Advertisements

ಖ್ಯಾತ ಗಾಯಕಿ ನಂದಿತಾ ಅವರ ಗಂಡ ಮತ್ತು ಮಗ ಹೇಗಿದ್ದಾರೆ ಗೊತ್ತಾ.? ಮೊದಲ ಬಾರಿಗೆ ನೋಡಿ.

Cinema Entertainment

ನಮಸ್ತೆ ಸ್ನೇಹಿತರೆ, ಫೆಬ್ರವರಿ 28 1978 ರಂದು ನಂದಿತಾ ಅವರು ಚನ್ನರಾಯಪಟ್ಟಣದಲ್ಲಿ ಜನಿಸಿದ್ದಾರೆ. ನಂದಿತಾ ಅವರು ಕನ್ನಡದಲ್ಲಿ ಸುಮಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಇವರು ಹಾಡುಗಳನ್ನು ಹಾಡಿದ್ದಾರೆ. ನಂದಿತಾ ಅವರು ಆರ್ ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ತಮ್ಮ ಇಂಜಿನಿಯರಿಂಗ್ ಪದವಿಯನ್ನು ಮುಗಿಸಿಕೊಂಡ ನಂತರ, 2 ವರ್ಷಗಳ ಕಾಲ ಸಾಫ್ಟ್ವೇರ್ ಫೀಲ್ಡ್ ನಲ್ಲಿ ಕೆಲಸ ಮಾಡಿದ್ದಾರೆ. ಸಾಫ್ಟ್ವೇರ್ ಕೆಲಸದಲ್ಲಿ ಬರುತ್ತಿದ್ದ 25000 ರೂ.ಗಳ ಸಂಬಳವನ್ನು ಬಿಟ್ಟು ಕೈಗೆ ವೀಣೆಯನ್ನು ಹಿಡಿದರು.

Advertisements
Advertisements

ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ ನಂದಿತಾ ಅವರು ಮೊದಲನೆಯ ಬಾರಿಗೆ ಕನ್ನಡದಲ್ಲಿ ಹಾಡಿದರು. ಇವರು 1998 ರಲ್ಲಿ ‘ಹಬ್ಬ’ ಎಂಬ ಕನ್ನಡದ ಚಿತ್ರಕ್ಕೆ ಹಾಡನ್ನು ಹಾಡಿ ತಮ್ಮ ಧ್ವನಿಯನ್ನು ನೀಡಿದರು. ನನ್ನ ಪ್ರೀತಿಯ ಹುಡುಗಿ ಸಿನಿಮಾದ ಮೂಡಲ್ ಕುಣಿಗಲ್ ಕೆರೆ, ಮನಸೆಲ್ಲಾ ನೀನೆ ಸಿನಿಮಾದ ಜೀರ್ಜಿಂಬೆ ಜೀರ್ಜಿಂಬೆ, ಜೋಗುಳ ಸಿನಿಮಾದ ಆಕಾಶಕ್ಕೆ ಒಬ್ಬ ಸೂರ್ಯ, ಪ್ಯಾರಿಸ್ ಪ್ರಣಯ ಚಿತ್ರದ ಎದೆತುಂಬಿ ಹಾಡಿದೆನು, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಚಿತ್ರದ ಬಾರಮ್ಮ ರಾಮ, ಯಶ್ವಂತ್ ಚಿತ್ರದ ಮೊದಮೊದಲು, ಕಲ್ಲರಳಿ ಹೂವಾಗಿ ಚಿತ್ರದ ಅಕ್ಕ, ಆ ದಿನಗಳು ಚಿತ್ರದ ಸಿಹಿಗಾಳಿ, ದುನಿಯಾ ಚಿತ್ರದ ಕರಿಯ ಐ ಲವ್ ಯೂ, ಇಂತಿ ನಿನ್ನ ಪ್ರೀತಿಯ ಚಿತ್ರದ ಹೂ ಕನಸು ಜೋಕಾಲಿ, ಆಪ್ತಮಿತ್ರ ಚಿತ್ರದ ಭಾರ ಸನಿಹಕ್ಕೆ ಭಾರ ಎನ್ನುವ ಹಾಡು ಹಾಗೂ ಮುಂತಾದ ಜನಪ್ರಿಯ ಹಾಡುಗಳನ್ನು ಇವರು ಹಾಡಿದ್ದಾರೆ.

ನಂದಿತಾ ಅವರು ತಮ್ಮ ಹಾಡುಗಳಿಗಾಗಿ ತುಂಬಾನೇ ಅವಾರ್ಡ್ಸ್ ಗಳನ್ನು ಸ್ವಂತ ಮಾಡಿಕೊಂಡಿದ್ದಾರೆ. ಅದರಲ್ಲೂ ಸಾಕಷ್ಟು ಕರ್ನಾಟಕ ರಾಜ್ಯದ ಫಿಲಂ ಅವಾರ್ಡ್ಸ್ ಮತ್ತು ದಕ್ಷಿಣ ಭಾರತದ ಫಿಲಂ ಫೇರ್ ಅವಾರ್ಡ್ ಗಳನ್ನು ಪಡೆದುಕೊಂಡಿದ್ದಾರೆ. ನಂದಿತಾ ಅವರು ಡಿಸೆಂಬರ್ 18 2004 ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ರಾಕೇಶ್ ಎಂಬುವವರನ್ನು ವಿವಾಹವಾಗಿದ್ದಾರೆ. ಇವರ ಮದುವೆ ಗುರು ನರಸಿಂಹ ಕಲ್ಯಾಣ ಮಂಟಪದಲ್ಲಿ ಜರುಗಿದೆ. ಇನ್ನೂ 2018 ರಲ್ಲಿ ಇವರು ಒಂದು ಗಂಡು ಮಗುವಿಗೆ ಜನನ ನೀಡಿದ್ದಾರೆ. ನಂದಿತಾ ಅವರು ತಮ್ಮ ಪತಿ ಮತ್ತು ಮಗನ ಜೊತೆ ಇರುವ ಫೋಟೋಗಳನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.