Advertisements

ಡಿಬಾಸ್ ರಾಬರ್ಟ್ ಚಿತ್ರದ ಕಣ್ಣೇ ಅದಿರಿಂದಿ ಹಾಡಿನ ಗಾಯಕಿ ಮಂಗ್ಲಿ ಕುಟುಂಬ ಹೇಗಿದೆ, ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾದರೆ, ಶಾಕ್ ಆಗ್ತೀರಾ!

Entertainment

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾದಲ್ಲಿ ಕಿಚ್ಚು ಹೊತ್ತಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಾಕ್ಸ್ ಆಫೀಸ್ ಅನ್ನು ಕೊಳ್ಳೆ ಹೊಡೆದ ವಿಷಯ ಹಳೆಯದ್ದು. ಇದೇ ಚಿತ್ರದ ಕಣ್ಣು ಹೊಡಿಯಾಕ ಹಾಡನ್ನು ತೆಲುಗು ಭಾಷೆಯಲ್ಲಿ ಕಣ್ಣೆ ಅದಿರಿಂದಿ ಎಂದು ಹಾಡಿದ ಗಾಯಕಿ ಮಂಗ್ಲಿ ಇಂದು ಕನ್ನಡದ ಇಡೀ ಅಭಿಮಾನಿಗಳ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಅಚ್ಚುಮೆಚ್ಚಿನ ಗಾಯಕಿಯಾಗಿದ್ದಾರೆ. ಗಾಯಕಿ ಮಂಗ್ಲಿ ಅವರು ಹಾಡಿದ ಹಾಡು ಇಂದು ಎಲ್ಲರ ಮೊಬೈಲ್, ಸಾಮಾಜಿಕ ಮಾಧ್ಯಮಗಳಲ್ಲಿ ಸುತ್ತಾಡುತ್ತಿದೆ. ಅಷ್ಟೇ ಅಲ್ಲದೆ ಆಕೆಯ ಫೋಟೊ ಕೂಡ ಬಸ್, ಆಟೋಗಳ ಮೇಲೂ ಮರೆಯುವಷ್ಟು ಮಟ್ಟಿಗೆ ಮಂಗ್ಲಿ ಫೇಮಸ್ ಆಗಿಬಿಟ್ಟಿದ್ದಾರೆ. ಅಷ್ಟಕ್ಕೂ ಮಂಗ್ಲಿ ಅವರು ಎಲ್ಲಿನವರು? ಆಕೆಯ ಹಿನ್ನೆಲೆ ಏನು? ಎಂದು ತಿಳಿಯೋಣ ಬನ್ನಿ.

Advertisements
Advertisements

ಮಂಗ್ಲಿ ಇಂದಿಗೂ ಮದುವೆಯಾಗಿಲ್ಲ. ಈಕೆಗೆ ಯಾವುದು ಇಷ್ಟವೆಂದರೆ, ಹಾಡುವುದು ಮತ್ತು ಅಡುಗೆ ಮಾಡುವುದು. ಮಂಗ್ಲಿ ಒಂದು ಹಾಡಿಗೆ ಬರೋಬ್ಬರಿ 1.5 ಲಕ್ಷ ಸಂಭಾವನೆ ಪಡೆಯುತ್ತಾರೆ. ಇವರ ಒಟ್ಟು ಆಸ್ತಿ ಸುಮಾರು 2-3 ಕೋಟಿ ರೂಪಾಯಿಗಳು. ಹುಟ್ಟುನಿಂದಲೇ ಇಷ್ಟೆಲ್ಲಾ ಆಸ್ತಿ ಹೊಂದಿರಲಿಲ್ಲ ಮಂಗ್ಲಿ. ಈಕೆ ಜನಿಸಿದ್ದು ಬಂಜಾರ ಕುಟುಂಬದಲ್ಲಿ, ಮೊದಲಿನಿಂದಲೂ ಹಾಡು ಎಂದರೆ ಬಹಳ ಪ್ರೀತಿ. ಅದೇ ಕಾರಣಕ್ಕೆ ತಂದೆಯೂ ಸಹ ಮಂಗ್ಲಿಗೆ ಪ್ರೋತ್ಸಾಹ ನೀಡಿದರು.

ಬಳಿಕ 2013ರಲ್ಲಿ ಈಕೆಯ ಬದುಕಿನಲ್ಲಿ ಒಂದು ತಿರುವು ಸಿಕ್ಕಿತು. ಅಲ್ಲಿಂದ ತಿರುಗಿ ಈಕೆ ಮುನ್ನುಗ್ಗುತ್ತ ಸಾಗಿದಳು. ತೆಲುಗಿನಲ್ಲಿ ಸುದ್ದಿ ವಾಹಿನಿಯಲ್ಲಿ ಆ್ಯಂಕರ್ ವೃತ್ತಿಯಲ್ಲಿ ಬಹು ಬೇಡಿಕೆಯನ್ನು ತಂದುಕೊಂಡಳು. 2016ರ ವೇಳೆಗೆ ತನ್ನದೇ ಆದ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದರು.
ಈಕೆ ಪ್ರಾರಂಭಿಸಿದ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸ್ತುತ 1.3 ಮಿಲಿಯನ್ ಜನ ಸಬ್ಸ್ಕ್ರೈಬ್ ಮಾಡಿಕೊಂಡಿದ್ದಾರೆ. ವಿಶಿಷ್ಟ ಗಾಯನ ಕಲೆಯನ್ನು ರೂಡಿಸಿಕೊಂಡಿರುವ ಈಕೆ ಹಾಡಿದ ಕಣ್ಣೆ ಅದಿರಿಂರಿ ಹಾಡು ಆಕೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಯಿತು ಎನ್ನುವುದರಲ್ಲಿ ಅನುಮಾನವಿಲ್ಲ. ಮಂಗ್ಲಿಯವರು ಅವರು ಇನ್ನಷ್ಟು ಒಳ್ಳೆಯ ಹಾಡುಗಳನ್ನು ಹಾಡಿ ಯಶಸ್ಸಿನೊಂದಿಗೆ ಮುನ್ನುಗ್ಗಲಿ ಎಂದು ಆಶಿಸೋಣ.