ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ನೆನಪಿಸಿ ಕೊಂಡಾಗಲೆಲ್ಲ ನಮ್ಮ ಧ್ವನಿಗೆ ಬದಲಾಗುತ್ತದೆ. ಆ ನೋವನ್ನು ಸಂಪೂರ್ಣವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ.ಆ ನೋವಿನ ಜೊತೆಗೆ ಬದುಕುತ್ತಿದ್ದೇವೆ. ಮುಂದೆಯೂ ಕೂಡ ಈ ನೋವಿನ ಜೊತೆಗೆ ಬದುಕುತ್ತೇವೆ ಎಂದು ಪುನೀತ್ ರಾಜಕುಮಾರ್ ಅವರ ಪ್ರೀತಿಯ ಅಣ್ಣ ಶಿವರಾಜ್ ಕುಮಾರ್ ಅಪ್ಪು ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.
[widget id=”custom_html-5″]
ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್ ಅವರು ಅಪ್ಪುವಿನದು ಅದ್ಭುತ ವಾದ ಆತ್ಮ ಹೀಗಾಗಿಯೇ ಅಪ್ಪು ಅವರನ್ನು ಜನ ಈಗಲೂ ಕೂಡ ನೆನಪಿಸಿಕೊಂಡು ಅಭಿಮಾನಿಗಳು ತಮ್ಮ ಮನೆಗಳಲ್ಲಿ ಇಷ್ಟಪಟ್ಟು ಅಪ್ಪು ಫೋಟೋವನ್ನು ಇಟ್ಟುಕೊಂಡು ಪೂಜಿಸುತ್ತಿದ್ದಾರೆ. ಅಪ್ಪು ಗಳಿಸಿರುವ ಈ ಪ್ರೀತಿಯನ್ನು ಕಂಡು ನನಗೆ ಹೆಮ್ಮೆಯಾಗುತ್ತಿದೆ. ಮೈಸೂರಿನ ಶಕ್ತಿಧಾಮಕ್ಕೆ ಇತ್ತೀಚಿನ ದಿನಗಳಲ್ಲಿ ನಾನು ಹೆಚ್ಚಾಗಿ ಬರುತ್ತಿದ್ದೇನೆ.
[widget id=”custom_html-5″]
[widget id=”custom_html-5″]

[widget id=”custom_html-5″]
ಇದರಿಂದ ನಮ್ಮ ಮನಸ್ಸುಗಳಿಗೂ ಕೂಡ ಒಂದು ಬದಲಾವಣೆ ಆಗುತ್ತದೆ. ಮಕ್ಕಳಿಗೂ ಕೂಡ ಹೊಸ ಅನುಭವವಾಗುತ್ತದೆ ಎಂದರು. ಗೀತಾ ಶಿವರಾಜ್ ಕುಮಾರ್ ಈಗ ಇದರ ಸಂಪೂರ್ಣ ಜವಾ ಬ್ದಾರಿಯನ್ನು ಹೊತ್ತಿದ್ದಾರೆ. ಇದರ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಮೊನ್ನೆ ಶಕ್ತಿಧಾಮದ ಮಕ್ಕಳು ಇಷ್ಟಪಟ್ಟರು ಎಂದು ನಾನೇ ಡ್ರೈವ್ ಮಾಡಿಕೊಂಡು ಶೂಟಿಂಗ್ ಸ್ಪಾಟ್ ಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ಸ್ಕೂಲ್ ತೆರೆಯಲು ನಮಗೆ ಅನುಮತಿ ಸಿಗುತ್ತಿದೆ.ಆ ಕೆಲಸವು ಬೇಗನೆ ಆಗುತ್ತದೆ ಎಂದರು. ಇನ್ನು ಅಪ್ಪು ಮಗಳು ನಮ್ಮ ಮಗಳಿದ್ದಂತೆ ವಿದೇಶದಲ್ಲಿ ಓದುತ್ತಿದ್ದಾಳೆ ನಮ್ಮೆಲ್ಲರ ಆಸೆಯು ಕೂಡ ದೃತಿ ಚೆನ್ನಾಗಿ ಓದಿ ಸಮಾಜಕ್ಕೆ ಒಂದು ಮಾದರಿಯಾಗಿರಬೇಕು.
[widget id=”custom_html-5″]

ಇನ್ನೂ ಅಪ್ಪು ಅವರು ತೀರಿಕೊಂಡಾಗ ತುಂಬಾ ದುಃಖ ಪಟ್ಟಿದ್ದಳು ತುಂಬಾ ನೋವಿನಲ್ಲಿದ್ದಳು ನಾನು ಧೈರ್ಯ ಹೇಳುತ್ತಾ ಸಮಾಧಾನ ಮಾಡುತ್ತಿದ್ದೆ. ನಾವು ಕೂಡ ಅಪ್ಪು ಬಿಟ್ಟು ಇರುವುದಕ್ಕೆ ಇದುವರೆಗೂ ಆಗುತ್ತಿಲ್ಲ
ಇನ್ನು ಮಗಳು ತಂದೆಯನ್ನು ಕಳೆದುಕೊಂಡು ಎಷ್ಟು ನೋವು ಅನುಭವಿಸಿದ್ದಾಳೆ ನಮಗೆ ಗೊತ್ತು ನಾನು ಅಪ್ಪು ಸ್ಥಾನದಲ್ಲಿ ನಿಂತು ಅಪ್ಪು ಕನಸುಗಳ ಆಸೆಯನ್ನು ಅಪ್ಪುವಿನ ಕುಟುಂಬವನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ದೃತಿಯ ಬಗ್ಗೆ ಭಾವುಕ ಮಾತುಗಳನ್ನಾಡಿ ಕಣ್ಣೀರು ಹಾಕಿದ್ದಾರೆ ಶಿವರಾಜ್ ಕುಮಾರ್ ಅವರು..
[widget id=”custom_html-5″]