Advertisements

ಪುನೀತ್ ಬಳಸುತ್ತಿದ್ದ ಡಂಬಲ್ಸ್ ನೋಡಿ ಭಾವುಕರಾದ ಶಿವಣ್ಣ.. ವಿಡಿಯೋ

Cinema

ಅಭಿಮಾನಿಗಳ ಪ್ರೀತಿಯ ರಾಜಕುಮಾರ ನಗುವಿನ ಸರದಾರ ಸರಳತೆಯ ಮೂರ್ತಿ ಹಾಗೂ ಎಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಆಗಲಿ ಅದಾಗಲೇ ೮ ತಿಂಗಳುಗಳೆ ಕಳೆದೆ ಹೋಯಿತು. ಆದರೂ ಕೂಡ ಇಂದಿಗೂ ಅವರು ಇಲ್ಲೇ ಎಲ್ಲೋ ಚಿತ್ರೀಕರಣಕ್ಕೋ ಅಥವಾ ಹೊರದೇಶಕ್ಕೆ ಪ್ರವಾಸ ಹೋಗಿದ್ದಾರೆ ಎಂದೇ ಅನ್ನಿಸುತ್ತಿದೆ. ಅಪ್ಪು ಅವರು ಇಲ್ಲ ಎನ್ನುವುದನ್ನ ಸಂಪೂರ್ಣವಾಗಿ ಒಪ್ಪಿಕೊಳ್ಳುವುದಕ್ಕೂ ಕೂಡ ಈಗಲೂ ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಶಿವಣ್ಣ ಅವರು ದಿನಕ್ಕೆ ಒಮ್ಮೆಯಾದರೂ ಕೂಡ ತನ್ನ ಪ್ರೀತಿಯ ತಮ್ಮನನ್ನು ನೆನೆದು ಕಣ್ಣೀರಿಡುತ್ತಿದ್ದಾರೆ.

ಸದ್ಯ ಇದೀಗ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ರವರು ಅಪ್ಪು ಮಾಡುತ್ತಿದ್ದಂತಹ ಎಲ್ಲಾ ಕೆಲಸಗಳನ್ನು ತಾವು ಕೂಡ ಮೈಗೂಡಿಸಿಕೊಂಡು ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ಮುಂದೆ ಸಾಗುತ್ತಿದ್ದಾರೆ. ಅಲ್ಲದೆ ಅಪ್ಪು ಅವರ ಶಕ್ತಿಧಾಮವನ್ನು ಕೂಡ ನಡೆಸಿಕೊಂಡು ಹೋಗುತ್ತಿರುವ ಶಿವಣ್ಣ ಮಕ್ಕಳ ನಗುವಿನಲ್ಲಿ ಅಪ್ಪು ಅವರ ಅಗಲಿಕೆಯ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ.ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ಮಕ್ಕಳ ಜೊತೆ ಸಮಯ ಕಳೆದು ಅವರ ಆಸೆಗಳನ್ನು ಈಡೇರಿಸಿ ಮಕ್ಕಳ ಜೊತೆ ತಾವು ಕೂಡ ಮಗುವಾಗಿದ್ದಾರೆ ಶಿವಣ್ಣ.

ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ದಂಪತಿಗಳು ಶಕ್ತಿಧಾಮಕ್ಕೆ ಭೇಟಿ ಕೊಡುತ್ತಿರುವ ವಿಚಾರ ತಿಳಿದ ಬಳಿಕ ಅಭಿಮಾನಿಗಳು ಕೂಡ ಅನೇಕ ಸಂಖ್ಯೆಯಲ್ಲಿ ಶಕ್ತಿಧಾಮದ ಬಳಿ ಧಾವಿಸಿ ಶಿವಣ್ಣ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚೆಗಷ್ಟೇ ಶಕ್ತಿಧಾಮಕ್ಕೆ ಮಾಧ್ಯಮದವರು ಕೂಡ ಬಂದು ಶಿವಣ್ಣ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದು ಮಾಧ್ಯಮದವರ ಎಲ್ಲಾ ಪ್ರಶ್ನೆಗಳಿಗೂ ಕೂಡ ಬಹಳಾನೇ ತಾಳ್ಮೆಯಿಂದಲೇ ಉತ್ತರಿಸಿದ ಶಿವಣ್ಣ ಇಂತಹ ನೋವಿನ ಸಮಯದಲ್ಲೂ ಕೂಡ ಅವರು ತೋರಿದ ತಾಳ್ಮೆಯನ್ನು ನಿಜಕ್ಕೂ ನಾವು ಮೆಚ್ಚಲೇಬೇಕಾಗಿದೆ.

ಮಾನಸಿಕ ಸ್ಥಿತಿಯ ಬಗ್ಗೆ ಮಾತನಾಡಿದ ಶಿವಣ್ಣ ರವರು ಈ ನೋವು ಕಡಿಮೆಯಾಗುವುದಿಲ್ಲ ನಮ್ಮ ಜೊತೆಯಲ್ಲೇ ಆ ನೋವು ಇರುತ್ತದೆ. ಆ ನೋವಿನ ಜೊತೆಯೇ ನಾವು ಬದುಕಬೇಕಿದ್ದು ಆದರೆ ನನ್ನ ತಮ್ಮನನ್ನ ನಾನು ದುಃಖದಿಂದ ಕಳಿಸಿಕೊಡಲು ಇಷ್ಟಪಡುವುದಿಲ್ಲ. ಅಪ್ಪುಗೆ ಅದು ಇಷ್ಟ ಕೂಡ ಆಗುವುದಿಲ್ಲ. ಅವನು ಇಲ್ಲ ಅಂದುಕೊಂಡತೆ ಇಲ್ಲ ಇದ್ದಾನೆ ಅಂದುಕೊಂಡರೆ ಇರುತ್ತಾನೆ. ಎಲ್ಲರಲ್ಲೂ ಕೂಡ ಅವನು ಇರ್ತಾನೆ. ಅವನು ಇದ್ದಾನೆ ಅಂದುಕೊಂಡೆ ಜೀವನ ನಡೆಸಬೇಕು ಎಂದಿದ್ದಾರೆ ಶಿವಣ್ಣ.

ಹೀಗೆ ಎಲ್ಲಾ ಪ್ರಶ್ನೆಗಳಿಗೆ ಶಿವಣ್ಣ ತಾಳ್ಮೆಯಿಂದ ಉತ್ತರವನ್ನು ನೀಡಿದ್ದು ಈ ಸಂಧರ್ಭದಲ್ಲಿ ಮಾಧ್ಯಮದವರು ಆ ಒಂದು ಪ್ರಶ್ನೆಯನ್ನು ಕೇಳಿಯೇ ಬಿಟ್ಟರು. ನೀವು ಅಣ್ಣ ತಮ್ಮ ಯಾವಾಗಾದರು ಜಗಳ ಆಡಿದ್ದೀರಾ ಅನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿರುವ ಶಿವಣ್ಣ ನಾನು ಪುನೀತ್ ಯಾವತ್ತೂ ಜಗಳ ಆಡಿಲ್ಲ. ಅವನು ನನಗಿಂತ 13 ವರ್ಷ ಚಿಕ್ಕವನು. ನನ್ನ ತಮ್ಮನ ಹಾಗೆ ಅನ್ಬುವುದಕ್ಕಿಂತ ನನ್ನ ಮಗನ ಥರ ಅಂತಾನೆ ಹೇಳಬಹುದು. ನಮ್ ತಾಯಾಣೆ ನಾನು ಅಪ್ಪು ಯಾವತ್ತು ಕೂಡ ಜಗಳ ಆಡಿಲ್ಲ ಎಂದಿದ್ದಾರೆ.

ಅವನು ಚಿಕ್ಕ ವಯಸ್ಸಿನಿಂದ ಅಭಿನಯ ಮಾಡೋದನ್ನ ನೋಡುತ್ತಾ ಅವನ ಜೊತೆ ನಾವು ನಗುತ್ತಾ ಅಳುತ್ತಾ ದುಃಖ ಪಡುತ್ತಾ ಎಲ್ಲವನ್ನು ಅನುಭವಿಸುತ್ತಾ ಬಂದಿದ್ದು ನಮ್ಮ ಅಣ್ಣ ತಮ್ಮಂದಿರ ನಡುವೆ ಯಾವತ್ತೂ ಕೂಡ ಜಗಳ ಆಗಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಮಾತಿಗೆ ಮಾತು ಬಂದಿರುವುದು ನಿಜ ಆದರೆ ಎಲ್ಲಾ ಅಣ್ಣ ತಮ್ಮಂದಿರ ನಡುವೆ ಅದು ಸಾಮಾನ್ಯ ಅಷ್ಟೇ ಹೊರೆತು ನಾನು ಅಪ್ಪು ಇಂದಿಗೂ ಜಗಳವಾಡಿಲ್ಲ ಎಂದು ಶಿವಣ್ಣ ಭಾವುಕವಾಗಿ ಹೇಳಿದ್ದಾರೆ.

ಇದೆಲ್ಲದರ ನಡುವೆ ಇಂದು ಮನಕಲಕುವಂತಹ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶಿವಣ್ಣ ಅವರು ಪುನೀತ್ ರಾಜ್ ಕುಮಾರ್ ಅವರ ಮನೆಗೆ ಭೇಟಿ ನೀಡಿ ಅಶ್ವಿನಿ ಹಾಗೂ ಮಕ್ಕಳ ಜೊತೆ ಕೆಲ ಹೊತ್ತು ಸಮಯ ಕಳೆದಿದ್ದಾರೆ. ಈ ವೇಳೆ ಪುನೀತ್ ರಾಜ್ ಕುಮಾರ್ ಅವರು ವರ್ಕೌಟ್ ಮಾಡುತ್ತಿದ್ದಂತಹ ಸ್ಥಳಕ್ಕೆ ಹೋದ ಶಿವಣ್ಣ ಅಪ್ಪು ರವರ ಡಂಬಲ್ಸ್ ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದು ಒಂದು ಕ್ಷಣ ಡಂಬಲ್ಸ್ ಹಿಡಿದುಕೊಂಡು ನಿಂತುಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತಿದ್ದು ನಿಜಕ್ಕೂ ಮನ ಕಲಕುವಂತಿದೆ.