Advertisements

ಓದಿದ್ದು PUC ವಯಸ್ಸು 28 ವರ್ಷ ಆದ್ರೆ ಮಾಡಿದ್ದು 60 ಕೋಟಿ ಬಿಸಿನೆಸ್.. ಅದೇಗೆ ಗೊತ್ತೇ!

Kannada News

ಈಕೆ ಹೆಸರು ದೀಪಾಲಿ ಹುಟ್ಟಿದ್ದು ಗ್ವಾಲಿಯರ್ ನಲ್ಲಿ ಈಕೆಯನ್ನು ತುಂಬಾ ಮುದ್ದಾಗಿ ಸಾಕುತ್ತಿದ್ದ ತಂದೆ ಚೆನ್ನಾಗಿ ಓದಿಸುತ್ತಿದ್ದರು. ಹಾಗಾಗಿ ತಾನು ಐಎಎಸ್ ಆಫೀಸರ್ ಆಗಬೇಕೂ ಎಂದುಕೊಂಡಿದ್ದಳು ದೀಪಾಲಿ ಆದರೆ ಈಕೆ ಪಿಯುಸಿ ಓದುತ್ತಿದ್ದಾಗ ತಂದೆಯ ಬಿಸಿನೆಸ್ ನಷ್ಟಕ್ಕೆ ಸಿಲುಕಿತ್ತು. ಮಗಳನ್ನು ಓದಿಸಕ್ಕು ಅವರ ಕೈಯಲ್ಲಿ ಹಣ ಇರಲಿಲ್ಲ. ತನ್ನನ್ನು ಓದಿಸಕ್ಕು ಆಗದ ಪರಿಸ್ಥಿತಿಯಲ್ಲಿ ಸಿಲುಕಿದ ತಂದೆಯ ಕಷ್ಟವನ್ನು ನೋಡಿದ ದೀಪಾಲಿ ಓದುವುದನ್ನು ನಿಲ್ಲಿಸಿ ಟಿಫನ್ ತಯಾರಿ ಮಾಡಿ ಬೀದಿಗಳಲ್ಲಿ ಮಾರುತಿದ್ದಳು. ಅದರ ಜೊತೆ ಹಾಸ್ಟೆಲ್ ಗೆ ಅಡುಗೆ ಮಾಡುವಂತ ಕೆಲಸ ಮಾಡಿ ಬಂದ ಹಣದಿಂದ ಮನೆಯನ್ನು ನಿರ್ವಾಹಣೆ ಮಾಡುತ್ತಿದ್ದಳು. ಈ ಎಲ್ಲ ಕೆಲಸಗಳಿಂದ ಕೈಯಲ್ಲಿ ಒಂದು ರೂಪಾಯಿ ನಿಲ್ಲುತ್ತಿರಲಿಲ್ಲ.

[widget id=”custom_html-5″]

Advertisements
Advertisements

ಆಗ ಕೆಲಸವನ್ನು ಹುಡುಕಿಕೊಂಡು ಇಂಡೋರ್ ಗೆ ಹೋದ ದೀಪಾಲಿ ದಾಸ್ತಾನು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಹೀಗೆ ಕೆಲವು ತಿಂಗಳು ಕಳೆದಂತೆ ಆಕೆಗೆ ಒಂದು ಪ್ಲಾನ್ ಹೊಳೆಯಿತು. ಪ್ರತಿದಿನ ಮಾರುಕಟ್ಟೆಯನ್ನು ನೋಡುತ್ತಿದ್ದ ದೀಪಾಲಿಗೆ ನಾನು ಯಾಕೆ ಮಧ್ಯವರ್ತಿ ಕೆಲಸ ಮಾಡಿ ವ್ಯಾಪಾರ ಮಾಡಬಾರದು ಅನಿಸಿತು. ಅದರಂತೆ ಗೋಧಿ ವ್ಯಾಪಾರದಲ್ಲಿ ಬ್ರೋಕರ್ ಕೆಲಸ ಶುರುಮಾಡಿದಳು ದೀಪಾಲಿ. ಬಿರೆ ಗಂಡಸರೇ ಮಾಡುತ್ತಿದ್ದ ಟ್ರೇಡಿಂಗ್ ಕೆಲಸವನ್ನು ದೀಪಾಲಿ ಶುರುಮಾಡಿದಾಗ ಎಲ್ಲಾರು ನಗಾಡಿದರು ಗೇಲಿ ಮಾಡಿದರು. ಎಷ್ಟೇ ಅವಮಾನಗಳು ಆದರೂ ಪಟ್ಟು ಬಿಡದ ಈಕೆ ದಿನೇ ದಿನೇ ತಾನು ಅಂದುಕೊಂಡಿದ್ದನ್ನು ಸಾಧಿಸುತ್ತ ಬಂದಳು.ಕೊನೆಗೆ ತನ್ನದೆ ಸ್ವಂತ ಟ್ರೇಡಿಂಗ್ ಫಾರ್ಮ್ ನ್ನೆ ಪ್ರಾರಂಭಿಸಿದಳು.

[widget id=”custom_html-5″]

ರೈತರು ಮತ್ತು ವ್ಯಾಪಾರಸ್ಥರ ನಂಬಿಕೆಗಳಿಸಿದ್ದ ಈಕೆ ಬರಿ ಒಂದೆ ವರ್ಷದಲ್ಲಿ 60ಕೋಟಿ ವ್ಯಾಪಾರ ಮಾಡಿ ಎಲ್ಲಾರು ಬೆರಗಾಗುವಂತೆ ಮಾಡಿದಳು ದೀಪಾಲಿ. ಹಾಗೆ ಫುಲ್ ಟೈಮ್ ಟ್ರೇಡಿಂಗ್ ಮಾಡುತ್ತಿರುವ ಮೊದಲ ಭಾರತೀಯ ಮಹಿಳೆ ಎಂಬ ಬಿರುದಿಗೆ ಪಾತ್ರರಾಗಿದ್ದಾಳೆ. ದೀಪಾಲಿಯ ವಯಸ್ಸು ಕೇವಲ 28 ವರ್ಷ ಮಾತ್ರ ಈಗ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ಈಕೆ ತಂದೆ ತಾಯಿಯನ್ನು ಹೂವಿನಲ್ಲಿಟ್ಟು ಸಾಕುತ್ತಿದ್ದಾಳೆ. ನಮ್ಮ ಸುತ್ತಮುತ್ತ ಇರುವ ಪರಿಸರ ಮತ್ತು ಅವಕಾಶಗಳನ್ನೆ ಬಳಸಿಕೊಂಡು ಎಷ್ಟು ಎತ್ತರಕ್ಕಾದರೂ ಬೆಳೆಯಬಹುದು ಅನ್ನೋದಕ್ಕೆ ನಿದರ್ಶನ ಈ ದೀಪಾಲಿ ದೃಢವಾದ ಮನಸ್ಸಿರಬೇಕು ಅಷ್ಟೇ ಏನು ಬೇಕಾದರೂ ಸಾಧಿಸಬಹುದು ಅಲ್ಲವೇ..

[widget id=”custom_html-5″]