Advertisements

ತಂದೆ ಕಾಲಿಗೆ ಬಿದ್ದು ಕೇಳಿಕೊಂಡರು ಹಠಕ್ಕೆ ಬಿದ್ದ 16 ವರ್ಷದ ಮಗಳು ಪ್ರೀತಿಸಿದ ಹುಡುಗನ ಜೊತೆ ಹೋದಳು.. ಆದ್ರೆ ಎರಡೇ ದಿನಕ್ಕೆ ಏನಾಗಿದೆ ನೋಡಿ!

Kannada News

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನಸುಗಳು ತುಂಬಾನೇ ಸೂಕ್ಷ್ಮವಾಗುತ್ತಿವೆ. ಏನನ್ನು ಜೋರಾಗಿ ಅನ್ನುವಂತಿಲ್ಲ, ಬೆದರಿಸಿ ಬರೆಯುವಂತಿಲ್ಲ. ನಮಗೆಲ್ಲ ಅಮ್ಮಂದಿರು ಕೈಗೆ ಏನು ಸಿಗುತ್ತೋ ಅದರಿಂದಲೇ 4 ಹಾಕುತ್ತಿದ್ದರು. ಕೆಲ ಸಮಯ ಕಳೆದ ನಂತರ ಮತ್ತೆ ಮುದ್ದಿಸುತ್ತಿದ್ದರು. ಆದರೆ ಇಂದಿನ ಮಕ್ಕಳು ಕಲಿಯುತ್ತಿರುವಾಗಲೇ ತಮ್ಮ ಜೀವನದ ಅದೆಷ್ಟೋ ನಿರ್ಧಾರಗಳನ್ನು ಕೈಗೊಂಡಿರುತ್ತಾರೆ. ಅಷ್ಟೇ ಯಾಕೆ ಹದಿಹರೆಯದಲ್ಲಿ ಆದ ಆಕರ್ಷಣೆಯನ್ನೇ ಪ್ರೀತಿಯೆಂದುಕೊಂಡು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ.

ಜೊತೆಗೆ ತಂದೆತಾಯಿಗಳಿಗೆ ಸಹಿಸಲಾಗದ ನೋವು ನೀಡುತ್ತಾರೆ. ಇದೀಗ ಕಾವ್ಯ ಮಾಡಿದ್ದು ಇದನ್ನೇ.
ಕಾವ್ಯಾ ಗೆ ಕೇವಲ 16 ವರ್ಷ ಮಾತ್ರ ವಯಸ್ಸು. ವಯಸ್ಸಲ್ಲಿ ಪ್ರೀತಿ ಆಕರ್ಷಣೆ ಸಹಜ ಕೆಲವರು ಆಕರ್ಷಣೆಯನ್ನೇ ಪ್ರೀತಿಯೆಂದು ಹಾಳಾದರೆ, ಇನ್ನು ಕೆಲವರು ಪ್ರೀತಿಸಿ ವಿವಾಹವಾಗಿ ಬದುಕಲು ಕಷ್ಟವಾಗಿ ಕೊನೆಗೆ ಸಾ’ವಿ’ಗೆ ಶರಣಾಗುತ್ತಿದ್ದಾರೆ. ಈ ಪುಟ್ಟ ಹುಡುಗಿ ಕಾವ್ಯ ಕೂಡ ಇಂತಹದೇ ಒಂದು ತಪ್ಪು ನಿರ್ಧಾರ ಮಾಡಿ ಜೀವನ ಕಳೆದುಕೊಂಡಿದ್ದಾಳೆ. ಕಾವ್ಯ ಇದ್ದದ್ದು ರಾಮನಗರ ತಾಲೂಕಿನ ಸುಗ್ಗನಹಳ್ಳಿಯಲ್ಲಿ. ತಂದೆ ತಾಯಿ ಕೃಷಿಕರು. ಮಗಳನ್ನು ಚೆನ್ನಾಗಿ ಒದಿಸಬೇಕೆಂದು ಹಗಲಿರುಳು ಬಿಸಿಲಲ್ಲಿ ದುಡಿಯುತ್ತಿದ್ದ ಶ್ರಮಜೀವಿಗಳು.

ಆದರೆ ಮಗಳು ಕಾವ್ಯ ಕಾಲೇಜು ಮೆಟ್ಟಿಲು ಹತ್ತಿ, ಮಾಡಬಾರದ ಕೆಲಸಗಳನ್ನು ಮಾಡಿಬಿಟ್ಟಿದ್ದಳು. ಓದುವ ಕಡೆ ಮಾತ್ರ ಗಮನ ಕೊಡದೆ ಕಾವ್ಯ ಪ್ರೀತಿ ಪ್ರೇಮ ಎಂದು ಹುಡುಗನೊಬ್ಬ ನೊಂದಿಗೆ ಸುತ್ತಾಡುತ್ತಿದ್ದಳು. ಈ ವಿಷಯ ತಿಳಿದ ತಂದೆ ತಾಯಿ ಮಗಳಿಗೆ ಬುದ್ಧಿ ಹೇಳಿದರು. ಆದರೆ ಕಾವ್ಯ ಅದಾಗಲೇ ತುಂಬಾ ಮುಂದುವರೆದಿದ್ದಳು. ಪ್ರೀತಿಸಿದ ಹುಡುಗನೊಂದಿಗೆ ಈಗಲೇ ಮದ್ವೇ ಮಾಡಿಕೊಡಿ ಎಂದು ಹಠ ಹಿಡಿದಳು. ಇದು ನಿನ್ನ ತಪ್ಪು ನಿರ್ಧಾರ ಮಗಳೇ.

ನೀನು ಇನ್ನೂ ಚಿಕ್ಕವಳು. ಮೊದಲು ಓದು ಮುಗಿಸು ಎಂದು ತಂದೆ ಎಷ್ಟು ಹೇಳಿದರು. ಆದರೆ ಕಾವ್ಯ ತಂದೆ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಕಾಲು ಹಿಡಿದು ಅವರ ತಂದೆ ಊರಲ್ಲಿ ನನ್ನ ಮರ್ಯಾದೆ ಕಳೆಯಬೇಡ, ನೀನು ಮೊದಲು ಓದು ಮುಗಿಸು, ನಂತರ ಮದುವೆ ಬಗ್ಗೆ ಯೋಚಿಸೋಣ ಎಂದು ಬೇಡಿಕೊಂಡಿದ್ದರು. ಮಗಳ ಮನಸ್ಸು ಕಿಂಚಿತ್ತು ಕರಗಲಿಲ್ಲ ಅಷ್ಟರಮಟ್ಟಿಗೆ ಕಾವ್ಯ ಪ್ರೀತಿಯ ಆಳಕ್ಕೆ ಹೋಗಿದ್ದಳು. ಮರುದಿನವೇ ಪ್ರೀತಿಸಿದ ರಾಮನಗರ ತಾಲೂಕಿನ ದೇವರಸೆಗೌಡ ದೊಡ್ಡಿಯ 26 ವರ್ಷದ ಹರೀಶ್ ಎಂಬುವರೊಂದಿಗೆ ಮನೆ ಬಿಟ್ಟು ಹೋದಳು.

ಇತ್ತ ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಹರೀಶ್ ಅವಳಿಗಿಂತ 10 ವರ್ಷ ದೊಡ್ಡವನಾಗಿದ್ದ. ಇಬ್ಬರ ಮಧ್ಯ ವಯಸ್ಸಿನ ಅಂತರವಿದ್ದರೂ ಒಂದು ರೀತಿಯಲ್ಲಿ ಹತ್ತಿರವಾಗಿ ಮುಂದುವರಿದಿದ್ದರು. ಮಗಳು ಕಾಣದಿದ್ದಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಆಗ ಪ್ರಿಯಕರ ಹರೀಶ್ ನೊಂದಿಗೆ ಓಡಿ ಹೋದ ಸುದ್ದಿ ತಿಳಿಯುತ್ತದೆ. ಇವರಿಬ್ಬರು ಓಡಿಹೋಗಿ ಸುಖವಾಗಿ ಜೀವನ ಸಾಗಿಸಿದರೆ ಹೆತ್ತವರಿಗೆ ಸ್ವಲ್ಪ ನೋವು, ಕೋಪ ಕಡಿಮೆಯಾಗುತ್ತಿತ್ತು.

ಆದರೆ ಇಬ್ಬರು ವಯಸ್ಸಿನವರಾಗಿದ್ದು ದುಡುಕಿನ ನಿರ್ಧಾರ ಒಂದನ್ನು ಮಾಡಿಬಿಟ್ಟಿದ್ದರು. ಹೌದು ಇಬ್ಬರು ದೇವಸ್ಥಾನದಲ್ಲಿಯೂ ಎಲ್ಲಿಯೋ ವಿವಾಹವಾಗಿದ್ದಾರೆ. ಕೆಲಸಮಯ ಒಟ್ಟಿಗೆ ಕಳೆದಿದ್ದಾರೆ. ನಂತರ ರಾಮದೇವರ ಬೆಟ್ಟಕ್ಕೆ ಹೋಗಿದ್ದಾರೆ. ಅಲ್ಲಿ ಏನನ್ನು ಚರ್ಚಿಸಿ ಈ ನಿರ್ಧಾರಕ್ಕೆ ಬಂದರು ಗೊತ್ತಿಲ್ಲ. ಅವರಿಬ್ಬರೂ ಒಟ್ಟಾಗಿ ಮರವೊಂದರಲ್ಲಿ ನೇ’ಣಿ’ಗೆ ಶರಣಾಗಿದ್ದಾರೆ. ವಿಷಯ ತಿಳಿದ ಎರಡು ಮನೆಯ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದಾರೆ. ಕಾವ್ಯಳ ತಂದೆ ತಾಯಿ ಇವರನ್ನು ಆ ಸ್ಥಿತಿಯಲ್ಲಿ ನೋಡಿ ಕು’ಸಿ’ದು ನೆಲಕ್ಕೆ ಬಿ’ದ್ದಿದ್ದು, ನೋವು ಸಹಿಸಲಾಗದೆ ಒದ್ದಾಡಿದ್ದಾರೆ. ಇತ್ತ ಮನೆಗೆ ಆಧಾರವಾಗ ಬೇಕಿದ್ದ ಹರೀಶ್ ನನ್ನು ಕಂಡು ತಂದೆ ತಾಯಿಗೆ ದಿ’ಕ್ಕೇ ತೋಚದಂತಾಗಿದೆ.

ಇವರೇನೋ ಪ್ರೀತಿಸಿ ಸಾ’ವಿ’ನಲ್ಲಿ ಒಂದಾದರು. ಪ್ರೀತಿಯೇ ಹೆಚ್ಚೆಂದರು. ಆದರೆ 20, 25 ವರ್ಷಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ತಂದೆ ತಾಯಿಗೆ ಈ ನೋವು ಅರಗಿಸಿಕೊಳ್ಳಲು ಆದಿತೇ.. ಚಿಕ್ಕ ವಯಸ್ಸಿನ ಕಾವ್ಯ ತಂದೆ ಕಾಲಿಗೆ ಬಿದ್ದರೂ ಕರಗಲಿಲ್ಲ ಅಷ್ಟರಮಟ್ಟಿಗೆ ಹರೀಶನ ಪ್ರೀತಿ ಗೆದ್ದಿತೇ? ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳಬೇಕಾಗಿದ್ದ ಹರೀಶ್ ಈಗ ಇಲ್ಲದೆ ಅವರು ಅನಾಥರಾಗಿದ್ದಾರೆ. ಅವರಿಗೆ ಆಧಾರವಾಗ ಬೇಕಿದ್ದ ಒಬ್ಬನೇ ಮಗ ಹರೀಶ್. ಸಾವಿಗೂ ಮುನ್ನ ಒಮ್ಮೆಯೂ ತಂದೆ-ತಾಯಿಯ ನೆನಪಾಗಲಿಲ್ಲವೇ? ಈ ವಯಸ್ಸಿನಲ್ಲಿ ಮಕ್ಕಳನ್ನು ಕಳೆದುಕೊಂಡು, ಒಡಲು ಬರಿದು ಮಾಡಿಕೊಂಡು ಅನುಭವಿಸುವ ನೋವು ಆ ಭಗವಂತನೆ ಬಲ್ಲ. ಇವರಿಗೆ ನೋವು ಸಹಿಸುವ ಶಕ್ತಿ ಆ ದೇವರೇ ಕರುಣಿಸಬೇಕು.