Advertisements

ಕೊ’ರೋನ ನಿಯಮ ಉಲ್ಲಂಘನೆ ಸಂಸದ ತೇಜಸ್ವಿ ಸೂರ್ಯ ವಿರುದ್ಧ ನೆಟ್ಟಿಗರು ಚಾ’ಟಿ..

Kannada News

ನಮಸ್ತೆ ಸ್ನೇಹಿತರೆ, ಕೊ’ರೊನಾ ಎರಡನೇ ಅಲೆ ಇನ್ನೂ ಸಂಪೂರ್ಣ ಕೊನೆಯಾಗಿಲ್ಲ. ದಿನನಿತ್ಯ 400 ರಿಂದ 600 ರಷ್ಟು ಕೊ’ವಿಡ್-19 ಸೋಂಕು ಪ್ರಕರಣಗಳು ಬೆಂಗಳೂರು ನಗರದಲ್ಲಿ ದೃಢವಾಗುತ್ತಿದೆ. ಉಳಿದಂತೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೂಡ ಕೊ’ರೊನಾ ಪ್ರಕರಣಗಳು ಶೂನ್ಯಕ್ಕೆ ಇಳಿದಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ದಿನ ನಿತ್ಯ 17 ಸಾವಿರ ಕೇಸ್ ಬರುತ್ತಿದೆ ಅಷ್ಟೇ ಅಲ್ಲದೆ ಕೊ’ವಿಡ್ ಮೂರನೇ ಅಲೆಯ ಆತಂ’ಕ ಕೂಡ ಜನರಲ್ಲಿದೆ. ಹೀಗಾಗಿ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು, ಇತ್ಯಾದಿ ಕೊ’ರೊನಾ ಮಾರ್ಗಸೂಚಿಗಳನ್ನು ತಪ್ಪದೆ ಆಚರಿಸುವುದು ಜನರ ಕರ್ತವ್ಯವಾಗಿದೆ.

Advertisements
Advertisements

ಈ ಬಗ್ಗೆ ಸರ್ಕಾರ, ಆರೋಗ್ಯ ಇಲಾಖೆ ಮತ್ತು ತಜ್ಞರು ಕೂಡ ಎಚ್ಚರಿಸುತ್ತಲೇ ಇದ್ದಾರೆ. ಈ ನಡುವೆ, ನಮಗೆ ಮಾದರಿಯಾಗಿ ಇರಬೇಕಾದ ಜನನಾಯಕರೇ ದಾರಿ ತಪ್ಪಿದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಯುವಕರ ನೆಚ್ಚಿನ ಲೀಡರ್ ತೇಜಸ್ವಿ ಸೂರ್ಯ ಮಾಸ್ಕ್ ಇಲ್ಲದೆ ಬೆಂಗಳೂರು ತುಂಬಾ ಸೈಕಲ್ ಸವಾರಿ ಮಾಡಿದ್ದಾರೆ. ಆ ಫೋಟೊಗಳನ್ನು ಕೂಡ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊ’ರೊನಾ ನಡುವೆ ಜನಪ್ರತಿನಿಧಿಗಳು ಹೀಗೆ ನಡೆದುಕೊಳ್ಳುತ್ತಿರುವುದು ಜನರ ಆಕ್ಷೇ’ಪಕ್ಕೆ ಕಾರಣವಾಗಿದೆ. ತೇಜಸ್ವಿ ಸೂರ್ಯ ನಡೆಗೆ ಜನರು ಖಾ’ರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ,

ಪ್ರಶ್ನೆ ಮಾಡಿದ್ದಾರೆ. ಮಾಸ್ಕ್ ಎಲ್ಲಿ? ಮಾಸ್ಕ್ ಧರಿಸಿ ಎಂದು ನೆಟ್ಟಿಗರು ಇನ್​ಸ್ಟಾಗ್ರಾಂ ಪೋಸ್ಟ್​ಗೆ ಕಮೆಂಟ್ ಮಾಡಿದ್ದಾರೆ. ಕೆಲವರು ಪೆಟ್ರೋಲ್ ದರ ಶತಕ ಬಾರಿಸಿದ ಕಾರಣದಿಂದ ಈ ರೀತಿ ಮಾಡಿದ್ದಾರೆ ಅಂತ ಕಾಮೆಂಟ್ ಮಾಡಿದ್ದಾರೆ. ತೇಜಸ್ವಿ ಸೂರ್ಯ ಮಾತ್ರವಲ್ಲ, ಸೂಕ್ಷ್ಮವಾಗಿ ಗಮನಿಸಿದರೆ ವಿವಿಧ ಪಕ್ಷಗಳ ರಾಜಕೀಯ ನಾಯಕರು ಕೊ’ರೊನಾ ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಕಂಡುಬರುತ್ತಿದೆ. ಜನರ ಹಿತ ಕಾಯಬೇಕಾದ, ಜನರಿಗೆ ತಿಳಿಹೇಳಬೇಕಾದವರೇ ಹೀಗೆ ಬೇಜವಾಬ್ದಾರಿ ತೋರುವುದು ಹಾಗೂ ಅದನ್ನು ಹೆಮ್ಮೆಯಿಂದ ಪ್ರದರ್ಶಿಸುವುದು ವಿಷಾದ ಮೂಡಿಸಿದೆ. ಸರ್ಕಾರದ ನಿಯಮಗಳನ್ನು ಪಾಲಿಸುವ ನಾಯಕರು ಹೀಗೆ ಗಾಳಿಗೆ ತೂರಿದರೆ ಸಾರ್ವಜನಿಕರ ಕಥೆಯೇನು. ಇದರ ಬಗ್ಗೆ ನೀವೇನಂತೀರಿ ಸ್ನೇಹಿತರೆ.