Advertisements

ಅಂದು ಶಿವಣ್ಣನಿಗೆ ಆರೋಗ್ಯ ಸಮಸ್ಯೆ ಆದಾಗ ದೊಡ್ಮನೆ ಸೊಸೆ ಗೀತಕ್ಕ ಮಾಡಿದ ಆ ತ್ಯಾಗ ಎಂತದ್ದು ಗೊತ್ತಾ? ಯಾವ ದೇವರ ಮೊರೆ ಹೋಗಿದ್ದರು ಗೊತ್ತಾ? ಗ್ರೇಟ್ ಕಣ್ರೀ ನಿಜವಾಗ್ಲೂ ನೋಡಿ!!

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ಚಂದನವನವನ್ನು ಕಟ್ಟಿ ಬೆಳೆಸಿದ್ದ ಕೈಗಳಲ್ಲಿ ಬಹುಪಾಲು ರಾಜ್ ಕುಟುಂಬಕ್ಕೆ ಸಲ್ಲುತ್ತದೆ. ಹೌದು ಹಲವು ದಶಕಗಳಿಂದ ಕನ್ನಡ ಸಿನಿಮಾಗಳನ್ನು ಬೆಳೆಸಿ ಉಳಿಸಿದ ಕೀರ್ತಿ ನಟ ಸಾರ್ವಭೌಮ ಎಂದೆ ಖ್ಯಾತರಾದ ಡಾ. ರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ. ಅವರಿಂದ ಪ್ರಾರಂಭವಾದ ಈ ಅಭಿನಯ ಕೌಶಲ್ಯ ಅವರ ಇಡೀ ಕುಟುಂಬಕ್ಕೆ ವರದಾನವಾಗಿದೆ.

ಹೌದು ಕನ್ನಡ ಸಿನಿಮಾ ರಂಗಕ್ಕೆ ರಾಜ್ ಕುಟುಂಬದ ಕೊಡುಗೆ ಹೆಚ್ಚಿದೆ. ಡಾ. ರಾಜ್ ಕುಮಾರ್ ನಂತರ ಸಾಲು ಸಾಲಗಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅನೇಕ ಸನಿಮಾಗಳನ್ನು ಕನ್ನಡಾಭಿಮಾನಿಗಳಿಗೆ ನೀಡಿದ್ದಾರೆ‌.

ನಟ ಶಿವಣ್ಣ ಅವರ ಕುರಿತು ನೋಡುವುದಾದರೆ ಅವರು 60 ವಯಸ್ಸಾಗಿದ್ದರು ಇನ್ನು ಇಪ್ಪತ್ತರ ಹರೆಯದ ಹುಡುಗನಂತೆ ಕಾಣುತ್ತಾರೆ. ಇಂದಿಗೂ ಸಹ ಮೊದಲಿನ ಹಾಗೆ ಅವರ ಮಾಸ್ ಲುಕ್ ಖಡಕ್ ಡೈಲಾಗ್ ಬದಲಾಗಿಲ್ಲ‌. ದಿನದಿಂದ ದಿನಕ್ಕೆ ಅವರು ಯಂಗ್ ಆಗಿಯೇ ಕಾಣುತ್ತಾರೆ ಇದರ ಸಿಕ್ರೆಟ್ ಎನಿರಬಹುದು ಅಂತಾ ಅಭಿಮಾನಿಗಳು ಸಹ ಕೌತುಕವನ್ನು ವ್ಯಕ್ತಿ ಪಡಿಸಿದ್ದಾರೆ.

ಶಿವಣ್ಣ ಅತೀ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾ ಮಾತ್ರವಲ್ಲದೆ ಸಮಾಜ ಕಾರ್ಯದಲ್ಲಿ ಇವರ ಕುಟುಂಬ ಸದಾ ಸಿದ್ಧವಾಗಿರುತ್ತದೆ. ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೊ ನಲ್ಲಿ ಜಡ್ಜ ಆಗಿಯು ಸಹ ಕೆಲಸ ಮಾಡಿದ್ದಾರೆ. ಸದ್ಯ ಸಿನಿಮಾಗಳಲ್ಲಿ ನಡಿಸುವುದರ ಜೊತೆ ಜೊತೆಗೆ ಜೀ ಕನ್ನಡ ವಾಹಿನಿಯ ಸದಸ್ಯತ್ವ ಸಹ ಪಡೆದುಕೊಂಡಿದ್ದಾರೆ. ಹೀಗಾಗಿ ಜೀ ಕನ್ನಡಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವಿದ್ದರು ಅಲ್ಲಿ ಶಿವಣ್ಣ ಭಾಗವಹಿಸುತ್ತಾರೆ.

ಈ ಕಾರ್ಯಕ್ರಮದಲ್ಲಿ ಕಲಾವಿದರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದರು‌. ಶಿವಣ್ಣ ಅವರ ಕೈಯಿಂದ ಪ್ರಶಸ್ತಿಗಳನ್ನು ಸ್ವೀಕರಿಸಿದ ಕಲಾವಿದರು ಹೆಮ್ಮೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಅನುಶ್ರೀ ಅವರ ಬದಲಾಗಿ ರವಿಚಂದ್ರನ್ ಅವರು ಶಿವಣ್ಣ ಅವರಿಗೆ ಪ್ರಶ್ನೆಗಳನ್ನು ಕೇಳಿದರು. ಶಿವಣ್ಣ ಸಾಮಾನ್ಯವಾಗಿ ತಮ್ಮ ವಯಕ್ತಿಕ ಜೀವನದ ಕುರಿತು ಎಲ್ಲಿಯೂ ಯಾವ ಸುದ್ದಿಯನ್ನು ವ್ಯಕ್ತಪಡಿಸುವುದಿಲ್ಲ.

ಆದರೆ ಶಿವಣ್ಣ ಅವರು ರವಿಚಂದ್ರನ್ ಅವರಿಗೆ ಸ್ಪಂದಿಸುವ ಮೂಲಕ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಕುಟುಂಬದಲ್ಲಿ ಅವರ ಪತ್ನಿ ಗೀತಾ ಅವರು ಮಾಡಿದ ತ್ಯಾಗದ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ಐದು ವರ್ಷಗಳ ಹಿಂದೆ ನನಗೆ ಬ್ರೇನ್ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಗೀತಾ ನನ್ನ ಜೊತೆಗೆ ಇದ್ದು, ಧೈರ್ಯ ನೀಡಿದ್ದರು. ಅವರು ನನಗಾಗಿ ಪ್ರತಿಯೊಂದು ಹೆಜ್ಜೆಯಲ್ಲು ಜೊತೆಯಾಗಿರುತ್ತಾರೆ ಎಂದಿದ್ದಾರೆ.

ಇನ್ನು ಆಪರೇಷನ್ ನಡೆದದ್ದು ಭಾರತದಲ್ಲಿ ಅಲ್ಲ ಬದಲಾಗಿ ಇದು ಫ್ಯಾರಿಸ್ ನಲ್ಲಿ ನಡೆಯಬೇಕಾತ್ತು. ಅದಕ್ಕಾಗಿ ವಿದೇಶಕ್ಕೆ ಹೋಗಲು ಅಪ್ಪುಗೆ ವಿಸಾ ಸಿಕ್ಕಿರಲಿಲ್ಲ. ಈ ಸಮಯದಲ್ಲಿ ಸಹ ಗೀತಾ ನನ್ನ ಜೊತೆಗಿದ್ದರು. ನಾನು ಕ್ಷೇಮ ಹಾಗೂ ಆರೋಗ್ಯದಿಂದ ಮನೆಗೆ ಮರಳಲಿ ಅಂತ ದೇವರಿಗೆ ಕೊದಲ ಹರಿಕೆ ನೀಡಿದ್ದರು ಎಂದು ತಿಳಿಸಿದ್ದಾರೆ.

ಗೀತಕ್ಕ ಅವರು ಸಿನಿಮಾ ರಂಗದಿಂದ ದೊರ ಇದ್ದರು ಸಹ ಹಲವು ಜನಪರ ಕೆಲಸಗಳಲ್ಲಿ, ಕಾರ್ಯಗಳಲ್ಲಿ ತೊಡಗಿಕೊಂಡು ಇರುತ್ತಾರೆ. ಶಕ್ತಿಧಾಮ ಕೇಂದ್ರವನ್ನು ಮುಂದುವರೆಸಿಕೊಂಡು ಅದರ ಎಲ್ಲಾ ಸಮಸ್ಯೆಗಳನ್ನು ಸಹ ಇವರೆ ಮುಂದೆ ನಿಂತು ಬಗೆಹರಿಸುತ್ತಾರೆ.ಎಂಜಲ್ ಎನ್ನು ಪ್ರಾಡಕ್ಟ್ ಉತ್ಪಾದಿಸುವ ಮೂಲಕ ಅದರಿಂದ ಬಂದ ಆದಾಯವನ್ನು ಶಕ್ತಿಧಾಮ ಕೇಂದ್ರದ ಅಭಿವೃದ್ಧಿಗೆ ಬಳಕೆ ಮಾಡುತ್ತಾರೆ. ಸದಾ ಕಾಲ ಶಿವಣ್ಣ ಜೊತೆಯಲ್ಲಿ‌ ನಿಲ್ಲು ಗೀತಕ್ಕ ನಮಗೆಲ್ಲ ಮಾದರಿ.