ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ನಿಜವಾದ ಪ್ರೀತಿಯನ್ನು ಕಾಣುವುದು ಕಷ್ಟವಾಗುತ್ತದೆ. ಆದರೆ ಈಗ ಹೇಳುವ ಪ್ರೀತಿಯ ಕಥೆ ಮಾತ್ರ ಪವಿತ್ರವಾದದ್ದು. ಈ ಪ್ರೇಮಕಥೆ ಸಚಿನ್ ಮತ್ತು ಭವ್ಯ ಎಂಬ ಹುಡುಗಿಯದ್ದು. ಸಚಿನ್ ಮತ್ತು ಭವ್ಯಾ ಡಿಪ್ಲೊಮೊ ಓದುತ್ತಿದ್ದರು, ಇವರಿಬ್ಬರು ತುಂಬಾ ಉತ್ತಮ ಸ್ನೇಹಿತರಾಗಿದ್ದರು.. ನಂತರದ ದಿನಗಳಲ್ಲಿ ಇವರ ಸ್ನೇಹ ಪ್ರೀತಿಯಾಗಿ ತಿರುಗಿತ್ತು. ಇನ್ನೂ ಇವರಿಬ್ಬರು ಪ್ರೀತಿಸುವ ವಿಚಾರ ಭವ್ಯಾ ಅವರ ಮನೆಯಲ್ಲಿ ತಿಳಿಯಿತು. ಭವ್ಯಾ ಅವರ ಪೋಷಕರು ನೀನು ಇದನ್ನು ಇಲ್ಲಿಗೆ ನಿಲ್ಲಿಸು.. ಮತ್ತೆಂದು ಆ ಹುಡುಗನನ್ನು ಮಾತನಾಡಿಸುವುದಾಗಲಿ ಬೇಟಿಯಾಗುವುದಾಗಲಿ ಮಾಡಬಾರದು ಎಂದು ಭವ್ಯಾಗೆ ಎ’ಚ್ಚರಿಕೆ ನೀಡುತ್ತಾರೆ. ಆದರೆ ಭವ್ಯಾ ಅವರಿಗೆ ಮಾತ್ರ ಸಚಿನ್ ನನ್ನು ಬಿಟ್ಟಿರಲು ಇಷ್ಟವಿರಲಿಲ್ಲ.. ಈ ಹೊತ್ತಿಗಾಗಲೇ ಇವರಿಬ್ಬರ ನಡುವೆ ಪ್ರೀತಿ ಗಾಡವಾಗಿ ಬೇರೂರಿತ್ತು. ಇವರಿಬ್ಬರ ಪ್ರೀತಿ ತುಂಬಾ ಪವಿತ್ರವಾಗಿತ್ತು..

ಆದರೆ ನಂತರದ ದಿನಗಳಲ್ಲಿ ತನ್ನ ಮನೆಯವರಿಗೆ ತಿಳಿಯದಂತೆ ಭವ್ಯಾ ಸಚಿನ್ ನನ್ನು ಬೇಟಿಯಾಗುತ್ತಿದ್ದಳು. ಇದಾದ ನಂತರದಲ್ಲಿ ಭವ್ಯಾ ತನ್ನ ಪೋಷಕರನ್ನು ವಿರೋಧಿಸಿ ಸಚೀನ್ ನನ್ನು ಮದುವೆಯಾಗಿ ಬಿಡುತ್ತಾಳೆ.. ಇವರ ಮದುವೆ ತುಂಬಾ ಸಿಂಪಲ್ ಆಗಿ ಮುಗಿಯುತ್ತದೆ. ಪ್ರೀತಿಸಿ ಮದುವೆಯಾದ ಕೆಲವು ದಿನಗಳು ಸಚೀನ್ ಹಾಗೂ ಭವ್ಯಾ ತುಂಬಾ ಸಂತೋಷವಾಗಿರುತ್ತಾರೆ.. ಇನ್ನೂ ಭವ್ಯಾಳಿಗೆ ಮದುವೆಗೂ ಮುಂಚೆ ಆಗಾಗ ಬೆನ್ನು ನೋವು ಕಾಣಿಸಿಕೊಳ್ಳುತ್ತಿತ್ತು. ಇದನ್ನು ಸಚೀನ್ ಕೂಡ ಹೇಳಿದ್ದಳು ಆದರೆ ಮತ್ತೆ ಭವ್ಯಾಳಿಗೆ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿತ್ತು.. ಇದೇ ಸಮಯದಲ್ಲಿ ಭವ್ಯಾಳನ್ನು ಆಸ್ವತ್ರೆಗೆ ಕರೆದುಕೊಂಡು ಹೋದಾಗ ಸಚಿನ್ ಗೆ ದೊಡ್ಡ ಶಾ’ಕ್ ಒಂದು ಕಾದಿತ್ತು.
ಭವ್ಯಾಳಿಗೆ ಕ್ಯಾ’ನ್ಸ’ರ್ ಖಾಯಿಲೆ ಇದೆ ಎಂದು ಸಚೀನ್ ಗೆ ವೈದ್ಯರು ಹೇಳುತ್ತಾರೆ.. ಇನ್ನೂ ಈ ವಿಷಯ ಕೇಳಿದ ತಕ್ಷಣ ಸಚೀನ್ ಗೆ ಪ್ರಪಂಚವೇ ತಲೆ ಕೆಳಗಾದಂತಾಗುತ್ತದೆ. ನಂತರ ಸಚಿನ್ ನಿಧಾನವಾಗಿ ಸಮಾಧಾನ ಮಾಡಿಕೊಂಡು ವೈದ್ಯರಲ್ಲಿ ತನ್ನ ಪತ್ನಿಯನ್ನು ಹೇಗಾದರೂ ಉಳಿಸಿಕೊಡಿ ಎಂದು ಬೇಡಿಕೊಳ್ಳುತ್ತಾನೆ.. ಡಿಗ್ರಿ ಓದಿದ ಸಚೀನ್ ತನ್ನ ಪತ್ನಿಯನ್ನು ಉಳಿಸಿಕೊಳ್ಳಲು ಕೂಲಿ ಕೆಲಸಕ್ಕೂ ಕೂಡ ಹೋಗುತ್ತಾನೆ.. ಹಗಲು ರಾತ್ರಿ ಎನ್ನದೇ ಕೈಗೆ ಸಿಕ್ಕಿದ ಎಲ್ಲಾ ಕೆಲಸಗಳನ್ನು ಮಾಡಿ ತನ್ನ ಪತ್ನಿಯ ಟ್ರೀಟ್ಮೆಂಟ್ ಗೆ ಹಣ ಕೂಡಿ ಹಾಕುತ್ತಾನೆ.

ಇನ್ನೂ ಭವ್ಯಾ ಮನೆಯವರೆಗೆ ಪತ್ನಿ ಟ್ರೀಟ್ಮೆಂಟ್ ಬಗ್ಗೆ ಸಚಿನ್ ತಿಳಿಸಿರುವುದಿಲ್ಲ.. ದೇವರ ದಯೆಯಿಂದ ಭವ್ಯಾ ಕ್ಯಾ’ನ್ಸ’ರ್ ಕಾಯಿಲೆಯಿಂದ ಗುಣಮುಖಳಾಗಿ ಬರುತ್ತಾಳೆ. ಕೊನೆಗೆ ಭವ್ಯಾಳ ಪೋಷಕರಿಗೆ ಈ ಎಲ್ಲಾ ವಿಷಯ ತಿಳಿದು ಸಚೀನ್ ಅನ್ನು ಹೃದಯ ಪೂರ್ವಕವಾಗಿ ತನ್ನ ಅಳಿಯನಾಗಿ ತುಂಬು ಹೃದಯದಿಂದ ಸ್ವೀಕರಿಸುತ್ತಾರೆ.. ಸ್ನೇಹಿತರೆ ಇದೇ ಅಲ್ಲವೇ ಪವಿತ್ರ ಪ್ರೀತಿಗೆ ಇರುವ ಶಕ್ತಿ. ನಿಜವಾದ ಪ್ರೀತಿಗೆ ಆ ದೇವರು ಎಂದೂ ಕೈ ಬಿಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಒಂದು ನೈಜ ಉದಾಹರಣೆ.