Advertisements

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀಡುವ ಅನ್ನ ಪ್ರಸಾದದ ಬಗ್ಗೆ ಯಾರಿಗೂ ತಿಳಿಯದ ಅಚ್ಚರಿ ಸಂಗತಿಗಳು.! ಏನು ಗೊತ್ತಾ?

Kannada News

ನಮಸ್ತೆ ಸ್ನೇಹಿತರೆ, ಎಂದಾದರೂ ನೀವು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬೇಟಿ ನೀಡಿದ್ದೀರಾ. ಅಲ್ಲಿ ನೀಡುವ ಅನ್ನ ಪ್ರಸಾದವನ್ನು ಸ್ವೀಕರಿಸಿದ್ದೀರಾ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೀಡುವ ಅನ್ನವನ್ನು ಎಲ್ಲಾ ಭಕ್ತರು ದೇವರ ಪ್ರಸಾದದಂತೆ ಸ್ವೀಕರಿಸುತ್ತಾರೆ. ಈ ದೇವಾಲಯದಲ್ಲಿ ಯಾರಿಗೂ ಬೇಧ ಬಾವ ಮಾಡದೆ ಎಲ್ಲರನ್ನೂ ಸಮಾನರಂತೆ ಕಾಣುತ್ತಾರೆ. ಧರ್ಮಸ್ಥಳದಲ್ಲಿ ಯಾರೆಲ್ಲ ಅನ್ನ ಪ್ರಸಾದವನ್ನು ಸ್ವೀಕರಿಸಿದ್ದೀರೊ ಅವರೆಲ್ಲ ದಯವಿಟ್ಟು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ.

Advertisements
Advertisements

ಧರ್ಮಸ್ಥಳಕ್ಕೆ ಹೋಗುವ ಭಕ್ತಾದಿಗಳು ಖಂಡಿತವಾಗಲೂ ಅಲ್ಲಿಯ ಊಟವನ್ನು ತಿನ್ನದೇ ಯಾರು ಕೂಡ ವಾಪಸ್ ಬರುವುದಿಲ್ಲ, ಸಾಕ್ಷಾತ್ ಅನ್ನಪೂರ್ಣೇಶ್ವರಿ ನೆಲೆಸಿರುವ ಜಾಗವದು ಸತ್ಯ, ನಿಷ್ಠೆ, ಧರ್ಮ, ನ್ಯಾಯಕ್ಕೆ ಹೆಸರುವಾಸಿಯಾದ ಈ ಜಾಗ ಶ್ರೀ ಕ್ಷೇತ್ರ ಧರ್ಮಸ್ಥಳ ದಕ್ಷಿಣ ಭಾರತದ ಆರಾಧ್ಯದೈವ ಶ್ರೀ ಮಂಜುನಾಥ ಸ್ವಾಮಿ ನೆಲೆಸಿರುವ ಸ್ಥಳವಿದು. ಇಲ್ಲಿಗೆ ಬರುವ ಭಕ್ತಾದಿಗಳು ಇಂದಿಗೂ ಹಸುವಿನಿಂದ ಹಿಂದೆ ಹೋಗಬಾರದು ಎಂದು 1955 ರಿಂದಲೇ ಧರ್ಮಸ್ಥಳದಲ್ಲಿ ಅನ್ನದಾನ ಮಾಡಲು ಪ್ರಾರಂಭಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ವೀರೇಂದ್ರ ಹೆಗ್ಗಡೆಯವರ ತಂದೆ 1955 ರಲ್ಲಿ ಅನ್ನದಾನ ಮಾಡುವ ನಿರ್ಧಾರವನ್ನು ಕೈಗೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಪ್ರತಿಯೊಂದು ದಿನಕ್ಕೆ ಐವತ್ತು ಸಾವಿರ ಜನ ಭಕ್ತಿಯಿಂದ ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಯಾರು ಸಹ ಅನ್ನ ಪ್ರಸಾದವನ್ನು ವ್ಯರ್ಥಮಾಡುವುದಿಲ್ಲ. ಧರ್ಮಸ್ಥಳದಲ್ಲಿ ಪ್ರತಿವರ್ಷ ನಡೆಯುವ ದೀಪೋತ್ಸವದ ಸಮಯದಲ್ಲಿ ಸುಮಾರು ಲಕ್ಷ ಜನ ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ. ಇಲ್ಲಿಯ ಅಡುಗೆ ಮಾಡುವ ಸ್ಥಳದ ಬಗ್ಗೆ ಎಲ್ಲರೂ ತಿಳಿಯಬೇಕಾದ ಒಂದು ಅಂಶವಿದೆ. ಏನು ಅಂತ ನೋಡೋಣ ಬನ್ನಿ.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಅಡುಗೆಯನ್ನು ಸೋಲಾರ್ ತಂತ್ರಜ್ಞಾನ ಬಳಸಿ ಮಾಡುತ್ತಾರೆ. ಇದಕ್ಕೆ ಕಾರಣ ಒಂದೇ ಬಾರಿ ಸಾವಿರಾರು ಜನಕ್ಕೆ ಊಟವನ್ನು ಗ್ಯಾಸ್ ಬಳಸಿ ಮಾಡಲು ತುಂಬಾ ಕಷ್ಟವಾಗುತ್ತದೆ. ಇಲ್ಲಿ ಬಳಸುವ ಅಡುಗೆಯ ಸಾಧನಗಳು ಮತ್ತು ಅಡುಗೆಗೆ ಬಳಸುವ ವಸ್ತುಗಳು ಪ್ರತಿಯೊಂದು ಸ್ವಚ್ಛವಾಗಿರುವಂತೆ ಇಲ್ಲಿನ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಧರ್ಮಸ್ಥಳ ಕ್ಷೇತ್ರದ ಸಿಬ್ಬಂದಿವರ್ಗದವರು ಧರ್ಮಸ್ಥಳದಲ್ಲಿ ನಡೆಯುವ ದೀಪೋತ್ಸವದ ಸಮಯದಲ್ಲಿ ಒಂದೇ ದಿನಕ್ಕೆ 8500 ಸಾವಿರ ಕೆಜಿ ಅಕ್ಕಿಯನ್ನು ಬಳಸುತ್ತಾರೆ. ನೀವು ಕೂಡ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದರೆ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಧರ್ಮಸ್ಥಳ ಕ್ಷೇತ್ರದ ಶಿಸ್ತು ಹಾಗೂ ಸ್ವಚ್ಛತೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ ತಿಳಿಸಿ.