ಪ್ರೀಯ ಓದುಗರೇ ಸೋನು ಗೌಡ ಅಂದ್ರೇ ಯಾರಿಗೆ ತಾನೇ ಪರಿಚಯ ಇಲ್ಲ ಹೇಳಿ. ಇವರು ಎಲ್ಲರಿಗೂ ಚಿರ ಪರಿಚಯ.ಮಕ್ಕಳಿಂದ ಹಿಡಿದು ವಯಸ್ಸಾದವರು ಎಲ್ಲರು ಕುಳಿತು ನೋಡುತಿದ್ದ ಧಾರವಾಹಿ ಜೊತೆ ಜೊತೆಯಲಿ. ಇದರಲ್ಲಿ ರಾಜನಂದಿನಿ ಪಾತ್ರದ ಮೂಲಕ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ರಾಜನಂದಿನಿ ಪಾತ್ರ ಮಾಡುತ್ತಿದ್ದರು. ಆ ಧಾರವಾಹಿಯಲ್ಲಿ ಸೋನುಗೌಡರನ್ನು ಸಾಯಿಸಲಾಗುತ್ತದೆ. ಆಗ ಇವರ ಪಾತ್ರ ಅಲ್ಲಿ ಮುಗಿದಿತ್ತು. ಅದು ಮುಗಿದ ಬಳಿಕ ಇದೀಗ ಸೋನು ಗೌಡ ಅವರು ಮತ್ತೊಂದು ಹೊಸ ಸಿನಿಮಾ ಮೂಲಕ ವೀಕ್ಷಕರ ಎದುರು ಬರಲಿದ್ದಾರೆ.

ಅದು ವೆಡ್ಡಿಂಗ್ ಗಿಫ್ಟ್ ಸಿನಿಮಾ ಮೂಲಕ. ಈ ಸಿನಿಮಾ ಕೆಲವು ತಿಂಗಳುಗಳ ಹಿಂದೆ ಶುರುವಾಗಿತ್ತು. ಹಿರಿಯನಟಿ ಪ್ರೇಮಾ ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿನ ಪಾತ್ರ ಸೋನು ಗೌಡ ಅವರಿಗೆ ನಿಜ ಜೀವನಕ್ಕೆ ಬಹಳ ಹತ್ತಿರವಾದ ಪಾತ್ರ ಆಗಿತ್ತಂತೆ. ಮನುಷ್ಯರ ಸಂಬಂಧಗಳು, ಮದುವೆ, ವಿಚ್ಛೇದನ, ಇವುಗಳ ಕುರಿತು ಕಥೆ ಇದ್ದು, ಸೋನುಗೌಡ ಅವರು ಇದೇ ಮೊದಲ ಬಾರಿಗೆ ನೆಗಟಿವ್ ಶೇಡ್ ಇರುವ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಸಿನಿಮಾದ ಪಾತ್ರ ಸೋನು ಗೌಡ ಅವರಿಗೆ ಬಹಳ ಕಾಡಿದ ಪಾತ್ರಗಳಲ್ಲಿ ಒಂದು ಎಂದು ಪ್ರೆಸ್ ಮೀಟ್ ನಲ್ಲಿ ನಟಿ ಸೋನು ಗೌಡ ಹೇಳಿದ್ದಾರೆ.
ನಿಜ ಜೀವನದಲ್ಲಿ ಅವರು ವಿವಾಹವಾಗಿ, ಅದು ಡಿವೋರ್ಸ್ ಆಗಿ ತುಂಬಾ ನೋವು ಅನುಭವಿಸಿದ್ದಾರೆ. ಆದ್ದರಿಂದಲೇ ಈ ಪಾತ್ರ ನನಗೆ ತುಂಬಾ ಹತ್ತಿರವಾಗಿದೆ ಎಂದಿದ್ದಾರೆ. ಇನ್ನೊಂದು ಸಂದರ್ಶನದಲ್ಲಿ ಮಾತನಾಡಿದ ಸೋನು ಅವರು ರಾಪಿಡ್ ಫೈರ್ ರೌಂಡ್ ನಲ್ಲಿ ಅಂಕರ್ ಕೇಳಿದ ಪ್ರಶ್ನೆಗಳಿಗೆ ತಟಾ ತಟ್ಟ ಅಂತಾ ಉತ್ತರ ಹೇಳುದ್ರು. ಇನ್ನೂ ಸ್ಯಾಂಡಲ್ ವುಡ್ ನ ಎಲ್ಲ ನಟರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದಾಗ ಉತ್ತರಿಸಿದ್ದು ಹೀಗೆ.
“ಚಿಕ್ಕ ವಯಸ್ಸಿನಿಂದಾನು ಅಪ್ಪು ಸರ್ ಜೊತೆ ಕೆಲಸ ಮಾಡಬೇಕು ಅಂತ ನನಗೆ ಆಸೆ ಇತ್ತು. ಈಗ ಅದು ಸಾಧ್ಯವಿಲ್ಲ. ಆದ್ದರಿಂದ ಯಾರು ನನಗೆ ಕೆಲಸ ಕೊಟ್ರು ಅವರ ಜೊತೆ ನಾನು ಕೆಲಸ ಮಾಡ್ತೀನಿ..”
ಎಂದಿದ್ದಾರೆ.ಒಂದೆರಡೇ ಪದದಲ್ಲಿ ನಟರ ಕುರಿತು ಹೇಳಿ ಎಂದಾಗ ಸೋನುಗೌಡ ಅವರು ಪುನೀತ್ ರಾಜ್ ಕುಮಾರ್ ಅವರು ನನ್ನ ರೋಲ್ ಮಾಡೆಲ್. ದರ್ಶನ್ ಅವರು ಮಾಸ್, ಸುದೀಪ್ ಸ್ಟೈಲಿಶ್ ಎಂದು, ಸತೀಶ್ ನೀನಾಸಂ ಅವರನ್ನು, ಪರ್ಫಾರ್ಮರ್ ಎಂದ ಸೋನು ಯಶ್ ಹಾಟ್ ಎಂದು ಹೇಳಿದ್ದಾರೆ. ಹೀಗೆ ಎಲ್ಲಾ ನಟರ ಬಗ್ಗೆ ಹೇಳುತ್ತಿರುವಾಗ ಸ್ಯಾಂಡಲ್ವುಡ್ ನ ಕ್ರೇಜಿ ಸ್ಟಾರ್ ಆಗಿರುವ ರವಿಚಂದ್ರನ್ ಅವರನ್ನು ‘ ಮೈ ಸ್ವೀಟ್ ಹಾರ್ಟ್’ ಎಂದು ಹೇಳಿಕೊಂಡಿದ್ದಾರೆ. ರವಿಚಂದ್ರ ಅವರು ಮೊದಲೇ ಹೆಚ್ಚು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದವರು. ಅವರಲ್ಲಿಗ ಸೋನು ಗೌಡ ಕೂಡಾ ಒಬ್ಬರಾಗಿದ್ದಾರೆ.