Advertisements

ಸಿಮ್ ಕಾರ್ಡ್ ಮಾರುತ್ತಿದ್ದ ಹುಡುಗ ಒಂದು ಐಡಿಯಾದಿಂದ 2600ಕೋಟಿ ಆಸ್ತಿಯ ಮಾಲಿಕನಾದ..! ಈತ ಮಾಡಿದ ಐಡಿಯಾ ಏನು ಗೊತ್ತಾ.?

Inspiration

ನಮಸ್ತೆ ಸ್ನೇಹಿತರೆ, ಸಾಧನೆ ಮಾಡಲು ಸಾವಿರ ಹಾದಿಗಳು ಎಂಬ ಮಾತಿನಂತೆ ಸಾಧಿಸಲೇಬೇಕು ಎಂಬ ಹಠವಿದ್ದರೆ ಸಾಕು ಯಾರಾದರೂ ಸಹ ತನ್ನ ಗುರಿ ಮುಟ್ಟಲು ಸುಲಭವಾಗುತ್ತದೆ, ಹೌದು ಸಾಧನೆ ಯಾವುದೇ ಜಾತಿ ಧರ್ಮ ಜನಾಂಗ ನೋಡಿ ಬರುವುದಿಲ್ಲ. ಯಾರು ಕಷ್ಟ ಪಟ್ಟು ನಿಯತ್ತಿನಿಂದ ಕೆಲಸ ಮಾಡುತ್ತಾರೋ ಅಂಥವರಿಗೆ ಸಾಧನೆ ಒಲಿಯುತ್ತದೆ. ನಿಮ್ಮ ಕನಸುಗಳು ನನಸಾಗಬೇಕು ಎಂದರೆ ಅದನ್ನು ನೀವೇ ಪೂರೈಸಿಕೊಳ್ಳಬೇಕೆ ಹೊರತು ಬೆರೆಯವರಿಂದ ಸಾಧ್ಯವಿಲ್ಲ, ಮತ್ತೊಬ್ಬರ ಮಾರ್ಗದರ್ಶನ ನಿಮ್ಮ ಸಾಧನೆಗೆ ಮಾರ್ಗದರ್ಶನವಾಗಬಹುದು ಅಷ್ಟೇ. ಇಂತಹ ಸಾಧನೆ ಪೂರೈಸುವ ಮೂಲಕ ಇಲ್ಲೊಬ್ಬ ಯುವಕ ಇತರರಿಗೆ ಪ್ರೇರಣೆಯಾಗಿದ್ದಾನೆ.

Advertisements
Advertisements

ಈ ರಿತೇಶ್ ಎಂಬ ಯುವಕ ಕೇವಲ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದು ಯಾವುದೇ ಡಿಗ್ರಿ ಓದಿಲ್ಲ, ತನ್ನ ಓದನ್ನು ಅರ್ಧಕ್ಕೆ ನಿಲ್ಲಿಸಿ 19ನೇ ವಯಸ್ಸಿನಲ್ಲಿ ರಸ್ತೆ ಬದಿ ನಿಂತು ಸಿಮ್ ಕಾರ್ಡ್ ಮಾರುತ್ತಿದ್ದ, ನಂತರ ಆತನ ತಲೆಗೆ ಬಂದ ಒಂದು ಬಿಸಿನೆಸ್ ವಿಚಾರ ಆತನ ಇಡೀ ಜೀವನವನ್ನೆ ಬದಲಾಯಿಸಿ ಬಿಟ್ಟಿತು. ಯಶಸ್ಸು ಅನ್ನೊದು ಆತನ ಬೆನ್ನಟ್ಟಿ ಬಂತು. ರಿತೇಶ್ ಅಗರ್‌ವಾಲ್ ಎಂಬ ತರುಣ ಶುರು ಮಾಡಿದ ಬಿಸಿನೆಸ್ ಓಯೋ ರೂಮ್ಸ್, ಹೌದು ನೀವು ಇಂದು ಕೇವಲ ಭಾರತವಷ್ಟೇ ಅಲ್ಲ ಬದಲಾಗಿ ವಿಶ್ವದೆಲ್ಲೆಡೆ ಹೋದರು ನಿಮಗೆ ಇಂದು ಓಯೋ ರೂಮ್ಸ್ ಗಳು ನಿಮಗೆ ಐಶಾರಾಮಿಯಾಗಿ ಉಳಿದುಕೊಳ್ಳಲು ಸಹಕಾರಿಯಾಗುತ್ತವೆ. ಹೌದು ಈ ಕಂಪನಿಯ ಮಾಲಿಕ ರಿತೇಶ್ ಅವರ ಇಂದಿನ ಒಟ್ಟು ಆಸ್ತಿ 2600 ಕೋಟಿ ರೂಪಾಯಿಗಳು.

ಕೇವಲ ಹತ್ತನೆಯ ತರಗತಿ ಪಾಸಾಗಿ ಯಾವುದೇ ಡಿಗ್ರಿ ಇಲ್ಲದ ರಿತೇಶ್ ಅವರ ಕಂಪನಿಯಲ್ಲಿ ಇಂದು ಐಐಎಂ ಕಂಪನಿಯ 12 ಜನ ಹಾಗೂ ಐಐಟಿ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಿಂದ ಬಂದ 200 ಉದ್ಯೋಗಿಗಳು ಸೇರಿದಂತೆ ಸಾವಿರಾರು ಜನ ಕೆಲಸ ಮಾಡುತ್ತಿದ್ದಾರೆ. ಓಡಿಸ್ಸಾದ ಒಂದು ಸಣ್ಣ ಹಳ್ಳಿಯಿಂದ ಬಂದು ಇಷ್ಟೊಂದು ದೊಡ್ಡ ಸಾಧನೆ ಮಾಡಿದ ರಿತೇಶ್ ಅಗರ್‌ವಾಲ್ ಅವರ ಜೀವನ ಕಥೆ ತುಂಬಾ ಆಸಕ್ತಿದಾಯಕವಾಗಿದ್ದು ಇಂದಿನ ಯುವಕರಿಗೆ ಪ್ರೇರಣೆಯಾಗಿದೆ ಎಂದು ಹೇಳಬಹುದು. ಇವರು ಮಾಡಿದ ಸಾಧನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.