Advertisements

ಮದುವೆಯಾಗದಿದ್ದರೂ ಇಬ್ಬರನ್ನು ಅಕ್ಕ ಪಕ್ಕ ಸಮಾಧಿ ಮಾಡಿದ ಗ್ರಾಮಸ್ಥರು.. ಕಾರಣ ಕೇಳಿದರೆ ಕಣ್ಣೀರು ಜಾರುತ್ತದೆ..

Kannada News

ನಾವೊಂದು ನೆನೆದರೆ ಧೈವ ಒಂದು ಬಗೆದಂತೆ ಅನ್ನೋ ಮಾತಿದೆ.. ಆ ಮಾತಿನಂತೆಯೇ ಜೀವನದಲ್ಲಿ ನಾವು ಅಂದುಕೊಳ್ಳೋದೇ ಒಂದು ಆದರೆ ನಡೆಯೋದೇ ಮತ್ತೊಂದು ಎನ್ನುವಂತಾಗಿದೆ.. ಹೌದು ಈ ಫೋಟೋದಲ್ಲಿರುವ ಈ ಹುಡುಗ ಹುಡುಗಿ ಇನ್ನೂ ಸಹ ಮದುವೆಯಾಗಿಲ್ಲ.. ಬೇರೆ ಬೇರೆ ಗ್ರಾಮದ ನಿವಾಸಿಗಳು ಆದರೆ ಈಗ ಗ್ರಾಮಸ್ಥರೇ ಮುಂದೆ ನಿಂತು ಒಂದೇ ಜಮೀನಿನಲ್ಲಿ ಅಕ್ಕಪಕ್ಕವೇ ಇಬ್ಬರನ್ನು ಸಮಾಧಿ ಮಾಡಲಾಗುತ್ತಿದೆ.. ಇದಕ್ಕೆಲ್ಲಾ ಕಾರಣ ಕೇಳಿದರೆ ನಿಜಕ್ಕೂ ಕಣ್ಣೀರು ಜಾರುತ್ತದೆ.. ಹೌದು ಪ್ರೀತಿ‌ ಮಾಡಿದವರು ಎಲ್ಲರೂ ಒಂದಾಗಿ ಜೀವನ ಮಾಡಲು ಸಾಧ್ಯವಿಲ್ಲ.. ಒಟ್ಟಾಗಿ ಜೀವನ ಮಾಡುತ್ತಿರುವ ಎಲ್ಲರ ನಡುವೆಯೂ ಪ್ರೀತಿ ಇರುವುದಿಲ್ಲ.. ಇತ್ತ ಸಮಯ ಕಳೆಯಲು ಪ್ರೀತಿ ಮಾಡಿ ಆಸೆಗಳು ತೀರಿದ ನಂತರ ಬಿಡೋದು ಉಂಟು.. ಮತ್ತೆ ಕೆಲವರು ತಮ್ಮ ಪ್ರೀತಿಯನ್ನು ಅಪ್ಪ ಅಮ್ಮ ಒಪ್ಪುವುದಿಲ್ಲವೆಂದು ದೂರಾಗಿದ್ದುಂಟು..

Advertisements
Advertisements

ಮತ್ತೆ ಕೆಲವರು ಅಪ್ಪ ಅಮ್ಮ ಒಪ್ಪದಿದ್ದರೂ ಓಡಿ ಹೋಗಿ ಮದುವೆಯಾದದ್ದುಂಟು.. ಆದರೆ ಈ ಇಬ್ಬರ ಕತೆಯಲ್ಲಿ ಎಲ್ಲವೂ ವಿಚಿತ್ರ.. ಈ ಇಬ್ಬರು ಪ್ರೀತಿಸಿದ್ದೇನೋ ನಿಜ.. ಆದರೆ ಈ ಇಬ್ಬರ ಪ್ರೀತಿಗೂ ಎರಡೂ ಕುಟುಂಬದವರೂ ಸಹ ಸಮ್ಮತಿ ಸೂಚಿಸಿ ಮದುವೆಗೆ ಒಪ್ಪಿದ್ದರು.. ಮದುವೆಯ ತಯಾರಿಯೂ ನಡೆದಿತ್ತು.. ಆದರೆ ಮದುವೆಗೆ ಮುನ್ನವೇ ಇಬ್ಬರೂ ಅಕ್ಕಪಕ್ಕದಲ್ಲಿ ಸಮಾಧಿಯಾಗುವಂತಾಗಿದ್ದು ಮಾತ್ರ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಇಂತಹದೊಂದು ಮನಕಲಕುವ ಘಟನೆ ತುಮಕೂರಿನ ಮಸ್ಕಲ್ ಗ್ರಾನದಲ್ಲಿ ನಡೆದಿದೆ.. ಹೌದು ಈತನ ಹೆಸರು ಧನುಷ್.. ತುಮಕೂರಿನ ಮಸ್ಕಲ್ ಗ್ರಾಮದ ನಿವಾಸಿ.. ಬೆಂಗಳೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದನು.. ಇನ್ನು ಇತ್ತ ಈ ಹೆಣ್ಣು‌ ಮಗಳ ಹೆಸರು ಸುಷ್ಮಾ.. ವಯಸ್ಸು ಇಪ್ಪತ್ತೆರೆಡು.. ಈಕೆಯೂ ತುಮಕೂರಿನ ಅರೆಹಳ್ಳಿಯ ನಿವಾಸಿ.. ಇನ್ನು ಈ ಇಬ್ಬರೂ ದೂರದ ಸಂಬಂಧಿಕರೂ ಹೌದು.

ದೂರದ ಸಂಬಂಧಿಗಳಾದ ಕಾರಣ ಇಬ್ಬರ ನಡುವೆ ಪರಿಚಯವಿತ್ತು.. ಪರಿಚಯ ನಂತರ ಸ್ನೇಹಕ್ಕೆ ತಿರುಗಿದೆ.. ಸ್ನೇಹ ಪ್ರೀತಿಯಾಗಿದೆ.. ಹೀಗೆ ಈ ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು.. ಇಬ್ಬರೂ ಒಬ್ಬರನ್ನು ಬಿಟ್ಟು ಮತ್ತೊಬ್ಬರು‌ ಇರುವುದಿಲ್ಲ ಎನ್ನುವಷ್ಟು ಪ್ರೀತಿ ಇಬ್ಬರ ನಡುವೆ ಇತ್ತು.. ಇನ್ನು ಇತ್ತ‌ ಸುಷ್ಮಾ ಮನೆಯಲ್ಲಿ ಮದುವೆ ಮಾಡುವ ಸಲುವಾಗಿ ಹುಡುಗನನ್ನು ನೋಡಲು ಆರಂಭಿಸಿದಾಗ ಖುದ್ದು ಸುಷ್ಮಾ ಹಾಗೂ ಧಮುಷ್ ಇಬ್ಬರೂ ಸಹ ತಮ್ಮ ಎರಡೂ ಕುಟುಂಬದಲ್ಲಿಯೂ ತಮ್ಮ ಪ್ರೀತಿಯ ವಿಚಾರವನ್ನು ತಿಳಿಸಿದ್ದಾರೆ.. ಇತ್ತ ಎರಡೂ ಕುಟುಂಬಗಳು ಮೊದಲು ಒಪ್ಪಿಕೊಳ್ಳಲು ಹಿಂದೆ ಮುಂದೆ ನೋಡಿದರೂ ಸಹ ಪ್ರೀತಿಸಿದ ಈ ಜೋಡಿಯನ್ನು ದೂರ ಮಾಡಬಾರದೆಂದು ಎರಡೂ ಕುಟುಂಬಗಳು ಮದುವೆಗೆ ಸಮ್ಮತಿಸಿದೆ..

ಇನ್ನು ಇತ್ತ ಮನಮೆಚ್ಚಿದ ಹುಡುಗನನ್ನೇ ಮದುವೆಯಾಗುತ್ತಿರುವ ಸಂತೋಷದಲ್ಲಿ ಸುಷ್ಮಾ ಇದ್ದರೆ.. ಅತ್ತ ಪ್ರೀತಿಸಿದ ಹುಡುಗಿಯ ಕೈ ಹಿಡಿಯುತ್ತಿರುವುದಕ್ಕೆ ಧನುಷ್ ಕೂಡ ಆಕಾಶವೇ ತನ್ನ ಕೈಲಿದ್ದಷ್ಟು ಸಂತೋಷವಾಗಿದ್ದ.. ಎರಡೂ ಕುಟುಂಬದಲ್ಲಿ ಮದುವೆಗೆ ತಯಾರಿಯೂ ನಡೆದಿತ್ತು.. ಪ್ರೀತಿಸಿದ ಜೋಡಿ.. ಜೊತೆಗೆ ಎರಡೂ ಕುಟುಂಬಗಳು ಸಹ ಒಪ್ಪಿದ ಮದುವೆ.. ಇನ್ನೇನು ಬೇಕು ನೆಮ್ಮದಿಯ ಜೀವನಕ್ಕೆ ಎನ್ನುವಂತಿತ್ತು ಇವರಿಬ್ಬರ ಜೀವನ.. ಆದರೆ ಎಲ್ಲವೂ ಸರಿಯಾದಾಗ ಬಹುಶಃ ಭಗವಂತ ಒಮ್ಮೊಮ್ಮೆ ಕಲ್ಲು ಮನಸ್ಸಿನವನಾಗಿ ಬಿಡುವನೋ ಏನೋ ತಿಳಿಯದು.. ಇಂದು ಈ ಎರಡೂ ಜೀವಗಳು ಹಸೆಮಣೆ ಏರಿ ಅಕ್ಕ ಪಕ್ಕ ಕೂರಬೇಕಿದ್ದ ಜೋಡಿ ಅಕ್ಕಪಕ್ಕದಲ್ಲಿ ಸಮಾಧಿಯಾಗಿ ಹೋದರು.. ಹೌದು ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ಮಾಡುವ ಧನುಷ್ ಮೊನ್ನೆ ಮೇ ಹನ್ನೊಂದನೇ ತಾರೀಕಿನಂದು ಗ್ರಾಮದಲ್ಲಿ ಜಾತ್ರೆ ಇದ್ದ ಕಾರಣ ಬೈಕಿನಲ್ಲಿ ಊರಿನ ಕಡೆಗೆ ಬರುತ್ತಿದ್ದನು..

ಆದರೆ ಬಹುಶಃ ಅದೇ ಧನುಷ್ ನ ಕೊನೆಯ ಪ್ರಯಾಣ ಎಂದು ಆತ ಕನಸಿನಲ್ಲಿಯೂ ಊಹಿಸಿರಲಿಲ್ಲವೇನೋ.. ಹೌದು ಧನುಶ್ ಬೆಂಗಳೂರಿನಿಂದ ಮಸ್ಕಲ್ ಗೆ ಮರಳುವಾಗ ಡಾಬಸ್ಪೇಟೆಯ ಬಳಿ ಕುಲುವನಹಳ್ಳಿಯ ಬಳಿ ರಸ್ತೆಯಲ್ಲಿ ನಡೆದ ಘಟನೆಯಿಂದಾಗಿ ಸ್ಥಳದಲ್ಲಿಯೇ ಜೀವ ಕಳೆದುಕೊಂಡು ಬಿಟ್ಟಿದ್ದ.. ಆತನನ್ನು ಮಸ್ಕಲ್ ನ ತಮ್ಮ ಜಮೀನಿನಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗಿತ್ತು.. ಇನ್ನು ಅತಿಯಾಗಿ ಪ್ರೀತಿಸುತ್ತುದ್ದ ಹುಡುಗ ಧನುಷ್ ನನ್ನು ಕಳೆದುಕೊಂಡು ಸುಷ್ಮಾ ಕುಗ್ಗಿ ಹೋಗಿದ್ದಳು.. ಇನ್ನೇನು ಕೆಲ ತಿಂಗಳುಗಳಲ್ಲಿ ಮದುವೆ ನಡೆಯಬೇಕಿತ್ತು.. ಆದರೆ ಈಗ ಧನುಷ್ ನನ್ನು ಕಳೆದುಕೊಂಡು ಸುಷ್ಮಾಗೆ ಈ ಜೀವನ ಬೇಡವಾಗಿ ಹೋಗಿತ್ತು..

ಧನುಷ್ ಇಲ್ಲದ ಒಂಟಿ ಜೀವನವನ್ನು ಮುಂದುವರೆಸಲು ಸಾಧ್ಯವಾಗದೇ ಸುಷ್ಮಾ ನಿನ್ನೆ ರಾತ್ರಿ ಎಂಟು ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದಾಗ ಸೇವಿಸಿ ಜೀವ ಕಳೆದುಕೊಂಡು ಬಿಟ್ಟಿದ್ದಾಳೆ.. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿದರೂ ಸಹ ಪ್ರಯೋಜನವಾಗಲಿಲ್ಲ.. ಅದಾಗಲೇ ಸುಷ್ಮಾ ಧನುಷ್ ನನ್ನು ಸೇರಿಯಾಗಿತ್ತು.. ಹೌದು ಇನ್ನು ಈ ಜೋಡಿಯ ಪ್ರೀತಿ ಕಂಡಿದ್ದ ಎರಡೂ ಕುಟುಂಬದವರು. ಇದ್ದಾಗಲಂತೂ ಇವರಿಬ್ಬರೂ ಒಂದಾಗಲು ಸಾಧ್ಯವಾಗಲಿಲ್ಲ.. ಸಾವಿನಲ್ಲಿ‌ ಒಂದಾಗಿರುವ ಈ ಜೋಡಿಯನ್ನು ದೂರ ಮಾಡುವುದು ಸರಿಯಿಲ್ಲ ಎಂದು.. ನೆಮ್ಮದಿಯಾಗಿ ಚಿರನಿದ್ರೆ ಮಾಡಲಿ ಎಂದು ಸುಷ್ಮಾಳನ್ನೂ ಸಹ ಧನುಷ್ ಸಮಾಧಿ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ಮಾಡಲು ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿ ಇಂದು ಅಂತ್ಯ ಸಂಸ್ಕಾರ ನೆರವೇರಿದೆ.

ನಿಜಕ್ಕೂ ಈ ಜೋಡಿಯದ್ದು ವಿಶೇಷ ಪ್ರೀತಿಯೋ.. ಅಥವಾ ನತದೃಷ್ಟ ಹಣೆಯ ಬರಹವೋ ತಿಳಿಯದು.. ಇದ್ದಾಗ ಅತಿಯಾಗಿ ಪ್ರೀತಿಸಿದ ಜೋಡಿ ಒಟ್ಟಾಗಿ ಜೀವನ ಮಾಡಲು ಸಾಧ್ಯವಾಗದಿದ್ದರೂ ಸಾವಿನಲ್ಲಿ ಒಂದಾಗಿದ್ದು.. ಇವರಿಬ್ಬರ ಪ್ರೀತಿಗೆ ಬೆಕೆ ಕೊಟ್ಟು ಇಬ್ಬರನ್ನೂ ಸಹ ಮದುವೆಯಾಗದಿದ್ದರೂ ಅಕ್ಕಪಕ್ಕವೇ ಸಮಾಧಿ ಮಾಡಿದ ಕುಟುಂಬದ ನಡೆ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದೆ.. ವಿಧಿಯ ಮುಂದೆ ನಮ್ಮಗಳ ಆಟ ಏನೂ ಇಲ್ಲ.. ಇಬ್ಬರಿಗೂ ಶಾಂತಿ ಸಿಗಲಿ.. ಇಬ್ಬರಿಗೂ ಮುಂದೊಂದು ಜನ್ಮವೆನ್ನುವುದು ಇದ್ದರೆ ಇಬ್ಬರು ಮದುವೆಯಾಗಿ ನೂರ್ಕಾಲ ಸುಖವಾಗಿ ಬಾಳುವಂತಾಗಲಿ..