Advertisements

ತಿರುಪತಿ ತಿಮ್ಮಪ್ಪನಿಗೆ ಸುಧಾ ಮೂರ್ತಿ ಅಮ್ಮ ಕೊಟ್ಟ ಕೋಟಿ ಬೆಲೆ ಕಾಣಿಕೆ ಏನು ಗೊತ್ತಾ? ನಿಜಕ್ಕೂ ಶಾಕ್ ಆಗ್ತೀರಾ..

Kannada News

ಸ್ನೇಹಿತರೆ, ತಮ್ಮ ಸರಳತೆಯ ಮೂಲಕವೇ ಹೆಸರುವಾಸಿಯಾಗಿರುವಂತಹ ಸುಧಾ ಮೂರ್ತಿ ಅಮ್ಮನವರು ತಮ್ಮ ಇನ್ಫೋಸಿಸ್ ಸಂಸ್ಥೆಯ ಮೂಲಕ ಬರುವಂತಹ ಅರ್ಧದಷ್ಟು ಆದಾಯದಲ್ಲಿ ಬಡ ಜನರಿಗೆ ಸಹಾಯ ಮಾಡುತ್ತಾ ಅವರ ಹೃದಯ ಶ್ರೀಮಂತಿಕೆ ಎಂತಹದ್ದು ಎಂಬುದನ್ನು ಇದಾಗಲೇ ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ. ಹೀಗಿರುವಾಗ ತಿರುಪತಿಯ ತಿಮ್ಮಪ್ಪನ ಮೇಲೆ ವಿಶಿಷ್ಟ ಭಕ್ತಿಯನ್ನು ಹೊಂದಿರುವಂತಹ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ದಂಪತಿಗಳು ನಿನ್ನೆಯಷ್ಟೇ ದೇವಸ್ಥಾನಕ್ಕೆ ಭೇಟಿ ನೀಡಿ ತಿಮ್ಮಪ್ಪನಿಗೆ ತಮ್ಮ ಕೈಯಲ್ಲಾದ ಕಿರು ಕಾಣಿಕೆಯೊಂದನ್ನು ನೀಡಿದ್ದಾರೆ.

ಹೌದು ಸ್ನೇಹಿತರೆ, ಹಲವಾರು ಲಕ್ಷ ಬೆಲೆಬಾಳುವಂತಹ ಸೇವೆಯನ್ನು ಸುಧಾ ಮೂರ್ತಿ ಅಮ್ಮನವರು ದೇವರಿಗೆ ಸಲ್ಲಿಸಿದ್ದು, ಈ ಒಂದು ವಿಚಾರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮಟ್ಟದ ಚರ್ಚೆಗಳಾಗುತ್ತಿದೆ. ಅಷ್ಟಕ್ಕೂ ಸುಧಾ ಮೂರ್ತಿಯವರು ತಿರುಪತಿಗೆ ಹೋಗಿ ನೀಡಿದ ಕಾಣಿಕೆಯಾದರೂ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಪ್ರತಿ ವರ್ಷವೂ ತಪ್ಪದೇ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಹೋಗಿ ದೇವರ ಆಶೀರ್ವಾದ ಪಡೆಯುವಂತಹ ಸುಧಾ ಮೂರ್ತಿ ಅಮ್ಮನವರು ಒಂದಲ್ಲ ಒಂದು ವಿಶಿಷ್ಟ ಸೇವೆ ಸಲ್ಲಿಸುವ ಮೂಲಕ ಸಾಕಷ್ಟು ಜನಪ್ರಿಯ ಕಾರ್ಯಗಳನ್ನು ಮಾಡುತ್ತಾರೆ.

ಅಲ್ಲದೆ ಕಳೆದ ವರ್ಷದಂದು ಅಲ್ಲಿನ ಹೂ ಕಟ್ಟುವಂತಹ ಮಹಿಳೆಯರೊಂದಿಗೆ ನೂರಾರು ಕೋಟಿ ಒಡತಿ ಸುಧಾ ಮೂರ್ತಿ ಅಮ್ಮನವರು ಕುಳಿತು ಅತಿ ಸರಳವಾಗಿ ಹೂ ಕಟ್ಟಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಅದರಂತೆ ತಮ್ಮ ಪತಿಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಂತಹ ಸುಧಾ ಮೂರ್ತಿ ಅಮ್ಮನವರು ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಒಳಗೊಂಡ ಧರ್ಮ ರಥವನ್ನು ಕಿರು ಕಾಣಿಕೆಯಾಗಿ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ನೀಡಿದ್ದಾರೆ. ಹೌದು ಸ್ನೇಹಿತರೆ ಬಹು ಕೋಟಿ ಬೆಲೆ ಬಾಳುವಂತಹ ಒಡತಿ ಸುಧಾ ಮೂರ್ತಿ ಅಮ್ಮನವರು ತಮ್ಮ ಫೌಂಡೇಶನ್ ಮೂಲಕ ತಿಂಗಳಿಗೆ ಕೋಟ್ಯಾಂತರ ರೂಪಾಯಿ ಆದಾಯ ಪಡೆಯುತ್ತಿದ್ದರು, ಕೂಡ ಅತಿ ಸರಳವಾಗಿ ಕಾಟನ್ ಸೀರೆಯನ್ನುಟ್ಟು ತಿರುಪತಿಯಲ್ಲಿ ಎಲ್ಲರ ಗಮನ ಸೆಳೆದರು. ತಮ್ಮ ಸರಳತೆಯ ಮೂಲಕವೇ ಈ ಮುದ್ದಾದ ದಂಪತಿಗಳು ಜನರಿಗೆ ಮಾಡುತ್ತಿರುವಂತಹ ಸಹಾಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮೂಲಕ ತಿಳಿಸಿ.