Advertisements

ಅಡುಗೆ ಮಾಡುತ್ತಿರುವಾಗಲೇ ಜೀವ ಕಳೆದುಕೊಂಡ ಹೆಣ್ಣು ಮಗಳು.. ಅರ್ಧ ಗಂಟೆಯ ನಂತರ ತಿಳಿಯಿತು ನಿಜವಾದ ಕಾರಣ.. ಬೆಚ್ಚಿಬಿದ್ದ ಗಂಡ..

Kannada News

ಮನುಷ್ಯನಿಗೆ ಅಂತ್ಯ ಯಾವಾಗ ಬರುವುದೋ ಹೇಳಲಾಗದು.. ಬೆಳಿಗ್ಗೆ ಇದ್ದವರು ಈಗಿಲ್ಲ.. ಈಗಿದ್ದವರು ನಾಳೆ ಇರುವರೋ ಇಲ್ಲವೋ ನಂಬಿಕೆ ಇಲ್ಲ.. ಒಟ್ಟಿನಲ್ಲಿ‌ ಕ್ಷಣಿಕವಾದ ಈ ಬದುಕಿನಲ್ಲಿ ಮನುಷ್ಯನ ಆಸೆಗಳು ಸಾವಿರಾರು ಅಷ್ಟೇ.. ಆದರೆ ಇಲ್ಲೊಬ್ಬ ಹೆಣ್ಣು ಮಗಳು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ನಡೆದ ಘಟನೆಯಿಂದ ಇದ್ದಕಿದ್ದ ಹಾಗೆ ಜೀವ ಕಳೆದುಕೊಂಡಿದ್ದು ಅರ್ಧ ಗಂಟೆಯ ನಂತರ ಇದಕ್ಕೆ ಕಾರಣ ತಿಳಿದು ಬಂದಿದೆ.. ಹೌದು ಶಿವಮೊಗ್ಗದಲ್ಲೊಂದು ಮನಕಲಕುವ ಘಟನೆ ನಡೆದಿದ್ದು ಇಪ್ಪತ್ತ ನಾಲ್ಕು ವರ್ಷಕ್ಕೆ ಹೆಣ್ಣು ಮಗಳೊಬ್ಬಳು ಕೊನೆಯುಸಿರೆಳೆದಿದ್ದು ಮೂರು ವರ್ಷದ ಮಗುವೀಗ ಅನಾಥವಾಗಿದೆ..

Advertisements
Advertisements

ಹೌದು ಈ ಹೆಣ್ಣು ಮಗಳ ಹೆಸರು ಸೌಮ್ಯ ವಯಸ್ಸು ಕೇವಲ ಇಪ್ಪತ್ತನಾಲ್ಕು.. ಶಿವಮೊಗ್ಗದ ಹೊಸನಗರದ ಮೇಲಿಗೆಬೆಸಿಗೆ ಗ್ರಾಮದ ನಿವಾಸಿ.. ಸೌಮ್ಯ ನಾಲ್ಕು ವರ್ಷದ ಹಿಂದಷ್ಟೇ ನಾಗರಾಜ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು.. ಈ ದಂಪತಿಗೆ ಮೂರು ವರ್ಷದ ಹಿಂದೆ ಗಂಡು ಮಗು ಜನಿಸಿದ್ದು ಸಂತೋಷವಾಗಿ ಸಂಸಾರ ಮಾಡಿಕೊಂಡಿದ್ದರು.. ನಾಗರಾಜ್ ಹಾಗೂ ಸೌಮ್ಯ ಒಬ್ಬರನೊಬ್ಬರು ಬಹಳ ಪ್ರೀತಿಸುತ್ತಿದ್ದು ನಾಲ್ಕು ವರ್ಷದಿಂದ ಸುಂದರ ಸಂಸಾರವನ್ನು ಕಟ್ಟಿಕೊಂಡಿದ್ದರು..

ಆದರೆ ವಿಧಿಯಾಟ ಬೇರೆಯೆ ಇತ್ತು.‌ ಹೌದು ಅತಿಯಾಗಿ ಪ್ರೀತಿಸುವ ಗಂಡ ಹೆಂಡತಿ ಜೊತೆಯಾಗಿ ಬಾಳುವ ಪುಣ್ಯ ಪಡೆದಿರಲಿಲ್ಲ.. ಎಂದಿನಂತೆ ಇಂದು ಸಹ ಸೌಮ್ಯ ಅಡುಗೆ ಮನೆಗೆ ಅಡುಗೆ ಮಾಡಲು ತೆರಳಿದರು.. ಆದರೆ ಅರ್ಧ ಗಂಟೆ ನಂತರ ಕಾಲಿನಲ್ಲಿ ಊತ ಕಾಣಿಸಿಕೊಂಡಿದೆ.. ಕಾಲಿನಲ್ಲಿ ಬಹಳಷ್ಟು ನೋವು ಉಂಟಾಗಿ ನೋವು ತಡೆಯಲಾಗದೇ ಅನುಮಾನ ಬಂದು ಆಸ್ಪತ್ರೆಗೆ ತೆರಳಿದ್ದಾರೆ.. ಸೌಮ್ಯ ಅವರನ್ನು ಹೊಸನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತಿತ್ತು.. ಆದರೆ ಅದಾಗಲೇ ಕಾಲ ಮಿಂಚಿ ಹೋಗಿತ್ತು.. ಮೆಗ್ಗಾನ್ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆಯೇ ಸೌಮ್ಯ ಕೊನೆಯುಸಿರೆಳೆದು ಬಿಟ್ಟರು..

ಆದರೆ ಆನಂತರವೇ ಸೌಮ್ಯಾಳ ಅಗಲಿಕೆಗೆ ನಿಜವಾದ ಕಾರಣ ತಿಳಿದು ಬಂದಿದೆ.. ಹೌದು ಸೌಮ್ಯ ಅಡುಗೆ ಮಾಡಲು ಅಡುಗೆ ಮನೆಗೆ ತೆರಳಿದಾಗ ಆಕೆಗೆ ವಿಷಕಾರಿಯಾದ ಹಾವೊಂದು ಕಚ್ಚಿದ್ದು ಅದು ಸೌಮ್ಯಾಳ ಗಮನಕ್ಕೆ ಬಾರದಾಗಿದೆ.. ಸ್ವಲ್ಪ ಸಮಯದ ನಂತರ ಕಾಲಿನಲ್ಲಿ ಊತ ಕಾಣಿಸಿಕೊಂಡ ನಂತರವೇ ಆಸ್ಪತ್ರೆಗೆ ತೆರಳಿದ್ದು ಅದಾಗಲೇ ಕಾಲ ಮೀರಿ ಹೊಗಿದ್ದು ಸೌಮ್ಯ ಇಪ್ಪತ್ತ ನಾಲ್ಕು ವರ್ಷಕ್ಕೆ ಕೊನೆಯುಸಿರೆಳೆದು ಬಿಟ್ಟಳು.. ಇತ್ತ ಮೂರು ವರ್ಷದ ಕಂದಮ್ಮ ತಾಯಿ ಇಲ್ಲದೇ ಅನಾಥವಾಗಿದ್ದು ಸುಂದರವಾದ ಸಂಸರಾದಲ್ಲೀಗ ಸೂತಕ ಅವಾರಿಸಿದೆ.. ಪ್ರೀತಿಸಿ ಮದುವೆಯಾಗಿ ಸುಂದರ ಸಂಸಾರ ಕಟ್ಟಿಕೊಂಡಿದ್ದ ಸೌಮ್ಯ ಕೊನೆಯುಸಿರೆಳೆದಿದ್ದು ಪತಿ ನಾಗರಾಜ್ ಪತ್ನಿಯನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ..

ಇದೀಗ ಬೇಸಿಗೆ ಕಾವಿಗೆ ಹಾವುಗಳು ತಮ್ಮ ವಾಸಸ್ಥಳಗಳನ್ನು ಬಿಟ್ಟು ತಂಪಾದ ಜಾಗಗಳ ಬಳಿ ಬಂದು ಸೇರುತ್ತವೆ.. ಅದರಲ್ಲೂ ಮನೆಯ ಸುತ್ತ ಮುತ್ತ ತಣ್ಣನೆಯ ವಾತಾವರಣದಲ್ಲಿ ಬಂದು ಸೇರುತ್ತವೆ.. ದಯವಿಟ್ಟು ಎಚ್ಚರಿಕೆಯಿಂದಿರಿ.. ಸಣ್ಣ ಮಕ್ಕಳಿಗೆ ಶೂ ಚಪ್ಪಲಿಗಳನ್ನು ಹಾಕುವಾಗ ಒಮ್ಮೆ ನಂಸರಿಯಾಗಿ ನೋಡಿ ಹಾಕಿ.. ಸಣ್ಣ ಅಜಾಗರೂಕತೆ ದೊಡ್ಡ ನೋವುಗಳಿಗೆ ಕಾರಣವಾಗದಿರಲಿ..