ನಮಸ್ಕಾರ ವೀಕ್ಷಕರೇ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ಅಶ್ವಿನಿ ಮೇಡಮ್ ಅವರು ಮೊನ್ನೆ ಅವರ ಹುಟ್ಟುಹಬ್ಬ ವಿದ್ದ ಕಾರಣ ಸಮಾಧಿ ಬಳಿ ಬಂದು ಪೂಜೆ ಸಲ್ಲಿಸಿ ಪತಿಗೆ ಇಷ್ಟವಾದ ಎಲ್ಲ ತರಹದ ತಿಂಡಿಗಳನ್ನು ತಂದು ಸಮಾಧಿ ಮುಂದೆ ಇರಿಸಿ ಪ್ರೀತಿಯ ಪತಿ ಪುನೀತ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ ಜೇಮ್ಸ್ ಚಿತ್ರ ರಿಲೀಸ್ ಆಗಿದ್ದು ದೊಡ್ಮನೆ ಕುಟುಂಬದವರೆಲ್ಲರೂ ಸೇರಿ ಜೇಮ್ಸ್ ಚಿತ್ರ ನೋಡಿ ಅಪ್ಪು ನೆನೆದು ಭಾವುಕರಾಗಿದ್ದಾರೆ ಇನ್ನು ಈ ಸಂದರ್ಭದಲ್ಲಿ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಸರ್ ತುಂಬಾನೆ ಗರಂ ಆದ
ಘಟನೆಯೊಂದು ನಡೆದಿದೆ ಹಾಗಾದರೆ ಏನಿದು ಘಟನೆ ಸಂಪೂರ್ಣ ಮಾಹಿತಿ ಓದಿ ನೋಡಿ ಸ್ಟಾರ್ ನಟರನ್ನು ಕಂಡಾಗ ಅವರ ಜೊತೆ ಫೋಟೋ ತೆಗೆದುಕೊಳ್ಳಲು ಅಭಿಮಾನಿಗಳು ಆಸೆಪಡುತ್ತಾರೆ..

ಆದರೆ ಕೆಲವೊಮ್ಮೆ ಅಭಿಮಾನಿಗಳ ವರ್ತನೆ ಮಿತಿ ಮೀರುತ್ತದೆ ಅಂತಹ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಸಿಟ್ ಆಗುವುದು ಸಹಜ ಸಾಮಾನ್ಯವಾಗಿ ಶಿವರಾಜ್ ಕುಮಾರ್ ಅವರು ಕೋಪಗೊಳ್ಳುವುದಿಲ್ಲ ಆದರೆ ಅಭಿಮಾನಿಗಳು ಅತಿರೇಕವಾಗಿ ವರ್ತಿಸಿದಾಗ ಅವರು ಸಿಟ್ಟ್ ಆಗುವುದು ಉಂಟು ಈಗ ಮೈಸೂರಿನಲ್ಲಿ ಅದೆ ರೀತಿ ಯಾಗಿದೆ.. ಪುನೀತ್ ರಾಜಕುಮಾರ್ ಹುಟ್ಟು ಹಬ್ಬ ಮತ್ತು ಜೇಮ್ಸ್ ಸಿನಿಮಾ ಬಿಡುಗಡೆಯ ಈ ಸಂದರ್ಭದಲ್ಲಿ ಶಿವಣ್ಣ ಮೈಸೂರಿಗೆ ತೆರಳಿದ್ದಾರೆ ಅಲ್ಲಿನ ಶಕ್ತಿ ಧಾಮಕ್ಕೆ ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಅವರು ಭೇಟಿ ನೀಡಿದ್ದಾರೆ ಈ ವೇಳೆ ಕೆಲವು ಅಭಿಮಾನಿಗಳು ಫೋಟೋಗಾಗಿ ಮುಗಿಬಿದ್ದಿದ್ದಾರೆ

ಕೆಲವರ ವರ್ತನೆ ಕಂಡು ಶಿವರಾಜ್ ಕುಮಾರ್ ಅವರಿಗೆ ಕೋಪ ಬಂದಿದೆ ಬಾಯಿ ಇದೆ ಅಂತ ಏನೇನೋ ಮಾತಾಡೋದಲ್ಲ ಯಾಕೆ ಹೀಗೆಲ್ಲ ಮಾಡ್ತೀರಾ ಹೇಳಿ ಅದೇ ನನಗೆ ಇಷ್ಟ ಆಗಲ್ಲ ಹೇ ಬಿಡಣ್ಣ ಅಂತ ಏನದು ಅವಾಜ್ ಯಾರಿಗೆ ಆಟಿಟ್ಯೂಡ್ ತೋರಿಸುತ್ತಾ ಇದಿಯಾ ನೀನು ಎಂದು ಶಿವರಾಜ್ ಕುಮಾರ್ ಅವರು ಕೋಪಗೊಂಡಿದ್ದಾರೆ ನೋವಿನಲ್ಲಿರುವ ಶಿವಣ್ಣನವರಿಗೆ ಫೋಟೋಗೋಸ್ಕರ ತೊಂದರೆ ಕೊಡುವುದು ಸರಿನಾ ತಪ್ಪಾ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ