Advertisements

ಟ್ರಾಫಿಕ್ ಪೊಲೀಸ್ ಗೆ ದಂಡ ಕಟ್ಟಲು ಮಾಂಗಲ್ಯ ಸರ ಬಿಚ್ಚಿದ ಮಹಿಳೆ ನಂತರ ಏನಾಯ್ತು ನೋಡಿದ್ರೆ ಶಾಕ್.!

Kannada News

ನಮಸ್ಕಾರ ವೀಕ್ಷಕರೇ ಟ್ರಾಫಿಕ್ ಪೊಲೀಸ್ ಗೆ ಫೈನ್ ಕಟ್ಟಲು ಗಂಡ ಕಟ್ಟಿದ ತಾಳಿಯನ್ನೇ ಬಿಚ್ಚಿ ನನ್ನ ಮಂಗಳಸೂತ್ರವನ್ನು ಮಾರಿ ನಿಮ್ಮ ಪೈನ್ ಕಟ್ಟಿಕೊಳ್ಳಿ ಎಂದು ಹೇಳಿದ ಮಹಿಳೆಯೊಬ್ಬಳ ವಿಚಿತ್ರ ಘಟನೆಯ ಬಗ್ಗೆ ಸಂಪೂರ್ಣವಾಗಿ ಓದಿ ನೋಡಿ
ಸ್ನೇಹಿತರೆ ಈ ವಿಚಿತ್ರ ಘಟನೆ ನಡೆದಿರುವುದು ಗುಜರಾತ್ ನ ಅಹಮದಾಬಾದ್ ಸಿಟಿಯಲ್ಲಿ ಇಲ್ಲಿ ಒಬ್ಬರು ಮಹಿಳೆ ತನ್ನ ಮಂಗಳಸೂತ್ರವನ್ನೆ ಬಿಚ್ಚಿ ಟ್ರಾಫಿಕ್ ಪೊಲೀಸ್ ಗೆ ಕೊಟ್ಟು ಇದನ್ನು ಮಾರಿ ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಕೂಗಾಡಿದ್ದಾಳೆ ಪೊಲೀಸ್ ಮತ್ತು ಮಹಿಳೆಯ ನಡುವೆ ನಡೆದ ಈ ವಿಚಿತ್ರ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಬಾರಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ ಒಂದು ಗುಜರಾತಿ ವೆಬ್ಸೈಟ್ ನ ಪ್ರಕಾರ ಈ ಘಟನೆ ಅಹಮದಾಬಾದ್ ನ ಮುಖ್ಯ ರಸ್ತೆಯೊಂದರಲ್ಲಿ ನಡೆದಿದೆ ಸ್ನೇಹಿತರೆ ಇಲ್ಲಿ ನಡೆದಿದ್ದು ಇಷ್ಟೂ ಈ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ನವರು ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದವರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದರು ಇದೇ ರಸ್ತೆಯಲ್ಲಿ ಒಂದು ಸ್ಕೂಟರ್ ನಲ್ಲಿ ಇಬ್ಬರು ದಂಪತಿಗಳು ಬಂದಿದ್ದಾರೆ..

Advertisements
Advertisements

ಗಂಡ ಹೆಂಡತಿ ಇಬ್ಬರೂ ಕೂಡ ತಲೆಗೆ ಹೆಲ್ಮೆಟ್ ಹಾಕಿರಲಿಲ್ಲ ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸ್ ದಂಪತಿಗಳ ವಾಹನ ತಡೆದು ಫೈನ್ ಹಾಕಿದ್ದಾರೆ ಆ ದಂಪತಿಗಳು ದುರದೃಷ್ಟವಶಾತ್ ಅಂದೆ ತಮ್ಮ ಮನೆಯಲ್ಲೇ ಪರ್ಸ್ ಬಿಟ್ಟು ಬಂದಿದ್ದರು, ದಂಪತಿಗಳು ನಾವು ಪರ್ಸ್ ಮನೆಯಲ್ಲೆ ಬಿಟ್ಟು ಬಂದಿದ್ದೀವಿ ನಮ್ಮ ಹತ್ತಿರ ಈಗ ಒಂದೇ ಒಂದು ರೂಪಾಯಿ ಹಣವಿಲ್ಲ ನಮ್ಮ ಗಾಡಿಯನ್ನು ಈಗ ಬಿಡಿ ನಮ್ಮ ಮನೆಗೆ ಹೋಗಿ ಹಣ ತಂದು ಆಮೇಲೆ ನಿಮಗೆ ಪೈನ್ ಕಟ್ಟುತ್ತೀವಿ ಎಂದು ಎಷ್ಟೇ ರಿಕ್ವೆಸ್ಟ್ ಮಾಡಿದರು ಸಹ ಟ್ರಾಫಿಕ್ ಪೋಲಿಸ್ ಇವರನ್ನು ಒಂದು ಅಡಿ ಕೂಡ ಆಕಡೆ ಈಕಡೆ ಕದಲಲು ಸಹ ಬಿಡುತ್ತಿರಲಿಲ್ಲ ಟ್ರಾಫಿಕ್ ಪೊಲೀಸ್ ಮತ್ತು ದಂಪತಿಗಳ ನಡುವೆ ಮಾತಿಗೆ ಮಾತು ಬೆಳೆಯಿತು ಕೊನೆಗೆ ಆ ಮಹಿಳೆ ತನ್ನ ತಾಳಿಯನ್ನು ಬಿಚ್ಚಿ ಟ್ರಾಫಿಕ್ ಪೊಲೀಸ್ ಗೆ ತೆಗೆದುಕೊಳ್ಳಿ ಸರ್ ಇದನ್ನು ಮಾರಿ ನಿಮ್ಮ ಫೈನ್ ಕಟ್ಟಿಕೊಳ್ಳಿ ಎಂದು ಕಣ್ಣೀರು ಹಾಕಿದ್ದಾಳೆ

ಈ ರೀತಿ ಮಹಿಳೆ ತನ್ನ ತಾಳಿಯನ್ನು ಬಿಚ್ಚಿ ಟ್ರಾಫಿಕ್ ಪೊಲೀಸರಿಗೆ ಕೊಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿದ್ದು ಕೊನೆಗೆ ಪಬ್ಲಿಕ್ ನವರು ಸೇರಿ ಇಬ್ಬರನ್ನು ಸಮಾಧಾನಪಡಿಸಿ ಮಹಿಳೆಗೆ ವಾಪಸ್ ತನ್ನ ತಾಳಿ ಕುತ್ತಿಗೆಗೆ ಹಾಕುವಂತೆ ಹೇಳಿ ಅಲ್ಲಿ ಸೇರಿದ್ದ ಪಬ್ಲಿಕ್ ಜನಗಳೇ ಸ್ವಲ್ಪ ಸ್ವಲ್ಪ ದುಡ್ಡು ನೀಡಿ ಫೈನ್ ಕಟ್ಟಿ ದಂಪತಿಗಳ ಗಾಡಿ
ಬಿಡಿಸಿ ಮನೆಗೆ ಕಳುಹಿಸಿದ್ದಾರೆ ಫ್ರೆಂಡ್ಸ್ ಟ್ರಾಫಿಕ್ ಪೊಲೀಸ್ ನವರಿಗೆ ಸಿಕ್ಕಿ ನೀವು ಕೂಡ ದಂಡ ಕಟ್ಟಿದ್ರೆ ಈ ನಿಜವಾದ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ