ನಮಸ್ಕಾರ ಸ್ನೇಹಿತರೆ ಬೇರೆಯವರಿಗೆ ಖುಷಿ, ಪ್ರೀತಿ ಕೊಡುವುದರಲ್ಲಿ ಸಂತೋಷ ಹುಡುಕಿಕೊಳ್ಳುವ ಅಪರೂಪದ ಜೀವಿ ಶಿವಣ್ಣ ನನಗೆ ಜನರಿಗಾಗಿ ಕುಣಿಯುವುದು ಹಾಡುವುದು ಇಷ್ಟ ನನ್ನನ್ನು ನೋಡಿ ಜನ ಖುಷಿಪಟ್ಟರೆ ನನಗೆ ಸಂತೋಷ
ಎಂದು ಸಂದರ್ಶನದಲ್ಲಿ ಶಿವಣ್ಣ ಈ ರೀತಿ ಹೇಳಿದ್ದರು. ಇಂದಿಗೂ ಅದನ್ನೇ ಪಾಲಿಸುತ್ತಾ ಬಂದಿದ್ದಾರೆ. ಶಿವಣ್ಣ ಎಲ್ಲಿದ್ದರೂ ತಮ್ಮ ಸುತ್ತಮುತ್ತ ಇರುವವರನ್ನು ಒಂದಲ್ಲ ಒಂದು ರೀತಿ ಮನರಂಜಿಸುತ್ತಿರುತ್ತಾರೆ. ಸುತ್ತಲೂ ಇರುವವರು ಖುಷಿಯಾಗಿರುವಂತೆ ನೋಡಿಕೊಳ್ಳುತ್ತಾರೆ ಶಿವಣ್ಣ ಅದರಲ್ಲೂ ತಾವು ಸಂತೋಷ ಕಾಣುತ್ತಾರೆ.
[widget id=”custom_html-5″]

ಅಣ್ಣಾವ್ರ ಕುಟುಂಬ ಶಕ್ತಿಧಾಮ ವನ್ನು ನಡೆಸಿಕೊಂಡು ಬರುತ್ತಿರುವುದು ಹಳೆಯ ವಿಷಯ ಪುನೀತ್ ಅಗಲಿಕೆಯ ಬಳಿಕ ಶಕ್ತಿ ಧಾಮದ ವಿಚಾರ ಹೆಚ್ಚು ಪ್ರಚಾರಕ್ಕೆ ಬಂತು ಆದರೆ ಅದಕ್ಕೂ ಮುನ್ನ ಪ್ರಚಾರವೇ ಬಯಸದೆ ದೊಡ್ಮನೆ ಕುಟುಂಬ ಸೇವೆ ಮಾಡುತ್ತಲೇ ಇತ್ತು. ಪುನೀತ್ ಅಗಲಿಕೆಯ ಬಳಿಕ ಶಕ್ತಿದಾಮ ಒಟ್ಟಿಗೆ ಶಿವಣ್ಣ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಇಂದು ಶಕ್ತಿಧಾಮ ಮಕ್ಕಳೊಂದಿಗೆ ಶಿವರಾಜ್ ಕುಮಾರ್ ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದ್ದರು. ಆದರೆ ಆಚರಣೆಗೂ ಮುನ್ನ ಮಕ್ಕಳೊಂದಿಗೆ ಶಿವಣ್ಣ ಬೆರೆತ ರೀತಿ ಮನಸ್ಸು ತುಂಬಿ ಬರುವಂತಿದೆ. ಗಣರಾಜ್ಯೋತ್ಸವದ ಬಳಿಕ ಶಿವರಾಜ್ ಕುಮಾರ್ ಅವರು
ಶಕ್ತಿ ಧಾಮದ ಮಕ್ಕಳನ್ನು ಜಾಲಿ ರೈಡಿಗೆ ಕರೆದುಕೊಂಡು ಹೋಗಿದ್ದಾರೆ.
[widget id=”custom_html-5″]

ಶಿವಣ್ಣ ಅವರೇ ಶಕ್ತಿ ಧಾಮದ ವ್ಯಾನ್ ಅನ್ನು ಡ್ರೈವ್ ಮಾಡಿಕೊಂಡು ಮಕ್ಕಳನ್ನೆಲ್ಲ ಕರೆದುಕೊಂಡು ಊರು ಸುತ್ತಿಸಿದ್ದಾರೆ. ಶಿವಣ್ಣನ ಜೊತೆ ಜಾಲಿರೈಡ್ ಗೆ ಹೋದ ಮಕ್ಕಳು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಾರೆ. ಶಿವಣ್ಣ ಅವರ ಈ ಗುಣ ಎಲ್ಲರಿಗೂ ಗೊತ್ತಿರುವುದೆ. ಇನ್ನೊಬ್ಬರನ್ನು ಸಂತೋಷವಾಗಿಟ್ಟು ಆದ್ದರಿಂದ ತಾವು ಸಂತೋಷಪಡುತ್ತಾರೆ ಶಿವಣ್ಣನವರು. ಡಾಕ್ಟರ್ ರಾಜಕುಮಾರ ಅಣ್ಣಾವ್ರ ಅಂತೆ ಮೂವರು ಮಕ್ಕಳು ಕೂಡ ತಂದೆ ಹಾದಿಯಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಇನ್ನೊಬ್ಬರಿಗೆ ಜೀವನ ರೂಪಿಸಿ ಕೊಡುತ್ತಾ ಜೀವನ ಸಾಗಿಸುತ್ತಿದ್ದಾರೆ .
[widget id=”custom_html-5″]