Advertisements

ಯಾವ ಸಿನಿಮಾಗೂ ಕಮ್ಮಿಯಿಲ್ಲ ಸುಂದರ ಪಿಚೈ ಅವರ ಲವ್ ಸ್ಟೋರಿ.. ತಮ್ಮ ಪ್ರೇಯಸಿಯನ್ನು ಮಾತನಾಡುವುದಕ್ಕೆ ಸುಂದರ್ ಅವರು ಏನು ಮಾಡುತ್ತಿದ್ದರು ಗೊತ್ತಾ..?

Inspiration

ನಮಸ್ತೆ ಸ್ನೇಹಿತರೆ, ಗೂಗಲ್ ಸಿಇಓ ಸುಂದರ್ ಪಿಚೈ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವದಲ್ಲಿ ಅತಿ ಹೆಚ್ಚು ಸ್ಯಾಲರಿ ಪಡೆಯುವ ಸಿಇಓ ಅಂದರೆ ಅದು ಸುಂದರ್ ಪಿಚೈ ಅವರು ಮಾತ್ರ. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಇಂದು ಪ್ರಪಂಚದಲ್ಲಿ ದೊಡ್ಡ ಕಂಪನಿಗಳಲ್ಲಿ ಒಂದಾದ ಗೂಗಲ್ ನ ಸಿಇಓ ಆಗುವ ಯಶಸ್ಸಿನ ಹಿಂದೆ ಅವರ ಹೆಂಡತಿ ಅಂಜಲಿ ಅವರ ಪಾತ್ರ ಬಹಳ ಇದೆ. ಇವರ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ. ಹಾಗಾದ್ರೆ ಸುಂದರ್ ಹಾಗೂ ಅಂಜಲಿ ಅವರ ಲವ್ ಸ್ಟೋರಿ ಹೇಗಿತ್ತು ಅಂತ ನೋಡೋಣ ಬನ್ನಿ.

Advertisements
Advertisements

1972 ರಲ್ಲಿ ಚೆನ್ನೈನಲ್ಲಿ ಹುಟ್ಟಿದ ಸುಂದರ್ ಅವರು ಈಗ ವಿಶ್ವದ ಅತಿ ದೊಡ್ಡ ಕಂಪನಿಯಲ್ಲಿ ಒಂದಾದ ಗೂಗಲ್ನಲ್ಲಿ ಸಿಇಓ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ವೃತ್ತಿಜೀವನದ ಜೊತೆಗೆ ವೈವಾಹಿಕ ಜೀವನದಲ್ಲೂ ಯಶಸ್ವಿಯಾಗಿದ್ದಾರೆ. ಪ್ರೀತಿಸಿದ ಹುಡುಗಿಯ ಜೊತೆ ಮದುವೆಯಾಗಿ ಈಗ ಇಬ್ಬರ ಮಕ್ಕಳ ಜೊತೆ ಸಂತೋಷವಾಗಿ ಜೀವನವನ್ನು ನಡೆಸುತ್ತಿದ್ದಾರೆ. ಸುಂದರ್ ಹಾಗೂ ಅಂಜಲಿ ಅವರು ಮೊದಲು ಭೇಟಿಯಾಗಿದ್ದು ತಾವು ಐಐಟಿಯಲ್ಲಿ ಡಿಗ್ರಿ ಮಾಡುವಾಗ. ಇಬ್ಬರೂ ಕ್ಲಾಸ್ಮೇಟ್ಸ್ ಆಗಿರುವುದರಿಂದ ಪರಿಚಯ ಆಗಿ, ಆ ಪರಿಚಯ ಪ್ರೀತಿಯಾಗಿ ಬದಲಾಗುವುದಕ್ಕೆ ಹೆಚ್ಚು ಸಮಯ ಹಿಡಿಯಲಿಲ್ಲ. ಆಗಿನ ಕಾಲದಲ್ಲಿ ಫೋನ್ ಗಳು ಇಲ್ಲದ ಕಾರಣ, ಸುಂದರ್ ಅವರು ಅಂಜಲಿಯನ್ನು ಮಾತಾಡಲು ಹಾಸ್ಟೆಲ್ ಬಳಿ ಹೋಗಿ ಅಂಜಲಿ ಅವರು ಗಮನಿಸುವವರೆಗೂ ಅತ್ತಾ ಇತ್ತಾ ಸುತ್ತಾಡುತ್ತಿದ್ದರಂತೆ.

ನಂತರ ಇವರಿಬ್ಬರಿಗೂ ಸುಮಾರು ಆರು ತಿಂಗಳುಗಳ ಕಾಲ ಯಾವುದೇ ಸಂಪರ್ಕ ಇಲ್ಲದೆ ಆಗುತ್ತದೆ. ಯಾಕೆಂದರೆ ಸುಂದರ್ ಅವರು ತಮ್ಮ ಮಾಸ್ಟರ್ಸ್ ಪದವಿಯನ್ನು ಪಡೆಯಲು ಅಮೆರಿಕಾಗೆ ಹೋಗಿರುತ್ತಾರೆ. ಅಲ್ಲಿಂದ ಕರೆ ಮಾಡಬೇಕು ಅಂದರೆ ಸುಮಾರು ಖರ್ಚು ಆಗುತ್ತದೆ, ಆದರೆ ಸುಂದರ್ ಅವರ ಬಳಿ ಅಷ್ಟು ಹಣ ಇರುವುದಿಲ್ಲ. ಆದರೂ ಇಬ್ಬರ ಮಧ್ಯೆ ಇರುವ ಪ್ರೀತಿ ಮಾತ್ರ ಕಮ್ಮಿಯಾಗಿರಲಿಲ್ಲ. ನಂತರ ಸುಂದರ ಅವರು ತಮ್ಮ ವಿದ್ಯಾಭ್ಯಾಸ ಮುಗಿದ ಮೇಲೆ ತಮ್ಮ ಮನೆಯಲ್ಲಿ ಒಪ್ಪಿಸಿ ಅಂಜಲಿ ಅವರನ್ನು ಮದುವೆಯಾಗುತ್ತಾರೆ. ಈಗ ಇವರಿಗೆ ಕಾವ್ಯ ಹಾಗೂ ಕಿರಣ್ ಎಂಬ ಇಬ್ಬರು ಮುದ್ದಾದ ಮಕ್ಕಳು ಇದ್ದಾರೆ.

ಗೂಗಲ್ ನಲ್ಲಿ ಇವರ ಯಶಸ್ಸು ಕಂಡು ಟ್ವಿಟರ್ ಹಾಗೂ ಮೈಕ್ರೋಸಾಫ್ಟ್ ಕಂಪನಿಗಳು ಕೆಲಸ ಆಫರ್ ಮಾಡಿದರೂ, ಸುಂದರ್ ಮಾತ್ರ ನಾನು ಗೂಗಲ್ ನನ್ನ ಬಿಡುವುದಿಲ್ಲ ಅಂತ ಆಫರನ್ನು ತಿರಸ್ಕರಿಸಿದ್ದಾರಂತೆ. ಯಾರಿಗೂ ತಿಳಿಯದ ವಿಷಯವೆಂದರೆ ಸುಂದರ್ ಅವರಿಗೆ ಗೂಗಲ್ ನಲ್ಲೇ ಇರು‌ ಅಂತ ಹೇಳಿದವರು ಬೇರೆ ಯಾರು ಅಲ್ಲ, ತಮ್ಮ ಹೆಂಡತಿ ಅಂಜಲಿ ಅಂತ ಸುಂದರ ಅವರೇ ಹೇಳಿಕೊಂಡಿದ್ದಾರೆ. ಅಂಜಲಿ ಅವರ ಮಾತು ಕೇಳಿ ಗೂಗಲ್ ನಲ್ಲಿ ಇದ್ದ ಕಾರಣ, ಈಗ ಸುಂದರ್ ಅವರು ಗೂಗಲ್ ಸಿಇಓ ಆಗಿದ್ದಾರೆ. ಸುಂದರ್ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ..