ಪ್ರಿಯ ವೀಕ್ಷಕರೆ ನಮಸ್ಕಾರ ಇವತ್ತಿನ ಕಾಲದಲ್ಲಿ ಗಂಡಿನ ಸಮಾನವಾಗಿ ಹೆಣ್ಣು ಕೂಡ ದುಡಿಯುತ್ತಾಳೆ.ಆರ್ಥಿಕವಾಗಿ ಸಬಲವಾಗುತ್ತಿದ್ದಾಳೆ. ಸಣ್ಣ ಕೂಲಿ ಕೆಲಸದಿಂದ ಹಿಡಿದು ದೂಡ್ಡ ಮಟ್ಟದ ಸರ್ಕಾರಿ ಹುದ್ದೆಗಳನ್ನು ಗಿಟ್ಟಿಸಿಕೊಂಡಿದ್ದಾಳೆ. ಮನೆಯಲ್ಲಿ ಹೆಂಡತಿಯಾಗಿ,ತಾಯಿಯಾಗಿ, ಸೂಸೆಯಾಗಿ ಮಾತ್ರವಲ್ಲದೆ ಸಮಾಜದಲ್ಲಿ ಎಲ್ಲರಿಗೂ ಮಾದರಿಯಾಗಿ ಬದುಕುತಿದ್ದಾಳೆ. ಆದರೆ ನಾವು ಹೇಳುವ ಸ್ಟೋರಿಯಲ್ಲಿ ಮಹಿಳಾ ಅಧಿಕಾರಿ ಮಾಡಿರುವ ಸುದ್ದಿ ಕೇಳಿದರೆ ಇಂತ ಮಹಿಳಾ ಅಧಿಕಾರಿಗಳು ನಮ್ಮ ಮಧ್ಯ ಇದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಯಾರು ಆ ಮಹಿಳಾ ಅಧಿಕಾರಿ,ಆಕೆ ಮಾಡಿದ ಕೆಲಸವಾದ್ರು ಏನು ಅಂತೀರಾ.

ನಾವು ಇದುವರೆಗು ಹೇಳಿದ ಅಧಿಕಾರಿ ಹೆಸರು ಶ್ವೇತಾ.. ಈಕೆ ಸರ್ಕಾರಿ ಅಧಿಕಾರಿ.. ಬೆಂಗಳೂರಿನ ಕತ್ರಿಗುಪ್ಪೆಯ ವಾರ್ಡ್ ನಂಬರ್ 163 ರ ವಾರ್ಡ್ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.. ಆದರೆ ಕಳೆದ ವಾರ ಆರ್ ಟಿ ಐ ಕಾರ್ಯಕರ್ತ ಕೃಷ್ಣಮೂರ್ತಿ ಎಂಬಾತ ಈಕೆಯ ಕಚೇರಿಗೆ ಹೋಗಿ ಗಲಾಟೆ ಮಾಡಿ ನೀನು ಯಾವ ಡಿಪಾರ್ಟ್ಮೆಂಟ್ ಗೆ ಹೋದರೂ ಬೊಡೋದಿಲ್ಲ.. ನಿನ್ನನ್ನು ಹೇಗೆ ಕೆಲಸದಿಂದ ತೆಗೆಸಬೇಕು ಅನ್ನೋದು ನನಗೆ ಗೊತ್ತಿದೆ ಎಂದು ಕೂಗಾಡಿದ್ದನು.. ಇದೇ ಕಾರಣಕ್ಕೆ ಶ್ವೇತಾ ಚೆನ್ನಮ್ಮನಕೆರೆ ಅಚ್ವುಕಟ್ಟು ಪೊಲೀಸರಿಗೆ ಕೃಷ್ಣಮೂರ್ತಿ ಮೇಲೆ ದೂರು ನೀಡಿದ್ದರು.. ಇತ್ತ ಪೊಲೀಸರು ಆರ್ ಟಿ ಐ ಕಾರ್ಯಕರ್ತ ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.. ವಿಚಾರಣೆ ನಡೆಸಿದಾಗಲೇ ಅಸಲಿ ಕಥೆ ಬಯಲಾಗಿದ್ದು.

ಪೋಲಿಸ ತನಿಖೆಯ ನಂತರ ಆರ್ ಟಿ ಐ ಕಾರ್ಯಕರ್ತ ಕೃಷ್ಣಮೂರ್ತಿಯ ಫೋನ್ ನಲ್ಲಿ ಇದ್ದ ಆಡಿಯೋ ಮಹಿಳಾ ಅಧಿಕಾರಿ ಶ್ವೇತಾರ ನಿಜಬಣ್ಣ ಬಯಲು ಮಾಡಿದೆ.. ಕೃಷ್ಣಮೂರ್ತಿ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಸತ್ಯ ಬಾಯಿಬಿಟ್ಟುದ್ದಾನೆ. ಶ್ವೇತಾ ಮಾಡುತ್ತಿದ್ದ ನಿಗೂಢ ಕೆಲಸಗಳ ಬಗ್ಗೆ ಬಾಯಿ ಬಿಟ್ಟಿದ್ದಾನೆ.. ಹೌದು ತನ್ನನ್ನು ಶ್ವೇತಾ ಕರೆಸಿಕೊಂಡು ಕೆಲ ಮಾಹಿತಿ ಕೊಟ್ಟು ಅದರ ಮೇಲೆ ಆರ್ ಟಿ ಐ ಅರ್ಜಿ ಸಲ್ಲಿಸಿ ನಂತರ ಪಾರ್ಟಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಸತ್ಯ ಈಗ ಬಯಲಾಗಿದೆ.. ಹೌದು ಇದಕ್ಕೆ ಸಂಬಂಧಿಸಿದ ಹಾಗೆ ಕೃಷ್ಣ ಮೂರ್ತಿ ತನ್ನ ಫೋನ್ ನಲ್ಲಿ ಖುದ್ದಾಗಿ ಶ್ವೇತಾ ಜೊತೆ ಮಾತನಾಡಿರುವ ಸಂಭಾಷಣೆಯ ಆಡಿಯೋವನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಕಹಾನಿಮೇ ಟ್ವಿಸ್ಟ್ ಎಂಬಂತೆ.. ಆತ ನೀಡಿರುವ ವೈಸ್ ರೆಕಾರ್ಡ ಈಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಹೌದು ಕೃಷ್ಣಮೂರ್ತಿಗೆ ಫೋನ್ ಮಾಡಿರುವ ಶ್ವೇತಾ ಸೈಟ್ ಒಂದಕ್ಕೆ ಸಂಬಂಧಪಟ್ಟಂತೆ ಆರ್ ಟಿ ಐ ಅರ್ಜಿ ಹಾಕು ಎಂದಿದ್ದಾರೆ.. ಅದರ ಮೂಲಕ ಮಾಹಿತಿ ಪಡೆದು ಜನರಿಂದ ಹಣ ವಸೂಲಿಗೆ ಮುಂದಾಗಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿದೆ… ಬೆಂಗಳೂರಿನ ಸಿಪಿ ಲೇಔಟ್ ನಲ್ಲಿರುವ ಸೈಟ್ ನಂಬರ್ ೬೫ ಕ್ಕೆ ಸಂಬಂಧ ಪಟ್ಟಂತೆ ಆರ್ ಟಿ ಐ ಹಾಕಲು ಕೃಷ್ಣ ಮೂರ್ತಿಗೆ ತಿಳಿಸಿದ್ದಾರೆ.. ಆದರೆ ಅದ್ಯಾಕೋ ಕೊನೆಗೆ ಈ ಪ್ರಕರಣದಲ್ಲಿ ತಾನು ಸಿಕ್ಕಿ ಹಾಕಿಕೊಳ್ಳುವಂತೆ ಅನಿಸಿದಾಗ ಕೃಷ್ಣಮೂರ್ತಿಯನ್ನೇ ಸಿಕ್ಕಿಸಲು ಪ್ರಯತ್ನ ಮಾಡಿದ್ದಾರೆ.. ಇದರಿಂದ ಕೋಪಗೊಂಡ ಕೃಷ್ಣಮೂರ್ತಿ ಶ್ವೇತಾಳ ಕಚೇರಿಗೆ ಬಂದು ಗಲಾಟೆ ಮಾಡಿ ಕೊನೆಗೆ ಪೊಲೀಸರ ಮುಂದೆ ಎಲ್ಲ ಸತ್ಯವನ್ನು ಬಾಯಿಬಿಟ್ಟಿದ್ದಾನೆ..ಇದರಿಂದ ಕಂಗಾಲಾದ ಮಹಿಳಾ ಅಧಿಕಾರಿ ಜೈಲಿನಲ್ಲಿ ಕಂಬಿ ಎನಿಸಲು ಸಿದ್ಧರಾಗಬೇಕಿದೆ.
ಸರ್ಕಾರದ ಕೆಲಸ ದೇವರ ಕೆಲಸ ಎಂಬ ನಾಣ್ಣುಡಿಯಂತೆ ಸಿಕ್ಕ ಕೆಲಸದಲ್ಲಿ ತೃಪ್ತಿ ಕಾಣದೆ ಬಡವರ ಬಾಯಿ ಬಡೆದು ಹಣ ಸಂಪಾದಿಸಿದರೆ ಕೊನೆಗೆ ಅವರು ಸೆರುವುದು ಜೈಲು ಪಾಲು ಎಂಬುವುದಕ್ಕೆ ಈ ಸ್ಟೋರಿನೆ ಸಾಕ್ಷಿ.. ಅಧಿಕಾರಿಗೆ ದೇವರು ಎಂದು ನಂಬಿ ಬಂದು ಜನರಿಗೆ ಈ ರೀತಿ ಮೋಸ ಮಾಡುವುದು ನಿಜಕ್ಕೂ ಅಪರಾಧ. ತಿಂಗಳ ಕೊನೆಯಲ್ಲಿ ಕೈತುಂಬ ಹಣ ಬಂದರು ಬಡವರ ಹಣಕ್ಕಾಗಿ ಆಸೆ ಪಡುವ ಅಧಿಕಾರಿಗಳಿಗೆ ಇದೇ ರೀತಿಯಾಗಬೇಕು.