Advertisements

ಈ ವಿಸ್ಮಯಕಾರಿ ಶಿವಲಿಂಗ ಒಂದು ದಿನದಲ್ಲಿ ಮೂರು ಬಾರಿ ಬಣ್ಣ ಬದಲಾಯಿಸುತ್ತೆ.! ಈ ಅದ್ಭುತ ಶಿವಲಿಂಗ ಇರುವುದಾದರೂ ಎಲ್ಲಿ ಗೊತ್ತೆ.?

Kannada News

ನಮಸ್ತೆ ಸ್ನೇಹಿತರೆ, ಸಾಮಾನ್ಯ ಬಣ್ಣದಿಂದ ನೀಲಿ ಬಣ್ಣ ಬದಲಾಯಿಸುವ ಶಿವನ ಬಗ್ಗೆ ಕೇಳಿದ್ದೀರಾ ಆದರೇ ಈ ಪುಣ್ಯಕ್ಷೇತ್ರದಲ್ಲಿ ಶಿವ ಎಂದು ಪೂಜಿಸಲಾಗುವ ಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತಂತೆ. ಆ ಪುಣ್ಯ ಕ್ಷೇತ್ರ ಯಾವುದು, ಅದು ಎಲ್ಲಿದೆ ಅದರ ವಿಶೇಷತೆ ಏನು ಎಂಬುವುದನ್ನು ತಿಳಿಯೋಣ ಬನ್ನಿ. ಶಿವಲಿಂಗ ಬಣ್ಣ ಬದಲಾಯಿಸುವ ಈ ಕ್ಷೇತ್ರವೇ ಕಾಂತೇಶ್ವರ ದೇವಾಲಯ. ಇಲ್ಲಿನ ವಿಶೇಷತೆ ಏನೆಂದರೆ ಇಲ್ಲಿನ ಶಿವ ಲಿಂಗದ ಬಣ್ಣವು ಮೂರು ಬಣ್ಣಗಳಾಗಿ ಬದಲಾಗುತ್ತದೆ. ಬೆಳಗ್ಗೆ ಚಿನ್ನದ ಬಣ್ಣದಲ್ಲೂ, ಮಧ್ಯಾಹ್ನ ಬೆಳ್ಳಿಯ ಬಣ್ಣದಲ್ಲೂ ಮತ್ತು ಸಂಜೆ ಕಂಚಿನ ಬಣ್ಣದಲ್ಲಿ ಮಂಗಳಾರತಿಯ ಸಮಯದಲ್ಲಿ ಕಾಣುತ್ತದೆ.

Advertisements
Advertisements

ಈ ಕ್ಷೇತ್ರವು ಹಿಂದೆ ಅರಣ್ಯದಿಂದ ಅವರಿಸಿತ್ತು. ಕಾಂತಾರ ಎಂದರೆ ಅರಣ್ಯ ಅಲ್ಲಿನ ಪ್ರಕೃತಿಯಿಂದಾಗಿ ಕಾಂತಾವರ ಎಂಬ ಹೆಸರು ಬಂದಿದೆ. ಈ ಕ್ಷೇತ್ರದಲ್ಲಿ ಶಿವನು ಪಾರ್ವತಿಯ ಸಮೇತನಾಗಿ ನೆಲೆಸಿರುವುದರಿಂದ ಇಲ್ಲಿಗೆ ಕಾಂತೇಶ್ವರ ಎನ್ನುವ ಹೆಸರು ಬಂದಿದೆ ಎಂಬ ನಂಬಿಕೆ. ಈ ದೇವಾಲಯವು 7ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತದೆ. ಇಲ್ಲಿನ ಮೂಲದೈವ ಕಾಂತೇಶ್ವರ. ಇಲ್ಲಿ ಗಣೇಶ, ಅಣ್ಣಪ್ಪ ಹಾಗೂ ಅರ್ಧನಾ’ರೀಶ್ವರ ಗುಡಿಯೂ ಇದೆ. ಜಂಜವಾತ ಎನ್ನುವ ಅ’ಸು’ರನ ಕುಟುಂಬ ಇಲ್ಲಿ ನೆಲೆಸಿದ್ದರಂತೆ. ಅವರ ಕುಟುಂಬ ಇಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಕಾ’ಟ ನೀಡುತ್ತಿದ್ದರಂತೆ. ಅವುಗಳಲ್ಲಿ ಅಂಬರೀಶ ಮುನಿ ಆ ರಾ’ಕ್ಷಸರ ಸಂ’ಹಾ’ರಕ್ಕಾಗಿ ಶಿವನಿಗಾಗಿ ತಪಸ್ಸು ಮಾಡುತ್ತಿದ್ದರಂತೆ.

ಹೀಗಾಗಿ ಶಿವನು ಇಲ್ಲಿ ನೆಲೆಸಿದ್ದಾನೆ ಎನ್ನಲಾಗುತ್ತದೆ. ಇಲ್ಲಿನ ವಿಶೇಷವೆಂದರೆ ಶಿವನು ದಿನದಲ್ಲಿ ಮೂರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಬೆಳಗ್ಗೆ ಬೆಳ್ಳಿ ಬಣ್ಣದಲ್ಲಿ, ಮಧ್ಯಾಹ್ನ ತಾಮ್ರದ ಬಣ್ಣ ಸಂಜೆ ಬಂಗಾರದ ಬಣ್ಣದಲ್ಲಿ ಕಂಗೊಳಿಸುತ್ತಾನೆ. ಈ ಶಿವಲಿಂಗಕ್ಕೆ ಯಾವುದೇ ಕವ’ಚಗಳನ್ನು ಹಾಕಲಾಗಿಲ್ಲ, ಬರೀ ಶಿಲೆಯ ಲಿಂಗವಿದು. ಇದನ್ನು ವಜ್ರಶಿಲೆ ಎನ್ನಲಾಗುತ್ತದೆ. ವ್ಯಾಪಾರ ದೋ’ಷ ನಿವಾರಣೆ, ಸಂತಾನ ಪ್ರಾಪ್ತಿ, ಕುಟುಂಬ ಕ’ಲಹ ನಿವಾರಣೆಗೆಯಾಗುತ್ತದೆ ಎನ್ನುವುದು ಇಲ್ಲಿಗೆ ಬರುವ ಭಕ್ತರ ನಂಬಿಕೆ. ಇಲ್ಲಿಗೆ ಬಂದ ಭಕ್ತರು ಯಾವತ್ತೂ ಬರೀ ಕೈಯಲ್ಲಿ ಹೋಗೋದಿಲ್ಲ ಎನ್ನುತ್ತಾರೆ. ಅಂಬರೀಶ ಮುನಿಗೆ ಪಾರ್ವತಿ ದೇವಿಯು ಕ’ಡ’ಗವನ್ನು ನೀಡಿದ್ದಳಂತೆ. ಶಿವಲಿಂಗಕ್ಕೆ ಕ’ಡ’ಗ ತೊಡಿಸಿ ಪೂಜಿಸುವಂತೆ ಹೇಳಿದ್ದಳಂತೆ. ಆ ಕ’ಡ’ಗವನ್ನು ಇಂದಿಗೂ ಇಲ್ಲಿ ನಾವು ಕಾಣಬಹುದು.

ಕಾಂತೇಶ್ವರನ ಸನ್ನಿಧಾನದಿಂದ ಮೂರು ಕಿ.ಮೀ ದೂರ ಸಾಗಿದರೆ ಅಂಬರೀಶ ಮುನಿ ತಪಸ್ಸು ಮಾಡಿದ ಗುಹೆ ಇದೆ. ಅಲ್ಲೇ ಅಂಬರೀಶ ಮುನಿ ಶಿವನ ದರ್ಶನ ಪಡೆದನು ಎನ್ನಲಾಗುತ್ತದೆ. ಇಲ್ಲಿನ ನಂದಿಯ ಮೂರ್ತಿಯೂ ಬಹಳ ವಿಶೇಷವಾಗಿದೆ ಎಂದು ಹೇಳಬಹುದು. ಬೆಂಗಳೂರಿನಿಂದ, ಈ ಕ್ಷೇತ್ರ ಇರುವುದು ಕಾಂತಾವರದಲ್ಲಿ, ಉಡುಪಿಯಿಂದ 40 ಕಿ.ಮೀ ದೂರದಲ್ಲಿದೆ ಇದು ಪಡುಬಿದ್ರೆಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿ ಬೆಳವಾಯಿಯಿಂದ ಸ್ವಲ್ಪವೇ ದೂರದಲ್ಲಿದೆ. ಮಂಗಳೂರಿನಿಂದ ಉಡುಪಿಗೆ ಸಾಕಷ್ಟು ಬಸ್‌ಗಳಿವೆ. ಇನ್ನು ರೈಲು ಮೂಲಕ ಹೋಗುವುದಾದರೆ ಸಮೀಪದ ರೈಲು ನಿಲ್ದಾಣವೆಂದರೆ ಉಡುಪಿ ರೈಲುನಿಲ್ದಾಣ. ವಿಮಾನದ ಮೂಲಕ ಹೊಗುವುದಾದರೆ ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ.