ನಮಸ್ತೆ ಸ್ನೇಹಿತರೆ, ಸ್ಟಾರ್ ನಾಯಕಿ,ನಾಯಕರ ಬಾಲ್ಯದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಹರಿದಾಡುತ್ತಿವೆ. ಕೊ’ರೊನಾದ ಲಾ’ಕ್ಡೌನ್ ಸಮಯದಲ್ಲಿ, ಸೆಲೆಬ್ರಿಟಿಗಳು ತಮ್ಮ ವೈಯಕ್ತಿಕ ವಿವರಗಳನ್ನು ಲೈವ್ ಚಾಟ್ಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ರಾಕಿಂಗ್ ಸ್ಟಾರ್ ಯಶ್, ರಶ್ಮಿಕಾ ಮಂದಣ್ಣ, ಕಾಜಲ್, ಅಲ್ಲು ಅರ್ಜುನ್, ರೆಬೆಲ್ ಸ್ಟಾರ್ ಪ್ರಭಾಸ್ ನಂತಹ ಸ್ಟಾರ್ ಹೀರೋಗಳ ಬಾಲ್ಯದ ಫೋಟೋಗಳನ್ನು ಜನರು ನೋಡಿ ಖುಷಿ ಪಡುತ್ತಿದ್ದಾರೆ. ಅಷ್ಟಕ್ಕೂ ಈ ಮೇಲಿನ ಫೋಟೋಗಳಲ್ಲಿ ಕಾಣುವ ಮಗು ಈಗ ಟಾಲಿವುಡ್ನಲ್ಲಿ ಸ್ಟಾರ್ ಹೀರೋ ಎಂದರೆ ನೀವು ನಂಬಲೇಬೇಕು. ಈ ಸ್ಟಾರ್ ಹೀರೋ ಯಾರು ಅಂತ ನೋಡೋಣ ಬನ್ನಿ..

ಅವರು ಯಾವುದೇ ಹಿನ್ನೆಲೆ ಇಲ್ಲದೆ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದವರು ಮತ್ತು ಆಕಸ್ಮಿಕವಾಗಿ ನಾಯಕನಾಗಿ ಕ್ಲಿಕ್ ಆದವರು. ಅವರ ನಟನೆಯೊಂದಿಗೆ ಹಾಗೂ ತಮ್ಮ ಹಾಸ್ಯ ಪ್ರಜ್ಞೆಯಿಂದ ಸಿನಿ ಪ್ರೇಕ್ಷಕರನ್ನು ಎಂಟರ್ ಟೈನ್ ಮಾಡುತ್ತಿದ್ದಾರೆ. ವಿಶೇಷವಾಗಿ ಈ ನಾಯಕನಿಗೆ, ಹುಡುಗಿಯರ ಫಾಲೋಯಿಂಗ್ ತುಂಬಾ ಹೆಚ್ಚಿದೆ. ಈ ಫೋಟೋದಲ್ಲಿ ಕಾಣಿಸುವ ಚಿಕ್ಕ ಹುಡುಗನು ಬೇರೆ ಯಾರೂ ಅಲ್ಲ, ಅವರೇ ನ್ಯಾಚುರಲ್ ಸ್ಟಾರ್ ನಾನಿ.

ನ್ಯಾಚುರಲ್ ಸ್ಟಾರ್ ನಾನಿ ಸದ್ಯ ತೆಲುಗಿನ ಟಾಪ್ ಹೀರೋಗಳಲ್ಲಿ ಒಬ್ಬರು. ನಾನಿ ತನ್ನ ವೃತ್ತಿಜೀವನವನ್ನು ಅಷ್ಟಾಚಮ್ಮ ಚಿತ್ರದ ಮೂಲಕ ನಾಯಕನಾಗಿ ಆರಂಭಿಸಿದರು. ನಂತರ ಅಲಾ ಮೊದಲಯಿಂದಿ, ಪಿಲ್ಲ ಜಮೀನ್ದಾರ್, ಈಗ, ಎವಡೇ ಸುಬ್ರಮಣ್ಯಂ, ನೇನು ಲೋಕಲ್, ಜಂಟಲ್ ಮ್ಯಾನ್, ಮಜ್ನು ಮುಂತಾದ ಹಿ’ಟ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಪ್ರಸ್ತುತ ಟ’ಕ್ ಜಗದೀಶ್, ಶ್ಯಾಮ್ ಸಿಂಗ ರಾಯ್, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಟಕ್ ಜಗದೀಶ್ ಬಿಡುಗಡೆಗೆ ಸಿದ್ಧವಾಗಿದ್ದರೆ, ಶ್ಯಾಮ್ ಸಿಂಗ ರಾಯ್, ಚಿತ್ರೀಕರಣ ಹಂತದಲ್ಲಿವೆ. ನ್ಯಾಚುರಲ್ ಸ್ಟಾರ್ ನಾನಿ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ