Advertisements

ಸೈಕಲ್ ಮೇಲೆ ಬಟ್ಟೆ ಮಾರುವವರ ಮಗ ಈಗ ದೊಡ್ಡ ಸಾಧನೆ ಮಾಡಿದ್ದಾನೆ..! ಈತ ಮಾಡಿದ ಸಾಧನೆಗೆ ಅವರ ತಂದೆ ಶಾ’ಕ್ ಆಗಿದ್ದಾರೆ..!

Inspiration

ನಮಸ್ತೆ ಸ್ನೇಹಿತರೆ, ಸಾಧನೆ ಮಾಡಲು ದೊಡ್ಡ ಶಾಲೆಯೇ ಆಗಬೇಕು.. ವರ್ಷಕ್ಕೆ ಲಕ್ಷ ಲಕ್ಷ ಕಟ್ಟಬೇಕು..‌ಇನ್ನೂ ಲಕ್ಷಗಳನ್ನು ಖರ್ಚು ಮಾಡಿ ಕೋಚಿಂಗ್ ಪಡೆಯಬೇಕು.. ಹೀಗೆ ನಾನಾ ಅಭಿಪ್ರಾಯ ಇಟ್ಟುಕೊಂಡಿರುವ ಜನರಿಗೆ.. ಅದರಲ್ಲೂ ಈ ರೀತಿ ಅನುಕೂಲಗಳನ್ನು ಕಲ್ಪಿಸಿದ ಪೋಷಕರು ನಮ್ಮ ಮಕ್ಕಳೇ ಐಎ ಎಸ್ ಐಪಿಎಸ್ ಆಗ್ತಾರೆ ಅನ್ನೋ ಜನರಿಗೆ ಈ ಹುಡುಗನ ಸಾಧನೆ ಒಂದೊಳ್ಳೆ ಪಾಠವೂ ಆಗಬಹುದು.. ಹೌದು ಈತನ ಹೆಸರು ಅನಿಲ್ ಬಸಕ್.. ವಯಸ್ಸು ಕೇವಲ ಇಪ್ಪತ್ತಾರು.. ಈತ ಮೂಲತಃ ಬಿಹಾರದ ಒಂದು ಗ್ರಾಮದವ.. ಈತನ ತಂದೆ ಬಿನೋದ್ ಬಸಕ್ ಹಾಗೂ ತಾಯಿ ಮಂಜು ದೇವಿ.‌ ಇವರಿಗೆ ನಾಲ್ಕು ಮಕ್ಕಳು.. ಎರಡನೆಯವನೇ ಈಗ ಯುಪಿಎಸ್ ಸಿ ಯಲ್ಲಿ ಸಾಧನೆ ಮಾಡಿರುವ ಅನಿಲ್ ಬಸಕ್..

Advertisements
Advertisements

ಕುಟುಂಬದ ನಿರ್ವಹಣೆ ಹಾಗೂ ಮಕ್ಕಳನ್ನು ಸಾಕುವ ಸಲುವಾಗಿ ಸಿಕ್ಕ ಸಿಕ್ಕ ಕೆಲಸಗಳನ್ನು ಬೀದಿ ವ್ಯಾಪಾರಗಳನ್ನು ಬಿನೋದ್ ಬಸಕ್ ಮಾಡುತ್ತಿದ್ದರೆ ಇತ್ತ ಗಂಡ ತಂದು ಕೊಟ್ಟ ಹಣದಲ್ಲಿ ಮನೆಯನ್ನು ನಿಭಾಯಿಸುತ್ತಿದ್ದವರು ತಾಯಿ ಮಂಜು ದೇವಿ.. ಮಕ್ಕಳೆಲ್ಲಾ ಸರ್ಕಾರಿ ಶಾಲೆಯಲ್ಲಿಯೇ ತಮ್ಮ ವಿಧ್ಯಾಭ್ಯಾಸ ಮುಗಿಸಿದರು.. ಮೊದಲನೆ ಮಗ ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡರೆ ಇತ್ತ ಅನಿಲ್ ಬಸಕ್ ಮಾತ್ರ ತುಂಬಾ ಪ್ರತಿಭಾವಂತನಾಗಿದ್ದು ಯಾವುದೇ ಕೋಚಿಂಗ್ ಇಲ್ಲದೇ ಪ್ರತಿಷ್ಠಿತ ಐಐಟಿ ದೆಹಲಿಯಲ್ಲಿ ಯಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಲು ಅವಕಾಶ ಪಡೆದರು.. ಆಗಲೇ ತಂದೆ ತಾಯಿಗೆ ಹೆಮ್ಮೆಯಾದರೂ ಸಹ ಇದರಿಣ್ದ ಏನು ಉಪಯೋಗ ಎಂದುಕೊಳ್ಳುತ್ತಿದ್ದರಂತೆ.. ಆ ಬಳಿಕ ಮಗ ಇಂಜಿನಿಯರ್ ಆದ ಕೆಲಸಕ್ಕೆ ಸೇರ್ತಾನೆ ಎಂದುಕೊಂಡರು..

ಆದರೆ ಅನಿಲ್ ಮಾತ್ರ ನಾನು ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯಬೇಕು ಎಂದನಂತೆ.. ಆಗಲೂ ಅಪ್ಪ ಅಮ್ಮ ಇದು ಕನಸಿನ ಮಾತು ಇದೆಲ್ಲಾ ನಮಗೆಲ್ಲಿ‌ಸಿಗತ್ತೆ ಎಂದುಕೊಂಡು ಎಂದಿನಂತೆ ತಮ್ಮ ಬೀದಿ ಬದಿ ವ್ಯಾಪಾರ ಮುಂದುವರೆಸಿದರಂತೆ.. ಆದರೆ ಇತ್ತ ಛಲ ಬಿಡದೇ ಓದಿದ ಅನಿಲ್ ಬಸಕ್ ಕಳೆದ ಸಾಲಿನಲ್ಲಿಯೇ ಯುಪಿಎಸ್ ಸಿ ಪರೀಕ್ಷೆ ಉತ್ತೀರ್ಣರಾಗಿ 616 ನೇ ರ್ಯಾಂಕ್ ಪಡೆದು ಅಧಿಕಾರಿಯಾಗಿದ್ದರು.. ಆದರೆ ಅದ್ಯಾಕೋ ಅದು ಅನಿಲ್ ಗೆ ಇನ್ನೂ ಸಹ ಸಮಾಧಾನ ತಂದಿರಲಿಲ್ಲ.. ಆ ಕಾರಣಕ್ಕೆ ಈ ವರ್ಷವೂ ಸಹ ಪರೀಕ್ಷೆಗೆ ಹಾಜರಾಗಿ ದೇಶಕ್ಕೆ 45ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.. ಹೌದು ತಮ್ಮ ಮನೆಯ ಆ ಪುಟ್ಟ ಟಿವಿಯಲ್ಲಿ ಮಗನ ಬಗ್ಗೆ ಸುದ್ದಿ ಬರುವುದು ಕಂಡು ಶಾ’ಕ್ ಆದ ಅನಿಲ್ ಬಸಕ್ ನ ತಂದೆ ತಾಯಿ ಇದೀಗ ಶುಭಾಶಯಗಳನ್ನು ಸ್ವೀಕರಿಸುವಲ್ಲಿ ಬ್ಯುಸಿ ಆಗಿದ್ದಾರೆ.‌ ಇದಲ್ವಾ ಸಾಧನೆ ಅಂದ್ರೆ. ನೀವೇನಂತೀರಾ ಸ್ನೇಹಿತರೆ..