Advertisements

ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಈ‌ ಹುಡುಗ ಕೊಟ್ಟ ಉತ್ತರ ಕೇಳಿ ಕಣ್ಣೀರು ಸುರಿಸಿದ ಟೀಚರ್..! ಅಷ್ಟಕ್ಕೂ ಆ ಹುಡುಗ ಹೇಳಿದ್ದೇನು ಗೊತ್ತಾ..?

Inspiration

ನಮಸ್ತೆ ಸ್ನೇಹಿತರೆ, ಹೊರಗಡೆ ಮಳೆ ಬರುತ್ತಿತ್ತು, ತರಗತಿಯಲ್ಲಿ ಶಿಕ್ಷಕರು ಪಾಠವನ್ನು ಮಾಡುತ್ತಿದ್ದರು ಇನ್ನೂ ವಿದ್ಯಾರ್ಥಿಗಳು ತುಂಬಾನೇ ಶ್ರದ್ಧೆಯಿಂದ ಪಾಠವನ್ನ ಕೇಳುತ್ತಿದ್ದರು ಆದರೆ ಪ್ರಕೃತಿಯ ವಾತವರಣದಲ್ಲಿ ಬದಲಾವಣೆ ಆಗಿರುವುದರಿಂದ ಅದರ ಎಫೆಕ್ಟ್ ಮಕ್ಕಳ ಮುಖದಲ್ಲಿ ಕಾಣಿಸುತ್ತಿತ್ತು.. ಅವರ ಆಲೋಚನೆಯನ್ನು ಬದಲಾವಣೆ ಮಾಡಲು ಟೀಚರ್ ತನ್ನ ಜೇಬಿನಿಂದ ನೂರು ರೂಪಾಯಿ ಹಣವನ್ನು ತೆಗೆದು ಈಗ ನಾನು ಈ 100 ರೂಪಾಯಿ ಹಣವನ್ನು ನಿಮಗೆ ಕೊಟ್ಟರೆ ನೀವು ಇದನ್ನು ಏನು ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದರು.. ಅದರಲ್ಲಿ ಹಲವು ಮಕ್ಕಳು ವಿಭಿನ್ನವಾದ ಉತ್ತರಗಳನ್ನ ನೀಡಿದರು. ಆದರೆ ಅವರಲ್ಲಿ ಒಬ್ಬ ಹುಡುಗ ಕೊಟ್ಟ ಉತ್ತರ ಈಗ ಸಿಕ್ಕಪಟ್ಟೆ ವೈ’ರಲ್ ಆಗುತ್ತಿದೆ.. ಅಸಲಿಗೆ ಆ ಹುಡುಗ ಟೀಚರ್ ಗೆ ಕೊಟ್ಟ ಉತ್ತರವೇನು ಗೋತ್ತಾ? ನೋಡೋಣ ಬನ್ನಿ..

Advertisements
Advertisements

ಆ ಟೀಚರ್ ಕೇಳಿದ ಪ್ರಶ್ನೆಗೆ ಮಕ್ಕಳು ಈ ರೀತಿಯ ಉತ್ತರ ನೀಡಿದರು, ಒಬ್ಬ ಹುಡುಗ ನಾನು ರಿಮೋಟ್ ಕಂಟ್ರೋಲ್ ಕಾರನ್ನು ತಗೆದುಕೊಳ್ಳುತ್ತೇನೆ ಅಂದ, ಇನ್ನೊಬ್ಬ ಹುಡುಗ ನಾನು ನನ್ನ ಕುಟುಂಬದವರ ಜೊತೆ ಸಿನಿಮಾಕ್ಕೆ ಹೋಗುತ್ತಾನೆ ಎಂದ, ಪ್ರತಿಯೊಬ್ಬರು ಒಂದೊಂದು ರೀತಿಯ ಉತ್ತರಗಳನ್ನ ನೀಡಿದರು.. ಅದರೆ ಒಬ್ಬ ಹುಡುಗ ಮಾತ್ರ ಎಲ್ಲರಿಗಿಂತ ವಿಭಿನ್ನವಾಗಿ ನಾನು ನನ್ನ ತಾಯಿಗೆ ಕನ್ನಡಕ ಕೊಡಿಸುತ್ತೇನೆ ಎಂದು ಹೇಳಿದ.. ಆಗ ಆ ಟೀಚರ್‌ ನೀನು ನಿನ್ನ ತಾಯಿಗೆ ಯಾಕೆ ಕನ್ನಡಕ ಕೋಡಿಸುತ್ತೀಯಾ.? ನಿಮ್ಮ ತಂದೆ ಕೊಡಿಸುತ್ತಾರೆ ಬಿಡು ಅಂತ ಹೇಳಿದರು. ಮತ್ತೆ ಹೇಳು‌ ಈ ನೂರು ರೂಪಾಯಿಯಲ್ಲಿ ನಿನಗೋಸ್ಕರ ಏನು ಖರೀದಿ ಮಾಡುತ್ತೀಯಾ ಎಂದು ಟೀಚರ್ ಕೇಳಿದರು. ಅದಕ್ಕೆ ಹುಡುಗ ನನಗೆ ನನ್ನ ತಂದೆ ಇಲ್ಲ ಅವರು‌ ತೀರಿ ಹೋಗಿದ್ದಾರೆ..

ನಮ್ಮ‌ ಅಮ್ಮ‌ ಟೈಲರ್ ಕೆಲಸವನ್ನು ಮಾಡಿ ನನ್ನನ್ನು ಮತ್ತು ನನ್ನ ತಂಗಿಯನ್ನು ಓದಿಸುತ್ತಿದ್ದಾರೆ.. ನಮ್ಮ‌ ತಾಯಿ ಬಟ್ಟೆ ಹೊಲಿಯುವ ಸಮಯದಲ್ಲಿ ಅವರಿಗೆ ಕಣ್ಣು ಸರಿಯಾಗಿ ಕಾಣಿಸದೆ ತುಂಬಾ ಕ’ಷ್ಟ ಪಡುತ್ತಿದ್ದಾರೆ‌ ಎಂದು ಆ ಹುಡುಗ ಹೇಳಿದ.. ಇನ್ನೂ ಅವರು ಪ್ರತಿನಿತ್ಯ ಸಂಪಾದನೆ ಮಾಡುವುದರಲ್ಲಿ ಸ್ಕೂಲ್ ಫೀಸ್, ಮನೆಯ ದಿನಸಿಗೆ ಸಾಲುವುದಿಲ್ಲ ಎಂದು ಆ ಹುಡುಗ ಹೇಳಿದ.. ಹುಡುಗ ಹೇಳಿದ ಮಾತನ್ನೂ ಕೇಳಿ ಟೀಚರ್ ನ ಕಣ್ಣಲ್ಲಿ ನೀರು ತುಂಬಿಕೊಂಡವು. ಆಗ ಟೀಚರ್ ನಾನು ಈ ನೂರು ರೂಪಾಯಿ ಹಣವನ್ನು ಕೊಡುತ್ತೇನೆ ಆದರೆ ಒಂದು ಕಂಡೀಶನ್.. ನೀನು ದೊಡ್ಡವನಾದ ಮೇಲೆ ಒಳ್ಳೆಯ ಅಧಿಕಾರಿಯಾಗಬೇಕು. ತದನಂತರ ನನ್ನ ನೂರು ರೂಪಾಯಿ ಹಣವನ್ನು ಹಿಂತಿರುಗಿಸಬೇಕು ಎಂದು ಹೇಳಿ ಹುಡುಗನಿಗೆ ನೂರು ರುಪಾಯಿ ಕೊಟ್ಟರು.. ಆ ಹುಡುಗ ಹಣವನ್ನು ಪಡೆದು ತನ್ನ ತಾಯಿಗೆ ಕನ್ನಡಕವನ್ನು ಕೊಡಿಸುತ್ತಾನೆ..