಕೋಪಗೊಳ್ಳುತ್ತಾರೆ. ಆದ್ರೆ ಜೋಹಾ ನೂರ್ ಮಾತ್ರ ತಮ್ಮಿಬ್ಬರ ನಡುವೆ ಇರುವ ಪವಿತ್ರ ಪ್ರೀತಿಯ ಸಂಬಂಧದ ಬಗ್ಗೆ ಹೇಳುತ್ತಾಳೆ.

ಕೊನೆಗೆ ಮನೆಯವರ ವಿರೋಧದ ನಡುವೆಯೂ ಸಾಜಿದ್ ಹಾಗೂ ಜೋಹ ಇಬ್ಬರೂ ಮದುವೆಯಾಗುತ್ತಾರೆ ಇದೀಗ ಪ್ರೀತಿಯಿಂದ ಸಂಸಾರ ನಡೆಸುತ್ತಿರುವ ಸಾಜಿದ್ ಹಾಗೂ ಜೋಹಾ ಸಂದರ್ಶನದಲ್ಲಿ ತಮ್ಮ ಪ್ರೀತಿಯ ಕಥೆಯನ್ನು ಅನಾವರಣ ಮಾಡಿದ್ದಾರೆ. ಸಾಜಿದ್ ಅತ್ಯುತ್ತಮ ಶಿಕ್ಷಕ. ಈ ಪ್ರದೇಶದಲ್ಲಿ ಅವರಷ್ಟು ಉತ್ತಮವಾಗಿ ಪಾಠ ಮಾಡುವವರು ಬೇರೆ ಯಾರು ಇಲ್ಲ ಎಂದು ಹೊಗಳಿದ್ದಾಳೆ. ಅದರಂತೆ ಪತ್ನಿಯನ್ನು ಸಹ ಪತಿ ಸಜೀದ್ ಬಿಟ್ಟು ಕೊಟ್ಟಿಲ್ಲ.

ನೂರಾ ತುಂಬಾ ಜಾಣೆ. ಅತ್ಯುತ್ತಮವಾಗಿ ಅಭ್ಯಾಸ ಮಾಡುತ್ತಾಳೆ. ಹಾಗೂ ಆಕೆಯೇ ಉತ್ತಮವಾಗಿ ಆಹಾರ ತಯಾರಿಸುತ್ತಾಳೆ. ಜೊತೆಗೆ ಕಚೇರಿಯಲ್ಲಿ ಚಹವನ್ನು ಕೂಡ ಚೆನ್ನಾಗಿ ಮಾಡಿಕೊಡುತ್ತಾಳೆ ಅಂತ ಸಾಜಿತ್ ತನ್ನ ಪತ್ನಿ ನೂರಾ ಬಗ್ಗೆ ಸಂತೋಷದಿಂದ ಹೇಳಿಕೊಂಡಿದ್ದಾರೆ. ಇದೀಗ ಇವರಿಬ್ಬರ ಪ್ರೀತಿಗೆ ಶುಭಾಶಯಗಳ ಮಹಾ ಪೂರವೇ ಹರಿದು ಬರುತ್ತಿದೆ. ಹೀಗೆ ಜೀವನ ಪೂರ್ತಿ ಸುಖವಾಗಿ ಹೊಂದಿಕೊಂಡು ಹೋಗಲಿ ಎನ್ನುವವ್ವರು ಒಂದೆಡೆ. ಮತ್ತೊಂಡೆ ಗುರು ಶಿಷ್ಯರನ್ನು, ಶಿಷ್ಯ ಗುರುವನ್ನು ಪ್ರೀತಿಸಿದ್ರೆ ಆ ಸಂಬಂಧ ಪವಿತ್ರತೆ ಹಾಳಾಗುತ್ತದೆ ಎಂದಿದ್ದಾರೆ.