ನಮಸ್ತೆ ಸ್ನೇಹಿತರೆ, ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿಮಾಗಳಿಂದ ಹಾಗೂ ಒಳ್ಳೆತನದಿಂದ ಹೆಸರಾದವರು. ಮೂರು ವರ್ಷದ ನಂತರ ಪವರ್ ಸ್ಟಾರ್ ಪವನ್ ಕಲ್ಯಾಣ್ ಟಾಲಿವುಡ್ಗೆ ರೀ ಎಂಟ್ರಿ ಕೊಟ್ಟಿದ್ದಾರೆ. ರಾ’ಜಕೀಯದಲ್ಲಿ ಹಿ’ನ್ನಡೆ ಅನುಭವಿಸಿದ ಪವರ್ ಸ್ಟಾರ್ ಪವನ್ ಕಲ್ಯಾಣ್ ‘ವಕೀಲ್ ಸಾಬ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ರೀ ಎಂಟ್ರಿ ಕೊಡುತ್ತಿದ್ದಾರೆ.

ಏಪ್ರಿಲ್ 9 ರಂದು ‘ವಕೀಲ್ ಸಾಬ್’ ಸಿನಿಮಾ ತೆರೆಕಾಣಲಿದೆ. ಅದಕ್ಕೂ ಮುಂಚೆ ಟ್ರೈಲರ್ ರಿಲೀಸ್ ಆಗಿದ್ದು, ತೆಲುಗು ಇಂಡಸ್ಟ್ರಿಯ ಹಳೆ ದಾಖಲೆಗಳು ಪು’ಡಿ ಪು’ಡಿಯಾಗಿವೆ. ಅದರಲ್ಲೂ ಬಾಹುಬಲಿ-2 ಚಿತ್ರದ ರೆ’ಕಾರ್ಡ್ ಪು’ಡಿ ಮಾಡಿದೆ ಎಂದು ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಬಾಹುಬಲಿ-2 ಟ್ರೈಲರ್ ಹೆಸರಿನಲ್ಲಿದ್ದ ಆಲ್ ಟೈಂ ದಾಖಲೆಯನ್ನು ವಕೀಲ್ ಸಾಬ್ ಮುರಿದು ಪುಡಿ ಮಾಡಿದೆ. ರಾಜಮೌಳಿಯವರ ದಾಖಲೆಯನ್ನು ಮು’ರಿಯಲು ಪವರ್ ಸ್ಟಾರ್ ಮತ್ತೆ ಬರಬೇಕಾಯಿತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಸಂಭ್ರಮಿಸುತ್ತಿದ್ದಾರೆ.

ಲೈಕ್ಸ್ ವಿಚಾರದಲ್ಲಿ ಬಾಹುಬಲಿ-2 ಟ್ರೈಲರ್ 24 ಗಂಟೆಗಳಲ್ಲಿ 497 K ಲೈಕ್ ಪಡೆದಿತ್ತು. ಇದೀಗ, ವಕೀಲ್ ಸಾಬ್ ಚಿತ್ರದ ಟ್ರೈಲರ್ 24 ಗಂಟೆಯಲ್ಲಿ 1 ಮಿಲಿಯನ್ ಲೈಕ್ ಪಡೆದಿದೆ. ಲೈಕ್ಸ್ ವಿಚಾರದಲ್ಲಿ ಬಾಹುಬಲಿಯನ್ನು ಹಿಂದಿಕ್ಕಿ ವಕೀಲ್ ಸಾಬ್ ದಾಖಲೆ ನಿರ್ಮಿಸಿದೆ. ಆದರೆ, ವೀಕ್ಷಣೆಯ ವಿಚಾರದಲ್ಲಿ ಬಾಹುಬಲಿಯ ದಾಖಲೆ ಹಾಗೆ ಉಳಿದಿದೆ. ರಿಯಲ್ ಟೈಂ ವೀಕ್ಷಣೆಯಲ್ಲಿ ಬಾಹುಬಲಿ-2 ಟ್ರೈಲರ್ 24 ಗಂಟೆಯಲ್ಲಿ 21.81 ಮಿಲಿಯನ್ ವೀಕ್ಷಣೆ ಕಂಡಿದೆ. ವಕೀಲ್ ಸಾಬ್ ಟ್ರೈಲರ್ 18.05 ಮಿಲಿಯನ್ ಗೂ ಹೆಚ್ಚು ವೀಕ್ಷಣೆಯನ್ನು ಕಂಡಿದೆ. ಹಾಗಾಗಿ, ಬಾಹುಬಲಿ ನಂತರದ ಎರಡನೇ ಸ್ಥಾನದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಸಿನಿಮಾ ನಿಂತಿದೆ. ಪವನ್ ಕಲ್ಯಾಣ್ ಅವರ ಸಿನಿಮಾ ಯಶಸ್ಸಿನ ಕಡೆಗೆ ಸಾಗಲಿ ಎಂದು ಆಶಿಸೋಣ.