Advertisements

ಇಷ್ಟು ಚಿಕ್ಕ ವಯಸ್ಸಿಗೆ ಮೊಬೈಲ್ ನಲ್ಲಿ ನೋಡಬಾರದ್ದು ನೋಡಿ ಮನೆಯ ರೂಮಿನ ಒಳಗೆ ಹೋದ.. ಬಾಗಿಲು ತೆಗೆದು ನೋಡಿದಾಗ ಮಗ ಇದ್ದ ಸ್ಥಿತಿ ಕಂಡು ಬೆಚ್ಚಿಬಿದ್ದ ತಾಯಿ..

Kannada News

ಮೊಬೈಲ್ ಇತ್ತೀಚಿನ ದಿನಗಳಲ್ಲಿ ನಮ್ಮ‌ ಜೀವನದ. ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಇಲ್ಲದೆ ಯಾವುದೆ ಕೆಲಸ ಸಾಧ್ಯವಿಲ್ಲ‌ ಎಂಬುವುದರ ಮಟ್ಟಿಗೆ ನಾವೆಲ್ಲ‌ ಈ ತಾಂತ್ರಿಕತೆಗೆ ಮಾರುಹೋಗಿದ್ದೇವೆ. ಪ್ರತಿ ಕ್ಷಣದಲ್ಲಿ ಮೊಬೈಲ್ ಬೇಕು ಅದಿಲ್ಲದಿದ್ದರೆ ನಮ್ಮ‌ ಕೆಲಸ ಅಸಾಧ್ಯ. ಮೊಬೈಲ್ ಎಷ್ಟು ಒಳ್ಳೆಯದೊ ಅದರ ಅತಿಯಾದ ಬಳಕೆಯಿಂದಾಗಿ ಆಗುವ ದುಷ್ಪರಿಣಾಮ ಅಷ್ಟೆ ಭಯಾನಕವಾಗಿರುತ್ತದೆ. ಹಿರಿಯರು ಮಾತ್ರವಲ್ಲದೆ ಚಿಕ್ಕ‌ ಮಕ್ಕಳು ಸಹ ಈ ಮಾಯಾ ಜಾಲಕ್ಕೆ ಮಾರು ಹೋಗಿದ್ದಾರೆ. ಗೇಮ್ ಆಡುವ ನೆಪದಲ್ಲಿ ಅವರ ಕೈ ಸೇರಿದ ಈ ಜಂಗಮವಾಣಿ ಅವರನ್ನು ಯಾವ ಹಂತಕ್ಕೆ ತಲುಪಿಸುತ್ತದೆ ಎಂಬುದಕ್ಕೆ ಈ ಘಟನೆಯೆ ನಿಜವಾದ ಉದಾಹರಣೆ.

Advertisements
Advertisements

ಮೊಬೈಲ್ ಚಿಕ್ಕ ಮಕ್ಕಳನ್ನು ಯಾವ ಹಂತಕ್ಕೆ ಕರೆದುಕೊಂಡು ಹೋಗುತ್ತದೆ ಎಂಬುವುದಕ್ಕೆ ಈ‌ ಹುಡುಗನೆ ಸಾಕ್ಷಿ.ಕೊರೊನಾ ಸಮಯದಲ್ಲಿ ಮನೆಯಲ್ಲಿ ಮಕ್ಕಳಿರುಷ್ಟೆ ಮೋಬೈಲ್ ಗಳ‌ ಸಂಖ್ಯೆಯು ಹೆಚ್ಚಾಗಿದ್ದೆ ಮಕ್ಕಳು ಈ ರೀತಿಯ ತಪ್ಪು ದಾರಿಯಲ್ಲಿ ಹೆಜ್ಜೆ ಹಾಕುತ್ತಿರುವುದು. ಈತ ಏಳನೇ ತರಗತಿ ವಿದ್ಯಾರ್ಥಿ.. ಆನ್ಲೈನ್ ಕ್ಲಾಸ ಕೇಳುವುದಕ್ಕಾಗಿ‌ ಅದು ಇದು ಅಂತ ಅಮ್ಮನ ಮೊಬೈಲ್ ಬಳಸುತ್ತಿದ್ದ.. ಸದಾ ಮೋಬೈಲ ಪಡೆಯುತ್ತುದ್ದ ಮಗನನ್ನು ಕಂಡು, ಮಗ ಚೆನ್ನಾಗಿ ಓದುತ್ತಿದಾನೆ ಆನ್ಲೈನ್ ಕ್ಲಾಸ್ ಅಂಟೆಂಡ್ ಮಾಡುತ್ತಿದ್ದಾನೆ ಎಂದು ಅಮ್ಮನೂ ಭಾವಿಸಿದ್ದಳು.. ಆದರೆ ವಾಸ್ತವವೆ ಬೇರೆಯಾಗಿತ್ತು. ಯಾರಿಗೆ ಗೊತ್ತು ಮಕ್ಕಳು ಈ‌ರೀತಿಯ ಕೆಲಸ‌ಮಾಡುತ್ತಾರೆಂದು. ಆದರೆ ಮಗ ಮಾತ್ರ ಮೊಬೈಲ್ ನಲ್ಲಿ ಬೇರೆಯದ್ದನ್ನೇ ಕ್ಲಾಸ್ ನೋಡುತ್ತಿದ್ದ..

ಹೌದು ಪ್ರತಿದಿನ ಕ್ಲಾಸ್ ಕೇಳುತ್ತಾನೆ ಎಂದು‌‌ ಮಗನ ಕೈಗೆ ಮೊಬೈಲ್ ನೀಡಿ ಕೆಲಸದಲ್ಲಿ ತೊಡಗಿದ್ದಾಗ ಮಗ ಯೂಟ್ಯೂಬ್ ನಲ್ಲಿ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವಂತಹ ವೀಡಿಯೋಗಳನ್ನು ನೋಡಲು ಆರಂಭಿಸಿದ್ದ.. ಆದರೆ ಈ ತಾಯಿಗೆ ಅದು ತಿಳಿಯಲೇ ಇಲ್ಲ.. ಯಾವಾಗಲೂ ಮೊಬೈಲ್ ಹಿಡಿದು ಕೂರುತ್ತಿದ್ದ ಆಗ ಮಗ ಬಹಳ ಚೆನ್ನಾಗಿ ಓದುತ್ತಿದ್ದಾನೆ ಎಂದುಕೊಳ್ಳುತ್ತಿದ್ದರು. ಆದರೆ ಆತ ಮಾತ್ರ ಮನೆಯಲ್ಲಿ ಯಾರಿಗು ತಿಳಿಯದ ಹಾಗೆ ನೋಡಬಾರದ್ದನ್ನು ಮೋಡಿ ಮನಸ್ಸು ಬದಲಾಯಿಸಿಕೊಂಡು ಬಿಟ್ಟಿದ್ದ. ಅದರ ಪರಿಣಾಮಕ್ಕೆ ಮಗನ ರೂಮಿನಲ್ಲಿ ಸಿಕ್ಕ ಸ್ಥಿತಿಯಾಗಿದೆ‌‌..

ಕಳೆದ ಎರಡು ದಿನಗಳ ಹಿಂದೆ ಮಗ ಎಂದಿನಂತೆ ಅಮ್ಮನ ಬಳಿ ಮೊಬೈಲ್ ಕೇಳಿ ಪಡೆದುಕೊಂಡಿದ್ದಾನೆ.. ಆನಂತರ ಮೊಬೈಲ್ ಹಿಡಿದು ಮನೆಯ ರೂಮಿನೊಳಗೆ ಹೋಗಿದ್ದಾನೆ.. ಹೋಗಿ ಆತ ಮಾಡಿದ್ದೇನು ಎಂದು ತಿಳಿದರೆ ಒಂದು ನಿಮಷ ದಂಗಾಗಿ‌ ಹೋಗುತ್ತಿರಿ. ಒಳಗೆ ಹೋದ ಬಹಳ ಸಮಯವಾದರೂ ಹೊರಗೆ ಬರಲೇ ಇಲ್ಲ.. ಇತ್ತ ತಾಯಿ ಏನೋ ಓದಿಕೊಳ್ಳುತ್ತಿರಬಹುದು ಎಂದು ಕೊಂಡಿದ್ದಾಳೆ.. ಆದರೆ ಇಪ್ಪತ್ತು ನಿಮಿಷವಾದರೂ ಮಗ ರೂಮಿನಿಂದ ಹೊರಗೆ ಬರದ‌ ಕಾರಣ ಅನುಮಾನಗೊಂಡು ರೂಮಿನ ಬಾಗಿಲನ್ನು ತೆಗೆದು ನೋಡಿದ್ದಾಳೆ.. ನೋಡಿದಾಕ್ಷಣ ಅಲ್ಲಿ ರೂಮಿನೊಳಗೆ ಮಗ ಇದ್ದ ಸ್ಥಿತಿಯ ಕಂಡು ಅಲ್ಲಿಯೇ ಕೂಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ..

ಚಿಕ್ಕ ವಯಸ್ಸಿನ ಮಗ, ಇಪ್ಪತ್ತು ನಿಮಿಷದ ಹಿಂದಷ್ಟೇ ಅಮ್ಮ ಮೊಬೈಲ್ ಕೊಡು ಎಂದ ಮಗ ಆಗ ರೂಮಿನಲ್ಲಿ ತನ್ನ‌ ಜೀವವನ್ನೆ ತಾನೆ ಕಳೆದುಕೊಂಡುಬಿಟ್ಟಿದ್ದ.. ಯೂಟ್ಯೂಬ್ ನಲ್ಲಿ ಜೀವ ಕಳೆದುಕೊಳ್ಳುವುದು ಹೇಗೆ ಎಂಬುದನ್ನು ಹುಡುಕಿ ವೀಡಿಯೋ ನೋಡಿಕೊಂಡು ಏಳನೇ ತರಗತಿ ಓದುತ್ತಿದ್ದ ಚಿಕ್ಕ ಹುಡುಗ ತನ್ನ ಜೀವವನ್ನೇ ತೆಗೆದುಕೊಂಡು ಬಿಟ್ಟಿದ್ದನು. ಮಗ ರೂಮಿನಲ್ಲಿ ಫ್ಯಾನಗೆ ನೇತಾಡುತ್ತಿದ್ದ ಸ್ಥಿತಿ ಕಂಡು ತಾಯಿ ಗಾಬರಿ ಇಂದ ಕೊಗಿಕೊಂಡಾಗ ಅಕ್ಕ ಪಕ್ಕದ ಮನೆಯವರು‌ ಓಡಿ ಬಂದು ನೋಡಿ ಮಗನನ್ನು ಫ್ಯಾನ್ ನಿಂದ ಕೆಳಗೆ ಇಳಿಸಿದ್ದಾರೆ.. ಇತ್ತ ಪ್ರಜ್ಞೆ ತಪ್ಪಿ ಬಿದ್ದಿದ್ದ ತಾಯಿಯನ್ನು ಎಚ್ಚರಗೊಳಿಸಿದ್ದಾರೆ. ಎಚ್ಚೆತ್ತು ಕೊಂಡ ತಾಯಿಯ ರೋಧಣೆ ಮುಗಿಲು ಮುಟ್ಟಿತ್ತು.‌ ಘಟನೆ ತಿಳಿದ ಪೊಲೀಸರು ಮಾಹಿತಿ ಹುಡುಕಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ‌ ನಡೆಸಿದರು. ಇಷ್ಟು ಚಿಕ್ಕ ಹುಡುಗ ಇಂತಹ ಕೆಲಸ ಮಾಡಿಕೊಂಡದ್ದನ್ನು ನೋಡಿ ಅವರೂ ಸಹ ಆಶ್ಚರ್ಯಗೊಂಡಿದ್ದಾರೆ..

ತನಿಖೆಯ ಸಂದರ್ಭದಲ್ಲಿ ಅಕ್ಕ ಪಕ್ಕ ಜನರು ಹೇಳುವ ಪ್ರಕಾರ ಆ ಕುಟುಂಬದಲ್ಲಿ ಯಾವುದೇ ಗಲಾಟೆಯಾಗಲಿ ಮತ್ತೊಂದಾಗಲಿ ಮನಸ್ತಾಪವಾಗಲಿ ಏನೂ ಇರಲಿಲ್ಲ.. ಅವರ ಕುಟುಂಬ ಸದಾ ಸಂತೋಷವಾಗಿಯೇ ಇತ್ತು‌ ಇಂತಹ ಘಟನೆ ನಡೆಯುತ್ತದೆ ಎಂದು ಊಹಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಇತ್ತ ಮಗನ ಮೇಲೆ ಜೀವವನ್ನೇ ಇಟ್ಟುಕೊಂಡಿದ್ದ ತಾಯಿ ಮಗ ಜೀವ ಕಳೆದುಕೊಂಡ ಸ್ಥಿತಿಗಲ್ಲಿ ಕಂಡು ಮೌನರಾಗಿದ್ದಾರೆ. ಎಲ್ಲವೂ ಸರಿಯಿದ್ದ ಕುಟುಂಬ ಎಲ್ಲವೂ ಚೆನ್ನಾಗಿದ್ದ ಕುಟುಂಬದಲ್ಲಿ ಮಗ ಮೊಬೈಲ್ ನೋಡಿ ಇಂತಹ ಕೆಲಸ ಮಾಡಿಕೊಂಡಿದ್ದು ಮೊಬೈಲ್ ಗಳು ಮಕ್ಕಳ‌ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿರುವುದು ಎಂದು ಒಂದು ಕ್ಷಣ ಆತಂಕ ಪಡುವಂತಾಗಿದೆ..

ಈ ಕೊ’ರೊ’ನಾ ಸಂದರ್ಭದಲ್ಲಿ ‌ಶಾಲೆಗಳು ಅನಿವಾರ್ಯ ಪರಿಸ್ಥಿತಿಗೆ ಒಳಗಾಗಿ ಮೊಬೈಲೆ ಮೋರೆ ಹೋಗಿದ್ದು ಅನೇಕ ಮಕ್ಕಳು ಇದರ ಸದುಪಯೋಗಕ್ಕಿಂತೆ ಅದರ ದುರ್ಬಳಕೆಯಲ್ಲಿಯೇ ಬಹುಪಾಲು ತೊಡಗಿಕೊಂಡಿದ್ದಾರೆ. ಸದಾ ಆನ್ಲೈನ್ ಕ್ಲಾಸ್ ಎಂದು ಹೇಳಿ ಗ್ರುಪ್ ಚಾಟ್, ಸೋಶಿಯಲ್ ಮೀಡಿಯಾ, ಯೂಟ್ಯೂಬ್ ವಿಡಿಯೊಗಳನ್ನು ನೋಡುವುದರಲ್ಲಿಯೇ ಮುಳುಗಿರುತ್ತಾರೆ. ಮಕ್ಕಳ ಮನಸ್ಸು ಮೃದು ಯಾವ ಪರಿಸ್ಥಿತಿಗೆ ವಾತಾವರಣಕ್ಕೆ ಒಳಗಾಗುತ್ತಾರೆ ಅದರಂತೆ ಅವರ ಮನಸ್ಥಿತಿ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಆದ ಕಾರಣ ಶಾಲಾಯಲ್ಲಿ ಶಿಕ್ಷಕರಾಗಲಿ ಮನೆಯಲ್ಲಿ ಪಾಲಕರಾಗಲಿ ಮಗುವಿನ ಕೈಯಲ್ಲಿ ಮೊಬೈಲ್ ನೀಡುವ ಮುನ್ನ, ನೀಡಿದ ನಂತರ ಅವರ ಕುರಿತು ಅವರ ನಡುವಳಿಕೆಯ ಕುರಿತು ಅವಲೋಕನ‌ ಮಾಡುವುದು ಕಲಿತುಕೊಂಡರೆ ಬಹುಷ ಭವಿಷ್ಯದಲ್ಲಿ ಈ‌ ರೀತಿಯ ಘಟನೆಗಳು ‌ಮರುಕಳಿಸದಂತೆ ನೋಡಿಕೊಳ್ಳಬಹುದು.