Advertisements

ತುಮಕೂರಿನಲ್ಲಿ ಸ್ವಂತ ಅಣ್ಣ ತಂಗಿಯೇ ಮನೆಯ ರೂಮಿನಲ್ಲಿ ಆ ಕೆಲಸ ಮಾಡುವಾಗ ಕಣ್ಣಾರೆ ಕಂಡು ಬೆಚ್ಚಿಬಿದ್ದ ತಾಯಿ.. ಮುಂದೆ ನಡೆದದ್ದೇ ಬೇರೆ..

Kannada News

ತಂದೆ ತಾಯಿಯ ಸಂಬಂಧದ ಬಳಿಕ ಬಹುಶಃ ನಮ್ಮ ಸಂಸ್ಕೃತಿಯಲ್ಲಿ ನಾವು ಹೆಚ್ಚು ಗೌರವಿಸುವ ಸಂಬಂಧವೆಂದರೆ ಅದು ಒಡಹುಟ್ಟಿದವರ ಸಂಬಂಧ.. ಹೌದು ಸಹೋದರ ಸಂಬಂಧ ಎಂದರೆ ಅದೊಂದು ರೀತಿ ತಂದೆ ತಾಯಿಯ ನಂತರ ಅತಿ ಹೆಚ್ಚು ಕಾಳಜಿ ಹಾಗೂ ಪ್ರೀತಿ ತೋರುವ ಸಂಬಂಧವಾಗಿದೆ.. ಅದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ.. ಅದರೆ ಅಂತಹ ಪವಿತ್ರ ಬಾಂಧವ್ಯ ಹೊಂದಬೇಕಿದ್ದ ಸ್ವಂತ ಅಣ್ಣ ತಂಗಿ ಬೇರೆ ರೀತಿಯ ಸಂಬಂಧ ಹೊಂದಿದರೆ ಎಷ್ಟು ಅಸಹ್ಯವಾಗಬೇಡ ಹೇಳಿ.. ಹೌದು ಈ ಮಹಾನ್ ಪುರುಷ ಅಣ್ಣ ಹಾಗೂ ಈ ಪುಣ್ಯಾತ್ಗಿತ್ತಿ ತಂಗಿ.. ಅಣ್ಣ ತಂಗಿಯಾಗಿರದೇ ಬೇರೆ ರೀತಿಯ ಸಂಬಂಧ ಹೊಂದಿ ಆ ಕೆಲಸ ನಡೆಸುವಾಗ ಅಮ್ಮನೇ ಕಣ್ಣಾರೆ ಕಂಡು ಬೆಚ್ಚಿಬಿದ್ದಿದ್ದಾರೆ.. ಸ್ವಂತ ಅಣ್ಣ ತಂಗಿ ಮನೆಯಲ್ಲಿಯೇ ತಮ್ಮ ಆಸೆಗಳನ್ನು ತೀರಿಸಿಕೊಳ್ಳಲು ಪವಿತ್ರವಾದ ಸಂಬಂಧವೊಂದಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ.. ಈ ಕರ್ಮವನ್ನು ಹೆತ್ತ ತಾಯಿಯೆ ನೋಡುವಂತಾಗಿದ್ದು ಮಾತ್ರ ಆ ತಾಯಿಯ ದುರ್ಧೈವವೇ ಸರಿ..

ಆದರೆ ಆ ನಂತರ ನಡೆದ ಘಟನೆ ಮಾತ್ರ ನಿಜಕ್ಕೂ ಮನಕಲಕುವಂತಿದೆ.. ಹೌದು ಈತನ ಹೆಸರು ಪುನೀತ್.. ವಯಸ್ಸು ಇನ್ನೂ ಇಪ್ಪತ್ತಾರು.. ಆಕೆಯ ಹೆಸರು ಶೈಲಜಾ.. ವಯಸ್ಸು ಇಪ್ಪತ್ತೊಂದು.. ಪುನೀತ್ ಹಾಗೂ ಶೈಲಜಾ ಸಂಬಂಧದಲ್ಲಿ ಸ್ವಂತ ಅಣ್ಣ ತಂಗಿ.. ಹೊರ ಜಗತ್ತಿಗೆ ಅಣ್ಣ ತಂಗಿಯ ರೀತಿಯೇ ನಡೆದುಕೊಳ್ಳುತ್ತಿದ್ದ ಈ ಐನಾತಿಗಳು ಮನೆಯೊಳಗೆ ಮಾಡಬಾರದ ಕೆಲಸವನ್ನು‌ ಮಾಡುತ್ತಿದ್ದರು.. ಇವರು ಅಣ್ಣ ತಂಗಿ ಎಂದು ಹೇಳಲೇ ಅಸಹ್ಯವಾಗುವಂತಹ ಕೆಲಸ ಮಾಡುತ್ತಿದ್ದರು.. ಹೌದು ಶೈಲಜಾ ಹಾಗೂ ಪುನೀತ್ ಕಳೆದ ಕೆಲ ವರ್ಷಗಳಿಂದ ಇಬ್ಬರೂ ಸಂಬಂಧವನ್ನು ಹೊಂದಿದ್ದರು.. ಆದರೆ ಯಾರಿಗೂ ಅನುಮಾನ ಬಂದಿರಲಿಲ್ಲ.. ಮನೆಯೊಳಗೇ ಎಲ್ಲಾ ಕೆಲಸ ಮಾಡಿ ಮುಗಿಸುತ್ತಿದ್ದರು.. ನೋಡುವವರ ಕಣ್ಣಿಗೆ ಎಷ್ಟು ಅನ್ಯೂನ್ಯವಾಗಿ ಇದ್ದಾರೆ ಈ ಅಣ್ಣ ತಂಗಿ ಎನ್ನುವಂತಿದ್ದರು..

ಶೈಲಜಾ ಹಾಗೂ ಪುನೀತ್ ಅವರ ತಾಯಂದಿರು ಸ್ವಂತ ಅಕ್ಕತಂಗಿಯರು.. ಶೈಲಜಾ ಅವರ ತಾಯಿಯ ಹೆಸರು ಸಾವಿತ್ರಮ್ಮ.. ಚಿಕ್ಕಮ್ಮ ದೊಡ್ದಮ್ಮನ ಮಕ್ಕಳಾಗಿದ್ದ ಶೈಲಜಾ ಪುನೀತ್ ಅಣ್ಣ ತಂಗಿ ಎಂಬುದನ್ನೇ ಮರೆತು ಸಂಬಂಧ ಹೊಂದಿ ಮನೆಯೊಳಗೇ ಆ ಕೆಲಸ ಆರಂಭಿಸಿದ್ದರು.. ಇತ್ತ ಹೀಗೆ ಮನೆಯೊಳಗೆ ಇಬ್ಬರೂ ಆ ಕೆಲಸ ಮಾಡುವಾಗ ಹೆತ್ತ ತಾಯಿಯೇ ಕಣ್ಣಾರೆ ನೋಡುವಂತಾಗಿ ಹೋಯ್ತು.. ಹೌದು ಮಕ್ಕಳ ಆ ಅಸಹ್ಯದ ಕೆಲಸವನ್ನು ನೋಡಿದ ಶೈಲಜಾಳ ತಾಯಿ ಸಾವಿತ್ರಮ್ಮ ಮಕ್ಕಳು ಮಾಡಿದ ಮೋಸದಿಂದ ಕುಸಿದು ಬಿದ್ದಿದ್ದಾರೆ.. ನಂತರ ಈ ವಿಚಾರವನ್ನು ಪುನೀತ್ ಅವರ ತಾಯಿಗೂ ತಿಳಿಸಲಾಗಿ ಇಬ್ಬರೂ ಸಹ ಮಕ್ಕಳಿಗೆ ಬೈದು ಬುದ್ಧಿ ಹೇಳಿದ್ದರು..

ಇಬ್ಬರೂ ಈ ಕೆಲಸವನ್ನು ನಿಲ್ಲಿಸುವಂತೆ ತಾಕೀತು‌ ಮಾಡಲಾಗಿತ್ತು.. ಆದರೆ ಅದ್ಯಾವುದಕ್ಕೂ ಕ್ಯಾರೆ ಎನ್ನದ ಪುನೀತ್ ಶೈಲಜಾ ತಮ್ಮ ಸಂಬಂಧವನ್ನು ಮುಂದುವರೆಸುತ್ತಿದ್ದರು.. ನಂತರ ಮತ್ತೆ ಇಬ್ಬರನ್ನೂ ದೂರವಿಟ್ಟು ಫೋನ್ ಮೆಸೆಜ್ ಕೂಡ ಮಾಡದಂತೆ ಎಚ್ಚರಿಕೆ ನೀಡಲಾಯಿತು.. ಆನಂತರ ಇಬ್ಬರೂ ಅಣ್ಣತಂಗಿಯಂತೆಯೇ ಇದ್ದು ಮತ್ತೆ ತಮ್ಮ ಸಂಬಂಧವನ್ನು ಮುಂದುವರೆಸಿದ್ದರು.. ಆ ಕ್ಷಣವೇ ಮಕ್ಕಳನ್ನು ಈ ತಪ್ಪು ಮಾಡದಂತೆ ತಡೆಯಲು ಹೋದ ತಾಯಿ ಸಾವಿತ್ರಮ್ಮ ಅವರನ್ನೇ ಸ್ವಂತ ಮಗಳು ಶೈಲಜಾಳೆ ಅಣ್ಣ ಪುನೀತ್ ನ ಜೊತೆ ಸೇರಿಕೊಂಡು ಇಲ್ಲವಾಗಿಸಿಬಿಟ್ಟಿದ್ದಾಳೆ..

ಹೌದು ಕೆಲ ದಿನಗಳ ಹಿಂದಷ್ಟೇ ತುಮಕೂರಿನ ಕೊರಟಗೆರೆಯ ಮನೆಯೊಂದರ ಸಂಪಿಗೆ ಬಿದ್ದು ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.. ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಿದ ಕೊರಟಗೆರೆ ಪೋಲೀಸರು ವಿಚಾರಣೆ ನಡೆಸಿ ಸತ್ಯವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದು ಅಣ್ಣ ತಂಗಿಯ ನಿಜವಾದ ಮುಖವನ್ನು ಬಯಲು ಮಾಡಿದ್ದಾರೆ.. ಹೌದು ಈ ಇಬ್ಬರೂ ತಮ್ಮ ಸಂಬಂಧಕ್ಕೆ ಅಡ್ಡವಾದರೆಂಬ ಕಾರಣಕ್ಕೆ ಆ ದಿನ ಸಾವಿತ್ರಮ್ಮ ಅವರನ್ನು ಸ್ವಂತ ಮಕ್ಕಳೇ ಇಲ್ಲವಾಗಿಸಿದ್ದಾರೆ..

ಆದರೆ ಆನಂತರ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿ ಮನೆಯ ಮುಂದಿನ ಸಂಪ್ ಗೆ ಹಾಕಿದ್ದಾರೆ.. ಸಂಪ್ ಗೆ ಬಿದ್ದು ಜೀವ ಕಳೆದುಕೊಂಡರು ಎಂದು ಸುದ್ದಿ ಹಬ್ಬಿಸಿದ್ದಾರೆ.. ಆದರೆ ಇವರಿಬ್ಬರ ಮೇಲೆ ಅನುಮಾನ ಬಂದ ಕರಾಣ ವಿಚಾರಣೆ ನಡೆಸಿದ ಪೊಲೀಸರ ಅಸಲಿ ಸತ್ಯವನ್ನು ಹೊರ ಹಾಕಿದ್ದಾರೆ.. ಇವರುಗಳು ಸಹ ತಮ್ಮ ಸಂಬಂಧ ಹಾಗೂ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದು ಸಧ್ಯ ಇಬ್ಬರೂ ಪೊಲೀಸರ ವಶದಲ್ಲಿದ್ದಾರೆ‌.. ಆದರೆ ಇವರಿಬ್ಬರ ಈ ಅಸಹ್ಯದ ಸಂಬಂಧದಿಂದ ಆ ತಾಯಿ ಜೀವ ಕಳೆದುಕೊಳ್ಳುವಂತಾಗಿ ಹೋಯ್ತು..