Advertisements

ನಟಿ ಸುಧಾರಾಣಿ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.!

Cinema

ಆರು ಕೋಟಿ ಅಭಿಮಾನಿಗಳ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋಯಿನ್ ಎಂದೇ ಖ್ಯಾತಿ ಪಡೆದಿರುವ ನಟಿ ಸುಧಾರಾಣಿ ಇವರ ವಯಸ್ಸು 48 ಆದರೂ ಇಂದಿಗೂ ಸಹ ಬಹಳ ಯಂಗ್ ಆಗಿ ಕಾಣುವ ಇವರು ಈಗಿನ ಕಾಲದ ಹೀರೋಯಿನ್ ಗಳನ್ನೆ ನಾಚಿಸುವ ಹಾಗೆ ಇದ್ದಾರೆ ಸುಧಾರಾಣಿ ಅವರು ಇಂದಿಗೂ ಬಹಳ ಬೇಡಿಕೆಯಲ್ಲಿರುವ ಕಲಾವಿದೆ 35 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ನಟಿ ಸುಧಾರಾಣಿ ಅವರು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಈ ಸೇವೆಗೆ ಈಗ ಪ್ರತಿಷ್ಠಿತ ಅವಾರ್ಡ್ ಅವರಿಗೆ ಸಿಕ್ಕಿದೆ.

[widget id=”custom_html-5″]

Advertisements
Advertisements

ಆಗಸ್ಟ್, 1973 ರಲ್ಲಿ ಗೋಪಾಲಕೃಷ್ಣ ಮತ್ತು ನಾಗಲಕ್ಷ್ಮಿಯ ದಂಪತಿಯ ಮಗಳಾಗಿ ಸುಧಾರಾಣಿ ಅವರು ಜನಿಸುತ್ತಾರೆ. ಮೂರು ವರ್ಷ ಇದ್ದಾಗಲೇ ಬಾಲನಟಿಯಾಗಿ ನಟಿಸಲು ಆರಂಭಿಸುತ್ತಾರೆ. ನಂತರ ಕೆಲವು ಜಾಹೀರಾತುಗಳಲ್ಲಿ ನಟಿಸುತ್ತಾರೆ. ಕೆಲವು ವರ್ಷಗಳು ಕಳೆದ ನಂತರ ಡಾಕ್ಟರ್ ರಾಜಕುಮಾರ್ ಅವರ ಮೊದಲ ಮಗ ಶಿವರಾಜ್ ಕುಮಾರ್ ಅವರನ್ನ ಸಿನಿರಂಗಕ್ಕೆ ಪರಿಚಯಿಸುವ ಪ್ಲಾನ್ ನಲ್ಲಿ ಇದ್ದ ರಾಜ್ ಕುಟುಂಬ ಶಿವಣ್ಣನಿಗೆ ನಾಯಕಿಯಾಗಿ ಸುಧಾರಾಣಿ ಅವರನ್ನು ಸೆಲೆಕ್ಟ್ ಮಾಡುತ್ತಾರೆ.

[widget id=”custom_html-5″]

ಮೊದಲ ಸಿನಿಮಾದಲ್ಲೇ ಯಶಸ್ಸು ಮತ್ತು ಜನಪ್ರಿಯತೆ ಗಳಿಸುವ ಸುಧಾರಾಣಿ ನಟಿಸುವ ಸಿನಿಮಾಗಳೆಲ್ಲ ಸೂಪರ್ ಹಿಟ್ ಆಗಿ ಹ್ಯಾಟ್ರಿಕ್ ಹೀರೋಯಿನ್ ಅನಿಸಿಕೊಳ್ಳುತ್ತಾರೆ. ನಟಿ ಸುಧಾರಾಣಿ ಅವರು ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಲ್ಲಿಸಿರುವ ಸೇವೆಗೆ ಇದೀಗ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ಅವಾರ್ಡ್ ಸಿಕ್ಕಿದೆ. ಇಂಡಿಯನ್ ಎಂಪೈಯರ್ ಯೂನಿವರ್ಸಿಟಿ ನಟಿ ಸುಧಾರಾಣಿ ಅವರಿಗೆ ಗೌರವಾನ್ವಿತ ಡಾಕ್ಟರೇಟ್ ಅವಾರ್ಡ್ ನೀಡಿ ಗೌರವಿಸಿದ್ದಾರೆ. ಈ ಸಂತೋಷದ ವಿಚಾರವನ್ನು ನಟಿ ಸುಧಾರಾಣಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆ ಮೂಲಕ ಶೇರ್ ಮಾಡಿಕೊಂಡಿದ್ದಾರೆ

[widget id=”custom_html-5″]