Advertisements

ಟೂತ್ ಪೇಸ್ಟ್ ಅಂತ ಇಲಿ ಪಾಷಾಣ ಹಾಕಿಕೊಂಡು ಬ್ರಶ್ ಮಾಡಿದ ವಿದ್ಯಾರ್ಥಿನಿ ಏನಾದಳು ನೋಡಿ.. ಕುಸಿದು ಬಿದ್ದ ಅಪ್ಪ ಅಮ್ಮ..

Kannada News

ನಮ್ಮ ದಿನ ನಿತ್ಯದ ಜೀವನದ ಚಟುವಟಿಕೆಗಳಲ್ಲಿ ಕೊಂಚ ಏರು ಪೇರಾದರೂ ಸಹ ಎಂತಹ ಅನಾಹುತಗಳಾಗಿ ಬಿಡುತ್ತವೆ ಎಂಬುದಕ್ಕೆ ಈ ಘಟನೆಯೇ ನೈಜ್ಯ ಉದಾಹರಣೆ..‌ ಹೌದು ವಿದ್ಯಾರ್ಥಿನಿಯೊಬ್ಬಳು ಬ್ರಶ್ ಮಾಡಲೆಂದು ಟೂತ್ ಪೇಸ್ಟ್ ಬದಲು ಇಲಿ ಪಾಷಾಣ ಹಾಕಿಕೊಂಡು ಬ್ರಶ್ ಮಾಡುದ ಘಟನೆ ನಮ್ಮದೇ ರಾಜ್ಯದಲ್ಲಿ ನಡೆದಿದ್ದು ಸಣ್ಣದೊಂದು ಎಡವಟ್ಟಿನಿಂದಾಗಿ ಇದೀಗ ಆಕೆಯ ಸಂಪೂರ್ಣ ಕುಟುಂಬ ಕಣ್ಣೀರಿಡುವಂತಾಗಿದೆ.. ಹೌದು ಆ ಹೆಣ್ಣು ಮಗಳು ಇಲಿ ಪಾಷಾಣಾದಲ್ಲಿ ಬ್ರಶ್ ಮಾಡಿದ ಕಾರಣ ತನ್ನ ಜೀವವನ್ನೇ ಕಳೆದುಕೊಳ್ಳುವಂತಾಗಿದ್ದು ದಕ್ಷಿಣ ಕನ್ನಡದ ಸುಳ್ಯದಲ್ಲಿ ಈ ಘಟನೆ ನಡೆದಿದ್ದು ಆ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ..

Advertisements
Advertisements

ಈ ಹೆಣ್ಣು ಮಗಳ ಹೆಸರು ಶ್ರಾವ್ಯ.. ವಯಸ್ಸು ಕೇವಲ ಹದಿನೇಳು ವರ್ಷ.. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ನಿವಾಸಿ ಬೇರಿಕೆ ರಮೇಶ ಎಂಬುವವರ ಮಗಳು ಶ್ರಾವ್ಯ‌.. ಈಕೆ ಪುತ್ತೂರಿನ ವಿವಾಕನಂದ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಳು.. ಪುತ್ತೂರಿನಲ್ಲಿಯೇ ಉಳಿದು ತನ್ನ ವಿಧ್ಯಾಭ್ಯಾಸ ಮಾಡುತ್ತಿದ್ದಳು‌.. ಆದರೆ ಕಳೆದ ವಾರದ ಹಿಂದೆ ಕಾಲೇಜಿಗೆ ರಜೆ ಇದ್ದ ಕಾರಣ ಶ್ರಾವ್ಯ ಮರ್ಕಂಜೆಯ ತನ್ನ ಮನೆಗೆ ಬಂದಿದ್ದಳು.. ಬಹುಶಃ ಆಕೆ ಊರಿಗೆ ಬರದೇ ಹೋಗಿದ್ದರೆ ಇಂದು ಆ ಹೆಣ್ಣು ಮಗಳು ಉಳಿಯುತ್ತಿದ್ದಳೇನೋ.. ಆದರೆ ವಿಧ್ಯಾಟವೇ ಬೇರೆ ಇತ್ತು..

ಹೌದು ಶ್ರಾವ್ಯ ಕೆಲ ದಿನಗಳ ಹಿಂದೆ ಮರ್ಕಂಜೆಯ ತನ್ನ ಮನೆಯಲ್ಲಿದ್ದ ಸಮಯದಲ್ಲಿ ಬ್ರಶ್ ಮಾಡುವ ಸಲುವಾಗಿ ಬಾತ್ ರೂಮಿಗೆ ತೆರಳಿದ್ದಾಳೆ.. ಕಿಟಕಿಯಲ್ಲಿ ಇದ್ದ ಟೂತ್ ಪೇಸ್ಟ್ ಅನ್ನು ತೆಗೆದುಕೊಂಡು ಬ್ರಶ್ ಮಾಡಲು ಹೋದ ಶ್ರಾವ್ಯಾ ತನ್ನ ಬದುಕನ್ನೇ ಮುಗಿಸಿಕೊಳ್ಳುವಂತಾಗಿ ಹೋಯ್ತು.. ಹೌದು ಕಿಟಕಿಯಲ್ಲಿದ್ದ ಟೂತ್ ಪೇಸ್ಟ್ ಬದಲು ಅಲ್ಲಿಯೇ ಇದ್ದ ಇಲಿ ಪಾಷಾಣವನ್ನೇ ಟೂತ್ ಪೇಸ್ಟ್ ಎಂದು ತಿಳಿದು ಟೂತ್ ಬ್ರಶ್ ಗೆ ಹಾಕಿಕೊಂಡು ಬ್ರಶ್ ಮಾಡಲು ಮುಂದಾಗಿದ್ದರೆ.. ಬ್ರಶ್ ಮಾಡಲು ಬಾಯಿಗೆ ಹಾಕಿಕೊಂಡ ಕೆಲವೇ ಸೆಕೆಂಡ್ ನಲ್ಲಿ ಅದು ಟೂತ್ ಪೇಸ್ಟ್ ಅಲ್ಲ ಎನ್ನುವ ವಿಚಾರ ತಿಳಿದಿದೆ..

ತಕ್ಷಣ ಅದನ್ನು ಉಗಿದು ಬಾಯಿಯನ್ನು ತೊಳೆದುಕೊಂಡು ಚೆನ್ನಾಗಿ ಸ್ವಚ್ಛ ಮಾಡಿಕೊಂಡಿದ್ದಾಳೆ.. ಆದರೂ ಸಹ ಏನೋ ಒಂದು ರೀತಿ ಭಾಸವಾಗಿ ತನ್ನ ತಂದೆ ತಾಯಿಗೆ ವಿಚಾರ ತಿಳಿಸಿದ್ದಾಳೆ.. ತಕ್ಷಣ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಕೆಲ ದಿನಗಳಿಂದ ಚಿಕಿತ್ಸೆಯನ್ನೂ ಸಹ ಕೊಡಿಸಲಾಗುತಿತ್ತು.. ಅತ್ತ ಶ್ರಾವ್ಯಾಳ ಪೋಷಕರು ಸಹ ಮಗಳು ಗುಣಮುಖಳಾಗಿ ಮರಳಿ ಮನೆಗೆ ಬರುವಳೆಂದು ಭರವಸೆಯಲ್ಲಿದ್ದರು.. ಆದರೆ ಅದಾಗಲೇ ಕಾಲ ಮಿಂಚಿ ಹೋಗಿತ್ತು.. ಶ್ರಾವ್ಯಾಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದುಬಿಟ್ಟಿದ್ದಳು..

ಇತ್ತ ಶ್ರಾವ್ಯಾಳ ಪೋಷಕರು ಮಗಳನ್ನು ಕಳೆದುಕೊಂಡು ಆಸ್ಪತ್ರೆಯ ಮುಂದೆಯೇ ಗೋಳಾಡುತ್ತಿದ್ದ ರೀತಿ ಮನಕಲಕುವಂತಿತ್ತು.. ಆದರೆ ಆಕೆ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಆಕೆಗೆ ಇಲಿ ಪಾಷಾಣ ಯಾವುದು ಟೂತ್ ಪೇಸ್ಟ್ ಯಾವುದು ಎಂದು ತಿಳಿಯದಾಯಿತಾ ಎಂದು ಕಮೆಂಟ್ ಮಾಡಿದ್ದುಂಟು.. ಆದರೆ ಶ್ರಾವ್ಯಾಳ ಮನೆಯ ಬಚ್ಚಲು ಮನೆ ಕತ್ತಲಿದ್ದ ಕಾರಣ ಸಾಮಾನ್ಯವಾಗಿ ಟೂತ್ ಪೇಸ್ಟ್ ಇಡುವ ಜಾಗದಲ್ಲಿಯೇ ಇಲಿ ಪಾಷಾಣ ಇಟ್ಟಿದ್ದ ಕಾರಣ ಅದನ್ನೇ ಶ್ರಾವ್ಯಾ ಟೂತ್ ಪೇಸ್ಟ್ ಎಂದು ಭಾವಿಸಿಕೊಂಡು ಇಂದು ಇಂತಹ ಪರಿಸ್ಥಿತಿ ಬಂದಿದೆ.. ಬ್ರಶ್ ಮಾಡೋದು ದೊಡ್ಡ ವಿಚಾರವೇನೂ ಅಲ್ಲ.. ಆದರೆ ಸಣ್ಣ ಸಣ್ಣ ವಿಚಾರಗಳಲ್ಲಿ ಮಾಡುವ ಯಡವಟ್ಟುಗಳಿಂದ ದೊಡ್ಡ ದೊಡ್ಡ ಅನಾಹುತಗಳು ಸಂಭವಿಸಿ ಬಿಡುತ್ತದೆ ಎಂಬುದಕ್ಕೇ ಈ ಘಟನೆಯೇ ಸಾಕ್ಷಿ..