Advertisements

ಒಂದು ವರ್ಷಕ್ಕೆ ಟಿವಿಎಸ್ ಕಂಪನಿ ಬಿಗ್ ಬಾಸ್ ಅರವಿಂದ್ ಅವರ ಮೇಲೆ ಹೂಡಿಕೆ ಮಾಡುವ ಹಣ ಎಷ್ಟು ಗೊತ್ತಾ? ತಿಳಿದರೆ ವಾವ್ ಅಂತೀರಾ!

Kannada News

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿ ಆಗಿರುವ ಬೈಕ್ ರೇಸ್ ರೈ’ಡರ್ ಕೆ.ಪಿ ಅರವಿಂದ್ ತಮ್ಮ ಸಂಸ್ಥೆ ಟಿವಿಎಸ್ ನ ಬಗ್ಗೆ ಉತ್ತಮ ಮಾತುಗಳನ್ನು ಮಾಡಿದ್ದಾರೆ. ಬಿಗ್ ಬಾಸ್ ಮನೆಯ ಗಾರ್ಡನ್ ಅಂಗಳದಲ್ಲಿ ಚಕ್ರವರ್ತಿ ಚಂದ್ ಮತ್ತು ಪ್ರಶಾಂತ್ ಸಂಬರ್ಗಿ ಜೊತೆ ಬೈಕ್ ಜಾಕೇಟ್ ಬಗ್ಗೆ ಮಾತನಾಡುತ್ತಾ ಕುಳಿತ್ತಿದ್ದಾಗ, ಅಲ್ಲೆ ಇದ್ದ ಅರವಿಂದ್ ನಾನು ಬೈಕ್ ಮೂಲಕ ಬಿಗ್ ಬಾಸ್ ವೇದಿಕೆಗೆ ಇಳಿದು ಬಂದಿರುವೆ ಎಂದು ಹೇಳಿದ್ದಾರೆ. ಇದಕ್ಕೆ ಚಂದ್ರಚೂಡ್ ಆ’ಶ್ಚರ್ಯದಿಂದ ನೀವು ವೇದಿಕೆ ಮೇಲೆ ಬೈಕ್ ಹಾರಿಸ್ಕೊಂಡ್ರು ಬಂದ್ರಾ ಅಂತ ಪ್ರಶ್ನಿಸುತ್ತಾರೆ. ಇದಕ್ಕೆ ಅರವಿಂದ್ ಇಲ್ಲ ವೇದಿಕೆಯ ಆಯೋಜಕರು ನನಗೆ ಗೈಡ್ ಮಾಡಿದ್ದರು. ಎಲ್ಲಿ,ಹೇಗೆ ಬೈಕ್ ರೈಡ್ ಮಾಡಿ ನಿಲ್ಲಿಸಬೇಕು ಎಂದು ಸೂಚನೆ ನೀಡಿದ್ದರು. ಅವರ ಗೈಡ್ ಲೈನ್ ಅಂತೆ ಬೈಕ್ ಅನ್ನು ನಾನು ವೇದಿಕೆ ಮೇಲಿನಿಂದ ಇಳಿದೆ ಎಂದು ತಿಳಿಸಿದರು.

Advertisements
Advertisements

ಈ ಹಿಂದೆ ಅರವಿಂದ್ ರಾಜೀವ್ ಜೊತೆ ಸಹ ಈ ಬೈಕ್ ರೇಸಿಂಗ್ ಜೀವನದ ಹಾದಿಯ ಬಗ್ಗೆ ಹೇಳಿದ್ದರು. ಬೈಕ್ ರೇಸಿಂಗ್ ನ ಒಳಿತು ಕೆಡುಕು ರೈಡರ್ ಜೀವನದ ಬಗ್ಗೆ ರಾಜೀವ್ ಜೊತೆ ಮಾಹಿತಿ ಹಂಚಿಕೊಂಡಿದ್ದರು ಅರವಿಂದ್. ರಾಜೀವ್ ಕೆ.ಪಿ ಅರವಿಂದ್ ಅವರಿಗೆ ನಿಮಗೆ ಬೇರೆ ಕಂಪನಿಯಿಂದ ಆಹ್ವಾನ ಬಂದಿಲ್ಲವೇ, ಎಂದು ಪ್ರಶ್ನಿಸಿದಾಗ, ಇಲ್ಲ ನನಗೆ ಬೇರೆ ಮೋಟರ್ಸ್ ಕಂಪನಿಗಳಿಂದ ಆಫರ್ ಬಂದಿತ್ತು. ಆದರೆ ಹೆಚ್ಚು ಹಣ ಸಿಗುತ್ತದೆ ಎಂಬ ಕಾರಣಕ್ಕೆ ಕಂಪನಿಯನ್ನು ಬದಲಾಯಿಸುವ ಗುಣ ನನ್ನಲ್ಲಿಲ್ಲ. ನನ್ನ ಕಂಪನಿ ನನಗೆ ಎಲ್ಲಾ ರೀತಿಯ ಸವಲತ್ತು ಸೌಕರ್ಯ ನೀಡಿ ಗೌರವಿಸಿದೆ. ನಾನು ಯುಎಸ್ ವೀಸಾಗೆ ಅಪ್ಲೈ ಮಾಡಿದ್ದಾಗ ನನ್ನ ಖಾತೆಯಲ್ಲಿ ಕೇವಲ 700 ರೂ ಮಾತ್ರ ಇತ್ತು, ಆದರೆ ಯುಎಸ್ ಅಪ್ಲೈ ಮಾಡಬೇಕಾದರೆ ಹತ್ತು ಸಾವಿರ ಡಾಲರ್ ನಮ್ಮ ಖಾತೆಯಲ್ಲಿರಬೇಕು. ಏನು ಮಾಡಬೇಕು ಎಂದು ನನಗೆ ದಿ’ಕ್ಕು ತೋ’ಚಲಿಲ್ಲ.

ಇಂತಹ ಸಂಧರ್ಭದಲ್ಲಿ ನಮ್ಮ ಕಂಪನಿ ನನ್ನ ಭಾವನೆಯನ್ನು ಅರ್ಥಮಾಡಿಕೊಂಡು, ನನ್ನ ಖಾತೆಗೆ ಹಣ ಜಮಾ ಮಾಡಿದ್ದಾರೆ. ಹಾಗೂ ವಿಮಾನ ಟಿಕೆಟ್ ಸೇರಿದಂತೆ ನನ್ನ ತರಬೇತಿಯ ಎಲ್ಲಾ ಖರ್ಚು ವೆಚ್ಚಗಳನ್ನೆಲ್ಲಾ ತಾವೇ ವಹಿಸಿಕೊಂಡಿದ್ದರು. 45 ವರ್ಷದವರೆಗೂ ಬೈಕ್ ರೈಡಿಂಗ್ ವೃತ್ತಿಯನ್ನು ಮಾಡಬಹುದು. ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಹೋದಾಗ, ಅಲ್ಲಿಗೆ ತಕ್ಕಂತೆ ರೂಲ್ಸ್, ಕ್ರೀವ್ಸ್ ಪ್ರೋಗ್ರಾಂ ಗಳಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳಬೇಕು. ನನಗೆ ಅದರ ಅಗತ್ಯತೆ ಬರದ ಹಾಗೇ ಟಿವಿಎಸ್ ಕಂಪನಿ ನೋಡಿಕೊಂಡಿದೆ. ಹೀಗೆ ತಮಗೆ ಎಲ್ಲಾ ರೀತಿಯ ಸೌಕರ್ಯದ ಜೀವನ ನೀಡಿರುವ ಟಿವಿಎಸ್ ಸಂಸ್ದೆಯ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರತಿ ವರ್ಷ ಟಿ.ವಿ.ಎಸ್ ಕಂಪನಿಯು ನನ್ನ ಮೇಲೆ ಮೂರು ಕೋಟಿ ಹಣ ಹೂಡಿಕೆ ಮಾಡುತ್ತದೆ ಎಂದು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸಹ ಸ್ಪರ್ಧಿಗಳ ಜೊತೆ ಹಂಚಿಕೊಂಡಿದ್ದಾರೆ.