Advertisements

ನೀವು ಏನಾಗ್ಬೇಕು ಅನ್ಕೊಂಡಿದ್ದೀರಾ ಎಂದು ಟೀಚರ್ ಕೇಳಿದ ಪ್ರಶ್ನೆಗೆ 6ನೇ ವರ್ಷದ ಹುಡುಗ ಕೊಟ್ಟ ಉತ್ತರವೇನು ಗೊತ್ತಾ? ತಂದೆ ತಾಯಿ ನಾಚಿಕೆಯಿಂದ ತಲೆ ತಗ್ಗಿಸುವಂತ ಉತ್ತರ..

Inspiration

ಶಾಲೆ ಶುರುವಾಯಿತು ಕೊಠಡಿಗೆ ಬಂದ ಟೀಚರ್ ಜೀವನದಲ್ಲಿ ನೀವು ಏನಾಗಿಬೇಕು ಅಂಧುಕೊಂಡಿದ್ದೀರಾ ಅಂತ ಟಿಪ್ಪನಿ ಬರೆಯಿರಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ನಂತರ ವಿದ್ಯಾರ್ಥಿಗಳು ಬರೆದ ಉತ್ತರ ಪತ್ರಿಕೆಯನ್ನು ತಿದ್ದುವ ಸಲುವಾಗಿ ಟೀಚರ್ ಅವುಗಳನ್ನು ಮನೆಗೆ ತೆಗೆದು ಕೊಂಡು ಹೋದರು. ರಾತ್ರಿ ಟೀಚರ್ ತಮ್ಮ ಮಕ್ಕಳನ್ನು ಮಲಗಿಸಿ ನಂತರ ವಿದ್ಯಾರ್ಥಿಗಳು ಬರೆದಿದ್ದ ಉತ್ತರಪತ್ರಿಕೆಗಳನ್ನು ತಿದ್ದಲು ಪ್ರಾರಂಭಿಸಿದರು. ಟೀಚರ್ ಗಂಡ ಮೊಬೈಲಲ್ಲಿ ಕ್ಯಾಂಡಿ ಕ್ರಷ್ ಗೇಮ್ ಆಡುತ್ತಿದ್ದರು. ಎಲ್ಲ ಉತ್ತರಪತ್ರಿಕೆಗಳನ್ನು ತಿದ್ದಿದ ಟೀಚರ್ ಕೊನೆಯ ಉತ್ತರ ಪತ್ರಿಕೆಯನ್ನು ಓದಿ ಕಣ್ಣೀರು ಹಾಕುತ್ತಾ ಅಳುತ್ತಿದ್ದರು. ಈ ಕಡೆ ಗೇಮ್ ಆಡುತ್ತಿದ್ದ ಗಂಡ ಯಾಕೆ ಅಳುತ್ತಿದ್ದೀಯಾ ಎಂದು ಕೇಳಿದ ಅದಕ್ಕೆ ಹೆಂಡತಿ ಕಡೆಯಿಂದ ಉತ್ತರ ಬರಲಿಲ್ಲ. ಹೆ ಏನಾಯ್ತು ಹೇಳು ಎಂದು ಹೆಂಡತಿಯನ್ನು ಮತ್ತೆ ಕೇಳಿದ ಗಂಡ ಆಗ ಉತ್ತರಿಸಿದ ಟೀಚರ್ ನೀವು ಜೀವನದಲ್ಲಿ ಏನಾಗಬೇಕೆಂದು ಬಯಸುತ್ತೀರಾ ಎಂದು ಶಾಲೆಯಲ್ಲಿ ಮಕ್ಕಳಿಗೆ ಪ್ರಶ್ನೆ ಕೇಳಿ ಟಿಪ್ಪಣಿ ಬರೆಯಲು ಹೇಳಿದ್ದೆ.

Advertisements
Advertisements

ಅವರು ಬರೆದಿರುವ ಉತ್ತರ ಪತ್ರಿಕೆ ಗಳನ್ನು ತಿದ್ದುತ್ತಿದ್ದಾಗ ಅದರಲ್ಲಿ ಒಂದು ಉತ್ತರ ಪತ್ರಿಕೆಯನ್ನು ಓದುತ್ತಿದ್ದರೆ ಅಳು ಬರುತ್ತಿದೆ ಕಣ್ರೀ ಎಂದು ಟೀಚರ್ ಹೆಂಡತಿ ಗಂಡನಿಗೆ ಹೇಳಿದಳು. ಹೌದಾ ಅಂತ ವಿಶೇಷ ಅದರಲ್ಲಿ ಏನಿದೆ ಗಂಡನಿಗೆ ಉತ್ತರ ಪತ್ರಿಕೆಯನ್ನು ಓದಿ ಕೇಳಿಸಲು ಮುಂದಾದಳು ಆಕೆ. ಉತ್ತರಪತ್ರಿಕೆಯ ಹೆಡ್ ಲೈನ್ ಹೀಗಿತ್ತು. ನಾನು ಸ್ಮಾರ್ಟ್ ಫೋನ್ ಆಗಲು ಬಯಸುತ್ತೇನೆ ನನ್ನ ಪೋಷಕರು ಸ್ಮಾರ್ಟ್ ಫೋನ್ ನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರೆ . ತುಂಬಾ ಕೇರ್ ಮಾಡ್ತಾರೆ. ನನಗಿಂತ ಹೆಚ್ಚಾಗಿ ನನ್ನ ತಂದೆ ಆಫೀಸಿನಿಂದ ಮನೆಗೆ ಬಂದಾಗ ಸ್ಮಾರ್ಟ್ ಫೋನ್ ಅವರಿಗೆ ರಿಲ್ಯಾಕ್ಸ್ ಕೊಡುತ್ತದೆ ನನ್ನ ಪೋಷಕರು ಮನೆಯಲ್ಲಿದ್ದಾಗ ಫೋನ್ ಜೊತೆ ಹೆಚ್ಚು ಕಾಲಕಳೆಯುತ್ತಾರೆ ನನ್ನ ಜೊತೆ ಅಲ್ಲ ಫೋನ್ ರಿಂಗ್ ಆದ ತಕ್ಷಣ ರಿಸೀವ್ ಮಾಡ್ತಾರೆ. ಆದರೆ ನಾನು ಎಷ್ಟು ಬಾರಿ ಕೂಗಿದರು ಕೇಳಿಸಿಕೊಳ್ಳೊದಿಲ್ಲ. ನಾನು ಅಳುತ್ತಿದ್ದರು ಅವರು ಫೋನ್ ಅಲ್ಲಿ ಗೇಮ್ ಆಡುತ್ತಿರುತ್ತಾರೆ.

ನನ್ನ ಜೊತೆ ಮಾತ್ರ ಆಟವಾಡುವುದಿಲ್ಲ ಅವರು ಫೋನ್ ಅಲ್ಲಿ ಮಾತನಾಡುತ್ತಿದ್ದಾಗ ನನ್ನ ಮಾತು ಅವರಿಗೆ ಕೇಳಿಸೋದಿಲ್ಲ ಅದು ಎಷ್ಟೆ ಮುಖ್ಯವಾದ ವಿಷಯ ಆದರು ಸಹಿತ ತಮ್ಮ ಖಾಲಿ ಸಮಯವನ್ನು ಫೋನ್ ಜೊತೆ ಕಳೆಯುತ್ತಾರೆ ಅದನ್ನು ತುಂಬಾ ಪ್ರೀತಿಸುತ್ತಾರೆ ನನ್ನನ್ನು ಅಲ್ಲ ಮಲಗುವಾಗ ಫೋನ್ ಪಕ್ಕದಲ್ಲಿ ಇಟ್ಟುಕೊಳ್ಳುತ್ತಾರೆ. ಬೆಳಿಗ್ಗೆ ಎದ್ದು ತಕ್ಷಣ ಅದನ್ನೇ ಮೊದಲು ನೋಡುತ್ತಾರೆ. ಅದಕ್ಕೆ ನನ್ನ ಆಸೆ ಏನೆಂದರೆ ತಂದೆ ತಾಯಿ ಜೊತೆ ಇರುವ ಸ್ಮಾರ್ಟ್ ಫೋನ್ ಆಗಬೇಕೆಂದು. ಆಗ ನನ್ನ ತಂದೆ ತಾಯಿಯ ಜೊತೆ ಪ್ರತಿಕ್ಷಣ ಇರಬಹುದು. ಇದು ವಿದ್ಯಾರ್ಥಿ ಬರೆದಿದ್ದ ಉತ್ತರ. ಈ ಉತ್ತರ ಪತ್ರಿಕೆಯನ್ನು ಟೀಚರ್ ಹೆಂಡತಿ ಓದುತ್ತಿದ್ದಾಗ ಗಂಡನಿಗೆ ಹೃದಯ ಕದಲಿದಂತೆ ಆಯ್ತು. ಯಾರು ಬರೆದಿದ್ದು ಈ ಉತ್ತರ ಎಂದು ಹೆಂಡತಿಗೆ ಕೇಳಿದ ಇದಕ್ಕೆ ಉತ್ತರಿಸಿದ ಹೆಂಡತಿ ಈ ಉತ್ತರ ಬರೆದಿದ್ದು ನನ್ನ ಮಗ ಕಣ್ರೀ ಎಂದು ಹೇಳಿದಳು ಸ್ನೇಹಿತರೆ ಇಂಥ ಉತ್ತರ ನಮ್ಮ ಮಕ್ಕಳು ಬರೆಯದಂತೆ ನೋಡಿಕೊಳ್ಳೋದು ನಮ್ಮ ಜವಾಬ್ದಾರಿಯಲ್ಲವೇ..