Advertisements

ಸೌಂದರ್ಯದ ಮೋಹಕ್ಕೆ ಬಿದ್ದು ಇವರು ಮಾಡಿದ್ದು ಎಂಥ ಎಡವಟ್ಟು ಗೊತ್ತಾ? ನೋಡಿ!!

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ನೀವೆಲ್ಲ‌ ಸಿನೆಮಾಗಳಲ್ಲಿ ನೋಡೆ ಇರ್ತಿರಾ, ವಿಲನ್ ಹಿರೋಯಿನ್ ಗಾಗಿ ಹೀರೊನನ್ನು ಕೊಂದು ಆಕೆಯನ್ನು ಅಪಹರಣ ಮಾಡಿ, ಮುಂದೆ ಪೋಲಿಸರ ಕೈಗೆ ಸಿಕ್ಕಿ ಬೀಳೊದನ್ನಾ.ಅದ್ಯಾಕೊ‌ ಇತ್ತೀಚಿನ ದಿನಗಳಲ್ಲಿ ಈ ಸಿನೆಮಾ ಸ್ಟೋರಿಗಳು ನೈಜ್ಯ ಜೀವನದಲ್ಲಿ ನಡೆಯುವುದು ತೀರಾ ಸಾಮಾನ್ಯಾವಾಗಿದೆ. ಹೌದು ಸೌಂದರ್ಯ ಮೋಹಕ್ಕಾಗಿ ವಯಸ್ಸಾದ ವ್ಯಕ್ಯಿ‌ ಮಾಡಿದ್ದ ಪ್ಲ್ಯಾನ್ ನಿಜಕ್ಕೂ ಸಾರ್ವಜನಿರನ್ನು ಬೆಚ್ಚಿ ಬೀಳಿಸುತ್ತದೆ.

ಯಾರು ಆ ವ್ಯಕ್ತಿ ಆತ ಮಾಡಿದ್ದಾದ್ರು ಏನು ಅಂತೀರಾ ಹಾಗಿದ್ದರೆ ಈ ಕಥೆನಾ ಕೊನೆವರೆಗೂ ಓದಿ ಹಾಗೂ ನಿಮ್ಮ ಗೆಳೆಯರೊಂದಿಗೆ ‌ಹಂಚಿಕೊಳ್ಳಿ. ನಿಮಗೆಲ್ಲ ಗೊತ್ತಿರಬಹದು ಸರ್ವಾಭವನ ರೆಸ್ಟೋರೆಂಟ್ ಚನ್ನೈ ನಲ್ಲಿ ಪ್ರಸಿದ್ಧಿಯಾಗಿದೆ ಅಂತ . ನೀವು ಯಾವಾಗಲಾದರು ಅಲ್ಲಿಯ ಭೇಟಿ ನೀಡಿದರೆ ಈ ಕುರಿತು ತಿಳಿದುಕೊಳ್ಳಬಹುದು. ಈ ರೆಸ್ಟೋರೆಂಟ್ ‌ಹುಟ್ಟು ಹಾಕಿದವರು ರಾಜಗೋಪಾಲ. ಇವರ ಹೆಸರು ಸುಮಾರು 20 ವರ್ಷಗಳ‌ ಹಿಂದೆ ಹೆಚ್ಚಾಗಿ ಸುದ್ದಿಯಲ್ಲಿತ್ತು.

ಸಿನೆಮಾ ಸ್ಟೈಲ್ ನಲ್ಲಿ ಇಲ್ಲೊಂದು ರಕ್ತಸಿಕ್ತ ಘಟನೆ ನಡೆದು ಹೋಗಿತ್ತು. ಅದರ ದೀ ವಿಲನ್ ರಾಜಗೋಪಾಲ್ ಆಗಿದ್ದರು. ಹೌದು ಅದು ಹೇಗೆ ಅಂತೀರಾ.. ಹೌದು ಶಾಂತ ಕುಮಾರ ಹಾಗೂ ಜೀವನಜ್ಯೋತಿ ಎಂಬುವವರು ದೇವಸ್ಥಾನ ಒಂದರಲ್ಲಿ ಮದುವೆಯಾಗಿದ್ದರು. ಮದುವೆಯಾಗಿದ್ದ ನವ ದಂಪತಿಗೆ ತಮ್ಮ‌ ಜೀವ ಭಯವಿದ್ದು ಅಂಬಾಸಿಡರ್ ಕಾರ ಒಂದರಲ್ಲಿ ತಪ್ಪಿಸಕೊಳ್ಳಲು ಪ್ರಯತ್ನಿಸುತ್ತಾರೆ.

ಆದರೆ ಅವರ ಎದುರಾದ ಇನ್ನೊಂದು ಕಾರಿನಲ್ಲಿದ್ದ ದುಷ್ಕರ್ಮಿಗಳು ಇವರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಶಾಂತ ಕುಮಾರ ಹಾಗೂ ಜೀವನಜ್ಯೋತಿಯವರನ್ನು ಕರೆದುಕೊಂಡು ಮೀನಾಂಬ ವಿಮಾನ ನಿಲ್ದಾಣಕ್ಕೆ ಹೋಗುತ್ತಾರೆ. ಅಲ್ಲಿ ಬೆಂಚ್ ಕಾರಿನಿಂದ ಕೇಳಗಿಳಿದರವರು ಸರ್ವನಾಭನವನ ರೆಸ್ಟೋರೆಂಟ್ ಮಾಲಿಕ ರಾಜಗೋಪಾಲ.

ಜೀವನಜ್ಯೋತಿ ಕುರಿತು ತಿಳಿಯುವುದಾದರೆ ಇವರು ಬಹು ವರ್ಷಗಳ ಹಿಂದೆ ಕುಟುಂಬ ಸಮೇತವಾಗಿ ಚನ್ನೈ ಗೆ ಬಂದು ವಾಸವಿದ್ದರು. ಇವಳ‌ ತಂದೆ ಸರ್ವನ್ನ ಭವನ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ರೆಸ್ಟೋರೆಂಟ್ ನಲ್ಲಿ ದುಡಿಯುವ ಕಾರ್ಮಿಕರಿಗಾಗಿಯೇ ಪ್ರತ್ಯಕ ಕಾಲೊನಿ‌ ಒಂದನ್ನು ನಿರ್ಮಿಸಿದ್ದರು ರಾಜಗೋಪಾಲ. ಇನ್ನು ಅಲ್ಲಿದ್ದ ಮಕ್ಕಳಿಗೆ ಗಣಿತ ಹೇಳಿಕೊಡಲು ಶಾಂತಕುಮಾರ ಆಗಾಗ ಬರುತ್ತಿದ್ದರು. ಇದು ಮಾಲೀಕ ರಾಜಗೋಪಾಲ ಸ್ವಲ್ಪ‌ವು ಇಷ್ಟವಿರಲಿಲ್ಲ.

ಈ ಘಟನೆ‌ ಬಳಿಕ ಜೀವಜ್ಯೋತಿ ತಂದೆ ಕುಟಬ‌ ಸಮೇತವಾಗಿ ಎಮ್‌ಜಿ ಆರ್ ಕಾಲೊನಿಗೆ ಬಂದು ನೆಲೆಸುತ್ತಾರೆ.ಇದಾದ ಬಳಿಕ ‌ರೆಸ್ಟೊರೆಂಟ್ ನಲ್ಲಿ ಕೆಲಸ ಬಿಟ್ಟು ಸ್ವತಃ ಉದ್ಯೋಗ ‌ಮಾಡಲು ಮಲೇಷಿಯಾಗೆ ಹೋಗಿ ಬಿಡ್ತಾರೆ. ತಾಯಿಯೊಂದಿಗೆ ನೆಲೆಸಿದ್ದ ಜೀವಜ್ಯೋತಿ ಶಾಂತ ಕುಮಾರನ ಪ್ರೀತಿಯಲ್ಲಿ ಬೀಳಲು ಹೆಚ್ಚು ಸಮಯವೇನು ಹಿಡಿಯಲಿಲ್ಲ. ಅವರ ತಾಯಿಯ ಒಪ್ಪಿಗೆ ಇಲ್ಲದಿದ್ದರೂ ಇವರು 1999 ಎಪ್ರಿಲ್ ನಲ್ಲಿ ರಿಜಿಸ್ಟರ್ ‌ಮದುವೆಯಾಗುತ್ತಾರೆ.

ಎಸ್ ಎಸ್ ಅಣ್ಣಾಮಲೈ ಎಜೆನ್ಸಿಯಲ್ಲಿ ಜೀವಜ್ಯೋತಿ ಹಾಗೂ ಎಲೈಸಿ ಎಜೆಂಟ್ ಆಗಿ ಶಾಂತಕುಮಾರ ತಮ್ಮ ದಾಂಪತ್ಯ ಬದುಕಿನೊಂದಿಗೆ ವೃತ್ತಿ ಬದುಕನ್ನು ಸಹ ಪ್ರಾರಂಭಿಸುತ್ತಾರೆ. ಕೆಲವು ದಿನಗಳ‌ ನಂತರ. ತಾಯಿಯಿಂದ ಹಣ ಪಡೆದು ತಮ್ಮದೆ ಸ್ವಂತ ಎಜೆನ್ಸಿ ಪ್ರಾರಂಭಿಸುತ್ತಾರೆ. ಆದರೆ ಅದು ಅವರು ಅಂದುಕೊಂಡಷ್ಟು ನೆರವಾಗುವುದಿಲ್ಲ. ಈ ಎಜೆನ್ಸಿಗಾಗಿ ಇನ್ನಷ್ಟು ಹಣ ಬೇಕಾದಾಗ ಜೀವಜ್ಯೋತಿ ತಾಯಿ ವಿಧಿಯಿಲ್ಲದೇ ರಾಜಗೋಪಾಲರ ಬಳಿ ಹಣದ ಸಹಾಯ ಕೇಳುತ್ತಾರೆ. ಆಗ ಹಣ ನೀಡಲು ಮುಂದಾದ ರಾಜಗೋಪಾಲ ಒಂದು ಷರತ್ತನ್ನು ಹಾಕುತ್ತಾರೆ.

ತಾವು ಒಂದು ಮನೆಯನ್ನು ಕಟ್ಟಿದ್ದು ಆ ಮನೆಯಲ್ಲಿಯೇ ಜೀವಜ್ಯೋತಿ ‌ಕುಟುಂಬ ನೆಲೆಸಬೇಕು ಹಾಗೂ ಅವರ ಕೆಲವು ಬ್ಯುಸಿನೆಸ್ ನೋಡಿಕೊಳ್ಳಬೇಕು ಎಂದಾಗ ದಾರಿಯಿಲ್ಲದೆ ಅವರ ಷರತ್ತನ್ನು ಒಪ್ಪಿಕೊಳ್ಳುತ್ತಾರೆ. ಇದಾದ ಬಳಿಕ ರಾಜಗೋಪಾಲ ಜೀವಜ್ಯೋತಿ ಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಆಗಾಗ ಕೆಲಸದ ನಿಮಿತ್ಯ ಕಾಲ್ ಮಾಡಿ ಮಾತನಾಡುತ್ತಾರೆ. ತನ್ನನ್ನು ಮನೆಗೆ ಕರೆದೆಲ್ಲ ಎಂಬುದನ್ನು ಹೇಳಿ ತಾವೆ ಮನೆಗೆ ಬಂದು ಹೋಗುತ್ತಾರೆ.

ಇದಾದ ನಂತರ ಜೀವಜ್ಯೋತಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ರಾಜಗೋಪಾಲ ಅವರೇ ಖುದ್ದಾಗಿ
ವಿಜಯ ನರ್ಸಿಂಗ್ ಹೋಮ್ಗೆ ಸೇರಿಸಿ ಅದರ ಸಂಪೂರ್ಣ ವೆಚ್ಚವನ್ನು ಅವರೆ ಭರಿಸಿದ್ದರು. ಡಾ.ಲಲಿತಾ ಅವರ ಗಂಡ ಕೆಲವು ಟೆಸ್ಟ ಗಳನ್ನು ಮಾಡಲು ಹೇಳಿದ್ದಾರೆ ಎಂದು ತಿಳಿಸುತ್ತಾರೆ. ಅದಾದ ಬಳಿಕ ರಾಜಗೋಪಾಲ ಅವರು ಜೀವಜ್ಯೋತಿ ಗೆ ಪದೆ ಪದೆ ಕಾಲ್ ಮಾಡಿ ನಿನ್ನ‌ ಗಂಡನಿಗೆ ಹೆಚ್ ಐವಿ ಟೆಸ್ಟ ಮಾಡಿಸಬೇಕು ಎಂಬ ಮಾತುಗಳನ್ನಾಡಿದಾಗ ಅವರ ನಿಜ ಉದ್ದೇಶ ಅರಿತ ಜೀವ ಜ್ಯೋತಿ ನೀವು ಈ ರೀತಿಯಾಗಿ ನಡೆದುಕೊಂಡರೆ ನಾನು ಪೋಲಿಸರ‌ ಮೋರೆ ಹೋಗಬೇಕಾಗುತ್ತದೆ ಎಂದು ತಿಳಿಸುತ್ತಾರೆ.

ಆದರೆ ಅದ್ಯಾವುದಕ್ಕೂ ಜಗ್ಗದ ರಾಜಗೋಪಾಲ್ ಅವರು ನೀನು ಏನು ಬೇಕಾದರು ಮಾಡ, ಯಾರ ಬಳಿಯಾದರು ಹೋಗು ಯಾರು ನನಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ನನಗೆ ಈಗಾಗಲೇ ಎರೆಡು ಮದುವೆಯಾಗಿದೆ ನೀನು ನನ್ನ ಮೂರನೇ ಪತ್ನಿಯಾದರೆ ಆಸ್ತಿ ಎಲ್ಲವು ನಿನ್ನ ಹೆಸರಿಗೆ ಮಾಡುತ್ತೇನೆ. ನಿನ್ನನ್ನು ಇಷ್ಟ ಪಡ್ತಿನಿ ಎಂದರು.

ಆದರೆ ಇದನ್ನು ಒಪ್ಪದ ಜೀವಜ್ಯೋತಿ ಊರು ಬಿಟ್ಟು ಹೋಗಲು ಸಿದ್ಧರಾದಾಗ ರಾಜಗೋಪಾಲ್ ಆಕೆಯ ತಾಯಿ ಹಾಗೂ ಪತಿಯನ್ನು ಗೃಹ ಬಂಧನದಲ್ಲಿ ಇಡುತ್ತಾರೆ. ಆದರು ಅವರ ಮಾತಿ‌ ಒಪ್ಪದಿದ್ದಾಗ ರಾಜಗೋಪಾಲ್ ತನ್ನ ಆಳುಗಳಿಂದ ಆಕೆಯ‌ ಗಂಡನನ್ನು ಹೊಡೆಸುತ್ತಾನೆ. ಒಂದು ದಿನ ಇವಳಿಗರ ಡ್ಯಾನಿಯಲ್‌ ಎಂಬ ಅನಾಮಿಕನಿಂದ ಕರೆ ಬರುತ್ತದೆ. ಒಂದು ಕಾಲದಲ್ಲಿ ರಾಜಗೋಪಾಲ್ ನ‌ ಕೈ ಕೆಳಗೆ ‌ಕೆಲಸ‌ ಮಾಡಿದ್ದವನೆ ಈ ಡ್ಯಾನಿಯಲ್. ನಡೆದ‌ ಸಂಗತಿ‌ ನನಗೆ ಗೊತ್ತು ನೀವು ಅಲ್ಲಿಂದ ತಪ್ಪಿಸಿಕೊಳ್ಳು ತಾನು ಸಹಾಯ ಮಾಡುವುದಾಗಿ ಹೇಳುತ್ತಾನೆ.

ಜೀವಜ್ಯೋತಿ‌ ಕುಟುಂಬ ಸಮೇತವಾಗಿ ಸಾಯಿಬಾಬಾ ದೇವಸ್ಥಾನದಿಂದ‌ ಬೇರೆ ಕಡೆ ಹೋಗಬೇಕಾಗುತ್ತದೆ. ಅಷ್ಟರಲ್ಲಿ ರಾಜಗೋಪಾಲ್ ಆಕೆಯನ್ನು ಅಡಗಟ್ಟುತ್ತಾನೆ. ಕಾರಿನಲ್ಲಿ ಕುರಿಸಿಕೊಂಡು ಆಕೆ ಈ ಹಿಂದೆ ರಾಜಗೋಪಾಲ್ ‌ಕುರಿತು‌ ಕೊಟ್ಟಿರುವ ಕಂಪ್ಲೇಟ್ ಮರಳಿ ಪಡೆಯುವಂತೆ ಬೇದರಿಕೆ ಹಾಕುತ್ತಾನೆ. ಅವನ ಹೇಳಿಕೆಯಂತೆ ಅವರು ಕೇಸ್ ಹಿಂಪಡೆಯುತ್ತಾರೆ.

ಆದಾದ ಬಳಿಕ ಅವರನ್ನು ತಿರುನಪಳ್ಳಿ‌ ಎಂಬಲಿ‌‌ ಬಂಧಿಸಿ ಇಡಲಾಗುತ್ತದೆ. ಒಂದಿನ ರಾಜಗೋಪಾಲ್ ಅವರಿಬ್ಬರನ್ನು ದೂರ ಕರೆದುಕೊಂಡು‌ ಹೋಗಿ ಶಾಂತಕುಮಾರನನ್ನು ಕೊಲ್ಲುವಂತೆ ಆಜ್ಞೆ ನೀಡುತ್ತಾನೆ. ಜೀವಜ್ಯೋತಿಯನ್ನು ಬಲವಂತವಾಗಿ ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ. ಅನಂತರ ಪತಿಯ ಕುರಿತು ಪೋಲಿಸ್ಗೆ ದೂರು‌ ನೀಡಿದಾಗ ಚೋಲಾ ಟೈಗರ್ ಎಂಬಲ್ಲಿ ಅನಾಥ ಶವ ಸಿಕ್ಕಿದ್ದು ಅದು ಆಕೆಯ ಪತಿಯದ್ದಾಗಿರುತ್ತದೆ.

ಮುಂದೆ ಈ ಕೇಸ್ ನಲ್ಲಿ ಸಿಕ್ಕಿಕೊಂಡ ರಾಜಗೋಪಾಲ್ 18 ವರ್ಷಗಳ ಕಾಲ ಕೇಸ್ ನಡೆಯುತ್ತದೆ. ಇದರ ಆರೋಪಿ ರಾಜಗೋಪಾಲ್ ‌ರಿಗೆ ಜೀವಾವಧಿ ‌ಶಿಕ್ಚೆಯನ್ನು ಸಹ ನೀಡಲಾಗುತ್ತದೆ. ಅದಕ್ಕೂ ಮುನ್ನವೇ ಹೃದಯಾಘಾತದಿಂದ ಅವರು ನಿಧನ ಹೊಂದುತ್ತಾರೆ.

ಇಷ್ಟು ವಯಸ್ಸಾದರು ಆಗಲೆ‌ ಇಬ್ಬರು ಹೆಂಡತಿಯರಿದ್ದು ತನ್ನ ಮೋಹಕ್ಕಾಗಿ‌ ಒಬ್ಬರ ಜೀವನ ಜೀವವನ್ನೆ ತೆಗೆದುಕೊಂಡಿದ್ದು ನಿಜಕ್ಕೂ ರಾಜಗೋಪಾಲ್ ಅವರ ಕ್ರೊರತನವನ್ನು ಹಾಗೂ ಅವರ ನೀಚ ಕೃತ್ಯವನ್ನು ತೋರಿಸುತ್ತದೆ.