Advertisements

ಆಸ್ಪತ್ರೆ ಉದ್ಯಮಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಈ ಖ್ಯಾತ ನಟ. ಇವರು ಪ್ರಾರಂಭಿಸುವ ಆಸ್ಪತ್ರೆ ಎಂತಹದ್ದು ಗೊತ್ತಾ..!

Cinema

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಸುಪ್ರಸಿದ್ದ ನಟ ನಟನೆಯ ಜೊತೆಗೆ ಇದೀಗ ಉದ್ಯಮಕ್ಕೂ ಕಾಲಿಟ್ಟಿದ್ದಾರೆ. ನಟ, ನಟಿಯರು ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಬೇರೆ ಯಾವುದಾದರೂ ಉದ್ಯಮಗಳಲ್ಲಿ ತೊಡಗಿಸುಕೊಳ್ಳುವುದು, ಪ್ರತಿಷ್ಟಿತ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ಕಾಮನ್ ಆಗಿ ನಾವು ನೋಡಿರುತ್ತೇವೆ. ತಮ್ಮ ಸಿನಿ ಜೀವನದ ನಂತರದ ಈ ರೀತಿಯ ಉದ್ಯಮಗಳಿಗೆ ಕೈ ಹಾಕಿರುತ್ತಾರೆ, ಅದರಂತೆಯೇ ಟಾಲಿವುಡ್ ಖ್ಯಾತ ನಟ ಜಗಪತಿ ಬಾಬು ಇದೀಗ ತಮ್ಮ ಆಪ್ತರ ಜೊತೆಗೂಡಿ ಹೊಸ ಉದ್ಯಮಕ್ಕೆ ಹೆಜ್ಜೆ ಇಟ್ಟಿದ್ದಾರೆ. ಜಗಪತಿ ಬಾಬು ಎಷ್ಟರ ಮಟ್ಟಿಗೆ ಫೇಮಸ್ ಎಂದರೆ ಅವರಿಲ್ಲದೆ ಚಿತ್ರಗಳೇ ಇಲ್ಲ ಎಂಬಂತೆ ಆಗಿದೆ, ಹೌದು ಇತ್ತೀಚೆಗೆ ಜಗಪತಿ ಬಾಬು ಅವರು ಕೊಂಚ ಉದ್ಯಮದ ಕ್ಷೇತ್ರದ ಕಡೆಗೂ ಗಮನಹರಿಸಿದ್ದಾರೆ.

Advertisements
Advertisements

ಇವರು ಕಾಲಿಟ್ಟಿರುವುದು ಕೂಡ ಆಯುರ್ವೇದ ಔಷಧಿ ಕ್ಷೇತ್ರದತ್ತ. ಈಗಾಗಲೇ ಜಗಪತಿ ಬಾಬು ಅವರು ಹೈದರಾಬಾದ್ ಜುಬ್ಲಿಹಿಲ್ಸ್ ನಲ್ಲಿ ಆಸ್ಪತ್ರೆಯೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರ ಕಾಮಗಾರಿ ಕೆಲಸ ಕಾರ್ಯಗಳು ಕೂಡ ಸಂಪೂರ್ಣವಾಗಿ ಮುಗಿಯುತ್ತಾ ಬಂದಿದೆ. ಕೆಲವೇ ತಿಂಗಳಲ್ಲಿ ಅದರ ಉದ್ಘಾಟನೆ ಮಾಡುವ ಆಲೋಚನೆಯಲ್ಲಿದ್ದಾರೆ ಜಗಪತಿ ಬಾಬು. ಇತ್ತೀಚೆಗೆ ಅವರು ಆನಂದಯ್ಯ ಆಯುರ್ವೇದ ಔಷಧಿಗೆ ಬೆಂಬಲ ಸೂಚಿಸಿದ್ದರು. ಅಷ್ಟೇ ಅಲ್ಲದೆ ಆಯುರ್ವೇದ ಔಷಧಿ ಬಳಕೆ ಮಾಡುವುದಕ್ಕೆ ಕರೆ ಸಹ ನೀಡಿದ್ದರು. ಜಗಪತಿ ಬಾಬು ಅವರ ಈ ಕರೆ ಟಾಲಿವುಡ್ ನಲ್ಲಿ ಕೆಲವರಿಗೆ ಚ’ರ್ಚೆಯ ವಿಷಯವೂ ಆಗಿತ್ತು.

ಬಾಬು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ತೆರೆಕಂಡ ತರುಣ್ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಖ’ಡಕ್ ವಿ’ಲನ್ ಆಗಿ ಕಾಣಿಸಿಕೊಂಡಿದ್ದರು. ಅದರಂತೆ ಅವರಿಗೆ ಕನ್ನಡ ಪ್ರೇಕ್ಷಕರು ಕೂಡ ಅವರ ನಟನೆಗೆ ಫಿದಾ ಆಗಿದ್ದಾರೆ. ಸದ್ಯದ ಮಟ್ಟಿಗೆ ಜಗಪತಿ ಬಾಬು ಅವರು ರಾಧೇಶ್ಯಾಮ್, ಅನ್ನಾತಿ, ಗನಿ, ಮಹಾ ಸಮುದ್ರಂ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜಗಪತಿ ಬಾಬು ಅವರ ನಟನೆಯ ಬಗ್ಗೆ ನೀವೇನಂತಿರಾ ಸ್ನೇಹಿತರೆ.. ಕಮೆಂಟ್ ಮಾಡಿ ತಿಳಿಸಿ.