Advertisements

ಟೈಮ್ ಪಾಸ್ ಗಾಗಿ ಮದುವೆಯಾಗುತ್ತಿದ್ದ ಈ ಭೂಪ.! ಮದುವೆಯಾದ ಮೇಲೆ ಹೆಂಡತಿಗೆ ಏನು ಮಾಡುತ್ತಿದ್ದನು ಗೊತ್ತಾ..?

Kannada News

ನಮಸ್ತೆ ಸ್ನೇಹಿತರೆ, ಮದುವೆ ಅನ್ನೋದು ಪವಿತ್ರ ಬಂಧ. ಬದುಕಿರುವಷ್ಟು ದಿನ ಸುಖವಾಗಿ ಕೂಡಿ ಬಾಳೋಣ ಅಂತ ಗ್ಯಾರಂಟಿ ಕೊಡೋ ಒಂದು ಸಂಬಂಧ. ಆದರೆ ಇಲ್ಲೊಬ್ಬ ಭೂಪ ಟೈಮ್ ಪಾಸ್ ಗಾಗಿ ಮದುವೆಗಳನ್ನು ಮಾಡಿಕೊಂಡಿದ್ದಾನೆ. ಹೌದು ನೀವು ಕೇಳಿರೋದು ಸತ್ಯ. ಇವನಿಗೇನು ಮದುವೆ ಅನ್ನೋದು ಕಾಮಿಡಿ ಆಗ್ಬಿಟ್ಟಿದೆ ಅಂತ ಎಲ್ಲ ಮಾತಾಡಿಕೊಳ್ಳುತ್ತಿದ್ದಾರೆ. ಇದು ಮಾಡ್ರನ್ ಯುಗ ಅಲ್ವಾ, ಇಂಥವರು ಇದ್ದೇ ಇರುತ್ತಾರೆ ಅಂತ. ಈ ಭೂಪ ಒಬ್ಬರಾದ ನಂತರ ಮತ್ತೊಬ್ಬರ ಜೊತೆ ಸಾಲಾಗಿ ಸಂಬಂಧ ಇಟ್ಟುಕೊಂಡಿದ್ದಾನೆ. ಅಷ್ಟಕ್ಕೂ ಇವನ ಕಥೆ ಏನು ಅಂತ ನೋಡೋಣ ಬನ್ನಿ..

Advertisements
Advertisements

ಹೌದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದಬ್ಬಡ್ಕದ ನಿವಾಸಿಯಾದ ಇವನ ಹೆಸರು ಪ್ರದೀಪ್. ಈ ಟೈಂಪಾಸ್ ಭೂಪನಿಗೆ ಮೊದ್ಲು ಪವಿತ್ರಾ ಅನ್ನುವವಳ ಜೊತೆ ಮದುವೆಯಾಗಿದೆ. ಮೊದಮೊದಲು ಎಲ್ಲಾ ಸಂತೋಷದಿಂದ ನಡೆದುಕೊಂಡು ಹೋಗಿದೆ. ಆದರೆ ದಿನಕಳೆದಂತೆ ಪವಿತ್ರಾಗೆ ಈ ಬೂಪನ ನಿಜ ಸ್ವರೂಪ ತಿಳಿಯುತ್ತಾ ಬರುತ್ತೆ. ನೀನು ಕೂಲಿಗೆ ಹೋಗಿ ಸಂಬಳ ತಗೋಂಡು ನನ್ನ ಸಾಕಬೇಕು ಅಂತ ಹಿಂ’ಸಿಸುತ್ತಿದ್ದ. ಇವನ ಕಾ’ಟ ತಡೆಯಲಾರದೆ ಪವಿತ್ರ ತನ್ನ ತವರು ಮನೆಗೆ ಹೊರಟುಹೋಗುತ್ತಾಳೆ. ಪವಿತ್ರ ಇವನ ಮನೆ ಬಿಟ್ಟು ಹೋದ ಮೇಲೆ ಈ ಪುಣ್ಯಾತ್ಮನ ಅಸಲಿ ಪ್ರೇಮ ಕತೆಗೆಳೆಲ್ಲ ಬೆಳಕಿಗೆ ಬಂದಿವೆ.

ಹೌದು ಪವಿತ್ರಾ ಇವನ ಸಂಬಂಧಕ್ಕೆ ಕೊನೆ ಹಾಡಲು ವಿ’ಚ್ಚೇ’ಧನ ಬಯಸಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಪವಿತ್ರ ಹೇಳುವ ಪ್ರಕಾರ ಈಕೆ ಮದುವೆಯಾಗೋ ಮುನ್ನವೇ ಈ ಟೈಂಪಾಸ್ ಭೂಪ ಇನ್ನೊಂದು ಮದುವೆಯಾಗಿದ್ನಂತೆ, ಈ ವಿಚಾರವನ್ನು ರಹ’ಸ್ಯವಾಗಿ ಇಟ್ಟಿದ್ದನಂತೆ. ಪವಿತ್ರ ಡೈ’ವ’ರ್ಸ್ ಕೊಡ್ತಾಳೆ ಅಂತ ಗೊತ್ತಾದ ಮೇಲೆ ಈ ಭೂಪ ಮತ್ತೊಂದು ಮದುವೆಗೆ ರೆಡಿ ಮಾಡಿಕೊಂಡಿದ್ದಾನೆ.

ಅದೇ ರೀತಿ ಪವಿತ್ರ ಮೇಲೆ ಒಂದು ಅಪವಾ’ದವನ್ನು ಮಾಡಿದ್ದಾನೆ. ಅವಳ ಜೊತೆ ಇರುವ ಮಗು ನನ್ನದಲ್ಲ, ಈಗಲೇ ಡಿಎನ್ಎ ಟೆಸ್ಟ್ ಮಾಡಿಸಬೇಕು ಅಂತ ಎಲ್ಲರಿಗೂ ಹೇಳಿಕೊಂಡು ಬಂದಿದ್ದಾನೆ. ಇಷ್ಟೇನಾ ಇವನ ಕತೆ ಅಂತ ನಿಮಗೆ ಅನಿಸಿರಬಹುದು. ಇಲ್ಲಾ ಕಣ್ರೀ ಇವನು ಅಂಗನವಾಡಿ ಶಿಕ್ಷಕಿಯೊಬ್ಬಳ ಜೊತೆ ಸಹ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ ಅಂತ ಪವಿತ್ರ ಮೀಡಿಯಾದವರ ಕ್ಯಾಮೆರಾ ಮುಂದೆ ಬಂದು ಹೇಳಿದ್ದಾಳೆ. ಈ ಭೂಪ ಟೈಮ್ ಪಾಸ್ ಗಾಗಿ ಸುಮಾರು ಹುಡುಗಿಯರ ಲೈಫ್ ಜೊತೆ ಆಟವಾಡಿದ್ದಾನೆ. ಇವನು ಎಲ್ಲಿ ಹೋದರೆ ಅಲ್ಲಿ ಒಂದು ಹುಡುಗಿಯನ್ನು ಟೈಮ್ ಪಾಸ್ ಗಾಗಿ ಬಳಸಿಕೊಳ್ಳುತ್ತಿದ್ದನಂತೆ. ಇವನನ್ನು ನೋಡಿದ್ರೆ ಕ್ಯಾಕರಿಸಿ ಉಗಿಬೇಕು ಅಂತ ಅನ್ಸುತ್ತೆ ಅಲ್ವಾ…