Advertisements

ಎಷ್ಟೇ ದುಡ್ಡು ಕೊಡ್ತೀನಿ ಅಂದರೂ ಸೌಂದರ್ಯ ತುಂಡು ಬಟ್ಟೆ ಹಾಕುತ್ತಿರಲಿಲ್ಲಾ! ಯಾಕೆ ಗೊತ್ತಾ? ಇವರು ನಿಜವಾದ ನಟಿ ಅಂದ್ರೆ ನೋಡಿ..

Kannada News

ಪ್ರೀಯ ಓದುಗರೇ ಸೌಂದರ್ಯ ಅಂದ್ರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ..! ಹೆಸರಿಗೆ ತಕ್ಕಂತೆ ಸೌಂದರ್ಯದ ಗಣಯಾಗಿದ್ದಳು ಬಹು ಭಾಷಾ ನಟಿ ಸೌಂದರ್ಯ. ಇವರು ದುರಂತ ಸಾವು ಸಿನಿಮಾ ರಂಗಕ್ಕೆ ತುಂಬಲಾರದ ನಸ್ಟ. ಅವರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಅಷ್ಟೊಂದು ಕೊಟ್ಟ ಪಾತ್ರದಲ್ಲಿ ತಲ್ಲಿನರಾಗುತ್ತಿದ್ದರು ಸೌಂದರ್ಯ. ಆದ್ರೆ ವಿಧಿಯ ಆಟವೆ ಬೇರೆ ಆಗಿತ್ತು. ಇನ್ನೂ ಬಾಳಿ ಬದುಕಬೇಕಿದ್ದ ನಟಿ ಸೌಂದರ್ಯ ಹೆಲಿಕಪ್ಟರ್ ದುರಂತದಲ್ಲಿ ಸಾವಣ್ಣಪ್ಪಿದರು.

ಇವರು ಯಾವುದೇ ಭಾಷೆಯಲ್ಲಿ ನಟಿಸಿದರು ಸಹ ತುಂಡು ಬಟ್ಟೆ ಹಾಕಲ್ಲ ಅಂತಾ ಶಪಥ ಮಾಡಿ ಕೊನೆವರೆಗೂ ಹಾಗೆ ನಡೆದುಕೊಂಡರು.ಅದು ಯಾಕೆ ಅಂತಾ ಹೇಳತೀವಿ ಈ ಲೇಖನವನ್ನು ಪೂರ್ಣವಾಗಿ ಓದಿ. ನಟಿ ಸೌಂದರ್ಯ ಅವರಿಗೆ ಸುಖ ದಾಂಪತ್ಯ ನಡೆಸಬೇಕು ಎನ್ನುವ ಅಪಾರ ಕನಸಿತ್ತು. ಎಲ್ಲರಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಬಹಳ ಸಂತೋಷವಾಗಿ ಜೀವನ ನಡೆಸಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದರು. ಆದರೆ ವಿಧಿ ತನ್ನ ಕ್ರೌರ್ಯತೆಯನ್ನು ಮೆರೆದು ಅತಿ ಚಿಕ್ಕ ವಯಸ್ಸಿಗೆ ಉದ್ಯೋನ್ಮುಖ ನಟಿಯಾಗ ಹೊರಟಿದ್ದ ಸೌಂದರ್ಯ ಅವರನ್ನು ತನ್ನೆಡೆಗೆ ಕರೆದುಕೊಂಡು ಬಿಟ್ಟಿತು.

ಇವರ ನಿಜವಾದ ಹೆಸರು ಸೌಮ್ಯ ಕೆ. ಎಸ್. ಇವರು ಕರ್ನಾಟಕದ ಮುಲುಬಾಗಿಲಿನವರು. ಇವರು ಶಿಕ್ಷಣದಲ್ಲಿ ಅಪಾರ ಆಸಕ್ತಿ ಇದ್ರು ಅಚಾನಕ್ಕಾಗಿ ಸಿನಿಮಾ ರಂಗಭೂಮಿಗೆ ಕಾಲಿಟ್ಟರು. ದುರದೃಷ್ಟ ಕೇವಲ 32 ವರ್ಷಕ್ಕೆ ತಮ್ಮ ಬದುಕಿನ ಪಯಣವನ್ನು ನಿಲ್ಲಿಸಿದರು. ಆದ್ರೆ ಇಂದಿಗೂ ಅದೆಷ್ಟೋ ಕನ್ನಡಿಗರು ಸ್ಮರಿಸುವಂತಹ ಚಂದದ ನಟಿ, ಸೌಂದರ್ಯದ ಗಣಿ ಎಂದರೆ ಅದು ಸೌಂದರ್ಯ. ಇಂತಹ ಅದ್ಭುತ ನಟಿಗೆ ಕನ್ನಡ ಮಾತ್ರವಲ್ಲದೆ ಪಂಚಭಾಷೆಗಳಿಂದಲೂ ಆಫರ್ ಬಂದರೂ ಯಾವುದೇ ಕಾರಣಕ್ಕೂ ತಮ್ಮ ದೇಹದ ಪ್ರದರ್ಶನವನ್ನು ತೆರೆಯ ಮೇಲೆ ಮಾಡುತ್ತಿರಲಿಲ್ಲ.

ಅದೆಷ್ಟೋ ನಿರ್ದೇಶಕರು, ನಿರ್ಮಾಪಕರು ದೊಡ್ಡ ದೊಡ್ಡ ಆಫರ್ ಕೊಟ್ಟರು. ಅದರಲ್ಲಿ ತುಂಡು ಬಟ್ಟೆ ತೊಡಬೇಕು ಎನ್ನುವ ಕಾರಣಕ್ಕೆ ಅದನ್ನೂ ನಿರಾಕರಿಸಿದ್ದರು. ಇವರ ನಟನೆಯ ನಿನ್ನೆ ಪ್ರೇಮಿಸ್ತಾ, ಅಮ್ಮೋರು, ಆಪ್ತಮಿತ್ರ, ಪವಿತ್ರ ಬಂಧಂ, ದ್ವೀಪ ಸೇರಿದಂತೆ ಕನ್ನಡ, ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ಬಹು ಬೇಡಿಕೆಯನ್ನು ಪಡೆದುಕೊಂಡರು.

ಅಷ್ಟೇ ಅಲ್ಲದೆ ಆಗಿನ ಕಾಲದಲ್ಲಿ ಬಹಳ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದ ಆರತಿ, ಭಾರತಿ, ಕಲ್ಪನಾ ಎಲ್ಲರನ್ನೂ ತಮ್ಮ ಅತ್ಯದ್ಭುತ ಸಿನಿಮಾಗಳ ಮೂಲಕ ಹಿಂದಿಕ್ಕಿ ಅಗ್ರಸ್ಥಾನವನ್ನು ಏರಿದಂತಹ ನಟಿ ಸೌಂದರ್ಯ. ಹೀಗೆ ಎಷ್ಟೇ ಅವಕಾಶಗಳ ಸುರಿಮಳೆ ಇದ್ದರೂ ನಟಿ ಸೌಂದರ್ಯ ಮಾತ್ರ ಎಂದಿಗೂ ಸಿನಿಮಾದಲ್ಲಿ ತಮ್ಮ ಮೈಮಾಟದ ಪ್ರದರ್ಶನ ಮಾಡುತ್ತಿರಲಿಲ್ಲ.

ಯಾವುದೇ ರೀತಿಯ ಸಿನಿಮಾ ಆಗಿರಲಿ, ಯಾವುದೇ ಪಾತ್ರ ಆದ್ರು ಸರಿ ಬಹಳ ಸಿಂಪಲ್ ಆದ ಸೀರೆ ರವಿಕೆ, ಲಂಗ ದಾವಣಿ ಇಂತಹ ಉಡುಪುಗಳನ್ನು ತೊಡುತಿದ್ದರೇ, ಹೊರತು ಯಾವುದೇ ಮಾಡ್ರನ್ ಬಟ್ಟೆಯನ್ನು ತೊಡಲು ಸೌಂದರ್ಯ ಅವರು ಒಪ್ಪುತ್ತಿರಲಿಲ್ಲ. ಹೀಗೆ ಸೌಂದರ್ಯವರು ಯಾಕೆ ಎಕ್ಸ್ಪೋಸಿಂಗ್ ಇಷ್ಟಪಡುತ್ತಿರಲಿಲ್ಲ ಎಂಬ ಪ್ರಶ್ನೆಗೆ ತೆಲುವಿನ ಖ್ಯಾತ ನಟಿ ಆಮಾನಿ ಉತ್ತರಿಸಿದ್ದಾರೆ. ಸೌಂದರ್ಯ ಮತ್ತು ಆಮಾನಿಯವರು ಸಿನಿಮಾ ಕ್ಷೇತ್ರದ ಅತ್ಯದ್ಭುತ ಸ್ನೇಹಿತರು.

ಅಮಾನಿಯವರು ಕನ್ನಡದ ದಾದಾ ವಿಷ್ಣುವರ್ಧನ್ ಅವರೊಡನೆ ಅಪ್ಪಾಜಿ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದವರು. ಈ ನಟಿ ಇಂಟರ್ವ್ಯೂ ಒಂದರಲ್ಲಿ ಸೌಂದರ್ಯ ಅವರ ಕುರಿತು ಮಾತನಾಡಿದ್ದಾರೆ. ಅದೇನಂದ್ರೆ, “ನಾನು ಹೀಗೆ ಒಮ್ಮೆ ಕ್ಯಾಶುಯಲ್ ಆಗಿ ಮಾತನಾಡುವಾಗ ಸೌಂದರ್ಯ ಅವರನ್ನು ನೀನು ಯಾಕೆ ಸಿನಿಮಾದಲ್ಲಿ ಎಕ್ಸ್ಪೋಸಿಂಗ್ ಅನ್ನು ಇಷ್ಟಪಡುವುದಿಲ್ಲ? ಎಂದು ಕೇಳಿದೆ ಅದಕ್ಕೆ ಅವರು ಈಗ ನಾನು ಹಣಕ್ಕಾಗಿ ಆ ರೀತಿ ಉಡುಪನ್ನು ತೊಟ್ಟು ಎಕ್ಸ್ಪೋಸ್ ಮಾಡಿದರೆ, ಮುಂದೊಂದು ದಿನ ನನ್ನ ನಿಜ ಜೀವನದಲ್ಲಿ ನಾನು ಬೇರೆ ಯಾರನ್ನಾದರೂ ಮದುವೆಯಾಗುತ್ತೇನೆ.

ಆಗ ನನ್ನ ಗಂಡ ಯಾಕೆ ಆತರ ಮಾಡಿದ್ದೀಯಾ?ಎಂದು ಕೇಳಿದರೆ ನಾನು ಏನೆಂದು ಉತ್ತರಿಸಲಿ? ಹೀಗಾಗಿ ನಾನು ಯಾವುದೇ ಕಾರಣಕ್ಕೂ ಸಿನಿಮಾ ಕ್ಷೇತ್ರದಲ್ಲಿ ಇರುವವರೆಗೂ ಆ ರೀತಿ ಮಾಡುವುದಿಲ್ಲ” ಎಂದಿದ್ದರಂತೆ.
ಸೌಂದರ್ಯ ಅವರು ತಮ್ಮ ಗಂಡ ಹಾಗೂ ಕುಟುಂಬವನ್ನು ಬಹಳನೇ ಇಷ್ಟ ಪಡುತ್ತಿದ್ದರು. ಅಲ್ಲದೆ ಅ-ಪಘಾತವಾಗುವ ಕೆಲವು ವರ್ಷಗಳ ಹಿಂದಷ್ಟೇ ರಘು ಎಂಬುವವರೊಂದಿಗೆ ವಿವಾಹವಾಗಿದ್ದರು. ಆದ್ರೆ ಅವರೊಂದಿಗೆ ಬಾಳುವ ಮೊದಲೇ ಇಹಲೋಕ ತ್ಯೆಜಿಸಿದರು.