Advertisements

ಮಾವನ ವೃದ್ದಾಶ್ರಮ ಸೇರಿಸೋ ಪ್ಲಾನ್ ಮಾಡಿದ ಸೊಸೆಯಂದಿರು ಇವರ ಪ್ಲಾನ್ ಗೊತ್ತಾಗಿ ಮಾವ ಮಾಡಿದ್ದೇನು! ಸೊಸೆ ಶಾಕ್..

Kannada News

ನಮಸ್ಕಾರ ವೀಕ್ಷಕರೆ ತಮಿಳುನಾಡಿನ ಚೆನ್ನೈ ಸಿಟಿಯಲ್ಲಿ ಸುಂದರನ್ ಎಂಬ ವ್ಯಕ್ತಿ ವಾಸಮಾಡುತ್ತಿದ್ದರು ಸುಂದರನ್ ಗೆ ಈಗ 60 ವರ್ಷ ವಯಸ್ಸಾಗಿದೆ ಆರು ತಿಂಗಳ ಹಿಂದಷ್ಟೇ ಸುಂದರನ್ ಹೆಂಡತಿ ಮೀನಾ ಕ್ಯಾ’ನ್ಸ’ರ್ ಕಾ’ಯಿಲೆ’ಯಿಂದ ಸತ್ತುಹೋದಳು ಸುಂದರನ್ ಗೆ ಇಬ್ಬರು ಗಂಡು ಮಕ್ಕಳಿದ್ದರು ಈ ಇಬ್ಬರು ಗಂಡು ಮಕ್ಕಳಿಗೂ ಮದುವೆಯಾಗಿ ಮಕ್ಕಳಿದ್ದಾರೆ
ಸುಂದರನ್ ತನ್ನ ಇಬ್ಬರು ಗಂಡು ಮಕ್ಕಳು ಇಬ್ಬರು ಸೊಸೆಯಂದಿರು ಮತ್ತು ಮೊಮ್ಮಕ್ಕಳ ಜೊತೆ ತಾನೇ ಕಷ್ಟಪಟ್ಟು ಕಟ್ಟಿಸಿದ್ದ ಮನೆಯಲ್ಲಿ ಒಟ್ಟಿಗೆ ಜೀವನ ಮಾಡುತ್ತಿದ್ದರು ಹೆಂಡತಿಯನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಸುಂದರನ್ ಆಕೆ ಸತ್ತನಂತರ ಅವಳ ಫೀಲಿಂಗ್ ನಲ್ಲಿ ಅಂಗಡಿ ಕೆಲಸಕ್ಕೆ ಕೂಡ ಹೋಗದೆ ಮನೆಯಲ್ಲೇ ಆರು ತಿಂಗಳಿಂದ ಹೆಂಡತಿಯನ್ನು ನೆನಪಿಸಿಕೊಳ್ಳುತ್ತಾ
ಸಪ್ಪಗೆ ಸುಂದರನ್ ಕೂತಿರುತ್ತಿದ್ದರು.. ಒಂದು ದಿನ ಸುಂದರನ್ ಹಿರಿ ಸೊಸೆ ಮತ್ತು ಕಿರಿಸೊಸೆ ರೂಮಿನ ಒಳಗೆ ಕೂತು ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದರು. ನನ್ನ ಇಬ್ಬರು ಸೊಸೆಯಂದಿರು ಏನೋ ರೂಮಿನೊಳಗೆ ಸೀಕ್ರೆಟ್ ಆಗಿ ಮಾತಾಡುತ್ತಿದ್ದಿರಲ್ಲ

Advertisements
Advertisements

ತಡಿ ಏನು ಮಾತಾಡುತ್ತಿದ್ದಾರೆ ಕೇಳಿಸಿಕೊಳ್ಳೋಣ ಅಂತ ಸುಂದರನ್ ಬಾಗಿಲ ಬಳಿ ನಿಂತು ಸೊಸೆಯಂದಿರು ಮಾತಾಡಿಕೊಳ್ಳುತ್ತಿರೊದನ್ನು ಕೇಳಿಸಿಕೊಳ್ಳುತ್ತಿದ್ದರು ಕಿರಿಸೊಸೆ ಹಿರಿ ಸೊಸೆಗೆ ಈ ರೀತಿ ಹೇಳುತ್ತಿದ್ದಳು ಅಕ್ಕ ನಾನು ಈಗ ಹೇಳುವ ಮಾತು ಕೇಳಿ ಒಂದು ಒಳ್ಳೆಯ ಐಡಿಯಾ ಕೊಡ್ತೀನಿ ಅದು ಏನೆಂದರೆ ನಮ್ಮ ಮೀನಾ ಅತ್ತೆ ಸತ್ತುಹೋಗಿ ಆರು ತಿಂಗಳು ಸಮಯ ಕಳೆಯುತ್ತಿದೆ ಅತ್ತೆ ಬದುಕಿದ್ದಾಗ ಅವರೇ ಸುಂದರನ್ ಮಾವನನ್ನು ನೋಡಿಕೊಳ್ಳುತ್ತಿದ್ದರು ಆದರೆ ಈಗ ಅತ್ತೆ ಇಲ್ಲದ ಕಾರಣ ಮಾವನನ್ನು ನಾವಿಬ್ಬರೇ ನೋಡಿಕೊಳ್ಳಬೇಕಾಗುತ್ತೆ ನಾವು ನಮ್ಮ ಮಾವ ಕೊಡುವ ಟಾರ್ಚರ್ ನ ಸಹಿಸಿಕೊಂಡು ಇರಬೇಕಾಗುತ್ತೆ ನಮಗೂ ಮಕ್ಕಳು ಇದ್ದಾರೆ ಮಕ್ಕಳನ್ನು ನೋಡಿಕೊಂಡು ಮಾವನನ್ನು ನೋಡಿಕೊಳ್ಳೋದು ತುಂಬಾ ಕಷ್ಟ ಆಗುತ್ತೆ ನಾವು ಎಷ್ಟು ದಿನ ಅಂತ ಜಾಯಿಂಟ್ ಫ್ಯಾಮಿಲಿಯಲ್ಲಿ ಜೀವನ ಮಾಡೋದು ನಮಗೂ ಪ್ರೈವಸಿ ಬೇಕು ಅಂತ ಕಿರಿ ಸೊಸೆ ಹೇಳಿದಳು ಅದಕ್ಕೆ ನಮ್ಮ ಗಂಡಂದಿರು ತರುತ್ತಿರೋ ಸಂಬಳದಲ್ಲಿ ಸ್ವಂತ ಮನೆ ಬಿಟ್ಟು ಬಾಡಿಗೆ ಮನೆಗೆ ಹೋಗಿ ಬಾಡಿಗೆ ಕಟ್ಟಿ ಮಕ್ಕಳನ್ನು ಓದಿಸಲು ಸಾಧ್ಯಾನಾ ಅಂತಾ ಹಿರಿ ಸೊಸೆ ಕೇಳಿದಳು ಅಯ್ಯೋ ಅಕ್ಕ ಅದು ಸಾಧ್ಯವಿಲ್ಲ ಅದಕ್ಕೆ ನಾನು ಒಂದು ಐಡಿಯಾ ಹೇಳ್ತೀನಿ ಕೇಳು

ನಮ್ಮ ಗಂಡಂದಿರು ಮಾವ ಆರು ತಿಂಗಳು ಅಂಗಡಿಗೆ ಹೋಗದಿದ್ದರೂ ಅಂಗಡಿನಾ ತುಂಬಾ ಚೆನ್ನಾಗಿ ಮೆಂಟೇನ್ ಮಾಡಿದ್ದಾರೆ ಕೆಲಸ ಕೂಡ ಕಲಿತುಕೊಂಡಿದ್ದಾರೆ ಈಗ ಮಾವ ಅಂಗಡಿಗೆ ಹೋಗದಿದ್ದರೂ ನಮ್ಮ ಗಂಡಂದಿರಿಗೆ ಅಂಗಡಿ ನಡೆಸೋ ಕೆಪಾಸಿಟಿ ಬಂದಿದೆ ಇನ್ನೂ ಅಂಗಡಿಗೆ ಮಾವನ ಅವಶ್ಯಕತೆ ಇಲ್ಲ ಹೀಗಾಗಿ ನಮ್ಮ ಮಾವನನ್ನು ವೃದ್ರಾಶ್ರಮ ಕ್ಕೆ ಸೇರಿಸಿ ಅಂತ ಗಂಡನಿಗೆ ಹೇಳುತ್ತೀನಿ ಅಂತ ಕಿರಿ ಸೊಸೆ ಹೇಳಿದಳು ಏನು ಹೇಳ್ತಾ ಇದೀಯಾ ನೀನು ನನಗೆ ಅರ್ಥ ಆಗುತ್ತಿಲ್ಲ ಸರಿಯಾಗಿ ಅರ್ಥ ಆಗೋಹಾಗೆ ಹೇಳು ಅಂತ ಹಿರಿಸೊಸೆ ಕೇಳಿದಳು ಅಯ್ಯೋ ಅಕ್ಕ ನಾನು ಏನು ಹೇಳ್ತಾ ಇದೀನಿ ಅಂದ್ರೆ ಮೊದಲು ಸುಂದರನ್ ಮಾವನನ್ನು
ವೃದ್ರಾಶ್ರಮ ಕ್ಕೆ ಸೇರಿಸಿ ಬಿಡೋಣ ನಂತರ ಈಗ ಕೆಳಗಿನ ಫ್ಲೋರ್ ಮನೆಯಲ್ಲಿ ನಾವೆಲ್ಲ ಇದ್ದೀವಿ ಎರಡನೇ ಫ್ಲೋರ್ ನನ್ನು ಬಾಡಿಗೆ ಕೊಟ್ಟಿದ್ದೀವಿ ಮೇಲುಗಡೆ ಮನೆಯವರನ್ನು ಖಾಲಿ ಮಾಡಿಸೋಣ ನಾನು ನನ್ನ ಫ್ಯಾಮಿಲಿ ಕೆಳಗಡೆ ಮನೆಯಲ್ಲಿ ಇರುತ್ತೀವಿ ನೀವು ಮತ್ತೆ ಬಾವ ಎರಡನೆ ಫ್ಲೋರ್ ಮನೆಯಲ್ಲಿರಿ ಅಷ್ಟೆ ಅಂತ ಕಿರಿಸೊಸೆ ಹಿರಿ ಸೊಸೆಗೆ ಸುಂದರನ್ ನ ಮನೆ ಬಿಟ್ಟು ಓಡಿಸಿ ವೃದ್ಧಾಶ್ರಮಕ್ಕೆ ಸೇರಿಸುವ ಬಗ್ಗೆ ಮಾತಾಡಿ ಪ್ಲಾನ್ ಮಾಡುತಿದ್ದರು ಹೌದು ನಿನ್ನ ಐಡಿಯಾ ಸೂಪರ್ ಆಗಿದೆ

ಆದರೆ ಮಾವನನ್ನು ವೃದ್ಧಾಶ್ರಮಕ್ಕೆ ಸೇರಿಸೊಕ್ಕೆ ನಮ್ಮ ಗಂಡಂದಿರು ಒಪ್ಪ ಬೇಕಲ್ವಾ ಅಂತಾ ಹಿರಿ ಸೊಸೆಗೆ ಹೇಳಿದಾಗ ಅದೆಲ್ಲಾ ನಮ್ಮ ಕ್ಯೆಯಲ್ಲಿದೆ ಅಕ್ಕ ನಾವೇ ಹೇಗಾದರೂ ಒಪ್ಪಿಸಬೇಕು ನಮ್ಮ ಗಂಡಂದಿರನ್ನು ನಮ್ಮ ಮಾತು ಕೇಳೋ ಹಾಗೆ ಮಾಡೊಧು ನಮಗೆ ಗೊತ್ತಿಲ್ವಾ ಅಂತ ಇಬ್ಬರು ಮಾತಾಡಿಕೊಂಡು ನಗುತಿದ್ದರೂ ತನ್ನ ಸೊಸೆಯರು ಮಾತನಾಡಿದ್ದನ್ನು ಬಾಗಿಲ ಬಳಿ ನಿಂತು ಕೇಳಿಸಿಕೊಳ್ಳುತ್ತಿದ್ದ ಸುಂದರನ್ ಗೆ ತುಂಬಾ ಬೇಸರವಾಯಿತು ನನ್ನ ಹೆಂಡತಿ ಬದುಕಿರುವರೆಗೂ ಏನು ಪ್ರಾಬ್ಲಮ್ ಇರಲಿಲ್ಲ ಆದರೆ ನನ್ನ ಹೆಂಡತಿ ಸತ್ತ ಆರು ತಿಂಗಳಿಗೆ ನನ್ನ ಹಿರಿಸೊಸೆ ಕಿರಿಸೊಸೆ ಸೇರಿ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸೋ ಪ್ಲಾನ್ ಮಾಡುತ್ತಿದ್ದಾರಲ್ಲ ದೇವರಾದರು ಈ ಮಾತನ್ನು ಮೆಚ್ಚುತ್ತಾನಾ ಅಂತ ಸುಂದರನ್ ಕಣ್ಣೀರು ಹಾಕುತ್ತಾ ಅಲ್ಲಿಂದ ಎದ್ದು ತನ್ನ ರೂಮಿನ ಒಳಗೆ ಬಂದರು 2 ವಾರಗಳು ಕಳೆಯಿತು ಅಂದು ಬಾನುವಾರದ ದಿನ ಸುಂದರನ್ ನ ಇಬ್ಬರು ಗಂಡು ಮಕ್ಕಳು ಬೆಳಿಗ್ಗೇನೆ ಅಪ್ಪ ನಿಮ್ಮ ಹತ್ತಿರ ಸ್ವಲ್ಪ ಮಾತಾಡಬೇಕು ಅಂತ ಹೇಳಿ ಸ್ವಲ್ಪ ಬೆವರುತ್ತಲೆ ಸುಂದರನ್ ನ ಮುಂದೆ ಬಂದು ನಿಂತರು ಮಕ್ಕಳು ಬೆವರುತ್ತಿರುವುದನ್ನು ನೋಡಿದಾಗಲೇ ನನ್ನನ್ನು ವೃದ್ದಾ ಶ್ರಮಕ್ಕೆ ಸೇರಿಸೋ ಬಗ್ಗೆ ಸೊಸೆಯಂದಿರು ಮಾತನಾಡುತ್ತಿದ್ದರಲ್ಲ ಅದೇ ವಿಷಯ ಹೇಳೋಕೆ ಇವರಿಬ್ಬರು ಬಂದಿದ್ದಾರೆ ಅಂತ ಸುಂದರನ್ ಗೆ ಅರ್ಥವಾಯಿತು ಅಪ್ಪ ಸ್ವಲ್ಪ ನಿಮ್ಮ ಹತ್ತಿರ ಮಾತನಾಡಬೇಕು ಅಂತ ಹಿರಿಮಗ ಹೇಳಿದ ಆಯ್ತು ಏನು ಹೇಳು ವಿಷಯ ಅಂತ ಸುಂದರನ್ ಕೇಳಿದರು

ಅಪ್ಪ ನನಗೆ ಈಗ ಮದುವೆಯಾಗಿದೆ ಇಬ್ಬರು ಮಕ್ಕಳು ಬೇರೆ ಹುಟ್ಟಿದ್ದಾರೆ ಅದು ನಾನು ಏನು ಹೇಳ್ತಾ ಇದ್ದೀನಿ ಅಂದ್ರೆ ಹಿರಿಮಗ ಹೇಳಲೊ ಬೇಡವಾ ಅಂತ ಹುಗುಳು ನುಂಗುತ್ತಾ ಅರ್ಧ ಮಾತಾಡಿ ಮಾತು ನಿಲ್ಲಿಸಿದ ಸರಿ ಸರಿ ಇರು ಮಗನೇ ನೀನು ಅದೇನೋ ವಿಷಯ ಹೇಳೋಕೆ ತಡವರಿಸುತ್ತಿದಿಯಾ ಈಗ ನಾನು ಒಂದು ವಿಷಯ ಹೇಳ್ತೀನಿ ಕೇಳು ಅಂತಾ ಸುಂದರನ್ ಈ ರೀತಿ ಹೇಳಿದರು, ನನಗೂ ಅರವತ್ತು ವರ್ಷ ವಯಸ್ಸು ದಾಟುತ್ತಿದೆ ನನ್ನ ಹೆಂಡತಿ ಆರು ತಿಂಗಳ ಹಿಂದೆ ಸತ್ತುಹೋದಳು ನಿಮಗೂ ಮದುವೆ ಮಕ್ಕಳು ಆಗಿದೆ ನೀವಿಬ್ಬರೂ ಅಂಗಡಿ ಕೆಲಸನಾ ತುಂಬಾ ಚೆನ್ನಾಗಿ ಕಲಿತು ಕೊಂಡಿದ್ದೀರಾ ಹೀಗಾಗಿ ನಿಮಗೂ ಸಪರೇಟ್ ಆಗಿ ಜೀವನ ಮಾಡಬೇಕು ಅಂತ ಆಸೆ ಬಂದಿರಬಹುದು ನಾನು ನಿಮ್ಮ ಆಸೆಗೆ ಕಲ್ಲು ಹಾಕಲ್ಲ ಆರಾಮಾಗಿ ನೀವು ಬೇರೆ ಬಾಡಿಗೆ ಮನೆ ಮಾಡಿಕೊಂಡು ಈ ಮನೆಯಿಂದ ಆಚೆ ಹೋಗಿಬಿಡಿ ಅಂತ ಸುಂದರನ್ ಹೇಳಿದರು ಅಪ್ಪ ಹೇಳಿದ ಮಾತು ಕೇಳಿ ಶಾಕ್ ಆದ ಗಂಡು ಮಕ್ಕಳು ತಮ್ಮ ಹೆಂಡತಿರ ಮುಖಗಳನ್ನು ನೋಡಿ ಸಪ್ಪಗೆ ಆದರೂ ನಾವು ಅಪ್ಪನನ್ನು ಮನೆಯಿಂದ ಆಚೆ ತಳ್ಳಿ ವೃದ್ರಾಶ್ರಮ ಕ್ಕೆ ಸೇರಿಸೋಣ ಅಂತ ಪ್ಲಾನ್ ಮಾಡಿದ್ರೆ ಅಪ್ಪ ನಮ್ಮನ್ನೆ ಬೇರೆ ಮನೆ ಮಾಡಿಕೊಂಡು ಹೋಗಿ ಅಂತ ಹೇಳಿ ಬಿಟ್ರಲ್ಲ ಛೇ ಅಪ್ಪ ಹೀಗೆ ಹೇಳ್ತಾರೆ ಅಂತ ನಾವು ಎಕ್ಸ್ಪೆಕ್ಟ್ ಮಾಡೆ ಇರಲಿಲ್ಲ ಅಲ್ವಾ ಕಿರಿಸೊಸೆ ಹಿರಿಸೊಸೆ ಏನಂತ ಪ್ಲಾನ್ ಮಾಡಿದ್ರು ಅಂದ್ರೆ

ಕೆಳಗಡೆ ಮನೆಯಲ್ಲಿ ನಾವು ಇರೋಣ ಮೇಲಗಡೆ ಮನೆಯಲ್ಲಿ ನೀವಿರಿ ಮಾವನನ್ನು ಕರೆದುಕೊಂಡು ಹೋಗಿ ವೃದ್ರಾಶ್ರಮ ಕ್ಕೆ ಸೇರಿಸಿ ನಾವು ಆರಾಮಾಗಿ ಇರೋಣ ಅಂತ ಇಬ್ಬರು ಸೊಸೆಯಂದಿರು ಅಂದುಕೊಂಡಿದ್ದರು ಆದರೆ ಮಾವ ನೀವೇ ಹೊರಗೆ ಬೇರೆ ಮನೆಗೆ ಹೋಗಿ ಇರಿ ಎಂದು ಹೇಳಿಬಿಟ್ಟರು ಏನು ಮಾವ ನೀವು ಈ ರೀತಿ ಹೇಳುತ್ತಿದ್ದೀರಾ ನೋಡಿದ ಜನ ಏನು ಅಂದುಕೊಳ್ಳುತ್ತಾರೆ ಅಂತಾ ಕಿರಿಸೊಸೆ ಮಾವನಿಗೆ ಪ್ರಶ್ನೆ ಮಾಡಿದಳು ಜನ ಏನಮ್ಮ ಜನ ಅಂದುಕೊಳ್ಳೋದು ನಾವು ಏನೇ ಮಾಡಿದರು ಅದರ ವಿರುದ್ಧವೇ ಜನಗಳು ಮಾತನಾಡುತ್ತಾರೆ ನಾನು ಅವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಇದು ನಾನು ಕಟ್ಟಿದ ಮನೆ ನಾನು ನನ್ನ ಹೆಂಡತಿ ಒಟ್ಟಿಗೆ 35 ವರ್ಷಗಳ ಕಾಲ ಈ ಮನೆಯಲ್ಲಿ ವಾಸ ಮಾಡಿದ್ದೀವಿ ನನ್ನ ಕಡೆ ಕಾಲದಲ್ಲಿ ಅವಳ ನೆನಪಲ್ಲೆ
ನಾನು ಈ ಮನೆಯಲ್ಲಿ ವಾಸ ಮಾಡಬೇಕು ಅಂದುಕೊಂಡಿದ್ದೀನಿ

ನನಗೆ ಪೆನ್ಷನ್ ಬರುತ್ತೆ ಮೇಲುಗಡೆ ಮನೆ ಬಾಡಿಗೆ ಬರುತ್ತೆ ನನ್ನ ಫ್ರೆಂಡ್ ನ ಮೊಮ್ಮಗ ಓದುವುದಕ್ಕೆ ನಿಮ್ಮ ಮನೆಗೆ ಬರುತ್ತೇನೆ ಅಂತ ಹೇಳುತಿದಾನೆ ಮನೆಯ ಕೆಲಸಕ್ಕೆ ಅಂತ ಒಬ್ಬರು ಆಳನ್ನು ಇಟ್ಟುಕೊಂಡರೆ ಮುಗಿಯಿತು ನೀವಿಬ್ಬರು ಈಗ ಮನೆ ಬಿಟ್ಟು ಹೋಗೋದು ನೋಡಿ ಅಂತ ಹೇಳಿ ಸುಂದರನ್ ವಾಕಿಂಗ್ ಹೋದರು ಈಗ ಗಂಡು ಮಕ್ಕಳು ಮತ್ತು ಸೊಸೆಯಂದಿರಿಗೆ ಮುಂದೆ ಏನು ಮಾಡೋದು ಅಂತ ಗೊತ್ತಾಗದೆ ತಮ್ಮ ಕೈ ಹಿಸುಕುತ್ತಾ ಸಪ್ಪಗೆ ತಮ್ಮ ತಮ್ಮ ಕೆಲಸ ಮಾಡಲು ಹೊರಟರು ಸೋ ಸ್ನೇಹಿತರೆ ಅತಿಯಾಸೆ ಗತಿಕೇಡು ಎಂಬ ಗಾದೆ ಮಾತಿಗೆ ಈ ಕಥೆ ಉತ್ತಮ ಉದಾಹರಣೆ ಫ್ರೆಂಡ್ಸ್ ಈ ರೀತಿ ತಾವು ಸಪರೇಟ್ ಆಗಿ ಇರಬೇಕು ನಮಗೆ ಪ್ರೈವಸಿ ಬೇಕು ಅಂತ ವಯಸ್ಸಾದ ತಂದೆ-ತಾಯಿ ಅತ್ತೆ ಮಾವನನ್ನು ವೃದ್ರಾಶ್ರಮ ಕ್ಕೆ ಸೇರಿಸೋ ಪ್ಲಾನ್ ಮಾಡುವ ಇಂತಹ ಗಂಡು ಮಕ್ಕಳಿಗೆ ಸೊಸೆಯಂದಿರಿಗೆ ಸರಿಯಾಗಿ ಶಿಕ್ಷೆ ಕೊಡಬೇಕೆಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ..