Advertisements

ಈ ಗ್ರಾಮದಲ್ಲಿ ಪ್ರತಿಯೊಂದು ಮನೆಗೂ ಮನೆಗೂ ಇದೆ ಒಂದೊಂದು ವಿಮಾನ..! ಅಷ್ಟಕ್ಕೂ ಈ ಗ್ರಾಮ ಯಾವುದು, ಎಲ್ಲಿದೆ ಗೊತ್ತಾ.?

Kannada News

ನಮಸ್ತೆ ಸ್ನೇಹಿತರೆ, ನಾವು ಗ್ರಾಮಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಒಂದು ಬೈಕನ್ನು ನೋಡಿರುತ್ತೇವೆ. ಇನ್ನು ಕೆಲವು ಮನೆಗಳಲ್ಲಿ ಕಾರುಗಳಿರುತ್ತವೆ. ಆದರೆ ಈ ಗ್ರಾಮಸ್ಥರ ಪ್ರತಿಯೊಂದು ಮನೆಯಲ್ಲಿ ವಿಮಾನಗಳಿವೆ, ಈ ಗ್ರಾಮಸ್ಥರು ತಾವು ಪ್ರಯಾಣಿಸಲು ವಿಮಾನ ಖರೀದಿ ಮಾಡುತ್ತಾರೆ. ಈ ಗ್ರಾಮಸ್ಥರಲ್ಲಿ ಅದರಲ್ಲೂ ಕೆಲವರ ಮನೆಯಲ್ಲಂತೂ ಎರಡರಿಂದ ನಾಲ್ಕು ವಿಮಾನಗಳಿವೆ, ಅದನ್ನು ಅವರೆ ಸ್ವತಃ ಚಾಲನೆ ಮಾಡುತ್ತಾರೆ, ಹಾಗಾದರೆ ಆ ಗ್ರಾಮದಲ್ಲಿ ಎಷ್ಟು ವಿಮಾನ ನಿಲ್ದಾಣಗಳು ಇವೆ ಎಂದರೆ, ಇಡೀ ಗ್ರಾಮದ ರಸ್ತೆಗಳು ವಿಮಾನ ನಿಲ್ದಾಣದಲ್ಲಿರುವ ರಸ್ತೆಗಳಂತೆ ನಿರ್ಮಿಸಲಾಗಿದೆ. ಅಷ್ಟಕ್ಕೂ ಈ ಗ್ರಾಮ‌ ಯಾವುದು? ಎಲ್ಲಿದೆ ಗೊತ್ತಾ.?

Advertisements
Advertisements

ಅಮೆರಿಕದ ರಾಷ್ಟ್ರದ ಫ್ಲೋರಿಡಾ ಎಂಬ ರಾಜ್ಯದ ಡೆಟೋನಾ ಬೀಚ್ ನಿಂದ ಸುಮಾರು ಹನ್ನೊಂದು ಕಿಲೋ ಮೀಟರ್ ದೂರದಲ್ಲಿ ಸ್ಪ್ರೂಸ್ ಕ್ರೆಕ್ ವಿಮಾನ ನಿಲ್ದಾಣವಿದೆ. ಇದರ ಹೆಸರಲ್ಲೇ ಅಲ್ಲಿ ಸ್ಪ್ರೂಸ್ ಕ್ರೆಕ್ ಗೇಟೆಡ್ ಕಮ್ಯೂನಿಟಿ ಎಂಬ ಗ್ರಾಮವು ಸಹ ನಿರ್ಮಾಣವಾಗಿದೆ. ಆ ಗ್ರಾಮದಲ್ಲಿ ಸುಮಾರು 6 ಸಾವಿರ ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಈ ಹಳ್ಳಿಯಲ್ಲಿ ಪ್ರತಿಯೊಂದು ಮನೆಯವರು ಸಹ ಒಂದು ವಿಮಾನವನ್ನು ಹೊಂದಿದ್ದಾರೆ..

ಇನ್ನೂ ಕೆಲವು ಶ್ರೀಮಂತ ಕುಟುಂಬದವರ ಹತ್ತಿರ ಎರಡು ಮೂರು ವಿಮಾನಗಳು ಇವೆ. ಆ ಗ್ರಾಮದ ಒಟ್ಟು ವಿಮಾನಗಳ ಸಂಖ್ಯೆ ಸುಮಾರು ಹತ್ತು ಸಾವಿರದ ಮೇಲೆ ಇರುತ್ತದೆ. ಈ ಗ್ರಾಮಸ್ಥರು ಕೆಲವೊಮ್ಮೆ ತಮ್ಮ ವಿಮಾನಗಳನ್ನು ಮನೆಯ ಮುಂದೆ ರಸ್ತೆಯಲ್ಲೇ ನಿಲ್ಲಿಸುತ್ತಾರೆ. ಇನ್ನೂ ಕೆಲವು ಮಂದಿ ಪ್ರತ್ಯೇಕವಾಗಿ ಪಾರ್ಕಿಂಗ್ ಜಾಗ ಮಾಡಿಕೊಂಡಿದ್ದಾರೆ.
ಹೀಗಾಗಿ ಆ ಗ್ರಾಮಕ್ಕೆ ಬಂದ ಪ್ರತಿಯೊಬ್ಬ ವ್ಯಕ್ತಿಗೂ ನೋಡಲು ಅದು ವಿಮಾನ ನಿಲ್ದಾಣದಂತೆ ಕಾಣಿಸುತ್ತದೆ ಎಂದು ಹೇಳುತ್ತಾರೆ.

ಅಮೇರಿಕಾದಲ್ಲಿರುವ ಈ ಗ್ರಾಮದಲ್ಲಿ ವಾಸಿಸುವ ಜನರು ಒಂದು ತಂತ್ರಜ್ಞಾನವನ್ನು ಸಹ ಕಂಡು ಹಿಡಿದಿದ್ದಾರೆ. ತಂತ್ರಜ್ಞಾನ ಏನು ಎಂದರೆ, ಯಾವ ಮನೆಯ ವಿಮಾನ ಎಲ್ಲಿ ಓಡಾಡುತ್ತಿದೆ, ಯಾವ ಪ್ರದೇಶದಲ್ಲಿದೆ ಹಾಗೂ ಯಾವ ರಸ್ತೆಯಲ್ಲಿದೆ ಎಂದು ತಿಳಿದು ಬರುತ್ತದೆ. ಇದರಿಂದ ಈ ಗ್ರಾಮಸ್ಥರಿಗೆ ಯಾವುದೇ ಅನುಮಾನವಿಲ್ಲದೆ ತಮ್ಮ ಪ್ರಯಾಣ ಸುಖಕರವಾಗಿ ನಡೆಯುತ್ತದೆ. ಇವರು ಕಂಡುಹಿಡಿದ ತಂತ್ರಜ್ಞಾನ ಅಪಘಾತಗಳು ಆಗದೆ ತಡೆಯುತ್ತದೆ ಎಂದು ಇಲ್ಲಿನ ಜನ ಹೇಳುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ.