Advertisements

ಒಂಬತ್ತು ತಿಂಗಳು ತುಂಬದೇ ಮಗುವನ್ನು ಆಚೆತೆಗೆದು ಮತ್ತೆ ಹೊಟ್ಟೆ ಒಳಗೆ ಕಳುಹಿಸಿ ಹೊಲಿಗೆ ಹಾಕಿದರು! ಡಾಕ್ಟರ್ ಮಾಡಿದ ಆ ಕೆಲಸದಿಂದ ತಾಯಿ ಮಗುವಿಗೆ ಏನಾಗಿದೆ ಗೊತ್ತಾ..?

Kannada News

ಸ್ನೇಹಿತರೆ, ಮನುಷ್ಯ ಎಂದ ಮೇಲೆ ಹೊಸ ಹೊಸ ವಿಧಾನಗಳು ಹಾಗೂ ಅನ್ವೇಷಣೆಗಳು ನಡೆಯುತ್ತಲೇ ಇರುತ್ತವೆ. ತನ್ನ ಸುತ್ತಮುತ್ತಲಿನ ಜಗತ್ತನ್ನು ಟೆಕ್ನಾಲಜಿಯ ಮೂಲಕ ಡೆವಲಪ್ ಮಾಡಿಕೊಂಡು ಇಷ್ಟರಮಟ್ಟಿಗೆ ಬಂದು ನಿಂತಿರುವ ಮಾನವ ಇನ್ನು ಮಂಗನಾಗೇ ಉಳಿದಿಲ್ಲ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದರೆ ತಪ್ಪಾಗಲಾರದು. ಹೌದು ಅಮೆರಿಕದ ಆರು ತಿಂಗಳ ಗರ್ಭಿಣಿ ಮಾರ್ಕೆಟ್ ಆಸ್ಪತ್ರೆಗೆ ಹೋಗಿ ಸಿಡಿಲು ಹೊಡೆದಂತೆ ಶಾಕಿಂಗ್ ಸುದ್ದಿಯೊಂದನ್ನು ಡಾಕ್ಟರ್ಗೆ ತಿಳಿಸಿದ್ದಾಳೆ.

ಅಷ್ಟಕ್ಕೂ ಆಕೆ ಯಾರು? ಆಕೆಯ ಮಗುವಿನ ಏನಾಯ್ತು? ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಆಕೆ ತನ್ನ ದೇಹದೊಳಗೆ ಆಗುತ್ತಿರುವ ಕೆಲವು ಏರುಪೇರುಗಳನ್ನು ಡಾಕ್ಟರ್ಗೆ ತಿಳಿಸಿದಾಗ ಅಲ್ಲಿನ ವೈದ್ಯರು ತಕ್ಷಣವೇ ಅಲ್ಟ್ರಾಸೌಂಡ್ ಕ್ಯಾನ್ ಮಾಡಿದ ಡಾಕ್ಟರ್ ಮಗುವಿಗೆ ಟ್ಯೂಮರ್ ಇದೆ ಎಂದು ಪತ್ತೆ ಹಚ್ಚಿ ಮಾರ್ಗರೇಟ್ಗೆ ಹೇಳಿದರು.ಅಲ್ಲದೆ ಆ ಟ್ಯೂಮರ್ ಮಗು ಹುಟ್ಟುವ ಮುಂಚೆ ಅಥವಾ ನಂತರ ಬರುವ ಟ್ಯೂಮರ್ ಆಗಿದ್ದು, ಅದರಿಂದ ಭೀಕರ ತೊಂದರೆಯಾಗುತ್ತದೆ.

ಗರ್ಭಿಣಿಯ ಪ್ರಾಣಕ್ಕೂ ಕೂಡ ಕುತ್ತು ಬರುತ್ತದೆ ಎಂಬ ವಿಷಯವನ್ನು ಮನೆಯವರಿಗೆ ಹಾಗೂ ಗರ್ಭಿಣಿಗೆ ಧೈರ್ಯ ಹೇಳಿ ತಿಳಿಸಿದರು. ಅಷ್ಟೇ ಅಲ್ಲದೆ ಮಗು ಹಾಗೂ ತಾಯಿ ಇಬ್ಬರ ಪ್ರಾಣವನ್ನು ಬದುಕಿಸಬೇಕು ಎಂಬ ನಿಟ್ಟಿನಲ್ಲಿ ಡಾಕ್ಟರ್ಗಳು ಆರು ತಿಂಗಳಿಗೆ ಆಪರೇಷನ್ ಮಾಡಿ ಮಗುವನ್ನು ಆಚೆತೆಗೆದು ಮಗುವಿನ ದೇಹದ ಮೇಲೆ ಬೆಳೆಯುತ್ತಿದ್ದಂತ ಟ್ಯೂಮರನ್ನು ಕತ್ತರಿಸಿ ಹಾಕಿದರು. ಅಷ್ಟೇ ಅಲ್ಲದೆ ಮಗು ಸಂಪೂರ್ಣ ಬೆಳವಣಿಗೆ ಕಾಣಲಿದೆ ಎಂಬ ಉದ್ದೇಶದಿಂದ ಮತ್ತೆ ಗರ್ಭಚೀಲದ ಒಳಗೆ ಕಳುಹಿಸಿ ಸೀಸರಿಂಗ್ ಮುಗಿಸಿದರು. ಹೀಗೆ ಐದು ಗಂಟೆಗಳ ಕಾಲ ಮಗು ಹಾಗೂ ತಾಯಿಗೆ ಯಾವುದೇ ತೊಂದರೆಯಾಗದಂತೆ ಜೋಪಾನವಾಗಿ ಆಪರೇಷನ್ ಮಾಡಿ ಡಾಕ್ಟರ್ ಕೆಲವು ದಿನಗಳೊಳಗೆ ಗರ್ಭಿಣಿಯನ್ನು ಮನೆಗೆ ಕಳುಹಿಸಿದರು.

ಮೂರು ತಿಂಗಳಾದ ನಂತರ ಜನಿಸಿದ ಮಗು ಇಂದಿಗೂ ಕೂಡ ಆರೋಗ್ಯ ಹಾಗೂ ಉತ್ತಮ ಗಾತ್ರದೊಂದಿಗೆ ಸುಂದರವಾಗಿದೆ. ತನಗೆ ಮರುಜೀವ ಕೊಟ್ಟ ಡಾಕ್ಟರ್ಗೆ ಕೈಮುಗಿದು ಮಾರ್ಗರೇಟ್ ಆ ಮಗುವಿಗೆ ಡಾಕ್ಟರ್ ಹೆಸರನ್ನು ಇಟ್ಟಿದ್ದಾಳೆ. ವೈದ್ಯಲೋಕದಲ್ಲಿ ನಡೆದಿರುವ ಈ ಘಟನೆಯ ಕುರಿತು ನಿಮ್ಮ ಅನಿಸಿಕೆಯೇನು ಎಂಬುದನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.