Advertisements

ಗೃಹ ಪ್ರವೇಶವಾದ ಹೊಸ ಮನೆಯಲ್ಲಿ ಎರಡೇ ದಿನಕ್ಕೆ ಈ ಇಬ್ಬರು ಎಂತಹ ಸ್ಥಿತಿಯಲ್ಲಿ ಸಿಕ್ಕರು ಗೊತ್ತಾ.. ಕಣ್ಣಾರೆ ಕಂಡು ಬೆಚ್ಚಿಬಿದ್ದ ಅಕ್ಕಪಕ್ಕದ ಮನೆಯವರು..

Kannada News

ಜೀವನದಲ್ಲಿ ಯಾವಾಗ ಸಂತೋಷ ಬರುವುದೋ ಯಾವಾಗ ದುಃಖ ಬರುವುದೋ ಹೇಳಲಾಗದು.. ಸಂತೋಷದ ಕ್ಷಣಗಳನ್ನು ಆನಂದಿಸುವ ಸಮ್ಯಾದಲ್ಲಿಯೇ ಮರು ಕ್ಷಣವೇ ಜೀವನದಲ್ಲಿ‌ ಊಹಿಸಿರದ ಘಟನೆ ನಡೆದು ಹೋಗುತ್ತದೆ.. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು ಹೊಸ‌ ಮನೆ ಗೃಹ ಪ್ರವೇಶವಾದ ಎರಡೇ ದಿನಕ್ಕೆ ಅದೇ ಮನೆಯಲ್ಲಿ ಈ ಗಂಡ ಹೆಂಡತಿ ಸಿಕ್ಕ ಸ್ಥಿತಿಯನ್ನು ಕಂಡು ಅಕ್ಕ ಪಕ್ಕದವರು ಬೆಚ್ಚಿಬಿದ್ದಿದ್ದಾರೆ.. ಅಷ್ಟಕ್ಕೂ ಏನಾಯಿತು.. ಗೃಹ ಪ್ರವೇಶವಾದ ಆ ಹೊಸ ಮನೆಯಲ್ಲಿ‌ ಎರಡೇ ದಿನಕ್ಕೆ ಅಂತಹುದೇನಾಯಿತು ಗೊತ್ತಾ..

ಹೌದು ಈತನ ಹೆಸರು ರವೀಂದ್ರನ್.. ವಯಸ್ಸು ಐವತ್ತು ವರ್ಷ.. ಇನ್ನೂ ಈತನ ಪತ್ನಿ ಹೆಸರು ಉಷಾ ನಲವತ್ತೈದು ವರ್ಷ.. ಈ ದಂಪತಿಗೆ ಒರ್ವ ಪುತ್ರಿಯೂ ಇದ್ದು ಆಕೆಯ ಹೆಸರು ಶ್ರೀಧನ್ಯಾ.. ಈ‌ ಕುಟುಂಬದ ಕತೆ ಕೇಳಿದರೆ ನಿಜಕ್ಕೂ ಬೆಚ್ಚಿಬೀಳುವಂತಿದೆ.. ಹೌದು ಜೀವನದಲ್ಲಿ ಒಂದು ಮನೆ ಕಟ್ಟುವುದು ಪ್ರತಿಯೊಬ್ಬರ ಕನಸಾಗಿರುತ್ತದೆ.. ಆ ಕನಸು ಕೆಲವರಿಗೆ ನೆರವೇರುತ್ತದೆ.. ಇನ್ನೂ ಕೆಲವರಿಗೆ ಕನಸಾಗಿಯೇ ಉಳಿಯುತ್ತದೆ.. ಮತ್ತೆ ಕೆಲವರು ತಮ್ಮ ಮನೆಯ ಕನಸನ್ನು ನನಸು ಮಾಡಿಕೊಳ್ಳುವ ಸಲುವಾಗಿ ಸಾಕಷ್ಟು ಸಾಲ ಅದು ಇದು ಅಂತ ಪಡೆದು ಮನೆ ಕಟ್ಟಿಸಿಕೊಂದಿರುತ್ತಾರೆ.. ಇನ್ನು ಸರ್ಕಾರಗಳು ಸಹ ಮನೆ ಕಟ್ಟುವ ಬಡವರಿಗೆ ಸಹಾಯಧನವನ್ನೂ ಸಹ ನೀಡುತ್ತದೆ..

ಅದೇ ರೀತಿ ಕೇರಳದ ಸರ್ಕಾರ ಕೂಡ ಬಡ ವರ್ಗದವರಿಗೆ ಮನೆ ಕಟ್ಟುವ ಸಲುವಾಗಿ ಹಣ ನೀಡುತ್ತದೆ.. ಇತ್ತ ಉಷಾ ಹಾಗೂ ರವೀಂದ್ರನ್ ದಂಪತಿ ಸಹ ಜೀವನದಲ್ಲೊಂದು ಮನೆ ಕಟ್ಟಿಕೊಂಡು ಮಗಳ ಜೊತೆ ನೆಮ್ಮದಿಯ ಜೀವನ ಸಾಗಿಸಬೇಕೆಂಬ ಆಸೆ ಇದ್ದವರು.. ಇತ್ತ ಸರ್ಕಾರದಿಂದ ಸಹಾಯಧನವೂ ಸಿಗುತ್ತದೆ ಎಂದು ಇರೋ ಬರೋ ಹಣವನ್ನೆಲ್ಲಾ ಬಳಸಿಕೊಂಡು ಒಂದು ಸ್ವಂತ ಸೂರನ್ನು ಇಡುಕ್ಕಿ ಜಿಲ್ಲೆಯ ಪುಟ್ಟುಡಿಯಲ್ಲಿ ನಿರ್ಮಿಸಿ ಕೊಂಡರು.. ಅಂದುಕೊಂಡಂತೆ ಮನೆ ನಿರ್ಮಾಣವಾಯಿತು.. ಸಂಭ್ರಮದಿಂದ ತಮ್ಮ ಹೊಸ ಮನೆಗೆ ಗೃಹಪ್ರವೇಶವನ್ನೂ ಸಹ‌ ಮಾಡಿದರು.. ಹೌದು ತಮ್ಮ ಕನಸಿನ ಮನೆಗೆ ನೂರಾರು ಕಮಸುಗಳನ್ನು ಹೊತ್ತುಕೊಂಡೇ ಗೃಹ ಪ್ರವೇಶ ಮಾಡಿದರು.. ಆದರೆ ಆ ಸಂಭ್ರಮವಾದ ಎರಡೇ ದಿನಕ್ಕೆ ನಡೆದ ಘಟನೆಯೇ ಬೇರೆ..

ಹೌದು ರವೀಂದ್ರನ್ ಹಾಗೂ ಉಷಾ ಮನೆ ಗೃಹ ಪ್ರವೇಶ ಮಾಡಿದ ಎರಡೇ ದಿನಕ್ಕೆ ಇಲ್ಲವಾಗಿ ಹೋದರು.. ಹೌದು ಕಳೆದ ಎರಡು ದಿನದ ಹಿಂದೆ ಭಾನುವಾರ ಬೆಳಗಿನ ಜಾವ ಎರಡು ಗಂಟೆ ಸಮಯದಲ್ಲಿ ಹೊಸ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಲೋ ಅಥವಾ ಮತ್ತಿನ್ನೇನೋ ತಿಳಿಯದು ಇದ್ದಕಿದ್ದ ಹಾಗೆ ಸಂಪೂರ್ಣ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.. ಆ ಘಟನೆಯಲ್ಲಿ ರವೀಂದ್ರನ್ ಹಾಗೂ ಉಷಾ ದಂಪತಿ ಸಂಪೂರ್ಣವಾಗಿ ನೋಡಲಾಗದ ಸ್ಥಿತಿಯಲ್ಲಿ ಜೀವ ಕಳೆದುಕೊಂಡು ಬಿಟ್ಟಿದ್ದರು..

ಇತ್ತ ಮಗಳು ಶ್ರೀ ಧನ್ಯಾ ಎರಡು ಗಂಟೆ ಸಮಯದಲ್ಲಿಯೇ ಮನೆಯಿಂದ ಹೊರಗೆ ಓಡಿ ಬಂದು ಕೂಗಿ ಕೊಂಡಿದ್ದಾಳೆ.. ಆ ತಕ್ಷಣ ಅಕ್ಕ ಪಕ್ಕದ ಮನೆಯವರು ಓಡಿ ಬಂದು ಸಹಾಯ ಮಾಡಿದ್ದಾರೆ.. ಆದರೆ ಅಷ್ಟರಲ್ಲಾಗಲೇ ಕಾಲ‌‌ ಮಿಂಚಿ ಹೋಗಿತ್ತು.. ಉಷಾ ಹಾಗೂ ರವೀಂದ್ರನ್ ಗುರು ಸಿಗದ ಸ್ಥಿತಿಯಲ್ಲಿ ಕಂಡಿದ್ದು ಇಲ್ಲವಾಗಿ ಹೋಗಿದ್ದರು.. ಇತ್ತ ಶ್ರೀ ಧನ್ಯಾಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು.. ಆದರೆ ಆಕೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ಆಕೆಯನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಲತ್ರೆಗೆ ರವಾನಿಸಲಾಗಿದೆ..

ಇತ್ತ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ನಂದಿಸಿದರೂ ಸಹ ಮನೆಯ ಸಂಪೂರ್ಣ ವಸ್ತುಗಳ ಜೊತೆಗೆ ರವೀಂದ್ರನ್ ಹಾಗೂ ಉಷಾ ಕೂಡ ವಸ್ತುಗಳು ಸಿಕ್ಕ ಸ್ಥಿತಿಯಲ್ಲಿಯೇ ಕರುಕಲಾಗಿ ಹೋಗಿದ್ದರು.. ನೂರಾರು ಆಸೆ ಕನಸುಗಳಿಂದ ಸ್ವಂತ ಮನೆಗೆ ಬಂದ ದಂಪತಿ ಎರಡೇ ದಿನಕ್ಕೆ ಈ ರೀತಿಯಾಗಿದ್ದು ನಿಜಕ್ಕೂ ಮನಕಲಕುವಂತಿದೆ..