Advertisements

ಕ್ರಿಕೆಟ್ ನ ಮಿಸ್ಟರಿ ಹಾಗೂ ನಮ್ಮ ಆರ್ಸಿಬಿ ತಂಡದ ಆಪತ್ಭಾಂದವ ಎಬಿ ಡಿವಿಲಿಯರ್ಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಕುತೂಹಲಕಾರಿ ವಿಷಯಗಳನ್ನು ನೋಡಿ..

Sports

ನಮಸ್ತೇ ಸ್ನೇಹಿತರೇ, ಈಗ ಎಲ್ಲೆಲ್ಲೂ ಐಪಿಎಲ್ ಮೇನಿಯಾ. ದುಬೈನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್ ನಲ್ಲಿ ಬೆಂಗಳೂರಿನ ಆರ್ಸಿಬಿ ತಂಡ ಅತ್ಯತ್ತಮವಾಗಿ ಪ್ರದರ್ಶನ ನೀಡಲು ಉತ್ತಮ ಅಭ್ಯಾಸ ನಡೆಸುತ್ತಿದೆ. ವಿರಾಟ್ ಕೊಹ್ಲಿಯ ಸಾರಥ್ಯದಲ್ಲಿ RCB ಈ ಬಾರಿ ಫೈನಲ್ ಏರಿ ಕಪ್ ಗೆಲ್ಲುವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನು ಆರ್ಸಿಬಿ ತಂಡದ ಆಪತ್ಭಾಂದವ ಎಂದೇ ಹೆಸರಾಗಿರುವ, ಕ್ರಿಕೆಟ್ ಜಗತ್ತಿನ ಮಿಸ್ಟರ್ 360 ಎಂದು ಕರೆಸಿಕೊಳ್ಳುವ ಎ.ಬಿ ಡಿವಿಲಿಯರ್ಸ್ ಬ್ಯಾಟಿಂಗ್ ಇಳಿದರೆ ವಿ’ರೋಧಿ ತಂಡದವರಲ್ಲಿ ನ’ಡುಕ ಅಭಿಮಾನಿಗಳಲ್ಲಿ ಪುಳಕ ಉಂಟಾಗುವುದು ಖಂಡಿತಾ.. ಹಾಗಾದ್ರೆ ಎ.ಬಿ ಡಿವಿಲಿಯರ್ಸ್ ಜೀವನ ಹೇಗಿತ್ತು ಎಂಬ ರೋಚಕ ಮಾಹಿತಿ ತಿಳಿಯಲು ನೀವು ಬಯಸಿದ್ರೆ ಮುಂದೆ ನೋಡಿ..

Advertisements
Advertisements

ಸ್ನೇಹಿತರೇ, ದಕ್ಷಿಣ ಆಫ್ರಿಕಾದ ಬೆಲ್ ಬೆಲ್ ದ ಮನೆಯ ಅಂಗಳೊಂದರಲ್ಲಿ ೧೧ ವರ್ಷದ ಹುಡುಗನೊಬ್ಬ ತನ್ನ ಸ್ನೇಹಿತರೊಟ್ಟಿಗೆ ಕ್ರಿಕೆಟ್ ಆಡುತ್ತಿರುತ್ತಾನೆ. ಇನ್ನು ಆತ ಆಡುವ ವೇಳೆ ಅತೀ ಸುಲಭವಾಗಿದ್ದ ಕ್ಯಾಚ್ ನ್ನ ಹಿಡಿಯಕ್ಕೆ ಆಗದೆ ಕೈಚೆಲ್ಲುತ್ತಾನೆ. ಆಗ ಅದೇ ಗುಂಪಿನಲ್ಲಿದ್ದ ಮತ್ತೊಬ್ಬ ಹುಡುಗ ನೀನು ಹಾಕಿರುವ ಟೋಪಿಯನ್ನ ಕಿತ್ತು ಬಿಸಾಡು. ಅದನ್ನ ಹಾಕಿಕೊಳ್ಳುವ ಯೋಗ್ಯತೆ ನಿನಗಿಲ್ಲ ಎಂದು ಹೀಯಾಳಿಸಿದ್ದಲ್ಲದೆ ಆ ಬಾಲಕನ ತಲೆಯ ಮೇಲಿದ್ದ ಟೋಪಿಯನ್ನ ಕಿತ್ತು ಬಿಸಾಡುತ್ತಾನೆ. ಇದಾದ ಬಳಿಕ ಆ ಪುಟ್ಟ ಬಾಲಕ ಕೇವಲ ೯ ವರ್ಷಗಳಲ್ಲಿ ಇಂಟರ್ನ್ಯಾಷನಲ್ ಮಟ್ಟದಲ್ಲಿ ಕ್ರಿಕೆಟ್ ಆಡುವ ಮಟ್ಟಕ್ಕೆ ಬೆಳೆಯುತ್ತಾನೆ. ಎಬಿಡಿ ಕ್ರಿಕೆಟ್ ನಿಂದ ರಿಟೈರ್ ಆಗುವ ಹೊತ್ತಿಗೆ ಕ್ರಿಕೆಟ್ ಜಗತ್ತು ಕಂಡ ದಿಗ್ಗಜನಾಗಿರುತ್ತಾನೆ. ಆ ಬಾಲಕನೇ ಅಬ್ರಾಹಿಮ್ ಬೆಂಜಮಿನ್ ಡಿವಿಲಿಯರ್ಸ್.

17 ಫೆಬ್ರುವರಿ 1984ರಂದು ಎ.ಬಿ ಡಿವಿಲಿಯರ್ಸ್ ಅವರ ಜನನವಾಗುತ್ತದೆ. ಇವರ ತಂದೆ ಅಬ್ರಹಾಂ ಬಿ ಡಿವಿಲಿಯರ್ಸ್. ವೃತ್ತಿಯಲ್ಲಿ ಡಾಕ್ಟರ್. ಇನ್ನು ಎಬಿಡಿ ಅವರ ತಾಯಿಯ ಹೆಸರು ಮಿಲ್ಲಿ ಡಿವಿಲಿಯರ್ಸ್ ಎಂದು. ಇವರಿಗೆ ಇಬ್ಬರು ಅಣ್ಣಂದಿರು ಕೂಡ ಇದ್ದಾರೆ. ಇನ್ನು ಮಕ್ಕಳಿಗೆ ಸ್ಪೋರ್ಟ್ಸ್ ನಲ್ಲಿದ್ದ ಪ್ರತಿಭೆಯನ್ನ ಗುರುತಿಸಿದ್ದ ಅವರ ತಾಯಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ಬೆಂಬಲವನ್ನ ಕೊಡುತ್ತಾರೆ. ನಂತರ ಡಿವಿಲಿಯರ್ಸ್ ಕ್ರಿಕೆಟನ್ನು ಆಡಿ ದೊಡ್ಡ ಲೆಜೆಂಡ್ ಆಗಿ ಹೊರಹೊಮ್ಮುತ್ತಾರೆ.. ಡಿವಿಲಿಯರ್ಸ್ ಅವರ ಆಟ ಹೇಗಿದೆ ಅಂತ ನಿಮಗೆಲ್ಲರಿಗೂ ಗೊತ್ತಿದೆ.. ಅವರ ಬ್ಯಾಟಿಂಗ್ ನಿಮಗೆ ಇಷ್ಟವಾದರೆ ಕೆಳಗೆ ಕಾಮೆಂಟ್ ಮಾಡಿ ತಿಳಿಸಿ..