Advertisements

ಅಪ್ಪು ಜೊತೆ ಕಳೆದ ಆ 40 ದಿನಗಳ ಬಗ್ಗೆ ಕೊನೆಗೂ ಮೌನಮುರಿದ ಶ್ರೀನಗರ ಕಿಟ್ಟಿ ಹೇಳಿದ್ದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದರೆ ಮೊದಲಿಗೆ ತಲೆಗೆ ಬರುವುದು ಅವರ ಸರಳತೆ ವಿನಯತೆ ಅಪ್ಪು ಅವರು ಅಷ್ಟು ದೊಡ್ಡವರಾಗಿದ್ದರೂ ಸಹ ಎಂತಹ ಸರಳ ವ್ಯಕ್ತಿತ್ವ ಇವರದು ಎಂದೆನಿಸುತ್ತದೆ. ಹೌದು ಕೇವಲ ಸಿನಿಮಾರಂಗದ ಕಲಾವಿದರು ಹಾಗೂ ಅವರ ಜೊತೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ ಅವರಿಗೆ ಮಾತ್ರವಲ್ಲದೆ ಪುನೀತ್ ರಾಜ್ ಕುಮಾರ್ ಅವರು ಏನೆಂದು ಇಡೀ ಕರುನಾಡಿಗೆ ಗೊತ್ತಿತ್ತು. ಸ್ಯಾಂಡಲ್ ವುಡ್ ನ ಕನ್ನಡದ ಖ್ಯಾತ ನಟ ಶ್ರೀನಗರ ಕಿಟ್ಟಿ ಅವರ ಗೌಳಿ ಚಿತ್ರದ ಸಂದರ್ಶನದ ವೇಳೆ ಪುನೀತ್ ರಾಜ್ ಕುಮಾರ್ ಬಗ್ಗೆ ಮಾತ ನಾಡಿದ್ದಾರೆ. ಪುನೀತ್ ಅವರ ಜೊತೆ ನಾನು ಹುಡುಗರು ಸಿನಿಮಾದಲ್ಲಿ ನಲವತ್ತು ದಿನ ಜೊತೆಗಿದ್ದವರು. ನಿಜಕ್ಕೂ ಪುನೀತ್ ರಾಜಕುಮಾರ್ ಅವರ ಜೊತೆ ಸಿನಿಮಾ ಮಾಡಿದ್ದು ತುಂಬಾ ಖುಷಿ ಇತ್ತು ಅದು ನನ್ನ ಅದೃಷ್ಟ ಎನ್ನಬಹುದು ಹಾಗೆ ನಲವತ್ತು ದಿನ ಅವರ ಜೊತೆಗಿದ್ದ ವೇಳೆ ನನಗೆ ಅನಿಸಿದ್ದು ಏನೆಂದರೆ ಅಬ್ಬಾ ಇಷ್ಟು ದೊಡ್ಡವರು ಹೀಗೂ ಇರುತ್ತಾರ ಎಂದೆನಿಸಿತು.

Advertisements
Advertisements

ಅಷ್ಟು ಸರಳತೆಯಿಂದ ಎಲ್ಲರ ಒಟ್ಟಿಗೆ ನಗುತ್ತಲೆ ಪುನೀತ್ ರಾಜಕುಮಾರ್ ಅವರು ಇರುತ್ತಿದ್ದರು. ಅಪ್ಪು ನಮ್ಮೆಲ್ಲರ ಜೊತೆ ಇಲ್ಲವೆನ್ನುವುದು ತುಂಬಾ ದುಃಖಕರವಾದ ವಿಷಯ ನಮ್ಮ ಜೊತೆ ಅವರು ಇರಬೇಕಿತ್ತು. ನಿಜಕ್ಕೂ ಪುನೀತ್ ಅವರನ್ನು ನಗುವಿನ ಶ್ರೀಮಂತ ಎನ್ನುತ್ತಾರೆ. ಅದಲ್ಲ ಪುನೀತ್ ರಾಜಕುಮಾರ್ ಅವರು ನಗುವಿನ ಮಗು ಎಂದು ಹೇಳಬಹುದು. ಅದನ್ನು ಖಂಡಿತ ಕೂಡ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಪುನೀತ್ ಅವರ ನೆನಪು ಹಾಗೆ ಅವರಲ್ಲಿದ್ದ ಸರಳತೆ ನಿಜಕ್ಕೂ ಕೂಡ ಗ್ರೇಟ್ ಅವರು ಈಗಲೂ ನಮ್ಮ ಜೊತೆಯಲ್ಲಿ ಇದ್ದಾರೆ. ಅಪ್ಪು ಅವರನ್ನು ಇಲ್ಲವೆನ್ನುವುದು ಒಪ್ಪಿಕೊಳ್ಳುವುದಕ್ಕೆ ತುಂಬಾ ಕಷ್ಟ ವಾಗುತ್ತದೆ ಎಂದು ಶ್ರೀನಗರ ಕಿಟ್ಟಿ ಯವರು ಮಾತನಾಡಿದರು. ಶ್ರೀನಗರ ಕಿಟ್ಟಿ ಅವರು ಇದೀಗ ಗೌಳಿ ಎಂಬ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾ ಮುಖಾಂತರ ಮತ್ತೆ ಯಶಸ್ಸು ಸಿಗಲಿ ಹಾಗೂ ಮತ್ತೆ ಕಂಬ್ಯಾಕ್ ಮಾಡಲಿ ಎಂದು ನಾವೆಲ್ಲರೂ ಕೂಡ ಹಾರೈಸೋಣ. ಇನ್ನೂ ಪುನೀತ್ ರಾಜಕುಮಾರ್ ಅವರ ಬಗ್ಗೆ ದಿನದಿಂದ ದಿನಕ್ಕೆ ಹೊಸ ವಿಷಯಗಳು ಬರುತ್ತಲೆ ಇವೆ ಕೆಲವೊಂದು ನಟರು ಅವರ ಜೊತೆಗಿದ್ದ ಒಡನಾಟದಿಂದ ಅಪ್ಪು ಅವರನ್ನು ನೆನೆಸಿಕೊಂಡು ನಡೆದಿರುವಂತಹ ವಿಷಯಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಹಾಗೂ ಪುನೀತ್ ರಾಜಕುಮಾರ್ ಅವರು ಯಾರಿಗೂ ಕೂಡ ನೋವಾಗದಂತೆ ಅವರು ನಡೆದುಕೊಂಡಿಲ್ಲ ಪ್ರತಿಯೊಬ್ಬರನ್ನು ಪ್ರೀತಿಸುತ್ತಾ ಜೀವನದ ಮಾದರಿಯನ್ನು ತಿಳಿಸಿ ಕೊಟ್ಟಂತಹ ಏಕೈಕ ವ್ಯಕ್ತಿ ನಾವು ಪ್ರೀತಿಸುವಂತಹ ವ್ಯಕ್ತಿ ಅಪ್ಪು.. ಅವರು ಎಂದೆಂದಿಗೂ ಕೂಡ ಶಾಶ್ವತವಾಗಿರುತ್ತಾರೆ..