ನಮಸ್ತೆ ಸ್ನೇಹಿತರೆ, ಸಿನಿಮಾಗಳಲ್ಲಿ ನಾವು ಅ’ಚ್ಚರಿ ತರಿಸುವಂತಹ ಅನೇಕ ದೃಶ್ಯಗಳನ್ನು ನೋಡುತ್ತೇವೆ. ಹಾಗೂ ನಂಬಲಾಗದ ದೃಶ್ಯಗಳನ್ನು ಸಹ ನೋಡುತ್ತೇವೆ. ಅದೇ ರೀತಿ ಅಕ್ಕ-ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಹುಡುಗ ಮದುವೆ ಆಗುವ ದೃಶ್ಯಗಳು ಸಹ ಸಿನಿಮಾದಲ್ಲಿ ನೋಡಿರುತ್ತೇವೆ. ಸಿನಿಮಾದಲ್ಲಿ ಇಂಥ ಸನ್ನಿವೇಶಗಳನ್ನು ತಮ್ಮ ಕಲ್ಪನೆಗೆ ತಕ್ಕಂತೆ ಸೃಷ್ಟಿ ಮಾಡುತ್ತಾರೆ. ಆದರೆ ಇಲ್ಲಿ ಎಲ್ಲವೂ ಅವಷ್ಟಕ್ಕೆ ತಾವೇ ಸೃಷ್ಟಿಯಾಗಿ ಅಪರೂಪದ ಮದುವೆಯೊಂದು ನಡೆದುಕೊಂಡು ಹೋಗಿದೆ. ಈ ಮದುವೆ ನಡೆದಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ. ಉಮಾಪತಿ ಎಂಬುವವರು ಸುಪ್ರಿಯಾ ಹಾಗೂ ಲಲಿತ ಎಂಬ ಇಬ್ಬರು ಅಕ್ಕ ತಂಗಿಯರನ್ನು ಒಂದೇ ಮುಹೂರ್ತದಲ್ಲಿ ಸಪ್ತಪದಿ ತುಳಿದಿದ್ದಾರೆ.

ಈ ಮದುವೆ ಹಿಂದೆ ಗಟ್ಟಿಯಾದ ಕಾರಣ ಇದೆ. ಉಮಾಪತಿ ಅಕ್ಕ-ತಂಗಿಯನ್ನು ಮದುವೆಯಾಗಲು ಕಾರಣವೇನೆಂದರೆ, ಉಮಾಪತಿ ಲಲಿತಾಳನ್ನು ಇಷ್ಟ ಪಟ್ಟಿರುತ್ತಾನೆ. ಆದರೆ ಅಕ್ಕ ಸುಪ್ರಿಯಾ ಹುಟ್ಟು ಮೂಖಿಯಾಗಿದ್ದಳು ಅವಳಿಗೆ ಮಾತು ಬರುತ್ತಿರಲಿಲ್ಲ. ಸುಪ್ರಿಯಾ ಮದುವೆಯಾಗದೆ ತಂಗಿ ಲಲಿತಾಗೆ ಮದುವೆಯಾಗೋದಿಲ್ಲ. ಅಕ್ಕನಿಗೆ ಎಲ್ಲಿ ಮದುವೆಯಾಗುವುದಿಲ್ಲವೋ ಎಂದು ಯೋಚಿಸಿದ ತಂಗಿ ಲಲಿತಾ, ನನ್ನನ್ನು ಮದುಯಾಗಬೇಕೆಂದರೆ ನನ್ನ ಅಕ್ಕನನ್ನೂ ಸಹ ಮದುವೆ ಮಾಡಿಕೊಳ್ಳಬೇಕು ಎಂಬ ಬೇಡಿಕೆಯನ್ನು ವರ ಉಮಾಪತಿಯ ಮುಂದೆ ಇಟ್ಟಿದ್ದರು. ಅದಕ್ಕೆ ಒಪ್ಪಿದ ಉಮಾಪತಿಯವರು ಮೇ 7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಈ ಇಬ್ಬರೂ ಸಹೋದರಿಯರನ್ನು ಮದುವೆ ಮಾಡಿಕೊಂಡಿದ್ದಾರೆ.

ಮದುವೆಯಾದ ಫೋಟೋಗಳು ಹಾಗೂ ಮದುವೆ ಆಮಂತ್ರಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗ್ತಿವೆ. ಈ ಮದುವೆ ಬಗ್ಗೆ ಸಾಕಷ್ಟು ಜನರು ಅಚ್ಚರಿ ಹೊರಹಾಕಿದ್ದಾರೆ. ಸುಪ್ರಿಯಾ ಹಾಗೂ ಲಲಿತಾ ಕುಟುಂಬದಲ್ಲಿ ಈ ರೀತಿ ಮದುವೆ ನಡೆದಿದ್ದು ಇದೇ ಮೊದಲ ಮೊದಲ ಬಾರಿ ಅಲ್ಲ. ಇವರ ತಂದೆ ಕೂಡಾ ಇದೆ ರೀತಿಯಲ್ಲಿ ಅಕ್ಕ ತಂಗಿಯರನ್ನು ಮದುವೆ ಮಾಡಿಕೊಂಡಿದ್ದಾರೆ. ಅಲ್ಲೂ ಸಹ ಒಬ್ಬರಿಗೆ ಮಾತು ಬರುತ್ತಿರಲಿಲ್ಲ ಅನ್ನೋದು ಅಚ್ಚರಿ ತರುವ ವಿಷಯ. ರಾಣೆಮ್ಮ ಹಾಗೂ ಸುಬ್ಬಮ್ಮ ಎಂಬುವರನ್ನು ಈ ಸಹೋದರಿಗಳ ತಂದೆ ನಾಗರಾಜಪ್ಪ ಎಂಬುವರು ಮದುವೆಯಾಗಿದ್ದರು. ಈಗ ಅದೇ ರೀತಿಯ ಮದುವೆ ಮತ್ತೊಂದು ಆಗಿದೆ. ಏನೇ ಆಗಲಿ ಉಮಾಪತಿ ಹಾಗೂ ನಾಗರಾಜಪ್ಪನ ಮಾನವೀಯತೆ ಗುಣವನ್ನು ಮೆಚ್ಚಲೇಬೇಕು. ನೀವೇನಂತೀರಾ ಸ್ನೇಹಿತರೆ.