Advertisements

ಈಕೆ ಲಾಟರಿಯಲ್ಲಿ ಗೆದ್ದಿದ್ದು ಬರೋಬ್ಬರಿ 190 ಕೋಟಿ ರೂಪಾಯಿಗಳು..! ಆದರೆ ಈಕೆಯ ಸಣ್ಣ ತ’ಪ್ಪಿನಿಂದ ಆಗಿದ್ದೇ ಬೇರೆ.!

Kannada News

ಅದೃಷ್ಟ ಯಾರ ಸ್ವಂತನೂ ಅಲ್ಲ. ಒಮ್ಮೆ ಅದು ಒಲಿದರೆ ಎಂತಹವರ ಹಣೆ ಬರಹವೂ ಸಹ ಬದಲಾಗಲೇಬೇಕು. ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪುಗಳಿಗೆ ಅಪಾರ ಬೆಲೆ ಸಲ್ಲಿಸಬೇಕಾಗುತ್ತದೆ.‌ ಅದಕ್ಕೆ ದೊಡ್ಡವರು ಹೇಳುವುದು, ಕೆಲ ವಿಷಯಗಳಲ್ಲಿ ನಮ್ಮ ಮೈಯೆಲ್ಲಾ ಕಣ್ಣಾಗಿರಬೇಕು ಎಂದು. ಹೌದು ಏಕೆಂದರೆ ನಮ್ಮ ಬೇಜವಾಬ್ದಾರಿ ತನ ಹಾಗೂ ಸಣ್ಣ ತಪ್ಪುಗಳು ನಮ್ಮ ಅದೃಷ್ಟವನ್ನೇ ಪಾತಾಳಕ್ಕೆ ಕುಸಿದ ಬಿಡುವಂತೆ ಮಾಡುತ್ತವೆ. ಯಾವುದೇ ವಿಷಯದಲ್ಲೂ ಸಹ ನಾವು ನೆಗ್ಲೆಟ್ ಮಾಡಬಾರದು. ಕೆಲವು ಬಾರಿ ನಾವು ನೆಗ್ಲೆಟ್ ಮಾಡುವ ವಿಷಯಗಳಿಗೆ ದೊಡ್ಡ ಬೆಲೆಯೇ ಕಟ್ಟಬೇಕಾಗುತ್ತದೆ. ಇದೀಗ ನಾವು ಹೇಳಲು ಹೊರಟಿರುವುದು ಒಬ್ಬ ಮಹಿಳೆಯ ಬಗ್ಗೆ, ಈ ಮಹಿಳೆಯು ತಾನು ಮಾಡಿದ ಒಂದು ಸಣ್ಣ ತಪ್ಪಿನಿಂದ ಅದೃಷ್ಟದಿಂದ ಬಂದ 190 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾಳೆ. ಅದು ಹೇಗೆ ನೋಡೋಣ ಬನ್ನಿ.

Advertisements
Advertisements

ನಾವು ಈಗ ಹೇಳಲು ಹೊರಟಿರುವ ಮಹಿಳೆ ಮೂಲತಃ ಅಮೆರಿಕಾದ ಕ್ಯಾಲಿಫೋರ್ನಿಯಾದವರು. ಈ ಮಹಿಳೆ ಒಮ್ಮೆ ಸುಮಾರು 26 ಮಿಲಿಯನ್ ಡಾಲರ್ ಅಂದರೆ 190 ಕೋಟಿ ರೂಪಾಯಿಗಳ ಬಹುಮಾನದ ಲಾಟರಿಯೊಂದನ್ನು ಖರೀದಿಸುತ್ತಾರೆ. ಲಾಟರಿ ಟಿಕೆಟನ್ನು ಖರೀದಿಸಿದ ಈಕೆ ತನ್ನ ಜೀನ್ಸ್ ಪ್ಯಾಂಟ್ ನ‌ ಜೇಬಿನಲ್ಲಿಟ್ಟುಕೊಂಡು ಮನೆಗೆ ಹೋಗುತ್ತಾಳೆ. ನಂತರ ಮನೆಗೆ ಬಂದು ಲಾಟರಿಯನ್ನು ತೆಗೆದು ಆ ನಂಬರ್ ಅನ್ನು ತನ್ನ ಡೈರಿಯೊಂದರಲ್ಲಿ ಬರೆದುಕೊಂಡು ಮರಳಿ ಆ ಲಾಟರಿ ಟಿಕೆಟ್ ಅನ್ನು ತನ್ನ ಪ್ಯಾಂಟ್ ಜೇಬಿನಲ್ಲಿಬಿಡುತ್ತಾಳೆ. ಕೆಲದಿನಗಳ ನಂತರ ಈ ಪ್ಯಾಂಟನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ ತಾನು ಲಾಟರಿ ಇಟ್ಟಿರುವ ವಿಷಯವನ್ನು ಮರೆತಿರುತ್ತಾರೆ. ಇನ್ನು ಇದಾದ ಬಳಿಕೆ ಲಾಟರಿ ಟಿಕೆಟ್ ನ ಫಲಿತಾಂಶ ಪ್ರಕಟವಾಗುತ್ತದೆ.

ತಡಮಾಡದೆ ತಮ್ಮ ಡೈರಿಯಲ್ಲಿದ್ದ ಲಾಟರಿ ನಂಬರನ್ನು ತೆಗೆದು ನೋಡಿದ ಈ ಮಹಿಳೆಗೆ ಶಾ’ಕ್ ಕಾದಿರುತ್ತದೆ. ಏಕೆಂದರೆ ತಾನು 190 ಕೋಟಿ ಗೆದ್ದಿರುತ್ತಾಳೆ. ನಂತರ ಲಾಟರಿ ಟಿಕೆಟ್ ಅನ್ನು ಹುಡುಕಿದಾಗ ತಾನು ಮರೆತು ಆ ಪ್ಯಾಂಟ್ ನಲ್ಲಿ ಲಾಟರಿ ಇಟ್ಟಿದ್ದು ನೆನಪಾಗಿ ಆ ಪ್ಯಾಂಟ್ ಅನ್ನು ತೆಗೆದು ನೋಡಿದಾಗ ಆ ಲಾಟರಿಯ ಸಣ್ಣ ತುಂಡೂ ಸಹ ಈಕೆಗೆ ಸಿಗುವುದಿಲ್ಲ. ಇದರಿಂದ ಆಕಾಶವೇ ತಲೆ‌ ಮೇಲೆ ಬಿದ್ದಂತಾಗಿ ಆ ಮಹಿಳೆ ತಾನು ಬರೆದಿಟ್ಟುಕೊಂಡಿದ್ದ ಲಾಟರಿ ನಂಬರ್ ಹಾಗೂ ತಾನು ಲಾಟರಿ ಖರೀದಿಸಿದ್ದ ಅಂಗಡಿಯ ಸಿಸಿ ಟಿವಿ ವಿಡಿಯೋ ತೆಗೆದುಕೊಂಡು ಲಾಟರಿ ನಡೆಸುತ್ತಿದ್ದ ಏಜೆನ್ಸಿಗೆ ಬಂದು ನಡೆದ ವಿಷಯ ತಿಳಿಸುತ್ತಾಳೆ. ಆದರೆ ಅವರ ನಿಯಮದ ಪ್ರಕಾರ ಲಾಟರಿಯ ಸಣ್ಣ ತುಣುಕಾದರೂ ಬೇಕು ಹಾಗೂ ಲಾಟರಿಯ ಕೆಲ ನಂಬರ್ ಗಳು ಕಾಣುವಂತಿರಬೇಕು ಇಲ್ಲವಾದರೆ ಗೆದ್ದಿರುವ ದುಡ್ಡು ಅಲ್ಲಿನ ಸ್ಕೂಲ್ ಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು. ಆದರೆ ಸರಿಯಾದ ದಾಖಲೆಗಳು ಇಲ್ಲದ ಕಾರಣ ಈ ದುಡ್ಡು ಸಿಗದೆ ಹೋಗುತ್ತದೆ. ಅದೇನೆ ಆಗಲಿ ಈಕೆ ಮಾಡಿದ ಸಣ್ಣ ತಪ್ಪಿಗೆ ಸುಮಾರು 190 ಕೋಟಿ ಕಳೆದುಕೊಂಡಿದ್ದಾಳೆ.. ಈ ಘ’ಟನೆಯ ಬಗ್ಗೆ ನೀವೇನಂತೀರಾ ಸ್ನೇಹಿತರೆ.