Advertisements

ಮಗನ ಹುಟ್ಟುಹಬ್ಬದ ಸಂಭ್ರಮದಲ್ಲಿ ಶ್ವೇತಾ ಚಂಗಪ್ಪ.! ಫೋಟೋಸ್ ವೈರಲ್..

Kannada News

ನಟಿ ಶ್ವೇತಾ ಚಂಗಪ್ಪ ಇವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಆರಂಭದಿಂದಲೂ ನಟಿ ತುಂಬಾನೇ ಆಕ್ಟಿವ್ ಆಗಿ ತಮ್ಮ ನಟನೆ ಜೀವನವನ್ನು ಆರಂಭ ಮಾಡಿದವರು. ಇವರು ಕಾದಂಬರಿ ಧಾರವಾಹಿ ಮೂಲಕ ಹೆಚ್ಚಾಗಿ ಗಮನ ಸೆಳೆದಿದ್ದಾರೆ. ಹಾಗೇನೇ ಕೇವಲ ನಟನೆಯಲ್ಲಿ ಮಾತ್ರವಲ್ಲದೆ, ಕಿರುತೆರೆಯಲ್ಲಿ ಮಾತ್ರವಲ್ಲದೆ, ದೊಡ್ಡ ಪರದೆಯಲ್ಲೂ ಕೂಡ ಮಿಂಚಿದ್ದಾರೆ. ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿಯೂ ಸಹ ನಟಿ ಶ್ವೇತಾ ಚೆಂಗಪ್ಪ ಅಭಿನಯ ಮಾಡಿ ಸೈ ಎನಿಸಿಕೊಂಡಿರುವ ನಟಿಯಾಗಿದ್ದಾರೆ. ಹೌದು, ನಟಿ ಶ್ವೇತಾ ಚಂಗಪ್ಪ ಅವರು ಇತ್ತೀಚೆಗೆ ಮದುವೆಯಾಗಿ ಮಗುವಾದ ಬಳಿಕ ಯಾವ ಕಾರ್ಯಕ್ರಮದಲ್ಲೂ ಕೂಡ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ..ಆದರೆ ಇದೀಗ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಹೌದು’ ಅದು ಜೀ ಕನ್ನಡದ ಜೋಡಿ ನಂಬರ್ ಒಂದು ಕಾರ್ಯಕ್ರಮದ ಮೂಲಕ ಎಂದು ಹೇಳಬಹುದು.

Advertisements
Advertisements

ಈ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಸದ್ಯ ಹೆಚ್ಚು ಆಕ್ಟಿವ್ ಆಗಿದ್ದಾರೆ ಶ್ವೇತಾ ಚೆಂಗಪ್ಪ.. ಹೌದು ಇವರು ನಟನೆ ಮಾಡಿದರೂ, ನೃತ್ಯ ಮಾಡಿದರೂ, ಧಾರಾವಾಹಿಗಳಲ್ಲಿ ಕೂಡ ಹೆಚ್ಚು ಹೆಸರು ಮಾಡಿ ಏನೆಲ್ಲಾ ಮಾಡಿದರೂ ಅವರಿಗೆ ಇನ್ನಷ್ಟು ಹೆಸರು ತಂದುಕೊಟ್ಟಿದ್ದು ಮಾತ್ರ ನಿರೂಪಣೆಯೇ ಎಂದು ಹೇಳಬಹುದು..ಹೌದು ಬಿಗ್ ಬಾಸ್ ಮನೆಯಲ್ಲೂ ಕೂಡ ಕಾಣಿಸಿದ್ದ ಶ್ವೇತಾ ಚಂಗಪ್ಪ ಅವರು ನಂತರದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ಜೊತೆ ಮಜಾ ಟಾಕೀಸ್ ನಲ್ಲಿ ಹೆಚ್ಚು ವರ್ಷಗಳವರೆಗೆ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಹಾಗೆ ಎಲ್ಲರನ್ನು ಸಹ ಹೆಚ್ಚು ನೆಗೆಯಲ್ಲಿ ತೇಲಾಡುವಂತೆ ಮಾಡಿದ್ದಾರೆ. ಶ್ವೇತ ಚಂಗಪ್ಪ ಸೃಜನ್ ಜೊತೆ ರಾಣಿ ಪಾತ್ರದಲ್ಲಿ ಕನ್ನಡಿಗರ ಮನೆ ಮಾತಾಗಿಯೂ ಕೂಡ ಹೊರಹೊಮ್ಮಿದವರು ಎನ್ನಬಹುದು. ಹೌದು ಈಗ ಜೋಡಿ ನಂಬರ್ ಒಂದರಲ್ಲಿ ನಿರೂಪಕಿ ಆಗಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ಹೌದು, ಶ್ವೇತಾ ಜಂಗಪ್ಪ ಅವರ ಮಗ ಮತ್ತು ಪತ್ನಿಯ ವಿಚಾರ ಅಂತ ಬಂದರೆ ತುಂಬಾನೆ ಭಾವುಕರಾಗುತ್ತಾರೆ.ಹಾಗೆ ಅವರಿಬ್ಬರ ವಿಚಾರವಾಗಿ ಯಾವುದೇ ವಿಷಯ ಇದ್ದರೂ ಸಹ ಅವರ ಅಭಿಮಾನಿಗಳ ಬಳಿ ಹಂಚಿಕೊಳ್ಳುವುದು ಹೆಚ್ಚು ವಿಶೇಷ. ಇತ್ತೀಚಿಗೆ ಅವರ ಮಗ ಜಿಯಾನ್ ಮೂರನೇ ವರ್ಷದ ಹುಟ್ಟು ಹಬ್ಬವಿತ್ತು. ಈ ಪ್ರಯುಕ್ತ ಅವರ ಪತಿ ಮತ್ತು ಮಗನ ಫೋಟೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು, ಮೂರನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು ಮಗನೇ ಜಿಯಾನ್ ಅಯ್ಯಪ್ಪ ಎಂದು ಬರೆದುಕೊಂಡಿದ್ದಾರೆ ಶ್ವೇತಾ. ಹಾಗೆ ಮಾತನ್ನು ಮುಂದುವರಿಸಿದ ಶ್ವೇತಾ ಚಂಗಪ್ಪ ಅವರು ನನ್ನ ಬದುಕಿನಲ್ಲಿ ನನ್ನ ಜೀವನದಲ್ಲಿ ತುಂಬಾ ಬದಲಾವಣೆ ಆಗಿದೆ, ಅದು ನೀನು ಬಂದ ಮೇಲೆ ಜಿಯಾನ್, ನಿನ್ನನ್ನು ನನ್ನ ಮಗನನ್ನಾಗಿ ಪಡೆಯಲು ನಾನು ತುಂಬಾ ಪುಣ್ಯ ಮಾಡಿದ್ದೇನೆ, ನೀನು ಬಂದ ಮೇಲೆ ನನ್ನ ಜೀವನ ತುಂಬಾ ಬದಲಾಗಿದೆ ಎಂದು ಭಾವುಕರಾಗಿದ್ದಾರೆ.

ನಿನ್ನ ಮುಗ್ಧವಾದ ನಗು, ನೀನು ಆಟ ಆಡುವ ವಿಧಾನ, ಹಾಗೆ ನಮ್ಮೊಟ್ಟಿಗೆ ಕಳೆಯುವ ಕ್ಷಣ ಹಾಗೆ ನಿನ್ನ ಮೃದುವಾದ ಮಾತುಗಳು ನನ್ನ ಜೀವನದಲ್ಲಿ ತುಂಬಾ ಖುಷಿಯ ತಂದಿದೆ. ಎಲ್ಲರಿಗೂ ಈ ಜೀವನದಲ್ಲಿ ಸಂತೋಷದಿಂದ ಇರಬೇಕು ಎಂದರೆ ಹಲವಾರು ಕಾರಣಗಳಿರಬಹುದು. ಆದರೆ ನನ್ನ ಜೀವನದಲ್ಲಿ ಸಂತೋಷ ಇನ್ನಷ್ಟು ಹೆಚ್ಚಿಗೆ ಆಗಿದ್ದೇ ನೀನು ಬಂದ ಮೇಲೆ ಎಂದರು. ಮೂರನೇ ವರ್ಷದ ಹುಟ್ಟುಹಬ್ಬದ ಶುಭಾಶಯಗಳು ಜಿಯಾನ್ ಅಯ್ಯಪ್ಪ ಎಂದು ಶ್ವೇತಾ ಅವರು ಬರೆದುಕೊಂಡಿದ್ದಾರೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಇನ್ಸ್ಟಾಗ್ರಾಮ್ ನಲ್ಲಿಯ ಈ ಎಲ್ಲಾ ಫೋಟೋಸ್ ನೋಡಿದ ಅವರ ಅಭಿಮಾನಿಗಳು ಜಿಯಾನ್ ಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಶ್ವೇತಾ ಚಂಗಪ್ಪ ಅವರ ಮಗನಿಗೆ ಹಾರೈಸುತಿದ್ದಾರೆ. ನೀವು ಕೂಡ ಜಿಯಾನಿಗೆ ಶುಭ ಕೋರಿ..ಹಾಗೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು…