Advertisements

ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಕಾಲೇಜಿನಲ್ಲಿ ಉಪನ್ಯಾಸ ಮಾಡುವ ತಂದೆ, ಕಾರಣ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತೆ!

Kannada News

ಸ್ನೇಹಿತರೆ, ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ ಈ ತಂದೆ. ಹೌದು ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತ ಹೀಗೆ ಮಾಡಲು ಕಾರಣವೇನು? ಮಗುವಿನ ತಾಯಿ ಏನಾಗಿದ್ದಾರೆ ಎಂಬ ಪ್ರಶ್ನೆಗಳನ್ನು ಹಲವಾರು ಮಂದಿ ಕಾಮೆಂಟ್ ಮೂಲಕ ಕೇಳುತ್ತಿದ್ದಾರೆ. ಅಷ್ಟಕ್ಕೂ ಆತ ಹೇಗೆ ಮಾಡಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸಾಮಾನ್ಯವಾಗಿ ಮಗು ಹುಟ್ಟಿದ ಮೇಲೆ ಅದರ ಸಂಪೂರ್ಣ ಜವಾಬ್ದಾರಿಯನ್ನು ತಾಯಿಯ ನೋಡಿಕೊಳ್ಳಬೇಕಾಗುತ್ತದೆ. ದಿನದ 24 ಗಂಟೆಯೂ ಮಗುವಿಗೆ ಏನು ಬೇಕು, ಯಾವಾಗ ಮಲಗಿಸಬೇಕು, ಮಗು ಅತ್ತರೆ ಹೇಗೆ ಸಮಾಧಾನ ಮಾಡಬೇಕು ಎಂಬುದೆಲ್ಲವನ್ನೂ ತಾಯಿಯಾದವಳು ತುಂಬಾ ಚೆನ್ನಾಗಿ ತಿಳಿದುಕೊಂಡಿರುತ್ತಾಳೆ. ಅದರಿಂದಲೇ ನಮ್ಮ ಹಿರಿಯರು ತಾಯಿಯನ್ನು ಮೊದಲ ಗುರುವಿಗೆ ಹೋಲಿಸಿರುವುದು. ತಾಯಿಯ ಪೋಷಣೆಯಲ್ಲಿ ಬೆಳೆದಂತಹ ಮಗು ಸಮಾಜದಲ್ಲಿ ಒಳ್ಳೆಯ ನೆಲೆ ಕಾಯ್ದುಕೊಳ್ಳುತ್ತಿದೆ ಎಂಬುದು ಎಲ್ಲರ ಅಭಿಪ್ರಾಯ.

ಆದರೆ ಈ ಘಟನೆಯಲ್ಲಿ ಆ ಮಗುವಿಗೆ ತನ್ನ ತಂದೆಯೆ ತಾಯಿ-ತಂದೆ ಎಲ್ಲವೂ ಆಗಿದ್ದಾರೆ. ಹೌದು ಮಗು ಹುಟ್ಟಿದಾಗಿನಿಂದ ಒಂದು ವರ್ಷದವರೆಗೂ ತಂದೆಯೆ ಮಗುವನ್ನು ಅಂಗೈಯಲ್ಲಿಟ್ಟುಕೊಂಡು ಜೋಪಾನವಾಗಿ ನೋಡಿಕೊಂಡಿದ್ದಾರೆ. ಅಲ್ಲದೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿರುವ ತಂದೆ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಹೇಳಿಕೊಡುವ ಜೊತೆಗೆ ಆ ಮಗುವನ್ನು ತನ್ನ ಕಂಕುಳಲ್ಲಿ ಎತ್ತಿಕೊಂಡು ಅದರ ಪಾಲನೆಯನ್ನು ಕೂಡ ಮಾಡುತ್ತಿದ್ದಾರೆ.

ಮಗು ಹುಟ್ಟಿದ ಒಂದು ದಿನಕ್ಕೆ ತಾಯಿ ತೀರಿ ಹೋದ ಕಾರಣ ನನ್ನ ಮಗು ತಾಯಿಯ ಪ್ರೀತಿಯಿಂದ ವಂಚಿತವಾಗಬಾರದು ಎಂದು ತಾಯಿಗಿಂತ ಹೆಚ್ಚಾಗಿ ಈ ಮಹಾನ್ ತಂದೆ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನನಗೆ ಕಾಮೆಂಟ್ ಮೂಲಕ ತಿಳಿಸಿ.