ನಮಸ್ತೆ ಸ್ನೇಹಿತರೆ, ತಾಯಿ ಮಗನಷ್ಟೇ ಪವಿತ್ರವಾದ ಪ್ರೀತಿ ಅಣ್ಣ ಮತ್ತು ತಂಗಿಯದು. ನಾವು ಹಲವು ಕಡೆ ಹೆಂಡತಿ, ಪ್ರೇಯಸಿ ಗೋಸ್ಕರ ಸ್ಮಾರಕಗಳು ದೇವಸ್ಥಾನಗಳು ಕಟ್ಟಿರೋದನ್ನ ನೋಡಿರುತ್ತೇವೆ.. ಆದರೆ ತಂಗಿಗೆ ದೇವಸ್ಥಾನ ಕಟ್ಟಿರೋದು ಎಲ್ಲೂ ನೋಡಲು ಸಾಧ್ಯವೇ ಇಲ್ಲ.. ಆದರೆ ಈ ಅಣ್ಣ ಅಂತಹ ಕೆಲಸ ಮಾಡಿದ್ದಾನೆ.. ಅಷ್ಟಕ್ಕೂ ಈ ಅಣ್ಣ ತಂಗಿಗೋಸ್ಕರ ದೇವಸ್ಥಾನ ಕಟ್ಟಿಸಲು ಕಾರಣ ಏನು ಎಂಬುದನ್ನು ನೋಡೊಣ. ಈ ಘಟನೆ ನಡೆದಿರುವುದು ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ.. ಆ ವ್ಯಕ್ತಿಯ ಹೆಸರು ಶಿವ ಪ್ರಸಾದ್, ಆತನ ತಂಗಿಯ ಹೆಸರು ಸುಬ್ಬಲಕ್ಷ್ಮಿ..

ಬಿಎ ಓದಿದ್ದ ಸುಬ್ಬಲಕ್ಷ್ಮಿ ಅರಣ್ಯ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಪ್ರತಿದಿನ ರೈಲಿನಲ್ಲಿ ಆಪಿಸ್ ಗೆ ಹೋಗುತ್ತಿದ್ದ ಸುಬ್ಬಲಕ್ಷ್ಮಿ ಒಂದು ದಿನ ಅಣ್ಣನ ಜೊತೆ ಆಪಿಸ್ ಗೆ ಹೋಗುತ್ತಿದ್ದಾಗ.. ಹಿಂದೆಯಿಂದ ಬಂದ ವ್ಯಾನ್ ಬೈಕ್ ಗೆ ಗು’ದ್ದಿತು. ಇದರ ಪರಿಣಾಮ ಇಬ್ಬರು ಕೆಳಗೆ ಬೀಳುತ್ತಾರೆ.. ಆದರೆ ಸುಬ್ಬಲಕ್ಷ್ಮಿ ತಲೆಗೆ ಬಲವಾದ ಪೆ’ಟ್ಟು ಬಿದ್ದ ಕಾರಣ ಅಣ್ಣನ ಮಡಿಲಲ್ಲೆ ಪ್ರಾ’ಣ ಬಿಡುತ್ತಾರೆ. ತನ್ನ ಕೈಯಿಂದ ಮುದ್ದಾಗಿ ಸಾಕಿದ ತಂಗಿ ತನ್ನ ಮಡಿಲಲ್ಲಿ ಪ್ರಾ’ಣ ಬಿಟ್ಟಿದಳು ಅನ್ನೋದು ಶಿವ ಪ್ರಸಾದ್ ಗೆ ಎಲ್ಲಿಲ್ಲದ ನೋವು ತರಿಸುತ್ತದೆ..

ಈ ಕಾರಣಕ್ಕಾಗಿ ಬಡವನಾದರು ಸಹ ಯಾರು ಬಳಿಯೂ ಒಂದು ರೂಪಾಯಿ ಕೂಡ ಪಡೆಯದೆ ತನ್ನ ತಂಗಿಗೆ ದೇವಸ್ಥಾನ ಕಟ್ಟಿಸಿ ಪ್ರತಿದಿನ ಪೂಜೆ ಮಾಡುತ್ತಿದ್ದಾನೆ ಈ ಶಿವಪ್ರಸಾದ್. ಪ್ರತಿದಿನ ಪೂಜೆ ಮಾಡುವ ಮೂಲಕ ತನ್ನ ತಂಗಿಯನ್ನು ವಿಗ್ರಹದಲ್ಲಿ ಕಾಣುತ್ತೇನೆ ಎಂದು ಹೇಳುತ್ತಿದ್ದಾನೆ ಈ ಅಣ್ಣ.. ಅಣ್ಣ ಮತ್ತು ತಂಗಿಯ ಸಂಬಂಧವೆಂದರೆ ಅದು ಅಪ್ಪ ಮಗಳ ಸಂಬಂಧವಿದ್ದಂತೆ. ತಂದೆ ತಾಯಿಯನ್ನು ಬಿಟ್ಟು ನಮ್ಮನ್ನು ಈ ಪ್ರಪಂಚದಲ್ಲಿ ಹೆಚ್ಚು ಪ್ರೀತಿಸುವ ವ್ಯಕ್ತಿ ಅಂದರೆ ಅದು ಅಣ್ಣ, ಇಲ್ಲವೆಂದರೆ ತಂಗಿ ಆಗಿರುತ್ತಾಳೆ. ಜೀವನದ ಜಂಜಾಟದಲ್ಲಿ ಆ ಬಾಂಧವ್ಯ ಮರೆಯಾಗದಿರಲಿ ಅನ್ನುವುದು ನಮ್ಮೆಲ್ಲರ ಆಶಯ..